Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
Year Ender 2023: ಉಪ್ಪಿನಕಾಯಿ, ಸೆಕ್ಸ್ ಆನ್ ದಿ ಬೀಚ್ ಹೀಗೆ ಗೂಗಲ್ನಲ್ಲಿ ಅತೀ ಹೆಚ್ಚು ಸರ್ಚ್ ಮಾಡಲಾಗಿರುವ 10 ರೆಸಿಪಿಗಳಿವು
ಈಗ ಆಸಕ್ತಿಯಿದ್ದರೆ ಯಾರು ಬೇಕಾದರೂ ಸೂಪರ್ ಶೆಫ್ ಆಗಬಹುದು, ಅಷ್ಟೊಂದು ಒಳ್ಳೆಯ ರೆಸಿಪಿಗಳು ಯೂಟ್ಯೂಬ್ನಲ್ಲಿ, ಗೂಗಲ್ನಲ್ಲಿ ಸಿಗುತ್ತವೆ. ಎಷ್ಟೋ ಜನರು ರೆಸಿಪಿ ನೋಡಿ ಸ್ಪೆಷಲ್ ರೆಸಿಪಿ ಟ್ರೈ ಮಾಡುತ್ತಾರೆ. 2023ರಲ್ಲಿ ಜನರು ಯಾವ ರೆಸಿಪಿ ಬಗ್ಗೆ ತಿಳಿಯಲು ಹೆಚ್ಚು ಸರ್ಚ್ ಮಾಡಿದ್ದಾರೆ ಎಂಬುವುದನ್ನು ಗೂಗಲ್ ರಿವೀಲ್ ಮಾಡಿದೆ, ಆ ರೆಸಿಪಿಗಳಾವುವು ಎಂದು ನೋಡೋಣ ಬನ್ನಿ:
1. ಮಾವಿನಕಾಯಿ ಉಪ್ಪಿನಕಾಯಿ
ಮಾವಿನಕಾಯಿ ಉಪ್ಪಿನಕಾಯಿ ಯಾರಿಗೆ ತಾನೆ ಇಷ್ಟವಾಗಲ್ಲ, ಅದರಲ್ಲೂ ಮಿಡಿ
ಉಪ್ಪಿನಕಾಯಿ ಎಂದರೆ ಮುಗೀತು, ಮಾವಿನಕಾಯಿ ಸೀಸನ್ನಲ್ಲಿ ಜನರು ಹೆಚ್ಚಾಗಿ
ಮಾವಿನಕಾಯಿ ಉಪ್ಪಿನಕಾಯಿ ರೆಸಿಪಿ ಮಾಡುವುದು ಹೇಗೆ ಸರ್ಚ್ ಮಾಡಿದ್ದಾರೆ.
ಉಪ್ಪಿನಕಾಯಿ ಒಂದಿದ್ದರೆ ಸಾಕು, ಚಪಾತಿ, ಮೊಸರನ್ನ, ಅನ್ನ ಇವುಗಳ ರುಚಿ
ಹೆಚ್ಚಾಗುವುದು. 2023ರಲ್ಲಿ ಜನರು ಅತೀ ಹೆಚ್ಚು ಹುಡುಕಿದ ರೆಸಿಪಿಯೆಂದರೆ ಅದು
ಮಾವಿನಕಾಯಿ ಉಪ್ಪಿನಕಾಯಿ ಆಗಿದೆ.

2. ಸೆಕ್ಸ್ ಆನ್ ದಿ ಬೀಚ್ ರೆಸಿಪಿ
ಇದನ್ನು ನೀವಂತೂ ಖಂಡಿತ ಹುಡುಕಿರಲ್ಲ, ಏಕೆಂದರೆ ನಮ್ಮ ಕರ್ನಾಟಕದಲ್ಲಿ ಈ ರೆಸಿಪಿ
ಪರಿಚಯ ಹೆಚ್ಚಿನವರಿಗೆ ಇರಲ್ಲ, ಆದರೆ ಈ ಹೆಸರು ಕೇಳಿ ಖಂಡಿತ ಇದರ ಬಗ್ಗೆ ಸರ್ಚ್
ಮಾಡುತ್ತೀರ. ಇದೊಂದು ಕಾಕ್ಟೇಲ್ ಡ್ರಿಂಕ್, ಇದು ಸಿಹಿ ಹಾಗೂ ಹುಳಿ ಮಿಶ್ರಿತ
ಕಾಕ್ಟೇಲ್ ಜ್ಯೂಸ್, ಇದನ್ನು ಮೊದಲಿಗೆ 1987 ರಲ್ಲಿ ಕಂಡು ಹಿಡಿಯಲಾಯಿತು.
