Latest Updates
-
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ! -
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ!
ಈ ವರ್ಷ ಗೂಗಲ್‌ನಲ್ಲಿ ತುಂಬಾ ಸರ್ಚ್ ಆದ ಚಟ್ನಿ ಪುಡಿಯಿದು: ರೆಸಿಪಿ ಸುಲಭ, ರುಚಿ ಅದ್ಭುತ
2024ರಲ್ಲಿ ಗೂಗಲ್‌ನಲ್ಲಿ ಸರ್ಚ್ ಮಾಡಲಾಗಿರುವ ಟಾಪ್ 10 ರೆಸಿಪಿಗಳಲ್ಲಿ ಚಮ್ಮಂದಿ ಪೊಡಿ (ಚ್ಟನಿ ಪುಡಿ) ಕೂಡ ಹೌದು. ಚಮ್ಮಂದಿ ಎಂದರೆ ಮಲೆಯಾಳಂನಲ್ಲಿ ಚಟ್ನಿ ಎಂದರ್ಥ.
ನಮ್ಮ ಕರ್ನಾಟಕದಲ್ಲಿ ನಾವು ಹತ್ತಾರು ಬಗೆಯ ಚಟ್ನಿ ಪುಡಿ ಮಾಡುತ್ತೇವೆ, ನಾವು ತೆಂಗಿನಕಾಯಿ ಬಳಸಿ ಮಾಡುವ ಚಟ್ನಿ ಪುಡಿಗಿಂತ ಬೀಜಗಳನ್ನು, ಕಾಳುಗಳನ್ನು (ನೆಲಗಡಲೆ, ಸೂರ್ಯಕಾಂತಿ ಬೀಜ, ಹುರುಳಿಕಾಳು) ಮುಂತಾದ ಆಹಾರ ಸಾಮಗ್ರಿ ಬಳಸಿ ಮಾಡುತ್ತೇವೆ, ಆದರೆ ಈ ವರ್ಷ ಸಿಕ್ಕಾಪಟ್ಟೆ ಟ್ರೆಂಡ್ ಆಗಿರುವುದು ತೆಂಗಿನಕಾಯಿ ಬಳಸಿ ಮಾಡುವ ಚಟ್ನಿ ಪುಡಿ.
ಈ ಕಾಯಿ ಚಟ್ನಿ ಪುಡಿ ಮಾಡುವುದುತುಂಬಾ ಸುಲಭ, ಬನ್ನಿ ಕಾಯಿ ಚಟ್ನಿ ಪುಡಿ ಮಾಡುವುದು ಹೇಗೆ ಎಂದು ನೋಡೋಣ:
ಬೇಕಾಗುವ ಸಾಮಗ್ರಿ
2 ಕಪ್ ತೆಂಗಿನಕಾಯಿ ತುರಿ
1/ 4 ಕಪ್ ಉದ್ದಿನ ಬೇಳೆ
8-10 ಒಣ ಮೆಣಸು (ಖಾರ ಕಡಿಮೆ ತಿನ್ನುವವರು ಸ್ವಲ್ಪ ಕಡಿಮೆ ಮೆಣಸು ಹಾಕಿ)
ಒಂದು ಮುಷ್ಠಿಯಷ್ಟು ಕರಿಬೇವು
ಚಿಕ್ಕ ನಿಂಬೆಹಣ್ಣು ಗಾತ್ರದಷ್ಟು ಹುಣಸೆಹಣ್ಣು
ಚಿಟಿಕೆಯಷ್ಟು ಇಂಗು
ರುಚಿಗೆ ತಕ್ಕ ಉಪ್ಪು
ಮಾಡುವ ವಿಧಾನ
- ನೀವು ದಪ್ಪ ತಳವಿರುವ ಪಾತ್ರೆ ಬಿಸಿ ಮಾಡಿ ಅದರಲ್ಲಿ ತೆಂಗಿನ ತುರಿ ಹಾಕಿ ಕಡಿಮೆ ಉರಿಯಲ್ಲಿ ಹುರಿಯಿರಿ, ಕಾಯಿತುರಿ ರೋಸ್ಟ್ ಆಗಿ ಕೆಂಪು ಮಿಶ್ರಿತ ಕಂದು ಬಣ್ಣಕ್ಕೆ ತಿರುಗುವವರೆಗೆ ಫ್ರೈ ಮಾಡಿ
- (ಪಾತ್ರೆಯ ತಳ ದಪ್ಪವಿಲ್ಲದಿದ್ದರೆ ಹುರಿಯುವಾಗ ತಳ ಹಿಡಿಯುತ್ತೆ, ತೆಂಗಿನ ತುರಿ ಕಪ್ಪು ಬಣ್ಣಕ್ಕೆ ತಿರುಗುತ್ತದೆ, ಅದೇ ದಪ್ಪ ತಳವಿರುವ ಪಾತ್ರೆಯಾದರೆ ತೆಂಗಿನತುರಿ ಮೆಲ್ಲನೆ ಕೆಂಪು ಬಣ್ಣಕ್ಕೆ ತಿರುಗುತ್ತದೆ)
- ತೆಂಗಿನ ತುರಿ ಹುರಿಯುವಾಗ ಕರಿಬೇವು ಕೂಡ ಜೊತೆಗೆ ಹಾಕಿ ರೋಸ್ಟ್ ಮಾಡಿ.
