Latest Updates
-
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ!
ಪುರುಷರಿಗೆ ಫೆಮಿನಿಸ್ಟ್ ಗುಣ ಒಳ್ಳೆಯದಲ್ಲ!

ಪ್ರತಿಯೊಂದು ಮಹಿಳೆಯೂ ಸಮಾನತೆಯನ್ನು ಬಳಸುತ್ತಾಳೆ. ಆದರೆ ಸ್ವಲ್ಪ ಒರಟಾಗಿ ನಡೆದುಕೊಳ್ಳುವ ಹುಡುಗನನ್ನು ಇಷ್ಟಪಡುತ್ತಾಳೆ. ಇವಳು ಅವನ ಇಷ್ಟದಂತೆ ಬದುಕಲು ಬಯಸುತ್ತಾಳೆ, ಆದರೆ ಇವಳ ಇಷ್ಟದಂತೆ ಅವನು ನಡೆದಕೊಳ್ಳಲು ಪ್ರಯತ್ನಿಸಿದರೆ ಅಂತಹವನು ಅವಳಿಗೆ ಇಷ್ಟವಾಗುವುದಿಲ್ಲ. ಆದ್ದರಿಂದಲೇ ಹೇಳುವುದು ಮೀನಿನ ಹೆಜ್ಜೆಯನ್ನು ಬೇಕಾದರೆ ಕಂಡು ಹಿಡಿಯಬಹುದು, ಆದರೆ ಹೆಣ್ಣಿನ ಮನಸ್ಸನ್ನು ಅರೆಯುವುದು ಕಷ್ಟ.
ಮಹಿಳೆಯ ಹಕ್ಕನ್ನು ಅವಳೇ ಪಡೆದುಕೊಳ್ಳಲು ಇಷ್ಟಪಡುತ್ತಾಳೆ, ಆದರೆ ಒಬ್ಬ ಪುರುಷ ಅಂತಹ ಹಕ್ಕನ್ನು ಎತ್ತಿ ಹಿಡಿಯುವುದು ಅವಳಿಗೆ ಇಷ್ಟವಾಗುವುದಿಲ್ಲ. ಅಲ್ಲದೆ ತುಂಬಾ ಫೆಮಿನಿಸ್ಟ್ ಗುಣವಿರುವ ವ್ಯಕ್ತಿಯನ್ನು ಅವನ ಸ್ನೇಹಿತರ ಗುಂಪೂ ಇಷ್ಟಪಡುವುದಿಲ್ಲ. ಇನ್ನು ಮಹಿಳೆಯರು ಸಮಾನತೆಯನ್ನು ಬಳಸುತ್ತಾರೆ, ಆದರೆ ಕೆಲವೊಂದು ವಿಷಯದಲ್ಲಿ ಪುರುಷರೆ ಜವಬ್ದಾರಿ ತೆಗೆದುಕೊಳ್ಳಬೇಕೆಂದು ಬಯಸುತ್ತಾಳೆ.
ಊಟಕ್ಕೆ ಹೋದಾಗ ಪುರುಷನೇ ಬಿಲ್ ಕೊಟ್ಟರೆ ಅವಳಿಗೆ ಇಷ್ಟವಾಗುತ್ತದೆ, ಮನೆ ಮತ್ತು ಅವಳ ರಕ್ಷಣೆಯ ಜವಬ್ದಾರಿಯನ್ನು ಅವನು ವಹಿಸಿದರೆ ಇಷ್ಟವಾಗುತ್ತಾನೆ. ತನ್ನ ಮೂಲ ಗುಣಗಳನ್ನು ಮರೆತು ಎಲ್ಲವನ್ನೂ ಫೆಮಿನಿಸ್ಟ್ ದೃಷ್ಟಿಯಿಂದ ನೋಡುವ ಹುಡುಗ ಎಷ್ಟೇ ಒಳ್ಳೆಯವನಾದರೂ ಈ ಹುಡುಗಿಯರು ಅವನೆಡೆಗೆ ಆಕರ್ಷತರಾಗುವುದು ಕಡಿಮೆ. ಧೈರ್ಯಶಾಲಿಯಾದ, ಸಾಹಸಿಯಾಗಿರುವ, ಬುದ್ಧಿವಂತ ಹುಡುಗನತ್ತ ಹುಡುಗಿಯರು ಬೇಗನೆ ಆಕರ್ಷತರಾಗುತ್ತಾರೆ.
ಹಾಗಂತ ನಾನು ಪುರುಷ ಎಂಬ ಅಹಂನಿಂದ ಎಲ್ಲವೂ ನಾನು ಹೇಳಿದಂತರೆಯೇ ಇರಬೇಕು, ನಾನು ಹೇಳಿದ್ದನ್ನು ಮರು ಮಾತಿಲ್ಲದೆ ಪಾಲಿಸಬೇಕು ಎಂದು ಮಹಿಳೆಯರ ಭಾವನೆಗಳನ್ನು ಕಡೆಗಣಿಸುವ ಪುರುಷರನ್ನು ಕೂಡ ಯಾವುದೇ ಹೆಣ್ಣು ಇಷ್ಟಪಡುವುದಿಲ್ಲ ಎಂಬುದು ನೆನೆಪಿರಲಿ.
ಮಹಿಳೆಯರ ಭಾವನೆಗೆ ಬೆಲೆ ಕೊಡಬೇಕು, ಅವಳ ಸ್ವಾಂತತ್ರ್ಯವನ್ನು ಕಿತ್ತುಕೊಳ್ಳಬಾರದು, ಹಾಗಂತ ಅಗತ್ಯ ಮೀರಿದ ಸ್ವಾತಂತ್ರ್ಯ ಕೊಡಬಾರದು, ಅವಳನ್ನು ಕೀಳು ಅಂತ ಕಾಣಬಾರದು, ಅವಳಿಗೆ ಮಾನಸಿಕ ಧೈರ್ಯವನ್ನು ತುಂಬುವವನು ಆಗಬೇಕು, ಅವಳಿಗೆ ಅವನು ಮುಖ್ಯವಾಗಿ ಎಲ್ಲಾ ರೀತಿಯಿದಲೂ ರಕ್ಷಣೆಯನ್ನು ಕೊಡುವವನು ಆಗಿರಬೇಕು. ಅಂತಹವರಿಗೆ ಮಾತ್ರ ಹೆಣ್ಣಿನ ಮನವನ್ನು ಗೆಲ್ಲಲು ಸಾಧ್ಯ.



Click it and Unblock the Notifications