Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಲಿವ್ ಇನ್ ರಿಲೇಶನ್ v/s ಮದುವೆ

ಮಲಯಾಳಂ ಮೂಲದ, ದಕ್ಷಿಣ ಬಾರತದ ಖ್ಯಾತ ನಟಿ ಮೀರಾ ಜಾಸ್ಮಿನ್ 'ಲಿವ್ ಇನ್ ರಿಲೇಶನ್ ಶಿಪ್' ಸಂಬಂಧವನ್ನೇ ಅಪ್ಪಿಕೊಂಡಿದ್ದಾರೆ. ಮೀರಾ ಜಾಸ್ಮಿನ್, ಮ್ಯಾಂಡೋಲಿನ್ ವಾದಕ ಯು ರಾಜೇಶ್ ಅವರ ಜೊತೆ ವಾಸಿಸುತ್ತಿದ್ದು ಮದುವೆ ಬಗ್ಗೆ ತಮ್ಮ ಅಭಿಪ್ರಾಯವನ್ನು ಈ ರೀತಿ ವ್ಯಕ್ತ ಪಡಿಸುತ್ತಾರೆ "ನನ್ನ ಪ್ರಕಾರ ಮದುವೆಯಾಗದೇ ಜೀವಿಸುವುದರಲ್ಲಿ ಹಲವಾರು ಅನುಕೂಲತೆಗಳಿವೆ.ವಿಚ್ಛೇದನ ಹಾಗೂ ಕೋರ್ಟ್-ಕಾನೂನು ಎಂಬ ಜಂಜಾಟವಿಲ್ಲದಿರುವುದು ಅದರಲ್ಲಿ ಮುಖ್ಯವಾದ ಅಂಶಗಳಲ್ಲೊಂದು. ನಾನು ಈಗಾಗಲೇ ಸಾಕಷ್ಟು ಸೆಲೆಬ್ರೆಟಿಗಳ ಮದುವೆ ಹಾಗೂ ಡೈವೋರ್ಸ್ ಗಳನ್ನು ಕಣ್ಣಾರೆ ನೋಡಿದ್ದೇನೆ. ಹಾಗಾಗಿ ನಾನು ಮದುವೆ ಎಂಬ ಸಂಪ್ರದಾಯದಲ್ಲಿ ನಂಬಿಕೆಯನ್ನೇ ಕಳೆದುಕೊಂಡಿದ್ದೇನೆ" ಇದು ಈ ನಟಿಯ ಅಭಿಪ್ರಾಯ ಮಾತ್ರವಲ್ಲ, ನಗರ ಪ್ರದೇಶದ ಯುವ ಜನಾಂಗದಲ್ಲಿ ಈ ನಂಬಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಇದು ಪಾಶ್ಚಿಮಾತ್ಯ ಸಂಸ್ಕೃತಿಯ ಅಂಧಾನುಕರಣೆಯೇ? ಮದುವೆಯಾಗಲಿ, ಆಗದಿರಲಿ ಒಂದು ಹೆಣ್ಣು ಮತ್ತು ಒಂದು ಗಂಡು ಜೊತೆಯಲ್ಲಿ ಬಾಳಲು ಪರಸ್ಪರ ಹೊಂದಾಣಿಕೆ ಬೇಕು, ಒಬ್ಬರನ್ನೊಬ್ಬರು ಅರ್ಥೈಸಿಕೊಳ್ಳಬೇಕು, ಅಂದರೆ ಮಾತ್ರ ಜೊತೆಯಲ್ಲಿ ಜೀವಿಸುವುದು ಸಾಧ್ಯ. ಮದುವೆಯಾಗುವಾಗ ಈ ವ್ಯಕ್ತಿ ಜೊತೆ ಬಾಳ್ವೆ ಸಾಧ್ಯವೇ ಎಂದು ಎಲ್ಲಾ ದೃಷ್ಟಿಯಿಂದ ಯೋಚಿಸಿದ ನಂತರ ಮದುವೆಯಾಗಬೇಕು. ಕೆಲವರ ಕೆಟ್ಟ ಗುಣಗಳು ಮದುವೆಗೆ ಮೊದಲು ತಿಳಿಯುವುದೇ ಇಲ್ಲ, ಈ ರೀತಿಯಾದಾಗ ಎರಡೇ ದಾರಿ ಒಂದೋ ಜೀವನ ಪೂರ್ತಿ ಅವರು ಕೊಡುವ ಕಷ್ಟ ಸಹಿಸಿ ಜೀವಿಸಬೇಕು, ಇಲ್ಲದಿದ್ದರೆ ವಿಚ್ಛೇದನ ಪಡೆಯಬೇಕು.
ಆದರೆ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಹೊಂದಾಣಿಕೆಯಿದ್ದರೆ ಜೊತೆಯಲ್ಲಿರುವುದು, ಇಲ್ಲದಿದ್ದರೆ ಬೇರೆಯಾಗುವುದು. ತಾಳಿಯೊಂದು ಕಟ್ಟಲಿಲ್ಲ, ನಾವೂ ಕೂಡ ಗಂಡ-ಹೆಂಡತಿಯಂತೆ ಸುಖವಾಗಿ ಜೀವಿಸುತ್ತಿದ್ದೇವೆ ಅನ್ನುವವರು 'ಗಂಡ-ಹೆಂಡತಿಯಂತೆ' ಜೀವಿಸಬಹುದು, ಆದರೆ 'ಗಂಡ -ಹೆಂಡತಿಯಾಗಿ' ಜೀವಿಸಲು ಸಾಧ್ಯವೇ? ಮದುವೆ ಎಂಬ ಬಂಧದಲ್ಲಿ ಇರುವ ಸುರಕ್ಷತೆ ಇದರಲ್ಲಿ ಇದೆಯೇ? ಎಂಬ ಪ್ರಶ್ನೆಗೆ ಉತ್ತರ ಕಂಡು ಕೊಳ್ಳಬೇಕಾಗುತ್ತದೆ.