- ರೋಸ್ಟ್ ಆದ ತೆಂಗಿನತುರಿಯನ್ನು ಸ್ವಲ್ಪ ತಣ್ಣಗಾಗಲು ಬೇರೆ ಪಾತ್ರೆಗೆ ಹಾಕಿಡಿ
- ಈಗ ರೋಸ್ಟ್ ಮಾಡಲು ಬಳಸಿದ ಪಾತ್ರೆಗೆ ಉದ್ದಿನ ಬೇಳೆ ಹಾಕಿ ರೋಸ್ಟ್ ಮಾಡಿ
- ನಂತರ ಒಣ ಮೆಣಸು ಹುಣಸೆ ಹಣ್ಣು ಹಾಕಿ ರೋಸ್ಟ್‌ಮಾಡಿ
- ಈಗ ಇವೆಲ್ಲಾ ಮಿಕ್ಸಿ ಜಾರ್‌ಗೆ ಹಾಕಿ ರುಚಿಗೆ ತಕ್ಕ ಉಪ್ಪು ಹಾಕಿ, ಸ್ವಲ್ಪ ಇಂಗು ಸೇರಿಸಿ ತರಿತರಿಯಾಗಿ ರುಬ್ಬಿ
- (ಉಪ್ಪು ಕಲ್ಲುಪ್ಪು ಬಳಸಿ)
ಈಗ ರೆಡಿಯಾದ ಚಟ್ನಿ ಪುಡಿಯನ್ನು ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟು ಬಳಸಬಹುದು, ಈ ಚಟ್ನಿ ಪುಡಿ 2-3 ತಿಂಗಳು ಇಟ್ಟರೂ ಹಾಳಾಗಲ್ಲ.
ಇತರ ಸಲಹೆ
ನವು ಕಾಯಿ ಚಟ್ನಿ ಪುಡಿ ಮಾಡುವ ಕಡ್ಲೆಬೇಳೆ ಅಥವಾ ನೆಲೆಗಡಲೆ ಇವುಗಳನ್ನು
ರೋಸ್ಟ್ ಮಾಡಿ ಸೇರಿಸಬಹುದು
ಕೆಲವರು ಈ ಚಟ್ನಿ ಪುಡಿ ಸಾಮಗ್ರಿ ಒಣ ಸೀಗಡಿ ಮೀನು ಫ್ರೈ ಮಾಡಿ ಇವುಗಳ ಜೊತೆ ಹಾಕಿ
ಚಟ್ನಿ ಪುಡಿ ಮಾಡುತ್ತಾರೆ. ಈ ಚಟ್ನಿ ಪುಡಿ ತುಂಬಾ ಚೆನ್ನಾಗಿರುತ್ತದೆ.
3-4 ಬೆಳ್ಳುಳ್ಳಿ ಎಸಳು ಕೂಡ ಸೇರಿಸಬಹುದು(ಚಟ್ನಿ ಪುಡಿ ತುಂಬಾ ಸಮಯ ಇಡುವುದಾದರೆ
ಬಳಸಬೇಡಿ)



Click it and Unblock the Notifications
