Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ತುಪ್ಪವನ್ನು ಬೆಣ್ಣೆಯಲ್ಲ ಕೆನೆಯಿಂದ ಬರೀ ಹತ್ತೇ ನಿಮಿಷದಲ್ಲಿ ಮಾಡಬಹುದು: ವೈರಲ್ ವೀಡಿಯೋ
ಹಾಲಿನ ಕೆನೆ ಬಳಸಿ ಬರೀ 10 ನಿಮಿಷದಲ್ಲಿ ತುಪ್ಪ ರೆಡಿಯಾದ ವೀಡಿಯೋ ಇದೀಗ ತುಂಬಾನೇ ವೈರಲ್ ಆಗುತ್ತಿದೆ. ಈ ವೀಡಿಯೋ 10 ಮಿಲಿಯನ್‌ಗಿಂತಲೂ ಅಧಿಕ ವ್ಯೂವ್ಸ್ ಪಡೆದಿದೆ. ಬರೀ 10 ನಿಮಿಷದಲ್ಲಿ ತುಪ್ಪ ಮಾಡಬಹುದೇ ಎಂಬ ಕುತೂಹಲವೇ ಈ ವೀಡಿಯೋ ಇಷ್ಟೊಂದು ವೀಕ್ಷಣೆ ಪಡೆಯಲು ಸಾಧ್ಯವಾಗಿದ್ದು.
ಇದನ್ನು ಫುಡ್ ವ್ಲೋಗರ್ ಶಿಪ್ರ ಎಂಬುವವರು ಮಾಡಿದ್ದು ಈ ಅಡುಗೆ ಟ್ರಿಕ್ಸ್ ತುಂಬಾ ಜನರ ಮೆಚ್ಚುಗೆ ಪಡೆದಿದೆ. ಸಾಮಾನ್ಯವಾಗಿ ಕೆನೆ ತೆಗೆದು ಬೆಣ್ಣೆ ಮಾಡಿ, ಬೆಣ್ಣೆಯಿಂದ ತುಪ್ಪ ಮಾಡುತ್ತಾರೆ. ಆದರೆ ಇಲ್ಲಿ ಬೆಣ್ಣೆ ಮಾಡುವುದಿಲ್ಲ, ಬದಲಿಗೆ ನೇರವಾಗಿ ಕೆನೆಯಿಂದ ತುಪ್ಪ ತಯಾರಿಸಿದ್ದಾರೆ.

ನೀವು ಕೆನೆಯನ್ನು ರೂಂ ಉಷ್ಣತೆಯಲ್ಲಿ ಇಟ್ಟಿರುವ ಕೆನೆ ಬಳಸಬಹುದು ಅಥವಾ ಫ್ರಿಡ್ಜ್‌ನಲ್ಲಿಟ್ಟ ಕೆನೆ ಬಳಸಬಹುದು. ಇದನ್ನು ಕುಕ್ಕರ್‌ನಲ್ಲಿ ಹಾಕಿ ಕಾಯಿಸಿ ತುಪ್ಪ ಮಾಡಿದ್ದಾರೆ.
ಕೆನೆಯಿಂದ 10 ನಿಮಿಷದಲ್ಲಿಯೇ ರೆಡಿಯಾದ ತುಪ್ಪ
ಕುಕ್ಕರ್ ಅನ್ನು ಗ್ಯಾಸ್ ಉರಿ ಮೇಲೆ ಇಟ್ಟು ಅದಕ್ಕೆ ಕೆನೆಯನ್ನು ಹಾಕಿ, ಸ್ವಲ್ಪ
ಬಿಸಿ ನೀರು ಹಾಕಿ ನಂತರ ಒಂದು ವಿಶಲ್ ಬರಿಸಿ. ನಂತರ ಕುಕ್ಕರ್‌ನ ಗಾಳಿ ಹೋದ ಮೇಲೆ
ಕುದಿಸಿದ ಕೆನೆಗೆ ಚಿಟಿಕೆಯಷ್ಟು ಅಡುಗೆ ಸೋಡಾ ಹಾಕಿ. ನಂತರ 5-7 ನಿಮಿಷ ಇಟ್ಟಾಗ
ತುಪ್ಪ ಬೇರ್ಪಡುತ್ತದೆ. ನಂತರ ತುಪ್ಪವನ್ನು ಸೋಸಿ ಇಡಲಾಗುವುದು.
ಸಾಮಾನ್ಯವಾಗಿ ಬೆಣ್ಣೆಯಿಂದ ತುಪ್ಪ ತಯಾರಿಸುವ
ವಿಧಾನ:
* ಹಾಲನ್ನು ಕುದಿಸಿದಾಗ ಬರುವ ಕೆನೆಯನ್ನು ತೆಗೆದು ಇಡಿ. ಹೀಗೆ ಪ್ರತಿದಿನ
ಸಂಗ್ರಹಿಸಿ ಇಡಿ. ಹೀಗೆ ಕೆನೆ ಒಂದು ಬಟ್ಟಲಿನಷ್ಟು ಸಂಗ್ರಹವಾದರೆ ತಣ್ಣನೆಯ
ನೀರಿನಲ್ಲಿ ಹಾಕಿ, ನಂತರ ಆ ಕೆನೆಯನ್ನು ತೆಗೆದು, ಮಿಕ್ಸಿ ಜಾರ್ ನಲ್ಲಿ ಕನಿಷ್ಠ
3 ನಿಮಿಷ ಮಿಕ್ಸಿ ಮಾಡಿ. ನಂತರ ಶುದ್ಧವಾದ ಬಟ್ಟೆಯಿಂದ ಬೆಣ್ಣೆಯನ್ನು ಸೋಸಿ
ತೆಗೆಯಿರಿ. ಹೀಗೆ ಸಂಗ್ರಹವಾದ ಬೆಣ್ಣೆಯನ್ನು ಹಾಗೆ ಬಳಸಬಹುದು ಅಥವಾ ನೀವು ಇದರಿಂದ
ತುಪ್ಪ ತಯಾರಿಸಬಹುದು. ನಂತರ ಆ ಬೆಣ್ಣೆಗೆ ಸ್ವಲ್ಪ ಏಲಕ್ಕಿ, ಸ್ವಲ್ಪ ಅರಿಶಿಣ
ಹಾಕಿ ಕಡಿಮೆ ಉರಿಯಲ್ಲಿ ಹಾಕಿ ಕುದಿಸಿ. ಹೀಗೆ ಮಾಡಿದರೆ ರುಚಿಯಾದ ಘಮ ಘಮವಾದ
ತುಪ್ಪ ರೆಡಿ.
ಮನೆಯಲ್ಲಿಯೇ ಶುದ್ಧ ತುಪ್ಪ ಮಾಡುವುದರಿಂದ ದೊರೆಯುವ
ಪ್ರಯೋಜನಗಳು
* ನೀವು ಮನೆಯಲ್ಲಿಯೇ ತುಪ್ಪ ತಯಾರಿಸುವುದರಿಂದ ಶುದ್ಧ ತುಪ್ಪ ತಯಾರಿಸಬಹುದು,
ಕಲಬೆರಿಕೆಯ ಭಯವಿರಲ್ಲ.
* ತುಪ್ಪ ದೇಹದ ಆರೋಗ್ಯಕ್ಕೆ ಒಳ್ಳೆಯದು, ಮಕ್ಕಳ ಆರೋಗ್ಯಕ್ಕೆ ತುಂಬಾ
ಒಳ್ಳೆಯದು.



Click it and Unblock the Notifications
