Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಮಧುಚಂದ್ರಕ್ಕೆ ಮತ್ತೊಮ್ಮೆ ಹೋಗಿಬನ್ನಿ!

ಸಣ್ಣ ಪುಟ್ಟ ವಿಷಯಕ್ಕೂ ಕೋಪ ಬರುವುದು, ಕೆಲವೊಮ್ಮೆ ಯಾತಕ್ಕಾಗಿ ಮದುವೆಯಾದೆ ಎಂಬ ವೈರಾಗ್ಯ ಕೂಡ ಬಂದು ಬಿಡುತ್ತದೆ. ಈ ರೀತಿ ಉಂಟಾದರೆ ಅಂತೂ ಗಂಡ-ಹೆಂಡತಿಯ ಸಂಬಂಧದಲ್ಲಿ ಬಿರುಕು ಕಾಣಿಸಿಕೊಳ್ಳಲಾರಂಭಿಸುತ್ತದೆ. ಈ ಕೆಲಸದ ಒತ್ತಡ ನಮ್ಮ ಸಂಸಾರದಲ್ಲಿ ಬಿರುಕು ಮೂಡಿಸುತ್ತಿದೆ ಎಂದು ಅನಿಸುತ್ತಿದೆ ಅಲ್ಲವೇ?
ನಮ್ಮ ದಾಂಪತ್ಯ ಜೀವನ ತುಂಬಾ ಸುಂದರವಾಗಿರಬೇಕೆಂಬ ಕನಸ್ಸು ಎಲ್ಲರಿಗೂ ಇರುತ್ತದೆ. ಆದರೆ ಸಣ್ಣ ಪುಟ್ಟ ವಿಷಯಗಳು ಪ್ರಶಾಂತವಾದ ಕೊಳಕ್ಕೆ ಕಲ್ಲೆಸಿದಾಗ ಅಲೆಗಳು ಏಳುವಂತೆ ನಮ್ಮ ಬದುಕಿನ ದಿಕ್ಕನ್ನೇ ಬದಲಾಯಿಸಬಹುದು. ಆದರೆ ನಾವು ಅನುಸರಿಸುವ ಚಿಕ್ಕ ಪುಟ್ಟ ಹೆಜ್ಜೆಗಳು ನಮ್ಮ ಬದುಕನ್ನು ತುಂಬಾ ಸುಂದರವಾಗಿಸಬಹುದು.
ಲವ್ ನಲ್ಲಿ ಬಿದ್ದ ಮೊದಲಿನಲ್ಲಿ ತುಂಬಾ ಮಾತನಾಡಬೇಕೆಂಬ ಚಡಪಡಿಕೆ ಇರುತ್ತದೆ. ನಿಧಾನಕ್ಕೆ ಮಾತುಕತೆ ಕಡಿಮೆಯಾಗಲಾರಂಭಿಸುತ್ತದೆ . ಮದುವೆಯಾದ ಮೇಲೆ ಒಂದು ಆರು ತಿಂಗಳು ಜೀವನ ಸೂಪರ್ ಆಗಿರುತ್ತದೆ. ನಂತರ ಗಂಡ ಹೆಂಡತಿ ತಮ್ಮ-ತಮ್ಮ ಕೆಲಸಗಳಲ್ಲಿ, ಜವಬ್ದಾರಿಗಳಲ್ಲಿ ಬ್ಯೂಸಿಯಾಗುತ್ತಾರೆ, ಅಲ್ಲಿಗೆ ಬದುಕು ಯಾಂತ್ರಿಕವಾಗುತ್ತದೆ. ಬದುಕು ಬೋರಾಗಲಾರಂಭಿಸುತ್ತದೆ. ಚಿಕ್ಕ ಪುಟ್ಟ ಸಮಸ್ಯೆಗಳೇ ದೊಡ್ಡದಾಗಲಾರಂಭಿಸುತ್ತದೆ. ನಿಮ್ಮ ಜೀವನದಲ್ಲಿ ಆ ಹಿಂದಿನ ಉತ್ಸಾಹ ಮರಳಿ ಪಡೆಯಲು
ಈ ಕೆಳಗಿನಂತಹ ಸಲಹೆಗಳನ್ನು ಪಾಲಿಸಿ ನೋಡಿ, ನಿಮ್ಮ ನಡುವಿನ ಪ್ರೀತಿ ಹೆಚ್ಚಾಗುವುದು.
