Latest Updates
-
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ?
ಪ್ರೇಮಿಗಳ ದಿನಕ್ಕೆ ಲೇಖನ ಕಳಿಸಿ ಬಹುಮಾನ ಗೆಲ್ಲಿರಿ

ಪ್ರೀತಿ ಎಂಬ ಎರಡಕ್ಷರ ಮಾಡಿರುವ ಮೋಡಿಯೇ ಅಂತಹುದು. ಇದರ ಸಮ್ಮೋಹನಕ್ಕೆ ಮನುಜರು ಮಾತ್ರವಲ್ಲ, ಜಗದಲ್ಲಿರುವ ಎಲ್ಲ ಜೀವಿಗಳೂ ಒಳಗಾಗಿವೆ. ಪ್ರತಿಯೊಬ್ಬರಿಗೂ ಅವರವರದಾದ ಭಾಷೆಯಿದೆ, ರೀತಿಯಿದೆ. ಪ್ರೀತಿ ಅಳಿಸಬಲ್ಲದು, ನಗಿಸಬಲ್ಲದು, ಬೋರ್ಗಲ್ಲಿನಂತೆ ನಿರ್ಲಿಪ್ತತೆಯನ್ನೂ ತರಬಲ್ಲದು. ಅದು ಪ್ರೀತಿಯ ಶಕ್ತಿ.
ಲವ್ ಪದ ಕೇಳಿದಾಕ್ಷಣ ನಿಮ್ಮ ಮುಖದಲ್ಲಿ ಒಂದು ಬಗೆಯ ಭಾವನೆ ಬರದಿದ್ದರೆ ಕೇಳಿ. ನೀವು ಕುರ್ಚಿಗೆ ಒರಗಿಕೊಂಡು ಪ್ರೇಮಿಯ ಕೈಹಿಡಿದು ದಿನಕ್ಕೆ ಜಾರಿಕೊಂಡಿರಬಹುದು, ನಲ್ಲೆಯ ನಿರ್ವಾಜ್ಯ ಪ್ರೀತಿಯನ್ನು ನೆನೆದುಕೊಂಡು ಎರಡು ಹನಿ ಕಣ್ಣೀರುಗರೆದಿರಬಹುದು, ಅಥವಾ ಮುಂದಿರುವ ಟೇಬಲ್ಲನ್ನು ಗುದ್ದಿ ಭಾವಪರವಶತೆಗೆ ಒಳಗಾಗಿರಬಹುದು.
ಯಾವುದರ ಬಗ್ಗೆಯೂ ಪ್ರೀತಿಯಿಲ್ಲವೇ ಇಲ್ಲ ಅಂತ ಮಾತ್ರ ಹೇಳಬೇಡಿ. ನಿಮಗೆ ಕನ್ನಡದ ಮುದ್ದಾದ ಅಕ್ಷರಗಳ ಮೇಲೆ ಪ್ರೀತಿ ಇಲ್ಲದಿರಲು ಸಾಧ್ಯವೇ ಇಲ್ಲ. ಅಲ್ವಾ? ಇನ್ನೇಕೆ ತಡ ಕಂಪ್ಯೂಟರ್ ಮುಂದೆ ಕುಳಿತುಕೊಂಡು ನಾಸ್ಟಾಲ್ಜಿಯಾಗೆ ಜಾರಿಬಿಡಿ. ಮೊದಲ ನೋಟವೇ ಸೆಳೆಯಿತಾ, ಆ ಟಚ್ಚಲಿ ಮುದವಿತ್ತಾ, ಪ್ರಥಮ ಚುಂಬನ ಸವಿಜೇನು ಸ್ರವಿಸಿತ್ತಾ, ಆ ಅಪ್ಪುಗೆ ಜಗವೆಲ್ಲ ಮರೆಸಿತ್ತಾ? ನಿಮ್ಮ ಪ್ರೇಮಮಯ ಜೀವನದ ರಸನಿಮಿಷಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ಪ್ರಣಯಿಗೆ ಲವ್ ಲೆಟರ್ ಬರೆಯಿರಿ.
* ಬರಹ ಯೂನಿಕೋಡ್ ಅಥವಾ ಬರಹ ಅಥವಾ ನುಡಿ ರೂಪದಲ್ಲಿರಲಿ.
* ಲೇಖನ ಚುಟುಕಾಗಿರಲಿ, 500 ಪದಗಳನ್ನು ಮೀರದಿರಲಿ.
* ಫೆ.10ರೊಳಗೆ [email protected] ವಿಳಾಸಕ್ಕೆ ಕಳಿಸಿಕೊಡಿ. (ಇಂದೇ ಕಳಿಸಿದರೆ ಇನ್ನೂ ಉತ್ತಮ)
* ನಿಮ್ಮ (ನಿಮ್ಮಿಬ್ಬರ) ಫೋಟೋ ಲಗತ್ತಿಸಲು ಮರೆಯಬೇಡಿ.
* ಲೇಖನಗಳು ಮಾತ್ರವಿರಲು, ಕವನಗಳು ಬೇಡ.
ಮರೆತ ಮಾತು : ನಮ್ಮ ತೀರ್ಪುಗಾರರು ಆಯ್ಕೆ ಮಾಡಿದ ಅತ್ಯುತ್ತಮ ಲೇಖನಕ್ಕೆ ವಿಶೇಷವಾದ ಬಹುಮಾನವೂ ಇದೆ. ಪ್ರೇಮಿಗಳ ದಿನ ಅಂಬೆಗಾಲಿಡುತ್ತ ಬರುತ್ತಿದೆ. ಇನ್ನೇಕೆ ತಡ ಕಂಪ್ಯೂಟರ್ ಕೀಲಿಮಣೆಯನ್ನು ಕುಟ್ಟಲು ಶುರು ಹಚ್ಚಿಕೊಳ್ಳಿ.



Click it and Unblock the Notifications
