Latest Updates
-
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ
ರೆಸಿಪಿ: ಮಧುಮೇಹಿಗಳಿಗೆ, ತೂಕ ಇಳಿಕೆಗೆ ಬೆಸ್ಟ್ ಈ ಓಟ್ಸ್ ಕಿಚಡಿ, ಟೇಸ್ಟ್ ಸೂಪರ್
ಮಧುಮೇಹವಿದ್ದರೆ ಪಥ್ಯ ಆಹಾರ ಸೇವಿಸಬೇಕೆಂದಿಲ್ಲ, ರಕ್ತದಲ್ಲಿ ಸಕ್ಕರೆಯಂಶ ಹೆಚ್ಚು ಮಾಡುವ ಆಹಾರ ಸೇವಿಸಬಾರದು ಅಷ್ಟೇ.... ಮಧುಮೇಹಿಗಳಿಗೆ ಅತ್ಯುತ್ತಮವಾದ ಆಹಾರಗಳಲ್ಲಿ ಒಂದು ಓಟ್ಸ್. ಆದರೆ ಕೆಲವರಿಗೆ ಓಟ್ಸ್ ಅನ್ನು ರುಚಿಕರವಾಗಿ ಮಾಡುವುದು ಹೇಗೆ ಎಂಬುವುದೇ ಗೊತ್ತಿರುವುದಿಲ್ಲ. ಈ ಕಾರಣಕ್ಕೆ ಓಟ್ಸ್ ಎಂದ ಕ್ಷಣ ಮುಖ ಸಿಂಡರಿಸುತ್ತಾರೆ.

ಆದರೆ ಒಟ್ಸ್ ಅನ್ನು ತುಂಬಾ ರುಚಿಯಾಗಿ ಮಾಡಬಹುದು. ಇದರಿಂದ ಇಡ್ಲಿ ಮಾಡಬಹುದು, ಉಪ್ಪಿಟ್ಟು ಮಾಡಬಹುದು, ಅಷ್ಟೇ ಏಕೆ ರುಚಿಕರವಾದ ಕಿಚಡಿ ಕೂಡ ಮಾಡಬಹುದು. ಇನ್ನು ತೂಕ ಇಳಿಕೆಗೂ ಓಟ್ಸ್ ಕಿಚಡಿ ಬೆಸ್ಟ್.
ಈ ಓಟ್ಸ್ ಕಿಚಡಿ ಮಾಡುವುದು ಬಲು ಸುಲಭವಾಗಿದ್ದು ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:
ಬೇಕಾಗುವ ಸಾಮಗ್ರಿ
1 ಕಪ್ ಓಟ್ಸ್
1 ಚಮಚ ಹೆಸರು ಬೇಳೆ
3 ಚಮಚ ಆಲೀವ್ ಎಣ್ಣೆ
2 ಚಮಚ ಬೆಳ್ಳುಳ್ಳಿ ಪೇಸ್ಟ್
ಹಸಿ ಮೆಣಸಿನಕಾಯಿ ಪೇಸ್ಟ್ ಅಥವಾ ಹಸಿ ಮೆಣಸಿನಕಾಯಿ (ನಿಮ್ಮ ರುಚಿಗೆ
ತಕ್ಕಷ್ಟು)
1 ಚಿಕ್ಕ ಚಮಚ ಅರಿಶಿಣ ಪುಡಿ
ರುಚಿಗೆ ತಕ್ಕ ಉಪ್ಪು
ಡ್ರೈ ಫ್ರೂಟ್ಸ್ (ಬೇಕಿದ್ದರೆ)
ಮಾಡುವ ವಿಧಾನ:
* ಪ್ರೆಶರ್ ಕುಕ್ಕರ್ ಬಿಸಿ ಮಾಡಿ ಅದಕ್ಕೆ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಹಸಿ ಮೆಣಸಿನಕಾಯಿ ಪೇಸ್ಟ್ ಹಾಗೂ ಬೆಳ್ಳುಳ್ಳಿ ಪೇಸ್ಟ್ ಹಾಕಿ 2 ನಿಮಿಷ ಫ್ರೈ ಮಾಡಿ.

* ಈಗ ಓಟ್ಸ್ ಹಾಗೂ ತೊಳೆದ ಹೆಸರು ಬೇಳೆ ಹಾಕಿ 2 ನಿಮಿಷ ಉರಿಯಿರಿ.

* ಇದಕ್ಕೆ 4 ಕಪ್ ನೀರು ಹಾಕಿ ರುಚಿಗೆ ತಕ್ಕ ಉಪ್ಪು, ಅರಿಶಿಣ ಪುಡಿ ಸೇರಿಸಿ.

* ಎರಡು ವಿಶಲ್ ಆದರೆ ಸವಿಯಲು ಓಟ್ಸ್ ಕಿಚಡಿ ರೆಡಿ.

*ಇದಕ್ಕೆ ನೀವು ಡ್ರೈ ಫ್ರೂಟ್ಸ್ ಅಥವಾ ಬೆರ್ರಿ ಫ್ರೂಟ್ಸ್ ಹಾಕಿ ಸವಿದರೆ ಮತ್ತಷ್ಟು ರುಚಿಯಾಗಿರುತ್ತದೆ.



Click it and Unblock the Notifications
