Latest Updates
-
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ!
Year Ender 2024: ಈ ವರ್ಷ ಭಾರತೀಯರು ಅತಿ ಹೆಚ್ಚು ಗೂಗಲ್ ಮಾಡಿದ ಟಾಪ್ 10 ರೆಸಿಪಿಗಳಿವು
ಆನ್‌ಲೈನ್ ರೆಸಿಪಿ ನೋಡಿ ಅಡುಗೆ ಮಾಡುವವರ ಸಂಖ್ಯೆಯಿಲ್ಲ, ರೆಸಿಪಿ ಗೂಗಲ್ ಮಾಡಿ ನಮಗೆ ಮಾಡಿ ಬಡಿಸಿದರೆ ನಮ್ಮ ಗತಿಯೇನು ಎಂದು ಕೆಲರು ತಮಾಷೆ ಮಾಡಬಹುದು, ಆದರೆ ಆನ್ಲೈನ್ ರೆಸಿಪಿ ವೀಡಿಯೋ ಅಥವಾ ರೆಸಿಪಿ ಆರ್ಟಿಕಲ್ ನೋಡಿ ಅಡುಗೆ ಮಾಡಲು ಗೊತ್ತೇ ಇಲ್ಲ ಎಂದವರು ಕೂಡ ಚೆನ್ನಾಗಿರುವ ಅಡುಗೆ ಮಾಡಲು ಕಲಿತ ಸಾಕಷ್ಟು ಉದಾಹರಣೆಗಳು ಸಿಗುತ್ತೆ.
ಕೆಲವೊಂದು ರೆಸಿಪಿಗಳು ಅಂತೂ ಟ್ರೆಂಡ್ ಉಂಟು ಮಾಡುತ್ತವೆ. 2024ರಲ್ಲಿ ಜನರು ಅತಿ ಹೆಚ್ಚು ಗೂಗಲ್ ಸರ್ಚ್ ಮಾಡಿರುವ ರೆಸಿಪಿಗಳ ಪಟ್ಟಿಯನ್ನು ಗೂಗಲ್ ಬಿಡುಗಡೆ ಮಾಡಿದ್ದು, ಇದರಲ್ಲಿ ನೀವು ಸರ್ಚ್ ಮಾಡಿರುವ ರೆಸಿಪಿ ಕೂಡ ಇದೆಯೇ ನೋಡಿ:

ಪೋರ್ನ್ ಸ್ಟಾರ್ ಮಾರ್ಟಿನಿ
ಈ ರೆಸಿಪಿ ಕಳೆದ ವರ್ಷವೂ ಟಾಪ್ ಸರ್ಚ್‌ನಲ್ಲಿತ್ತು, ಈ ವರ್ಷವೂ ಅದರ ಬೇಡಿಕೆ ಇಳಿದಿಲ್ಲ, ಜನರು ಇದೇನು ಎಂದು ತಿಳಿಯುವ ಕುತೂಹಲದಿಂದ ರೆಸಿಪಿಗಾಗಿ ಹುಡುಕಾಟಿದ್ದರೆ. ಈ ವರ್ಷ ಅತೀ ಹೆಚ್ಚು ಸರ್ಚ್ ಮಾಡಿರುವ ರೆಸಿಪಿಗಳ ಪಟ್ಟಿಯಲ್ಲಿ ನಂಬರ್ 1 ಸ್ಥಾನದಲ್ಲಿದೆ. ಇದೊಂದುಕಾಕ್‌ಟೇಲ್ ರೆಸಿಪಿಯಾಗಿದ್ದು ಇದನನು ವೋಡ್ಕಾ, ಹಣ್ಣುಗಳು (ಪ್ಯಾಷನ್ ಫ್ರೂಟ್, ನಿಂಬೆರಸ) ಇವುಗಳನ್ನು ಬಳಸಿ ತಯಾರಿಸಲಾಗುವುದು. ಇದು ನಿಜವಾದ ಮಾರ್ಟಿನ್ ಡ್ರಿಂಕ್ ಅಲ್ಲ, ಆದರೆ ಮಾರ್ಟಿನ್ ಗುಂಪಿಗೆ ಸೇರಿದ ಡ್ರಿಂಕ್ ಇದಾಗಿದೆ, 2018ರಿಂದಲೂ ಈ ಡ್ರಿಂಕ್‌ಗೆ ತುಂಬಾ ಬೇಡಿಕೆಯಿದೆ.