ಡೇಟಿಂಗ್ ಮಾಡುವುದು: ಏಕೆ ಹುಡುಗ-ಹುಡುಗಿ ಮಾತ್ರ ಡೇಟಿಂಗ್ ಮಾಡಬೇಕಾ? ಮದುವೆಯಾದವರು ಮಾಡಬಾರದಾ? ಬಿಡುವಿಲ್ಲದ ಕೆಲಸದ ನಡುವೆಯೂ ಸ್ವಲ್ಪ ಸಮಯ ನಿಮಗಾಗಿ ಉಳಿಸಿ ಸಿನಿಮಾ, ಔಟಿಂಗ್ ಅಂತ ಹೋಗುವುದು, ಕೆಲವೊಮ್ಮೆ ದೂರದ ಪ್ರಯಾಣ ಮಾಡುವುದು, ಮೂನ್ ಲೈಟ್ ಡಿನ್ನರ್ ಹೀಗೆ ಪ್ರೇಮಿಗಳಂತೆ ಕಳೆಯಿರಿ. ಅಲ್ಲದೆ ಎರಡನೇ ಬಾರಿ ಹನಿಮೂನ್ ಹೋಗುವ ಪ್ಲಾನ್ ಅಂತೂ 99% ಜನ ಯೋಚಿಸಿರುವುದಿಲ್ಲ. ಮಕ್ಕಳಾಯಿತು ಅವರನ್ನು ನೋಡಿಕೊಳ್ಳಬೇಕು ಅದು , ಇದು ಅಂತ ತಲೆ ಕೆಡಿಸಿಕೊಂಡಿರುತ್ತೀರಿ.
ಈ ಸಮಯದಲ್ಲಿ ಎರಡನೇ ಬಾರಿಗೆ ಹನಿಮೂನ್ ಗೆ ಹೋಗಿ ಬನ್ನಿ ಅಂದರೆ ಬಾಲಿಶ ಅನಿಸಬಹುದು. ಆದರೆ ಸ್ವಲ್ಪ ಯೋಚಿಸಿ ಅದರಲ್ಲಿ ತಪ್ಪೇನಿದೆ, ನಿಮ್ಮ ಹಿಂದಿನ ಮಧುರ ಸಮಯ ನೆನಪಿಗೆ ಬರುತ್ತದೆ. ಬದುಕಿಗೆ ಒಂದು ಹೊಸ ಉತ್ಸಾಹ ಬರುತ್ತದೆ. ಬದಲು ಮಕ್ಕಳು ಸ್ವಲ್ಪ ದೊಡ್ಡವರಾಗಿದ್ದರೆ ಅವರನ್ನು ಅಜ್ಜಿ ಮನೆಯಲ್ಲಿ ಬಿಟ್ಟು ಹನಿಮೂನ್ ಗೆ ಹೋಗಿ ಬನ್ನಿ.
ನಿಮ್ಮ ಅಭಿಪ್ರಾಯ ಹೇಳಿ: ನಿಮ್ಮ ವೆಡ್ಡಿಂಗ್ ಡೇ ದಿನ ನಿಮ್ಮ ಅನಿಸಿಕೆಗಳನ್ನು ಹೇಳಿ, ಅವರು ನಿಮ್ಮ ಜೀವನದಲ್ಲಿ ಎಷ್ಟು ಪ್ರಮುಖ ಎಂದು ಹೇಳಿ, ನಿಮ್ಮ ಸಂತೋಷಕ್ಕೆ ಕಾರಣವಾದ ಅವರಿಗೆ ಥ್ಯಾಂಕ್ಸ್ ಹೇಳಿ.
ಜೀವನ ಸಂಗಾತಿಯ ಇಷ್ಟಕ್ಕೆ ಬೆಲೆಕೊಡುವುದು: ಗಂಡನಿಗೆ ಇಷ್ಟವಾದ ಅಡುಗೆಯನ್ನು ಹೆಂಡತಿ ಮಾಡುವುದು, ಕೆಲವೊಮ್ಮೆ ಹೆಂಡತಿಗೆ ಗಂಡ ಅಡುಗೆ ಮಾಡಿ ಬಡಿಸವುದು, ಪರಸ್ಪರ ತಮಾಷೆಗೆ ಕಾಲೆಳೆಯುವುದು, ತಪ್ಪುಗಳನ್ನು ಮನ್ನಿಸಿ ಆ ಕ್ಷಣವೇ ಮರೆತು ಬಿಡುವುದು ಮಾಡಿದರೆ ಅಂತಹವರ ದಾಂಪತ್ಯ ಬದುಕು ತುಂಬಾ ಸುಂದರವಾಗಿರುತ್ತದೆ.
ಬೆಡ್ ರೂಮ್ ಗೆ ನಿಮಗೆ ಮಾತ್ರ ಪ್ರವೇಶ, ನಿಮ್ಮ ಜಗಳಕ್ಕಲ್ಲ: ಜಗಳ, ಕೋಪ ಇವುಗಳೆನ್ನೆಲ್ಲಾ ಬೆಡ್ ರೂಮ್ ವರೆಗೆ ಎಳೆದು ತರುವ ಬುದ್ಧಿ ಇರಬಾರದು.
ಈ ಮೇಲಿನ ಸಲಹೆಗಳನ್ನು ಪಾಲಿಸುವುದು ಮೊದಮೊದಲು ಸ್ವಲ್ಪ ಕಷ್ಟ ಅನಿಸಬಹುದು ಆದರೆ ಈ ರೀತಿಯ ಸಲಹೆಗಳನ್ನು ನಿಮ್ಮ ಬದುಕಿನಲ್ಲಿ ಅನುಸರಿಸಿದ್ದೇ ಆದರೆ ಆದರ್ಶ ದಂಪತಿಗಳು ನೀವಾಗುವಿರಿ.



Click it and Unblock the Notifications