2023ರಲ್ಲಿ ಸೆಕ್ಸ್ ಆನ್ ದಿ ಬೀಚ್ ರೆಸಿಪಿಯನ್ನು ಅತೀ ಹೆಚ್ಚಿನ ಜನರು ಸರ್ಚ್
ಮಾಡಿರುವುದರಿಂದ ಗೂಗಲ್ನ ಟಾಪ್ ರೆಸಿಪಿಯಲ್ಲಿ2ನೇ ಸ್ಥಾನದಲ್ಲಿದೆ.
3. ಪಂಚಾಮೃತ ರೆಸಿಪಿ
ಇದು ಸ್ವಲ್ಪ ಅಚ್ಚರಿಯೇ ಸರಿ, ಪಂಚಾಮೃತ ಮಾಡಲು ಬಹುತೇಕ ಜನರಿಗೆ ಗೊತ್ತಿರುತ್ತದೆ,
ಏಕೆಂದರೆ ಮನೆಯಲ್ಲಿ ಯಾವುದೇ ಪೂಜೆ ಮಾಡುವಾಗ ಪಂಚಾಮೃತ ಮಾಡುವುದು ಸಹಜ. ಆದರೆ
ಇದನ್ನು ಕೂಡ ಜನ ಹುಡುಕಿದ್ದಾರೆ, ಬಹುಶಃ ಇತ್ತೀಚಿನ ವರ್ಷಗಳಲ್ಲಿ ಮದುವೆಯಾಗಿ
ಗಂಡ-ಹೆಂಡತಿ ಇಬ್ಬರೇ ಪ್ರತ್ಯೇಕ ಜೀವನ ನಡೆಸುತ್ತಿರುತ್ತಾರೆ, ಕೆಲಸದ ಕಾರಣದಿಂದಲೂ
ಅಥವಾ ನಾವು ಪ್ರತ್ಯೇಕ ಬಾಳಬೇಕೆಂಬ ಇಚ್ಛೆಯಿಂದಲೂ ಇಬ್ಬರೇ ಜೀವನ ನಡೆಸಲು
ಇಷ್ಟಪಡುತ್ತಾರೆ, ಆವಾಗ ಪೂಜೆ ಸಂದರ್ಭಗಳಲ್ಲಿ ಪಂಚಾಮೃತ ಮಾಡುವುದು ಹೇಗೆ ಎಂದು
ಹುಡುಕಿರಬಹುದು, ಒಟ್ಟಿನಲ್ಲಿ ಪಂಚಾಮೃತ ರೆಸಿಪಿಯನ್ನು ಜನರು ಅತೀ ಹೆಚ್ಚು
ಹುಡುಕಿದ ರೆಸಿಪಿಗಳಲ್ಲಿ 3ನೇ ಸ್ಥಾನದಲ್ಲಿದೆ.
4. ಹಾಕುಸೈ ರೆಸಿಪಿ
ಇದು ಎಲೆಕೋಸಿನ ಉಪ್ಪಿನಕಾಯಿ ಆಗಿದೆ. ನಫ ಕ್ಯಾಬೇಜ್ ಬಳಸಿ ತಯಾರಿಸುವ ಉಪ್ಪಿನಕಾಯಿ
ಇದಾಗಿದ್ದು ಈ ಉಪ್ಪಿನಕಾಯಿ ರೆಸಿಪಿ ಬಗ್ಗೆ ಜನ ಹುಡುಕಾಡಿದ್ದಾರೆ, ನೀವೇನಾದರೂ ಈ
ಉಪ್ಪಿನಕಾಯಿ ಟೇಸ್ಟ್ ಮಾಡಿದ್ದೀರಾ?
5. ಧನಿಯಾ ಪಂಜಿರಿ ರೆಸಿಪಿ
ಇದೊಂದು ಪ್ರಸಿದ್ಧ ಭೋಗ್ ರೆಸಿಪಿ ಆಗಿದ್ದು ಇದರಲ್ಲಿ ಪೋಷಕಾಂಶಗಳು ಅಧಿಕವಿರಲಿದೆ.
