Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಎಣ್ಣೆಯಿಲ್ಲದೆ ಬರೀ ನೀರಿನಲ್ಲಿ ರುಚಿಕರ ಪೂರಿ ಮಾಡಿ..! ಇಲ್ಲಿದೆ ಅಚ್ಚರಿಯ ವಿಡಿಯೋ..!
ಭಾರತೀಯ ಖಾದ್ಯದಲ್ಲಿ ಪೂರಿ ವಿಶಿಷ್ಟ ಹೆಗ್ಗುರುತು ಹೊಂದಿದೆ. ಹೋಟೆಲ್ಗಳಿಂದ ಹಿಡಿದು ಮನೆಯಲ್ಲೂ ಪೂರಿಯ ಸ್ವಾದ ಸವಿಯಲು ಸಿಗುತ್ತದೆ. ಆಲೂ ಭಾಜಿ, ಕಡಲೆ ಪಲ್ಯ, ಕರಿ ಜೊತೆ ಪೂರಿ ಸವಿಯಲು ಸಿಕ್ಕರೆ ಅದಕ್ಕಿಂತ ರುಚಿಕರ ತಿಂಡಿ ಮತ್ತೊಂದಿಲ್ಲ ಎನಿಸುತ್ತೆ. ಆದರೆ ಇತ್ತೀಚಿನ ದಿನದಲ್ಲಿ ಪೂರಿ ಸೇವನೆಗೆ ಜನ ಹಿಂದೇಟು ಹಾಕುವುದನ್ನು ನಾವು ನೋಡುತ್ತಿದ್ದೇವೆ. ಪೂರಿ ಎಂದರೆ ಮಾರುದ್ದ ದೂರ ಓಡಿ ಹೋಗುವವರಿದ್ದಾರೆ.
ಏಕೆಂದರೆ ಪೂರಿ ನೋಡಿದರೆ ಅವರಿಗೆ ಸವಿಯಲು ಆಸೆ ಇದ್ದರೂ ಎಣ್ಣೆಯ ದೃಷ್ಟಿಯಿಂದ ಅದರಿಂದ ದೂರವಿರುತ್ತಾರೆ. ಪೂರಿಯೊಂದಿಗೆ ಎಣ್ಣೆಯು ಬೆರೆಯುವುದರಿಂದ ಹಲವರು ಆರೋಗ್ಯದ ದೃಷ್ಟಿಯಿಂದ ಪೂರಿಯನ್ನು ತ್ಯಜಿಸುತ್ತಾರೆ. ಆದರೆ ಇನ್ನೂ ಕೆಲವರು ಕಷ್ಟ ಪಟ್ಟಾದರು ಈ ಪೂರಿಯನ್ನು ಸೇವಿಸುತ್ತಾರೆ.

ಆದರೆ ಚಿಂತಿಸಬೇಡಿ ನಾವಿಂದು ಎಣ್ಣೆಯನ್ನೇ ಬಳಸದೆ ರುಚಿರುಚಿಯಾದ ಪೂರಿಯನ್ನು ಮಾಡುವುದು ಹೇಗೆ ಎಂಬುದನ್ನು ತಿಳಿಸಿಕೊಡುತ್ತೇವೆ. ಹೌದು ಒಂದು ಚಿಟಿಕೆಯಷ್ಟು ಎಣ್ಣೆ ಬಳಸದೆ ಕೇವಲ ನೀರಿನಿಂದ ಪೂರಿಯನ್ನು ಮಾಡಬಹುದು. ಹಾಗಾದರೆ ಆ ರೀತಿ ಎಣ್ಣೆ ಬಳಸದೆ ಪೂರಿ ಮಾಡುವುದು ಹೇಗೆ? ನೀರು ಬಳಸಿ ಪೂರಿ ಮಾಡಲು ಸಾಧ್ಯವೇ? ಎಂಬ ನಿಮ್ಮ ಪ್ರಶ್ನೆ ಇಲ್ಲಿ ಉತ್ತರ ನೀಡಲಾಗಿದೆ.
ನೇಹಾ ದೀಪಕ್ ಎಂಬಾಕೆ ಖುದ್ದು ಈ ರೀತಿಯ ಪೂರಿ ಮಾಡಿ ಅದರ ವಿಡಿಯೋವನ್ನು ಇನ್ಸ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಸಹ ಆಗಿದ್ದು, ಜನ ಎಣ್ಣೆ ಇಲ್ಲದೆ ನೀರಿನಲ್ಲಿ ಪೂರಿ ಮಾಡುವುದ ಕಂಡು ನಿಬ್ಬೆರಗಾಗಿದ್ದಾರೆ.
