Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಪಿಜ್ಜಾ ಹಟ್ ಗೆ ಹೋಗೋ ಪ್ರೇಮಿಗಳಿಗೆ ಕೆಂಪುಗುಲಾಬಿ

ಮೈ ವ್ಯಾಲೆಂಟೈನ್ , ಐ ಲವ್ ಯೂ ಇತ್ಯಾದಿ ಬರಹಗಳಿರುವ ಗ್ರೀಟಿಂಗ್ಸ್ ಗಳನ್ನು ಪ್ರೇಮಿಗಳು ಮುಗಿಬಿದ್ದು ಖರೀದಿಸುತ್ತಾರೆ. ಪ್ರೇಮಿಗಳ ದಿನಕ್ಕೆ ಎಲ್ಲೆಲ್ಲೂ ಇಂತಹ ವಿಶೇಷತೆಯಿರುತ್ತದೆ. ಬೇಕರಿಯಲ್ಲಿರುವ ಕೇಕ್ ನಲ್ಲಿ ಹೃದಯ ಮೂಡಿರುತ್ತದೆ.
ವಿದೇಶದಲ್ಲಿ ವ್ಯಾಲೆಂಟೈನ್ಸ್ ಡೇ ಸ್ಟೆಷಲ್ ಆಗಿ ಪಿಜ್ಜಾ ಹಟ್ ನಲ್ಲಿ 10,010 ಡಾಲರ್ ನ ಎಂಗೇಜ್ ಮೆಂಟ್ ಪ್ಯಾಕೇಜ್ ಇದೆ. ಈ ಸೌಲಭ್ಯ ಹತ್ತು ಜನರಿಗಷ್ಟೇ ಸೌಲಭ್ಯವಿದ್ದು ಪ್ರೇಮಿಗಳ ಪಿಜ್ಜಾ ಹಟ್ ನಲ್ಲಿ ತಮ್ಮ ಪ್ರೇಮಿಗಳ ದಿನವನ್ನು ಆಚರಿಸಬಹುದಾಗಿದೆ ಎಂಬ ಸುದ್ದಿ ಇತ್ತೀಚೆಗೆ ಓದಿದ್ದೆ.
ಇದೇ ರೀತಿ ನಮ್ಮ ಬೆಂಗ್ಳೂರು ಪಿಜ್ಜಾ ಹಟ್ ಗಳಲ್ಲಿ ಏನೇನು ವಿಶೇಷ ಇರಬಹುದು ಎಂದು ತಿಳಿಯಲು ನಾನು ಜಯನಗರ ಪಿಜ್ಜಾ ಹಟ್ ಗೆ ಪ್ರಯಾಣ ಬೆಳೆಸಿದೆ. ಹೆಚ್ಚಿನ ಪಿಜ್ಜಾ ಹಟ್ ಗಳಲ್ಲಿ ಪ್ರೇಮಿಗಳ ದಿನಕ್ಕೆ ಯಾವುದೇ ವಿಶೇಷತೆ ಇಲ್ಲವೆಂಬ ಉತ್ತರ ಬಂತು.
"ಪ್ರೇಮಿಗಳ ದಿನಕ್ಕೆ ಭಾರತದ ಪಿಜ್ಜಾ ಹಟ್ ನಲ್ಲಿ ಯಾವುದೇ ವಿಶೇಷವಿಲ್ಲ ಏಕೆಂದರೆ ಅದು ನಮ್ಮ ಸಂಸ್ಕೃತಿ ಅಲ್ಲ. ಆದ್ದರಿಂದ ಆ ದಿನ ಬಂದ ಪ್ರೇಮಿಗಳು ಗುಲಾಬಿಕೊಟ್ಟು ಸ್ವಾಗತಿಸುತ್ತೇವೆ" ಹೀಗಂತ ಪಿಜ್ಜಾ ಹಟ್ ಮ್ಯಾನೇಜರೊಬ್ಬರು ಹೇಳಿದರು.
ಪಿಜ್ಜಾವೂ ದೇಶಿ ಸಂಸ್ಕೃತಿಯಲ್ಲ ಎನ್ನಬೇಕೆಂದುಕೊಂಡವಳನ್ನು ಅಲ್ಲಿದ್ದ ಬಾಯಲ್ಲಿ ನಿರೂರಿಸುವ ಪಿಜ್ಜಾವೊಂದು ತಡೆಯಿತು.



Click it and Unblock the Notifications
