Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ನಿಮ್ಮ ಜೋಡಿಯನ್ನು ಸೋಲ್ ಮೇಟ್ ಅನ್ನಬಹುದಾ?

ಸೋಲ್ ಮೇಟ್ ಅನ್ನಿಸಿಕೊಳ್ಳುವುದು ಸುಲಭದ ಕೆಲಸವಲ್ಲ, ಅಲ್ಲಿ ಅಹಂ ಇರಬಾರದು, ಪರಸ್ಪರ ಹೊಂದಾಣಿಕೆ ಇರಬೇಕು ಮುಖ್ಯವಾಗಿ ಪರಸ್ಪರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಇರಬೇಕು.ಅವರು ಮಾತ್ರ ಸೋಲ್ ಮೇಟ್ ಆಗಲು ಸಾಧ್ಯ. ಪರಸ್ಪರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯಯಿದ್ದರೆ ಅಂತಹವರು ತನ್ನ ಸಂಗಾತಿಗೆ ಯಾವುದೇ ಸಂಕಟ ಕೊಡಲು ಇಷ್ಟಪಡುವುದಿಲ್ಲ.
ಸೋಲ್ ಮೇಟ್ ಗಳಾದರೆ ಪ್ರೀತಿಯಲ್ಲಿ ವಂಚನೆ ಅಥವಾ ನೋವು ಇರುವುದಿಲ್ಲ. ಆದರೆ ಪರಸ್ಪರ ಆಕರ್ಷಣೆಯನ್ನೇ ಪ್ರೀತಿ ಎಂದು ಭಾವಿಸಿ ಆ ಭ್ರಮೆಯಲ್ಲಿ ಕಳೆದರೆ ಮಾತ್ರ ಆಕರ್ಷಣೆ ಕಡಿಮೆಯಾದಂತೆ ಪ್ರೀತಿ ಕಡಿಮೆಯಾಗುವುದು. ಆಕರ್ಷಣೆ ಮಾತ್ರವಿರುವ ಪ್ರೀತಿಯಲ್ಲಿ ವಂಚನೆ ಉಂಟಾಗುತ್ತದೆ ಹೊರತು ನಿಜವಾದ ಪ್ರೀತಿಯಲ್ಲಿ ಅಲ್ಲ.
ಪ್ರೀತಿಯಲ್ಲಿರುವ ಪ್ರತಿಯೊಬ್ಬರಿಗೂ ನಮ್ಮಷ್ಟು ಪ್ರೀತಿಸುವವರು ಜಗತ್ತಿನಲ್ಲಿ ಯಾರೂ ಇಲ್ಲ ಎಂಬ ಭಾವನೆ ಇರುತ್ತದೆ. ಆ ಸಮಯದಲ್ಲಿ ನಮ್ಮ ಸಂಗಾತಿ ಬಗ್ಗೆ ಯಾರಾದರೂ ತಪ್ಪು ಹೇಳಿದರೆ, ಇಲ್ಲ ಅವನನ್ನು ಅಥವಾ ಅವಳನ್ನು ನಂಬಬೇಡ ಅಂತ ಹೇಳಿದರೆ ದೂರ್ವಾಸ ಮುನಿಗಳಾಗಿ ಬಿಡುತ್ತೇವೆ. ನಂತರ ಕೊನೆಗೆ ಮೋಸ ಹೋದ ಮೇಲೆ ಚಿಂತಿಸುತ್ತೇವೆ, ಪಶ್ಚಾತಾಪ ಪಡುತ್ತೇವೆ.
ವಿಚ್ಛೇದನ ತೆಗೆದುಕೊಳ್ಳುವವರಲ್ಲಿ ಪ್ರೀತಿ ಮದುವೆಯಾದರವರ ಸಂಖ್ಯೆ ಅಧಿಕ ಎಂದು ಕೇಳುವಾಗ ಏಕೆ ಹೀಗಾಗುತ್ತದೆ ಎಂಬ ಅಚ್ಚರಿ ಉಂಟಾಗುವುದು ಸಹಜ. ಪ್ರೀತಿಗಾಗಿ ಎಲ್ಲರನ್ನು ದಿಕ್ಕರಿಸಿ ಒಂದಾದ ಕೆಲ ಜೋಡಿಗಳು, ಅದೇ ಪ್ರೀತಿ ಬೇಡವಾಗಿ ದೂರ ಸರಿಯುತ್ತಾರೆ. ಏಕೆ ಹೀಗಾಗುತ್ತೆ ?ಏಕೆಂದರೆ ಕೇವಲ ಆಕರ್ಷಣೆಯಿಂದ ಅರಳಿದಂತಹ ಪ್ರೀತಿಯೇ ಹೊರತು ಅದರಲ್ಲಿ ಪ್ರೌಢತೆ ಇರುವುದಿಲ್ಲ. ಸೋಲ್ ಮೇಟ್ ಆಗದೆ ಹೋದ್ದರಿಂದ ಆ ಪ್ರೀತಿ ತುಂಬಾ ಕಾಲ ಬಾಳಲು ಸಾಧ್ಯವಾಗಲಿಲ್ಲ.
ಒಂದು ವೇಳೆ ನೀವು ಪ್ರೀತಿಯಲ್ಲಿದ್ದು, ಆ ಪ್ರೀತಿಯಿಂದ ನೀವು ವಂಚಿತರಾಗಲ್ಲ ಎಂಬ ಭರವಸೆ ಪಡೆಯಲು ಈ ಕೆಳಗಿನ ಪ್ರಶ್ನೆಗಳಿಗೆ ನೀವೆ ಉತ್ತರ ಕಂಡುಕೊಳ್ಳಿ.
* ಪರಸ್ಪರ ಬಿಟ್ಟುಕೊಡುವಿಕೆ ಗುಣ ಇದೆಯೇ?
ನಿಮ್ಮ ನಡುವೆ ಯಾವುದೇ ಮುಚ್ಚುಮರೆ ಇಲ್ಲವೇ?
ನೀವು ಯಾವುದೇ ಸ್ಥಿತಿಯಲ್ಲಿದ್ದರು ನಿಮ್ಮನ್ನು ಪ್ರೀತಿಸಿದವರು ನಿಮ್ಮನ್ನು ಬಿಟ್ಟು ದೂರ ಹೋಗಲ್ಲ ಎಂಬ ಭರವಸೆ ಇದೆಯೇ?
ಈ ಪ್ರಶ್ನೆಗಳಲ್ಲಿ ಯಾವುದಾದರೂ ಒಂದು ಪ್ರಶ್ನೆ ನಿಮ್ಮನ್ನು ಯೋಚಿಸುವಂತೆ ಮಾಡಿದರೆ ನೀವು ಸೋಲ್ ಮೇಟ್ ಗಳಲ್ಲಎಂದು ಅರ್ಥ.



Click it and Unblock the Notifications
