Latest Updates
-
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಯೋಗ ದಿನಾಚರಣೆ: ಮೈದಾನದಲ್ಲಿ ಯೋಗ ಮಾಡಲು ಸಿದ್ಧರಿದ್ದೀರಾ? ಇಲ್ಲಿದೆ ಅಗತ್ಯ ಮುನ್ನೆಚ್ಚರಿಕೆಗಳು!
ರೆಸಿಪಿ: ಮೊಟ್ಟೆ ಹಾಕದೆ ಮಾಡಬಹುದು ರುಚಿಯಾದ ಪ್ಲಮ್ ಕೇಕ್
ಕ್ರಿಸ್ಮಸ್ ಹಬ್ಬದಲ್ಲಿ ಕೇಕ್ಗಳದ್ದೇ ಕಾರುಬಾರು ಅಲ್ವಾ? ಇಲ್ಲಿ ಮೊಟ್ಟೆ ಸೇರಿಸದೆ ಮಾಡುವ ಪ್ಲಮ್ ಕೇಕ್ ಎಸಿಪಿ ನೀಡಿದ್ದೇವೆ, ಈ ಕೇಕ್ ಮಾಡಿ ವಾರದವರೆಗೆಇಟ್ಟು ಬಳಸಬಹುದು. ಈ ಪ್ಲಮ್ ಕೇಕ್ ಅನ್ನು ನೀವ ಮನೆಯಲ್ಲಿಯೇ ಮಾಡಬಹುದು. ಓವನ್ನಲ್ಲಿ ಮಾಡಬಹುದು, ಕುಕ್ಕರ್ನಲ್ಲಿಯೂ ಮಾಡಬಹುದು. ಕುಕ್ಕರ್ನಲ್ಲಿ ಮಾಡುವುದಾದರೆ ವಿಶಲ್ ತಗೆದು ಕುಕ್ಕರ್ನ ತಳದಲ್ಲಿ ಎಣ್ಣೆ ಸವರಿ, ಅದರ ಮೇಲೆ ಬಿಳಿ ಹಾಳೆ ಹರಡಿ ಅದರ ಮೇಲೆ ಕೂಡ ಎಣ್ಣೆ ಸವರಿ ಹಿಟ್ಟು ಹಾಕಿ ಕಡಿಮೆ ಉರಿಯಲ್ಲಿ 15 ನಿಮಿಷ ಬೇಯಿಸಿದರೆ ಸಾಕು.
ಬನ್ನಿ ಈ ಪ್ಲಮ್ ಕೇಕ್ ಮಾಡುವುದು ಹೇಗೆ ಎಂದು ನೋಡೋಣ:

ನೀವು ನಟ್ಸ್ ಹಾಗೂ ಡ್ರೈ ಫ್ರೂಟ್ಸ್ ಅನ್ನು ಆಪಲ್ ಜ್ಯೂಸ್ನಲ್ಲಿ ನೆನೆ ಹಾಕಿ
ಯಾವೆಲಕ್ಲಾ ಡ್ರೈ ಫ್ರೂಟ್ಸ್ ಬಳಸಬಹುದು
1/2 ಕಪ್ ಖರ್ಜೂರ
1/2 ಕಪ್ ಗೋಡಂಬಿ
2 ಚಮಚ ಬಾದಾಮಿ
ಸ್ವಲ್ಪ ವಾಲ್ನಟ್
ಸ್ವಲ್ಪ ಒಣ ದ್ರಾಕ್ಷಿ
2 ಚಮಚ ಬ್ಲ್ಯಾಕ್ಕರೆಂಟ್
ಸ್ವಲ್ಪ ಚೆರ್ರಿ
ನೀವು ಇದರ ಜೊತೆ ಇತರ ಡ್ರೈ ಫ್ರೂಟ್ಸ್ ಕೂಡ ಸೇರಿಸಬಹುದು
ನಂತರ ಈ ಡ್ರೈ ಫ್ರೂಟ್ಸ್ ಅನ್ನು ಚಿಕ್ಕದಾಗಿ ಕತ್ತರಿಸಿ ನಂತರ ಅವುಗಳನ್ನು ಆಪಲ್ ಜ್ಯೂಸ್ನಲ್ಲಿ ಹಾಕಿ ಫ್ರಿಡ್ಜ್ನಲ್ಲಿಡಿ, ನೀವು ಒಂದು ದಿನ ಫ್ರಿಡ್ಜ್ನಲ್ಲಿಡಬೇಕು
ನಂತರ ಪ್ಲಮ್ ಕೇಕ್ ಮಾಡುವ ಒಂದೆರಡು ಗಂಟೆ ಮೊದಲು ಫ್ರಿಡ್ಜ್ನಿಂದ ಹೊರತೆಗೆದು ಇಡಿ.
