Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಮೊದಲ ವರ್ಷದ ದಾಂಪತ್ಯ ಜೀವನ ಕಲಿಸುವ 3 ಪಾಠಗಳು
ಮದುವೆಯ ನಂತರ ಹೆಚ್ಚಿನ ಜೋಡಿಗಳು ಸಂಸಾರ ತಾಪತ್ರಯ ಅನುಭವಿಸುತ್ತಾರೆ. ಇಬ್ಬರು ಹುಟ್ಟಿ ಬೆಳೆದ ವಾತಾವರಣ ಬೇರೆ-ಬೇರೆ ಇರಬಹುದು. ಆದರೆ ಮದುವೆಯ ನಂತರ ಹೊಂದಿಕೊಂಡು ಬಾಳಬೇಕಾಗುತ್ತದೆ. ಮದುವೆಯಾದ ಮೊದಲ ವರ್ಷದಲ್ಲಿ ಸಾಕಷ್ಟು ವಿಷಯಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. 'ಇಷ್ಟೆಲ್ಲಾ ಜಂಜಾಟವಿರುತ್ತದೆ ಎಂದರೆ ಮದುವೆನೇ ಮಾಡಿಕೊಳ್ಳುತ್ತಿರಲಿಲ್ಲ' ಎಂದು ಮದುವೆಯಾದವರು ಹೇಳುವುದನ್ನು ಕೇಳಬಹುದು. ಪ್ರೀತಿಸಿ ಮದುವೆಯಾದರೂ ಕೂಡ ಮದುವೆಯ ನಂತರದ ಜೀವನ ಭಿನ್ನವಾಗಿರುತ್ತದೆ. ಏಕೆಂದರೆ ಪ್ರೀತಿಸುವಾಗ ಮದುವೆಯ ನಂತರ ಇರುವಷ್ಟು ಜವಬ್ದಾರಿ ಇರುವುದಿಲ್ಲ, ಪ್ರೀತಿಯ ಲೋಕಕ್ಕೂ, ಮದುವೆಯ ನಂತರದ ಜೀವನಕ್ಕೂ ಸಾಕಷ್ಟು ವ್ಯತ್ಯಾಸವಿರುತ್ತದೆ.

ಮದುವೆಯ ಜೀವನದ ಬಗ್ಗೆ ಒಂದು ಸಮೀಕ್ಷೆ ನಡೆಸಲಾಗಿದೆ. ಇದರಲ್ಲಿ ಮದುವೆಯಾದ ಮೊದಲ 1 ವರ್ಷ ತುಂಬಾ ಒತ್ತಡಗಳಿರುತ್ತವೆ ಎಂದು ತಿಳಿದು ಬಂದಿದೆ. ಇದರ ಬಗ್ಗೆ ಹೊಸದಾಗಿ ಮದುವೆಯಾದ ದಂಪತಿಗಳನ್ನು ಕೇಳಿದರೆ ಈ ಕೆಳಗಿನ ಉತ್ತರಗಳು ದೊರೆಯುತ್ತವೆ.
1. ಬದಲಾವಣೆ: ಮದುವೆಯ ನಂತರ ಕೂಡ ನಾನು ಮೊದಲು ಇದ್ದಂತೆ ಇರಬಹುದು ಎಂದು ಪುರುಷನು ಅಂದುಕೊಂಡಿರುತ್ತಾನೆ. ಆದರೆ ಹೆಂಡತಿಯಾದವಳು ಪುರುಷನ ಆ ಆಲೋಚನೆಯನ್ನು ಸಂಪೂರ್ಣ ಬದಲಾಯಿಸಿ ಬಿಡುತ್ತಾಳೆ. ಜವಬ್ದಾರಿಗಳು ಹೆಚ್ಚಾಗುತ್ತದೆ, ಇದರಿಂದಾಗಿ ಪುರುಷ ಬದಲಾಗಲೇಬೇಕಾಗುತ್ತದೆ.
ಪುರುಷರು ಎಲ್ಲವನ್ನು ನೇರವಾಗಿ ಹೇಳುವ ಸ್ವಭಾವದವನಾದರೂ ಕೂಡ ತನ್ನ ಗುಣವನ್ನು ಬದಲಾಯಿಸಬೇಕಾಗುತ್ತದೆ. ಹೆಂಡತಿ ಡ್ರೆಸ್ ಮಾಡಿಕೊಂಡು ಬಂದು ಹೇಗೆ ಕಾಣುತ್ತಿದ್ದೇನೆ ಎಂದು ಕೇಳಿದರೆ ಅಷ್ಟೇನು ಚೆಂದ ಕಾಣಿಸುತ್ತಿಲ್ಲ ಎಂದು ಹೇಳುವಂತಿಲ್ಲ, ಚೆಂದ ಕಂಡರೂ, ಕಾಣದಿದ್ದರೂ ಅಪ್ಸರೆ ರೀತಿ ಕಾಣುತ್ತಿದ್ದೀಯ ಅಂತಲೇ ಹೇಳಬೇಕಾಗುತ್ತದೆ. ಅವಳಲ್ಲಿ ಗುಣದೋಷಗಳಿದ್ದರೂ ಹೊಂದಾಣಿಕೆ ಮಾಡಿಕೊಂಡು ಬಾಳಬೇಕಾಗುತ್ತದೆ.
