Latest Updates
-
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್
ಹೆಣ್ಣಿನಲ್ಲಿ ಗಂಡಸರು ಬಯಸುವ 3 ಮುಖ್ಯ ಅಂಶಗಳು

ಹುಡುಗರು ತಾವು ಪ್ರೀತಿಸುವ ಹುಡುಗಿ, ತನ್ನ ಬಾಳ ಸಂಗಾತಿ ಆಗಿ ಬರುವ ಹೆಣ್ಣು ತುಂಬಾ ಸುಂದರವಾಗಿರಬೇಕೆಂದು ಬಯಸುತ್ತಾರೆ, ಆದ್ದರಿಂದ ಹುಡುಗರಿಗೆ ನಾವು ಇಷ್ಟವಾಗಲು ತುಂಬಾ ಸುಂದರವಾಗಿದ್ದರೆ ಮಾತ್ರ ಸಾಕು ಎಂಬ ಕಲ್ಪನೆ ಅನೇಕ ಹೆಣ್ಣು ಮಕ್ಕಳಲ್ಲಿ ಇದೆ, ಹುಡುಗರು ಕೂಡ ತನ್ನ ಹುಡುಗಿ ಸುಂದರಿಯಾಗಿ ಇರಬೇಕೆಂದು ಬಯಸುತ್ತಾರೆ ನಿಜ, ಆದರೆ ಸೌಂದರ್ಯಕ್ಕಿಂತ ಮಿಗಿಲಾಗಿ ಮುಖ್ಯ 3 ಗುಣಗಳು ಹೆಣ್ಣಿನಲ್ಲಿರಬೇಕೆಂದು ಬಯಸುತ್ತಾನೆ. ಆ ಗುಣಗಳು ಹೆಣ್ಣಿನಲ್ಲಿ ಇಲ್ಲದೇ ಹೋದರೆ ಅವಳು ಎಷ್ಟೇ ರೂಪಸಿ ಆಗಿರಲಿ, ಅವಳು ಅವನಿಗೆ ಇಷ್ಟವಾಗುವುದಿಲ್ಲ.
ಹೆಣ್ಣಿನಲ್ಲಿ ಪುರುಷರು ಬಯಸುವ 3 ಮುಖ್ಯ ಅಂಶಗಳು
ನೈತಿಕ ಬೆಂಬಲ: ಬೆಳೆಯುವವರೆಗೆ ಮಾತ್ರ ಹೆಚ್ಚಿನ ಹುಡುಗರು ತಮ್ಮ ಎಲ್ಲಾ ಅನಿಸಿಕೆಗಳನ್ನು ಅಮ್ಮನ ಹತ್ತಿರ ಹೇಳಿಕೊಳ್ಳುತ್ತಾರೆ. ಯೌವನದಲ್ಲಿ ಕೂಡ ಎಲ್ಲಾ ವಿಷಯವನ್ನು, ತನ್ನ ದುಃಖ ಸಂತೋಷಗಳನ್ನು ಅಮ್ಮನ ಮಡಿಲಿನಲ್ಲಿ ಹೇಳಿಕೊಳ್ಳುವ ಹುಡುಗರು ತುಂಬಾ ಕಡಿಮೆ, ಆದರೆ ತನ್ನ ಹೆಂಡತಿಯಾಗಿ ಬರುವವಳು ಅಮ್ಮನ ರೀತಿ ನನ್ನ ನೋಡಿಕೊಳ್ಳಬೇಕೆಂದು ಬಯಸುತ್ತಿರುತ್ತಾನೆ, ನಾನು ಮಾಡುವ ಕೆಲಸವನ್ನು ನನ್ನ ಹುಡುಗಿ ಪ್ರೋತ್ಸಾಹಿಸಬೇಕೆಂದು ಬಯಸುತ್ತಾನೆ, ತುಂಬಾ ಬೇಜಾರಾದಾಗ ಅಪ್ಪಿ ಸಮಧಾನ ಮಾಡಬೇಕೆಂದು ಬಯಸುತ್ತಾನೆ, ಆದರೆ ಹೆಂಡತಿಯಾದವಳು ಗಂಡನ ಭಾವನೆಗಳನ್ನು ಅರ್ಥೈಸಿಕೊಳ್ಳದೆ ತನ್ನದೇ ಲೋಕದಲ್ಲಿ ಇದ್ದರೆ ಅಂತಹ ಹೆಣ್ಣು ಹುಡುಗರಿಗೆ ಇಷ್ಟವಾಗುವುದಿಲ್ಲ.