ಇದರಲ್ಲಿ ನಾರಿನಂಶ, antioxidants ಅಧಿಕವಿದ್ದು ಉಪವಾಸವಿದ್ದಾಗ ಈ ಪಾನೀಯ ಮಾಡಿ
ಕುಡಿಯಲಾಗುವುದು. ಹುರಿದ ಕೊತ್ತಂಬರಿ ಪುಡಿ, ತೆಂಗಿನತುರಿ , ಸಕ್ಕರೆ, ಬೆಲ್ಲ,
ಡ್ರೈಫ್ರೂಟ್ಸ್, ಮಖನಾ ಜೊತೆ ಮಿಕ್ಸ್ ಮಾಡಿ ಮಾಡಲಾಗುವುದು.
6. ಕರಂಜಿ ರೆಸಿಪಿ
ಇದು ಸಿಹಿ ತಿಂಡಿಯಾಗಿದ್ದು ನಮ್ಮಲ್ಲಿ ಕಜ್ಜಾಯ ಮಾಡ್ತೀವಿ ನೋಡಿ, ಆ ಬಗೆಯ
ರೆಸಿಪಿಯಾಗಿದೆ. ಇದು ಎಣ್ಣೆಯಲ್ಲಿ ಕರಿದ ಸಿಹಿತಿಂಡಿಯಾಗಿದೆ.
7. ತಿರುವಾದರೈ ಕಳಿ ರೆಸಿಪಿ
ಇದು ಕೂಡ ಕೇರಳದಲ್ಲಿ ಪ್ರಸಿದ್ಧ ಆಗಿರುವ ಭೋಗ್ ರೆಸಿಪಿಯಾಗಿದೆ. ಅಕ್ಕಿ, ಬೇಳೆ,
ಏಲಕ್ಕೆ, ಬೆಲ್ಲ, ನಟ್ಸ್, ತೆಂಗಿನಕಾಯಿ ತುರಿ ಇವುಗಳ್ನೆಲ್ಲಾ ಬಳಸಿ ಮಾಡುವ
ಪಾನೀಯವಾಗಿದೆ.
8. ಯುಗಾದಿ ಪಚಡಿ
2023ರಲ್ಲಿ ಜನರು ಅತೀ ಹೆಚ್ಚಾಗಿ ಯುಗಾದಿ ಪಚಡಿ ಮಾಡುವುದು ಹೇಗೆ ಎಂದು
ಹುಡುಕುತ್ತಿದ್ದಾರೆ. ಯುಗಾದಿ ಪಚಡಿಯನ್ನು ವರ್ಷಕ್ಕೊಮ್ಮೆ ಸವಿಯುತ್ತೇವೆ, ನಮ್ಮ
ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
9. ಕೋಲುಕಟೈ ರೆಸಿಪಿ
ಕೊಯಕಟ್ಟ ಅಥವಾ ಕೋಲುಕಟ್ಟೆ ವಿನಾಯ ಚತುರ್ಥಿ ಸಮಯದಲ್ಲಿ ತಯಾರಿಸಲಾಗುವುದು. ಇದು
ಕೇರಳ ಶೈಲಿಯ ರೆಸಿಪಿಯಾಗಿದ್ದು ನಮ್ಮಲ್ಲಿನ ಮೋದಕಕ್ಕೆ ಹೋಲಿಸಬಹುದು ನೋಡಿ.
10. ರವೆಲಡ್ಡು ರಸಿಪಿ
ನಮ್ಮಲ್ಲಿ ಯಾವುದೇ ವಿಶೇಷ ಹಬ್ಬಗಳಲ್ಲಿ ರವೆ ಲಡ್ಡು ತಯಾರಿಸಲಾಗುವುದು ಅಲ್ವಾ?
ಇದನ್ನು ಮಾಡುವುದು ಹೇಗೆ ಎಂದು ಕೂಡ ಜನ ಹುಡುಕಿದ್ದಾರೆ.
ಇವುಗಳಲ್ಲಿ ನೀವು ಯಾವುದಾದರೂ ರೆಸಿಪಿ ಹುಡುಕಿದ್ದೀರಾ?



Click it and Unblock the Notifications