ಇದೇ ವಿಷಯದ ಬಗ್ಗೆ ಮಹಿಳೆಯರ ಹತ್ತಿರ ಕೇಳಿದರೆ ಅವರು ಮದುವೆಯಾಗುವಾಗಲೇ ಮುಂದೆ ನಮ್ಮಲ್ಲಿ ಬದಲಾವಣೆ ಅಗತ್ಯ ಅನ್ನುವ ವಾಸ್ತವ ಅಂಶದ ಬಗ್ಗೆ ಅರಿವಿರುತ್ತದೆ. ಹೊಸ ಮನೆಯವರ ಜೊತೆ ಹೊಂದಿಕೊಳ್ಳಬೇಕಾಗುತ್ತದೆ. ತನ್ನ ಸಂಸಾರ ಜೀವನ ಸರಿಯಾಗಿರಲು ತನ್ನಲ್ಲಿ ಸಾಕಷ್ಟು ಬದಲಾವಣಿಗೆ ಅವಳು ತಯಾರು ಇರುತ್ತಾಳೆ. ಆದ್ದರಿಂದಲೇ ತನ್ನ ಪುರುಷನೂ ನಾನು ಬಯಸಿದಂತೆ ಇರಬೇಕೆಂದು ಬಯಸಿ ಅವನನ್ನು ಬದಲಾಯಿಸಲು ಪ್ರಯತ್ನಿಸುತ್ತಾಳೆ.
2. ನಾನು ಹೋಗಿ ನಮ್ಮದು ಎಂಬ ಚಿಂತನೆ: ಮದುವೆ ನಂತರ ಇದು ಮುಖ್ಯವಾಗಿರುತ್ತದೆ. ಮದುವೆಗೆ ಮುಂಚೆ ನಮಗೆ ಏನು ಅನಿಸುತ್ತದೆ, ಏನು ಇಷ್ಟವಾಗುತ್ತದೆ ಅದರಂತೆ ಇರುತ್ತೇವೆ, ಆದರೆ ನಮ್ಮ ಇಷ್ಟಕ್ಕಿಂತ ನಮ್ಮ ಬೆಲೆ ಕೊಡಬೇಕಾಗುತ್ತದೆ. ಈ ರೀತಿ ಇದ್ದರೆ ಮಾತ್ರ ಸಂಸಾರವನ್ನು ಸುಂದರವಾಗಿ ನಡೆಸಿಕೊಂಡು ಹೋಗಲು ಸಾಧ್ಯ.
3. ಮೊದಲು ಏನು ಮಾಡಲು ಸಾಧ್ಯವಿಲ್ಲವೋ ಅದನ್ನು ಕೊನೆಯತನಕ ಮಾಡಲು ಸಾಧ್ಯವಿಲ್ಲ ಎಂದು ಹೆಣ್ಣು ಮಕ್ಕಳಿಗೆ ಹೇಳುತ್ತಾರೆ. ಈ ಮಾತು ಪುರುಷರಿಗೂ ಅನ್ವಹಿಸುತ್ತದೆ. ಏಕೆಂದರೆ ಮದುವೆಯಾದ ಶುರುವಿನಲ್ಲಿ ಹೆಂಡತಿಯನ್ನು ಹೇಗೆ ನೋಡಿಕೊಳ್ಳುತ್ತೀರ ಅದರ ಮೇಲೆ ಅವಳು ಕೂಡ ನನ್ನ ಗಂಡ ನನ್ನನ್ನು ಮುಂದೆ ಕೂಡ ಇವನು ಇದೇ ರೀತಿ ನೋಡಿಕೊಳ್ಳುತ್ತಾನೆ ಎಂದು ನಂಬುತ್ತಾಳೆ.
ಹಾಗಂತ ಪುರುಷ ಹೆಂಡತಿಗೆ ವಸ್ತುಗಳನ್ನು ಕೊಡಿಸುವಾಗ ಸ್ವಲ್ಪ ಎಚ್ಚರಿಕೆ ವಹಿಸಬೇಕು. ಪ್ರತಿ ತಿಂಗಳು ಏನಾದರೂ ವಸ್ತುಗಳನ್ನು ತೆಗೆದುಕೊಡುವ ಅಭ್ಯಾಸ ಬೆಳೆಸಿದರೆ ನಂತರ ಒಂದು ತಿಂಗಳು ಕೊಡಿಸುವುದನ್ನು ಮಿಸ್ ಮಾಡಿದರೆ ಅವಳು 'ಇವರಿಗೆ ನನ್ನ ಮೇಲೆ ಪ್ರೀತಿ ಕಡಿಮೆಯಾಗಿದೆ' ಎಂದು ಬೇಜಾರು ಮಾಡಿಕೊಳ್ಳುತ್ತಾಳೆ. ಆದ್ದರಿಂದ ಮದುವೆಯಾದ ನಂತರ ಸಂಸಾರವನ್ನು ಪ್ರೀತಿ ಮತ್ತು ಚಾಕಚಕ್ಯತೆಯಿಂದ ನಿಭಾಯಿಸಿದರೆ ಸುಂದರ ದಾಂಪತ್ಯ ಜೀವನ ನಿಮ್ಮದಾಗುವುದು.



Click it and Unblock the Notifications