ಸ್ಟೆಪ್ 2
ಈಗ ಪ್ಯಾನ್ನಲ್ಲಿ 1/2 ಕಪ್ ಸಕ್ಕರೆ (100ಗ್ರಾಂ) 2 ಚಮಚ ನೀರು ಸೇರಿಸಿ
ಕಡಿಮೆ ಉಷ್ಣಾಂಶದಲ್ಲಿ ನೀವು ಮಿಶ್ರಣವನ್ನು ಕರಗಿಸಿ
ಸಕ್ಕರೆ ಪಾಕ ಕುದಿ ಬಂದು ಅದರ ಮೇಲೆ ಗುಳ್ಳೆ-ಗುಳ್ಳೆ ಬರುತ್ತದೆ
ನಂತರ ಸಕ್ಕರೆ ಗಟ್ಟಿಯಾಗಿರಲಾರಂಭಿಸುತ್ತದೆ
ಸಕಕ್ರೆಯ ಬಣ್ಣ ಕೂಡ ಬದಲಾಗುವುದು
ಸಕಕ್ರೆಯ ಬಣ್ಣ ಡಾರ್ಕ್ ಬ್ರೌನ್ ಆಗುವವರೆಗೆ ಕಾಯಿಸಿ
ಸಕ್ಕರೆಯ ಬಣ್ಣ ಡಾರ್ಕ್ ಬ್ರೌನ್ ಆಗುವುದು ಅಲ್ಲದೆ ಸಕ್ಕರೆಯ ಸುವಾಸನೆ
ಬರಲಾರಂಭಿಸಿದಾಗ ಸ್ಟೌವ್ ಆಫ್ ಮಾಡಿ.
ನಂತರ ತಣ್ಣವೇ ಒಂದು ಕಪ್ ನೀರು ಸೇರಿಸಿ
ನಂತರ ಆ ಪ್ಯಾನ್ ಮತ್ತೆ ಸ್ಟೌವ್ ಮೇಲಿಟ್ಟು ಕಡಿಮೆ ಉರಿಯಲ್ಲಿ ಕಾಯಿಸಿ
ನಂತರ ಉರಿಯಿಂದ ಇಳಿಸಿ ಸ್ವಲ್ಪ ಹೊತ್ತು ಬಿಡಿ
ಸಕ್ಕರೆ ಪಾಕ ಸಂಪೂರ್ಣ ತಣ್ಣಗಾದ ಮೇಲೆ 1/3 ಕಪ್ ಎಣ್ಣೆ ಸೇರಿಸಿ, ಸೂರ್ಯಕಾಂತಿ
ಎಣ್ಣೆ ಅಥವಾ ಕರಗಿಸಿದ ಬೆಣ್ಣೆ ಸೇರಿಸಿ
ಸಕ್ಕರೆಪಾಕದ ಜೊತೆ ಎಣ್ಣೆ ಚೆನ್ನಾಗಿ ಮಿಕ್ಸ್ ಮಾಡಬೇಕು
ಸ್ಟೆಪ್ 3
ಸಕ್ಕರೆಪಾಕ, ಎಣ್ಣೆ ಮಿಕ್ಸ್ ಮಾಡಿರುವ ಮಿಶ್ರಣಕ್ಕೆ ಒಂದೂವರೆ ಚಮಚ ನಿಂಬೆರಸ, ಆಪಲ್ ಸಿಡರ್ ವಿನೆಗರ್ ಸೇರಿಸಿ ಮಿಕ್ಸ್ ಮಾಡಿ
ಸ್ಟೆಪ್ 4 ಒಂದು ಕಪ್ ಮೈದಾ
1 ಚಮಚ ಬೇಕಿಂಗ್ ಸೋಡಾ
ಅರ್ಧ ಚಮಚ ಬೇಕಿಂಗ್ ಪೌಡರ್
1/4 ಚಮಚ ಚಕ್ಕೆ ಪುಡಿ
1/4 ಚಮಚ ನಟ್ಮಗ್ಪುಡಿ
1 ಲವಂಗ ಪುಡಿ ಮಾಡಿದ್ದು
1/2 ಚಮಚ ಚಕ್ಕೆ ಪುಡಿ
ಈ ಎಲ್ಲಾ ಮಿಶ್ರಣ ಒಂದು ಬೌಲ್ನಲ್ಲಿ ಹಾಕಿ ಮಿಕ್ಸ್ ಮಾಡಿಡಿ
ಈಗ ಈ ಮಿಶ್ರಣಕ್ಕೆ ನೆನೆ ಹಾಕಿಟ್ಟ ಡ್ರೈ ಫ್ರೂಟ್ಸ್ ಸೇರಿಸಿ
ನಂತರ ಈ ಎಲ್ಲಾ ಸಾಮಗ್ರಿ ಹಾಕಿ ಮಿಕ್ಸ್ ಮಾಡಿ
ಈಗ ರೆಡಿ ಮಾಡಿಟ್ಟ ಸಕ್ಕರೆ ಹಾಕಿ ಮಿಕ್ಸ್ ಮಾಡಿ
ನಂತರ ಈ ಎಲ್ಲಾ ಮಿಶ್ರಣ ಮಿಕ್ಸ್ ಮಾಡಿ
ಈ ಎಲ್ಲಾ ಮಿಶ್ರಣ ಚೆನ್ನಾಗಿ ಮಿಕ್ಸ್ ಆದ ಬೆಣ್ಣೆ ಸವರಿ ಇಟ್ಟ ಬೇಕಿಂಗ್
ಪ್ಯಾನ್ಗೆ ಈ ಮಿಶ್ರಣ ಸುರಿದು, ಓವನ್ನಲ್ಲಿ ಬೇಯಿಸಿದರೆ ರುಚಿಯಾದ ಪ್ಲಮ್ ಕೇಕ್
ರೆಡಿ.



Click it and Unblock the Notifications