Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಟೊಮೆಟೊ ಚಟ್ನಿ ಹೀಗೆ ಮಾಡಿದರೆ ತಿಂಗಳವರೆಗೆ ಇಟ್ಟರೂ ಹಾಳಾಗಲ್ಲ!
ಟೊಮೆಟೊ ಚಟ್ನಿ ಹಲವು ರೀತಿಯಲ್ಲಿ ಮಾಡಬಹುದು, ನೀವು ಟೊಮೆಟೊ ಚಟ್ನಿ ಹೀಗೆ ಮಾಡಿದರೆ ತಿಂಗಳವರೆಗೆ ಇಟ್ಟು ಬಳಸಬಹುದು. ಹಾಸ್ಟೆಲ್ ಓದುವ ಮಕ್ಕಳಿಗೆ ಹೀಗೆ ಮಾಡಿ ಕೊಟ್ಟರೆ ಅವರು ಊಟ ಸೇರುತ್ತಿಲ್ಲ ಎಂದ ಕಂಪ್ಲೇಂಟ್ ಮಾಡುವುದನ್ನು ನಿಲ್ಲಿಸುತ್ತಾರೆ. ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
2-3 ಟೊಮೆಟೊ
3-4 ಎಸಳು ಬೆಳ್ಳುಳ್ಳಿ
3-4 ಒಣ ಮೆಣಸು (ಬ್ಯಾಡಗಿ ಬಳಸುವುದಾದರೆ10-15 ಬಳಸಬಹುದು)
ಸ್ವಲ್ಪ ಅರಿಶಿಣ ಪುಡಿ
ರುಚಿಗೆ ತಕ್ಕ ಉಪ್ಪು
1/2 ಚಮಚ ಜೀರಿಗೆ
ಒಗ್ಗರಣೆಗೆ
1 ಚಮಚ ಎಣ್ಣೆ
ಸ್ವಲ್ಪ ಕರಿಬೇವು
ಸ್ವಲ್ಪ ಸಾಸಿವೆ
1 ಒಣ ಮೆಣಸು
2-3 ಬೆಳ್ಳುಳ್ಳಿ
ಚಿಟಿಕೆಯಷ್ಟು ಇಂಗು
ಮಾಡುವ ವಿಧಾನ
- ನೀವು ಟೊಮೆಟೊ ತೊಳೆದು ಚಿಕ್ಕದಾಗಿ ಕತ್ತರಿಸಿ ಇಡಿ
- ಈಗ ನೀವು ಪ್ಯಾನ್ಗೆ ಸ್ವಲ್ಪ ಎಣ್ಣೆ ಹಾಕಿ ಎಣ್ಣೆ ಬಿಸಿಯಾದಾಗ ಜೀರಿಗೆ ಹಾಕಿ, ಜೀರಿಗೆ ಚಟ್ಪಟ್ ಶಬ್ದ ಮಾಡುವಾಗ ಅದರಲ್ಲಿ ಒಣಮೆಣಸು ಹಾಕಿ ಫ್ರೈ ಮಾಡಿ, ಒಂದು ಪಾತ್ರೆಯಲ್ಲಿ ಹಾಕಿಡಿ
- ನಂತರ ಬೆಳ್ಳುಳ್ಳಿ ಹಾಕಿ
- ಈಗ ಟೊಮೆಟೊ ಹಾಕಿ, ಉಪ್ಪು, ಅರಿಶಿಣ ಪುಡಿ ಹಾಕಿ ಟೊಮೆಟೊ ಸ್ವಲ್ಪ ಮೆತ್ತಗಾಗುವವರೆಗೆ ಫ್ರೈ ಮಾಡಿ, ಸ್ಟೌವ್ ಆಫ್ ಮಾಡಿ ಟೊಮೆಟೊ ತಣ್ಣಗಾಗಲು ಬಿಡಿ
- ಈಗ ನೀವು ಈ ಎಲ್ಲಾ ಸಾಮಗ್ರಿ ಮಿಕ್ಸಿ ಜಾರ್ಗೆ ಹಾಕಿ ರುಚಿಗೆ ತಕ್ಕ ಉಪ್ಪು ಹಾಕಿ ಗ್ರೈಂಡ್ ಮಾಡಿ, ನುಣ್ಣನೆ ಬೇಕೆಂದರೆ ನುಣ್ಣನೆ ರುಬ್ಬಿಕೊಳ್ಳಿ, ಅನ್ನ, ದೋಸೆ ಜೊತೆ ಸವಿಯಲು ಗಟ್ಟಿ ಚಟ್ನಿ ಬೇಕೆನ್ನುವವರು 2-3 ರೌಂಡ್ ತಿರುಗಿಸಿದರೆ ಸಾಕಾಗುತ್ತೆ.
