Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಪುರುಷರು ಮಹಿಳೆಯರಿಗೆ ಹೇಳುವ ಟಾಪ್ 5 ಸುಳ್ಳುಗಳು!

1. ನಾನು ಬರ್ತಾ ಇದ್ದೇನೆ, ತುಂಬಾ ಟ್ರಾಫಿಕ್ ಸ್ವಲ್ಪ ಲೇಟಾಗುತ್ತೆ: ಮನೆಯಲ್ಲಿ ಹೆಂಡತಿ ಅಥವಾ ಗರ್ಲ್ ಫ್ರೆಂಡ್ ಹೊರಗಡೆ ಸುತ್ತಾಡಕ್ಕೆ ಹೋಗಬೇಕು. ಬೇಗ ಬಾ ಅಂದಿರುತ್ತಾಳೆ, ಕೆಲಸದ ಒತ್ತಡ ಅಥವಾ ಮತ್ಯಾವುದೊ ಕಾರಣದಿಂದ ಸ್ವಲ್ಪ ಹೊತ್ತಾಗಿರುತ್ತೆ. ಆದರೆ ಅದನ್ನು ಹಾಗೇ ಹೇಳಿದರೆ 'ನೀನು ಯಾವತ್ತೂ ಹೀಗೆ' ಅಂತ ಕೋಪಮಾಡಿಕೊಳ್ಳುವುದು, ಅಳುವುದು ಇದ್ದೇ ಇರುತ್ತದೆ. ಅದರೆ ಅದಕ್ಕಿಂತ ಸುಲಭವಾಗಿ ಟ್ರಾಫಿಕ್ ನಲ್ಲಿ ಸಿಕ್ಕಿ ಬಿದ್ದಿದ್ದೇನೆ ಅಂದರೆ ಅವಳು ಕೆಟ್ಟ ಟ್ರಾಫಿಕ್ ಅನ್ನು ಬೈಯುತ್ತಿರುತ್ತಾಳೆ ಇತ್ತ ಇವನು ಸೇಫ್.
2. ಆಯ್ತು ನಾನು ಮಾಡ್ತೀನಿ, ಸರಿ ತರ್ತೀನಿ: ಏನಾದರೂ ಕೆಲಸ ಹೇಳಿರುತ್ತಾರೆ. ಉದಾಹರಣೆಗೆ ರಜಾ ದಿನದಲ್ಲಿ ಮನೆಯಲ್ಲಿ ಆರಾಮವಾಗಿ ಇರೋಣ ಅಂದರೆ ನನ್ನ ಫ್ರೆಂಡ್ ಒಂದು ವಸ್ತು ಕೊಡುತ್ತಾಳೆ ಹೋಗಿ ಇಸ್ಕೊಂಡು ಬನ್ನಿ ಅಥವಾ ಸಿನಿಮಾಕ್ಕೆ ಹೋಗೋಣ ಅಂದಿರುತ್ತಾಳೆ. ಆದರೆ ಆ ಕ್ಷಣ ಇಲ್ಲ ನನಗೆ ಆಗಲ್ಲ ಅಂತ ಹೇಳಬೇಕು ಅಂತ ಅನ್ನಿಸುತ್ತದೆ, ಆದರೆ ಹಾಗೇ ಹೇಳಲು ಸಾಧ್ಯವಿಲ್ಲ. ಸರಿ ಹೋಗುವ ಅಂತ ಹೇಳಿ ಕೊನೆಗೆ ನನಗೆ ತಲೆ ನೋವು ಕಣೇ ಅಥವಾ ಇನ್ನೊಮ್ಮೆ ಹೋಗುವ ಎಂಬಂತಹ ತಾತ್ಕಾಲಿಕ ಸುಳ್ಳು ಹೇಳಿ ಬಚಾವಾಗಲು ಪ್ರಯತ್ನಿಸುತ್ತಾರೆ.
3. ತುಂಬಾ ಸುಂದರವಾಗಿ ಕಾಣುತ್ತಿದ್ದೀಯಾ: ಹೊಸ ಡ್ರೆಸ್ ಹಾಕಿದಾಗ ಬಂದು ಹೇಗೆ ಕಾಣುತ್ತಿದ್ದೇನೆ ಎಂದು ಹುಡುಗಿಯರು ಕೇಳಿದಾಗ ಅಥವಾ ನಾನು ಸುಂದರವಾಗಿದ್ದೀನಾ ಎಂದು ಕೇಳಿದಾಗ, ನಿಜ ಹೇಳಿದರೆ ಕೋಪಮಾಡಿಕೊಂಡು ಬಿಡುತ್ತಾರೆ, ಇಲ್ಲದ ರಗಳೆ ಏಕೆ ಎಂದು 'ನೀನು ತುಂಬಾ ಸುಂದರವಾಗಿ ಕಾಣುತ್ತಿದ್ದೀಯಾ ' ಎಂಬ ಸುಳ್ಳು ಹೇಳಿ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡು ಬಿಡುತ್ತಾರೆ.
4. ನಾನು ಕುಡಿದಿಲ್ಲ: ಮದ್ಯದ ವಾಸನೆ ಬರ್ತಾ ಇದ್ದರೂ ಕೂಡ ಗಂಡ ಹೆಂಡತಿ ಹತ್ತಿರ ನಾನು ಕುಡಿದಿಲ್ಲ ಅಂತನೇ ವಾದಕ್ಕಿಳಿಯುತ್ತಾನೆ. ನಂತರ ಫ್ರೆಂಡ್ಸ್ ಒತ್ತಾಯ ಮಾಡಿದರು ಅದಕ್ಕೆ ಕುಡಿದೆ ಆದರೆ ಒಂದೇ ಪೆಗ್ ಅಷ್ಟೇ , ನೆಕ್ಸ್ಟ್ ಟೈಮ್ ಕುಡಿಯೊಲ್ಲ ಅಂತ ಹೇಳುತ್ತಾರೆ. ಆದರೆ ಅದು ತಾತ್ಕಲಿಕ ಸುಳ್ಳಾಗಿರುತ್ತದೆ.
5. ಅದರ ಬಗ್ಗೆ ಮತ್ತೆ ಮಾತನಾಡುವ: ಮಹಿಳೆಯರು ಏನಾದರೂ ಹೇಳುವಾಗ ಪುರುಷರು 'ಅದರ ಬಗ್ಗೆ ಮಾತನಾಡುವ' ಅಂದರೆ ಮುಂದೆ ಅದರ ಬಗ್ಗೆ ಮಾತನಾಡದೆ ಇರುವುದೇ ಒಳ್ಳೆಯದು. ಏಕೆಂದರೆ ಆ ರೀತಿ ಹೇಳಿದರೆ ಅವರಿಗೆ ಆ ವಿಷಯದ ಬಗ್ಗೆ ಮಾತನಾಡಲು ಇಷ್ಟವಿಲ್ಲವೆಂದು ಅರ್ಥ.



Click it and Unblock the Notifications