ಧನಿಯಾ ಪಂಜಿರಿ
ಇದೊಂದು ಸಿಹಿ ತಿಂಡಿಯಾಗಿದ್ದು ಕೃಷ್ಣ ಜನ್ಮಾಷ್ಟಮಿ ಸಮಯದಲ್ಲಿ ಪ್ರಸಾದವಾಗಿ
ಇದನ್ನು ತಯಾರಿಸಲಾಗುವುದು. ಧನಿಯಾ ಎಂದರೆ ಕೊತ್ತಂಬರಿ, ಇದರ ಜೊತೆಗೆ ಡ್ರೈ
ಫ್ರೂಟ್ಸ್, ತುಪ್ಪ, ಹಿಟ್ಟು ಇವುಗಳನ್ನು ಬಳಸಿ ಮಾಡುವ ಸಿಹಿ ತಿಂಡಿ
ಇದಾಗಿದೆ.
ಯುಗಾದಿ ಪಚಡಿ
ಯುಗಾದಿ ಪಚಡಿಗೆ ಮೂರನೇ ಸ್ಥಾನದಲ್ಲಿದೆ. ಕರ್ನಾಟಕ, ಆಮಧ್ರ ಪ್ರದೇಶ, ತೆಲಂಗಾಣ ಈ
ಭಾಗಗಳಲ್ಲಿ ಯುಗಾದಿ ಪಚಡಿ ತಯಾರಸಿಲಾಗುವುದು. ಯುಗಾದಿ ಹಬ್ಬದಂದು ಮಾತ್ರ ಮಾಡುವ ಈ
ಪಚಡಿ ಔಷಧಿಗೆ ಸಮ, ಈ ಪಚಡಿಯನ್ನು ಬೇವು, ಬೇವಿನ ಹೂವು, ಬೆಲ್ಲ, ಮಾವಿನಕಾಯಿ,
ಕಾಳು ಮೆಣಸಿ, ಕಾಯಿ ಹೋಳು, ಕಲ್ಲುಪ್ಪು ಇವುಗಳೆನ್ನೆಲ್ಲಾ ಬಳಸಿ
ತಯಾರಿಸಲಾಗುವುದು. ಯುಗಾದಿ ಪಚಡಿ ಯುಗಾದಿಯಂದು ತಯಾರಿಸುವ ಸಾಂಪ್ರದಾಯಕ
ಅಡುಗೆಯಾಗಿದೆ.
ಚಾರ್ನರ್ಮಿತ್
ಇದು ಕೃಷ್ಣ ಜನ್ಮಾಷ್ಟಮಿ ಸಮಯದಲ್ಲಿ ತಯಾರಿಸುವ ಸಿಹಿ ತಿಂಡಿಯಾಗಿದೆ. ಇದನ್ನು
ಮೊಸರು, ಹಾಲು, ಸಕ್ಕರೆ, ಜೇನು, ತುಪ್ಪ, ಬಾದಾಮಿ, ಗೋಡಂಬಿ, ಮಖಾನ ಇವೆಲ್ಲಾ ಬಳಸಿ
ತಯಾರಿಸಲಾಗುವುದು. ಈ ಆಹಾರ ದೇಹ ಹಾಗೂ ಮನಸ್ಸಿನ ಆರೋಗ್ಯಕ್ಕೆ ತುಂಬಾನೇ
ಒಳ್ಳೆಯದು.