ಅವರ ಮಾತುಗಳನ್ನು ಕೇಳುವವರು ಬೇಕು: ಹುಡುಗರು ಹೆಣ್ಣು ಮಕ್ಕಳಷ್ಟು ಭಾವನಾ ಜೀವಿಗಳಲ್ಲ. ಹುಡುಗಿಯರು ತಮಗೆ ದುಃಖವಾದರೆ ಜೋರಾಗಿ ಅತ್ತು ಸಮಧಾನ ಮಾಡಿಕೊಳ್ಳುತ್ತಾರೆ. ಆದರೆ ಹೆಚ್ಚಿನ ಪುರುಷರು ತಮ್ಮ ಭಾವನೆಗಳನ್ನು ದುಃಖವನ್ನು ಸಮಾಜದ ಎದುರು ತುಂಬಾ ನಿಯಂತ್ರಣದಲ್ಲಿಡಲು ಪ್ರಯತ್ನಿಸುತ್ತಾರೆ. ಆದರೆ ಅವರಿಗೆ ತಮ್ಮ ಭಾವನೆಗಳನ್ನು, ಅನಿಸಿಕೆಗಳನ್ನು ಕೇಳಲು ಒಬ್ಬರು ಬೇಕಾಗುತ್ತಾರೆ. ಕೆಲವೊಮ್ಮೆ ಅವರು ಹೇಳುತ್ತಿರುವುದು ಸಿಲ್ಲಿ, ರಬ್ಬಿಶ್ ಅಂತ ಅನಿಸಬಹುದು, ಆದರೂ ಅವರ ಮಾತುಗಳನ್ನು ಕೇಳಿಸಿಕೊಳ್ಳುವ ಪ್ರಯತ್ನ ಮಾಡಿ.
ಇನ್ನು ಹೆಚ್ಚಿನ ಗಂಡಸರಿಗೆ ನಾನು ಹೇಳಿದ್ದೇ ಸರಿ, ನಾನು ಹೇಳಿದ್ದನ್ನು ಪಾಲಿಸಬೇಕು ಎಂಬ ಭಾವನೆ ಇರುತ್ತದೆ, ಪುರುಷರ ಅಂತಹ ನಡುವಳಿಕೆ ನೋಡಿದಾಗ ಕೋಪ ಬವರುತ್ತದೆ, ಆದರೆ ಆ ಕ್ಷಣ ಪ್ರತಿಕ್ರಿಯಿಸಬೇಡಿ. ನಿಧಾನಕ್ಕೆ ತಿಳಿ ಹೇಳಿ, ನಿಮ್ಮ ಭಾವನೆಗಳನ್ನೂ ಅವರಿಗೆ ಮನವರಿಕೆ ಮಾಡಲು ಪ್ರಯತ್ನಿಸಬೇಕು. ಇಲ್ಲದಿದ್ದರೆ ಸಂಬಂಧದಲ್ಲಿ ಬಿರುಕು ಉಂಟಾಗುತ್ತದೆ.
ಹೊಗಳಿಕೆ: ತಾನು ಮಾಡುವ ಕೆಲಸವನ್ನು ತನ್ನ ಹೆಂಡತಿ ಹೊಗಳಬೇಕೆಂದು ಬಯಸುತ್ತಿರುತ್ತಾರೆ. ತಮ್ಮನ್ನು ಇತರರ ಜೊತೆ ಹೋಲಿಕೆ ಮಾಡಿದರೆ ಅವರಿಗೆ ಸಹಿಸಲು ಸಾಧ್ಯವಾಗುವುದಿಲ್ಲ. ತಮ್ಮಲ್ಲಿ ಸದಾ ತಪ್ಪು ಹುಡುಕುವ ಹೆಂಡತಿಗಿಂತ ತನ್ನ ಬಗ್ಗೆ ಉತ್ತಮ ಅಭಿಪ್ರಾಯ ನೀಡುವಂತಹ, ತನ್ನ ಕೆಲಸ ಕಾರ್ಯಗಳನ್ನು ಹೊಗಳುವಂತಹ ಹೆಂಡತಿ ಗಂಡಸರಿಗೆ ತುಂಬಾ ಇಷ್ಟವಾಗುತ್ತಾರೆ.



Click it and Unblock the Notifications