Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಇಂಟರ್ನೆಟ್ ಮೂಲಕ ಹರಿದುಬಂದ ಪ್ರೇಮ ಸಂದೇಶ

ನಂಬಿದವರಿಗೆ ಪ್ರೇಮಲೋಕವೇ ಬ್ರಹ್ಮಾಂಡ, ನಂಬದವರಿಗೆ ಹಗಲಲ್ಲಿ ಕಂಡ ಹೊಂಡ. ಪ್ರೀತಿ ಒಬ್ಬೊಬ್ಬರಿಗೆ ಒಂದೊಂದು ರೀತಿ. ಲೈನು ಹೊಡೆದವರಿಗೆ, ಹೊಡೆಯದವರಿಗೆ ಒಂದೇ ಲೈನಲ್ಲಿ ಪ್ರೀತಿಯನ್ನು ಅಭಿವ್ಯಕ್ತಪಡಿಸುವುದು ಸಾಧ್ಯವೇ? ಸಾಧ್ಯವೆಂದರೆ ಸಾಧ್ಯ, ಇಲ್ಲವೆಂದರೆ ಇಲ್ಲ.
ಪ್ರೇಮಿಗಳ ದಿನದಂದು ಒಂದು ಸಾಲಿನ ಪ್ರೇಮಮಯ ಸಂದೇಶ ನೀಡಿ ಎಂದು ನಾವು ನೀಡಿದ್ದ ಕೋರಿಕೆಗೆ ಇಂಟರ್ನೆಟ್ ಮುಖಾಂತರ ಅನೇಕ ಸಂದೇಶಗಳು ಹರಿದುಬಂದಿವೆ. ಧನ್ಯವಾದಗಳು. ಓದುಗರ ಅವಗಾಹನೆಗಾಗಿ ಅವುಗಳನ್ನು ಇಲ್ಲಿ ಪ್ರಕಟಿಸಲಾಗಿದೆ. ಓದಿರಿ ಮತ್ತು ಹೊಸಹೊಸ ಸ್ನೇಹಿತರನ್ನು ಗಳಿಸಿಕೊಳ್ಳಿ. ಪ್ರೇಮಿಗಳ ದಿನದ ಶುಭಾಶಯಗಳು.
Savitha Ravishankar : ಹಾಡೋಣ ಕುಣಿಯೋಣ ನಲಿಯೋಣ ನಾವ ಜೇನಾಗ ಬರೆಯೋಣ ಜೀವನದ ಪದವ..,
Srinath Bhalle : ಪ್ರಿಯಾ, ಈ ವ್ಯಾಲೆಂಟೈನ್ ದಿನದಿಂದಾದರೂ ವಾಲಿಯಂತೆ ಇನ್ನೊಬ್ಬರ ವ್ಯಾಲೆಂಟೈನ್" ಅನ್ನು ಕದಿಯದೆ, ನಾನಿದ್ದೂ ಇನ್ನೊಬ್ಬರ ಮೇಲೆ ವಾಲದಂತೆ, wall" ನಂತೆ ಗಟ್ಟಿಯಾಗಿ ನನ್ನೊಂದಿಗಿರು ಎಂದಳಾ ಪ್ರೇಯಸಿ :-)
Malathi A Shree A : ನಿನ್ನೊಟ್ಟಿಗಿರಲು ಒಂದು ಜನ್ಮವೇ ಸಾಲದಿರಲು ಯಾವ ಕ್ಷಣ ತಾನೆ ನಿನ್ನ ಮರೆಯಲು ಸಾಧ್ಯ ನನಗೆ..... (when a lifetime is not enough to spend with you when can there be such a moment that I may forget you...)
Manjula Babaladi : ಪ್ರೀತಿ ಪಚ್ಚೆ, ಪ್ರೀತಿ ಹಸಿರು, ಪ್ರೀತಿ ಜೀವದುಸಿರು...
ಬದುಕಿನರ್ಥ ಬಿಡಿಸಿ ಇಡುವ ಆ ಮಧುರ ಪದಕೆ
ಪ್ರೀತಿ ಎಂದೇ ಹೆಸರು!
Vidyashankar Harapanahalli : “If you love someone, set them free. If they come back they're yours; if they don't they never were." - Richard Bach
Vidyashankar Harapanahalli :
ಪ್ರೀತಿಯಂಬ ಗಿಳಿಯನು
ಬಿಗಿದಪ್ಪಿ ಹಿಡಿಯದಿರು ಗೆಳತಿ
ಸತ್ತು ಹೊದಿತು ಉಸಿರುಕಟ್ಟಿ!
ಹಾಗೆಂದು,
ಹಗುರವಾಗಿ ಪರಿಗಣಿಸದಿರು
ಹಾರಿಹೋದಿತು ಕೈಯ್ಯತಪ್ಪಿ!
- ವಿದ್ಯಾಶಂಕರ್
Anirudh Hn : ಜನರ ದುಡ್ಡು ಖರ್ಚು ಮಾಡಿಸಲಿಕ್ಕೆ ಹುಟ್ಟು ಹಾಕಿರುವ ಹಬ್ಬದ ಶುಭಾಶಯಗಳು.
Raghu S Chandan : ಪ್ರೀತಿ ಮಾಡಿ... ಮೋಸ ಮಾತ್ರ ಯಾರು, ಯಾರಿಗೂ ಮಾಡಬೇಡಿ!
Shivalingappa Bhadre : NAMMA SAMSKRUTI ALLARI
Ashok Karkera : ಹಾರುವ ಹಕ್ಕಿಗೆ ಅಲಂಕಾರ, ಪ್ರೀತಿಸೋ ಹುಡುಗಿಗೆ ದುರಂಕಾರ
Shreelatha Maiya : preethi, prema pranaya ondu dinakke seemithavagabardu, adu jivan paryantha irabeku.
Nalina Hr : True love doesn't have a happy ending. True love doesn't have an ending!



Click it and Unblock the Notifications