ಇಮಾ ದತ್‌ಶಿ
ಇದು ಭೂತಾನ್ ಪ್ರಸಿದ್ಧ ಖಾದ್ಯವಾಗಿದೆ, ಇದನ್ನು ಹಸಿ ಮೆಣಸಿ, ಕಾಳು ಮೆಣಸು,
ಚೀಸ್ ಬಳಸಿ ತಯಾರಿಸಲಾಗುವುದು. ಭೂತಾನ್ ದೇಶದಲ್ಲಿ ಇಮಾ ಎಂದರೆ ಮೆಣಸು ಎಂದರ್ಥ,
ದತ್‌ಶಿ ಎಂದರಿ ಚೀಸ್,, ಇದೆರಡು ಸೇರಿಸಿ ಮಾಡುವ ಖಾದ್ಯ, ಬೂತಾನ್‌ಗೆ ಹೋದಾಗ
ಇದನ್ನು ಟೇಸ್ಟ್ ಮಾಡಲು ಮರೆಯಬೇಡಿ. ಇದನ್ನು ಕುಚಲಕ್ಕಿ ಅನ್ನ, ಬ್ರೆಡ್ ಜೊತೆ
ಸರ್ವ್ ಮಾಡಲಾಗುತ್ತೆ.
ಫ್ಲ್ಯಾಟ್ ವೈಟ್
ಇದು ಕಾಫಿಯಾಗಿದ್ದು, ಇದನ್ನು ಎಸ್‌ಪ್ರೆಸ್ಸೋ ಹಾಗೂ ಸ್ಟೀಮ್ಡ್ ಮಿಲ್ಕ್ ಬಳಸಿ ತಯಾರಿಸಲಾಗುವುದು, ಇದು ಕ್ಯಾಪಿಚಿನೋಗಿಂತ ಭಿನ್ನವಾದ ರೆಸಿಪಿಯಾಗಿದೆ.
ಕಂಜಿ
ಇದನ್ನು ಹೋಲಿ ಸಮಯದಲ್ಲಿ ತಯಾರಿಸಲಾಗುವುದು. ಕ್ಯಾರೆಟ್, ಬೀಟ್‌ರೂಟ್, ಸಾಸಿವೆ
ಇವೆಲ್ಲಾ ಬಳಸಿ ಮಾಡುವ ರೆಸಿಪಿ ಇದಾಗಿದೆ. ಇದೊಂದು ಆರೋಗ್ಯಕರವಾದ
ಪಾನೀಯವಾಗಿದೆ.
ಶಂಕರಪಲಿ
ಇದನ್ನು ಮೈದಾ, ರವೆ ಸೇರಿಸಿ ಮಾಡಲಾಗುವುದು, ಈ ರೆಸಿಪಿ ದಕ್ಷಿಣ ಭಾರತದಲ್ಲಿ
ತುಂಬಾನೇ ಫೇಮಸ್, ಇದನ್ನು ಮಾಡಿಟ್ಟರೆ ಸ್ನ್ಯಾಕ್ಸ್ ರೀತಿ ಸವಿಯಬಹುದು.
ಚಮ್ಮಂದಿ ಪುಡಿ( ಚಟ್ನಿ ಪುಡಿ)
ಗೂಗಲ್‌ನಲ್ಲಿ ಚಮ್ಮಂದಿ ಪುಡಿ ಎಂಬ ಸರ್ಚ್ ಹೆಚ್ಚಾಗಿ ಬಂದಿದೆ, ಇದು ಮತ್ತೇನೂ ಅಲ್ಲ ಚಟ್ನಿ ಪುಡಿಯಾಗಿದೆ. ಕೇರಳಿಗರು ತೆಂಗಿನಕಾಯಿ ಹುರಿದು ಚಟ್ನಿ ಪುಡಿ ಮಾಡಿ ಇಡುತ್ತಾರೆ, ಇದನ್ನು ತಿಂಗಳುಗಟ್ಟಲೆ ಇಟ್ಟು ಬಳಸಬಹುದು, ನಮ್ಮ ಈ ಕಡೆ ಕಾಯಿ ಚಟ್ನಿ ಪುಡಿ ಬದಲಿಗೆ ನೆಲಗಡಲೆ, ಸೂರ್ಯಕಾಂತಿ ಬೀಜ ಇವುಗಳ ಚಟ್ನಿ ಪುಡಿ ಹೆಚ್ಚಾಗಿ ಮಾಡಲಾಗುವುದು.



Click it and Unblock the Notifications