ಈ ಪೂರಿಗಳನ್ನು ಸಹ ಸಾಮಾನ್ಯ ಪೂರಿ ಮಾಡುವಂತೆಯೇ ಮಾಡಲಾಗುತ್ತದೆ. ಅದಕ್ಕೆ ಬಳಸುವ ಪದಾರ್ಥವನ್ನೇ ಬಳಸಲಾಗುತ್ತದೆ ಆದರೆ, ಏರ್ ಫ್ರೈಯರ್ನ ಅಗತ್ಯವಿದೆ.
ಅಗತ್ಯ ವಸ್ತುಗಳು
- ಗೋಧಿ ಹಿಟ್ಟು
- ಮೊಸರು-1 ಟೇಬಲ್ ಸ್ಪೂನ್
- ಉಪ್ಪು ರುಚಿಗೆ ತಕ್ಕಷ್ಟು
- ನೀರು
ಮಾಡುವ ವಿಧಾನ
ಮೊದಲು ಗೋಧಿ ಹಿಟ್ಟನ್ನು ಚಪಾತಿಗೆ ರೆಡಿ ಮಾಡಿಕೊಳ್ಳುವಂತೆಯೇ ಮಾಡಬೇಕು. ಅದಕ್ಕೆ ನೀರು ಹಾಕಿ ಸ್ವಲ್ಪ ಮೊಸರು ಹಾಕಿ ಚೆನ್ನಾಗಿ ಮೆತ್ತಗಾಗುವರೆಗೂ ಮಿಶ್ರಣ ಮಾಡಿಟ್ಟುಕೊಳ್ಳಬೇಕು. ಹಿಟ್ಟು ಚೆನ್ನಾಗಿ ಬೆರತ ನಂತರ ಒಲೆಯ ಮೇಲೆ ನೀರು ಹಾಕಿ ಕುದಿಯಲು ಬಿಡಬೇಕು.
ನೀರು ಕುದಿಯಲು ಆರಂಭಿಸಿದ ನಂತರ ಹಿಟ್ಟನ್ನು ತೆಗೆದುಕೊಂಡು ಅಂಗೈ ಅಗಲದಷ್ಟು ದೊಡ್ಡದಾದ ಚಪಾತಿಯಂತೆ ಮಾಡಿ ನೀಡಿನಲ್ಲಿ ಬಿಡಬೇಕು. ಇದು ಎಣ್ಣೆ ಅಲ್ಲದಿರುವುದರಿಂದ ಪೂರಿ ಉಬ್ಬುವುದಿಲ್ಲ. ಬದಲಾಗಿ ಸ್ವಲ್ಪ ಮೆತ್ತಗಾಗುವಂತೆ ಅನಿಸುತ್ತದೆ. ನೀರಿನಲ್ಲಿ ಸುಮಾರು 2ರಿಂದ 3 ನಿಮಿಷ ಬೇಯಿಸಬೇಕು.
ಬಳಿಕ ಪೂರಿಯನ್ನು ಕುದಿಯುವ ನೀರಿನಿಂದ ಹೊರತೆಗೆದು ಏರ್ ಫ್ರೈಯರ್ನಲ್ಲಿ ಬೇಯಿಸಲು ಇಡಬೇಕು. ಸುಮಾರು 4ರಿಂದ 5 ನಿಮಿಷಗಳ ಕಾಲ ಬೇಯಿಸಬೇಕು. ಬಳಿಕ ಹೊರೆತೆಗೆದಾಗ ಅದು ಗೋಲ್ಡನ್ ಕಲರ್ಗೆ ರೂಪಾಂತರವಾಗಿರುತ್ತದೆ. ಇದು ನೋಡಲು ಎಣೆಯಲ್ಲಿ ಕಾಯಿಸಿರುವ ಪೂರಿಯಂತೆಯೇ ಕಂಡುಬರುತ್ತದೆ.
ಏರ್ ಫ್ರೈಯರ್ ಇಲ್ಲದಿದ್ದರೆ ಇಡ್ಲಿ ಬೇಯಿಸುವಂತೆ ಹಬೆಯಲ್ಲಿ ಇದನ್ನು ಬೇಯಿಸಬಹುದು ಆದರೆ ಗೋಲ್ಡನ್ ಕಲರ್ ಪೂರಿಯ ಬದಲು ಬಿಳಿ ಬಣ್ಣದ ಪೂರಿಯಾಗುವ ಸಂಭವಿರುತ್ತದೆ.



Click it and Unblock the Notifications