- ಈಗ ನೀವು ಬಾಣಲೆಗೆ ಎಣ್ಣೆ ಹಾಕಿ ಸ್ವಲ್ಪ ಸಾಸಿವೆ ಹಾಕಿ, ಸಾಸಿವೆ ಚಟ್ಪಟ್ ಶಬ್ದ ಮಾಡುವಾಗ ಒಣ ಮೆಣಸು ಮುರಿದು ಹಾಕಿ, ಬೆಳ್ಳುಳ್ಳಿ ಎಸಳು ಹಾಕಿ, ಕರಿಬೇವು ಸೇರಿಸಿ, ಇಂಗು ಸೇರಿಸಿ ಈ ಒಗ್ಗರಣೆಯನ್ನು ಚಟ್ನಿಗೆ ಸೇರಿಸಿ ಮಿಕ್ಸ್ ಮಾಡಿ ದೋಸೆ, ಇಡ್ಲಿ ಅಥವಾ ಅನ್ನದ ಜೊತೆ ಸರ್ವ್ ಮಾಡಿ.
- ಈ ಚಟ್ನಿ ವಾರದವರೆಗೆ ಇಟ್ಟರೂ ಕೆಡುವುದಿಲ್ಲ. ಫ್ರಿಡ್ಜ್ನಲ್ಲಿಟ್ಟರೆ ತಿಂಗಳವರೆಗೆ ಇಟ್ಟು ಬಳಸಬಹುದು.
ಈ ಟೊಮೆಟೊ ಚಟ್ನಿಗೆ ಯಾವ ಟೊಮೆಟೊ ಬಳಸಬೇಕು?
ಹುಳಿ ಟೊಮೆಟೊ ಹಾಗೂ ಜಾಮೂನು ಟೊಮೆಟೊ ಅಂತ ಸಿಗುತ್ತೆ. ನೀವು ಹೆಚ್ಚು ಸಮಯ ಇಡಲು
ಬಯಸುವುದಾದರೆ ಜಾಮೂನು ಟೊಮೆಟೊ ಬಳಸಿದರೆ ಒಳ್ಳೆಯದು, ಇಲ್ಲದಿದ್ದರೆ ಹುಳಿ ಟೊಮೆಟೊ
ಬಳಸಬಹುದು. ಈ ಚಟ್ನಿ ಮಾಡುವಾಗ ನೀವು ಹಣ್ಣಾದ ಟೊಮೆಟೊವನ್ನೇ ಬಳಸಿ, ಹಸಿ ಟೊಮೆಟೊ
ಬಳಸಬೇಡಿ.
ಇತರ ಸಲಹೆ: ನೀವು ಈ ಚಟ್ನಿ ಮಾಡುವಾಗ ನೀರು
ಸೇರಿಸಬೇಡಿ
ಬೆಳ್ಳುಳ್ಳಿ ಜೊತೆ ಸ್ವಲ್ಪ ಶುಂಠಿ ಕೂಡ ಎಣ್ಣೆಯಲ್ಲಿ ಫ್ರೈ ಮಾಡಿ ರುಬ್ಬಲು
ಸೇರಿಸಬಹುದು
ಗುಂಟೂರು ಮೆಣಸು ಹಾಗೂ ಬ್ಯಾಡಗಿ ಮೆಣಸು ಜೊತೆಯಲ್ಲಿ ಹಾಕಿ ರುಬ್ಬಿ
ನೀವು ದೀರ್ಘ ಸಮಯ ಇಡಬಯಸುವುದಾದರೆ ಉಪ್ಪಿನಕಾಯಿ ರೀತಿಯಲ್ಲಿ ಗಾಳಿಯಾಡದ
ಡಬ್ಬದಲ್ಲಿ ಹಾಕಿಡಿ.
ಉಪ್ಪಿನಕಾಯಿಯಂತೆ ಇದನ್ನು ಬಳಸಬಹುದು, ಊಟ ಬಲು ರುಚಿ ಅನಿಸುವುದು.
ಇತರ ಸಲಹೆ
ನೀವು ಇಡ್ಲಿಗೆ ಈ ಚಟ್ನಿ ಮಾಡಿ ಸವಿಯುವುದಾದರೆ ಇದಕ್ಕೆ ಸ್ವಲ್ಪ ತೆಂಗಿನ ತುರಿ ಸೇರಿಸಿ ರುಬ್ಬಿದರೆ ಸಾಕು ತೆಂಗಿನಕಾಯಿ ಚಟ್ನಿ ರೆಡಿಯಾಗುತ್ತೆ, ಈ ಚಟ್ನಿ ಮಾಡಿದರೆ ಒಂದು ದಿನ ಇಡಬಹುದಷ್ಟೇ, ಆದರೆ ಇಡ್ಲಿಗೆ ತಿನ್ನಲು ತುಂಬಾನೇ ಸೂಪರ್ ಆಗಿರುತ್ತದೆ. ಈ ಚಟ್ನಿಗೆ ಹುರಿಗಡಲೆ ಸೇರಿಸಿ ರುಬ್ಬಬಹುದು.



Click it and Unblock the Notifications