ಮದುವೆ ಎಂಬ ಬಂಧನಕ್ಕೆ ಒಳಗಾದರೆ ನಮ್ಮಿಬ್ಬರ ಬದುಕಿಗೆ ಕೊಂಡಿಯಾಗುವ ಮಗು ಬೇಕೆಂದು ಬಯಸುವುದು ಸಹಜ. ಆ ದಂಪತಿಗಳಿಗೆ ಮಗುವಾದರೆ ಈ ದಂಪತಿಗಳ ಮಗುವೆಂದು ಸಮಾಜ ಅದನ್ನು ಗುರುತಿಸುತ್ತದೆ. ಆದರೆ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿರುವವರು ಎಷ್ಟು ಕಾಲ ಅಂತ ಇಬ್ಬರೇ ಇರುವುದು, ಅವರಿಗೆ ತಮಗೆ ಒಂದು ಮಗು ಬೇಕೆಂದು ಅನ್ನಿಸಬಹುದು, ಒಂದು ವೇಳೆ ಮಗು ಬೇಕೆಂದು ಬಯಸಿ, ಮಗುವಾದರೆ ಆ ಮಗುವಿಗೆ ಅಪ್ಪ, ಅಮ್ಮ ಆಗಬಹುದು, ಆದರೆ ಆ ಮಗುವನ್ನು ಇಂತಹ 'ದಂಪತಿಗಳ' ಮಗುವೆಂದು ಈ ಸಮಾಜ ಗುರುತಿಸುತ್ತದೆಯೇ? ಅಂತಹ ಮಗುವಿಗೆ ಸರಿಯಾದ ಮಾನ್ಯತೆ ಈ ಸಮಮಾಜದಿಂದ ದೊರಕಿಸಿ ಕೊಡಲು ಈ ಅಪ್ಪ-ಅಮ್ಮನಿಗೆ ಸಾಧ್ಯವಾಗುವುದೇ?
ಮದುವೆಯಾದರೆ ಚಿಕ್ಕ-ಪಟ್ಟ ವಿಷಯಗಳಲ್ಲಿ ಭಿನ್ನಾಭಿಪ್ರಾಯ ಬಂದರೂ ಅದನ್ನು ಸರಿಪಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ, ಜೀವನದಲ್ಲಿ ಹೊಂದಾಣಿಕೆ ಇರುತ್ತದೆ ಮತ್ತು ದಾಂಪತ್ಯ ಜೀವನಕ್ಕೆ ಅವಶ್ಯಕ ಕೂಡ. ಅದೇ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಯಾವ ಕ್ಷಣದಲ್ಲಿ ಬೇಕಾದರೂ ನಾವು ಬೇರೆಯಾಗಬಹುದೆಂದು ತಲೆಯಲ್ಲಿರುವಾಗ, ಅಂತಹ ಸಂಬಂಧದಲ್ಲಿ ಕೊನೆ ತನಕ ಜೊತೆಯಾಗಿ ಜೀವಿಸುತ್ತೇವೆ ಎಂಬ ವಿಶ್ವಾಸವಾಗಲಿ, ಭದ್ರತೆಯಾಗಲಿ ಇರಲು ಸಾಧ್ಯವೇ?
ಮದುವೆಯಾಗಿ ವಿಚ್ಛೇದನ ತೆಗೆದುಕೊಳ್ಳುತ್ತಾರೆ ಅನ್ನುವುದು ಎರಡನೇ ವಿಚಾರ, ಯಾರೂ ಮದುವೆಯಾಗುವಾಗ ಮುಂದೆ ನಾವು ವಿಚ್ಛೇದನ ತೆಗೆದುಕೊಳ್ಳುತ್ತೇವೆ ಎಂದು ಜೀವನ ಪ್ರಾರಂಭಿಸುವುದಿಲ್ಲ, ಆದರೆ ಲಿವ್ ಇನ್ ರಿಲೇಶನ್ ನಲ್ಲಿರುವವರು ಮುಂದೆ ಯಾವ ಕ್ಷಣದಲ್ಲಿ ಬೇಕಾದರೂ ನಾವು ಬೇರೆಯಾಗಬಹುದು ಎಂಬುದನನ್ನು ತಲೆಯಲ್ಲಿ ಇಟ್ಟುಕೊಂಡೇ ಜೀವನ ಪ್ರಾರಂಭಿಸುತ್ತಾರೆ, ಈ ತರಹದ ಜೀವನದಲ್ಲಿ ಹೊಸ ಆಶಾಕಿರಣ ಕಾಣಲು ಸಾಧ್ಯವೇ ಅನ್ನುವುದನ್ನು ಈ ಲಿವ್ ಇನ್ ರಿಲೇಶನ್ ನಂಬುವವರೇ ಹೇಳಬೇಕು.



Click it and Unblock the Notifications
