Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
Year Ender 2022: ಈ ಭಾರತೀಯ ಆಹಾರಗಳ ಮೇಲೆ ಮಾಡಿದ ವಿಚಿತ್ರ ಪ್ರಯೋಗ ತುಂಬಾನೇ ವೈರಲ್ ಆಗಿತ್ತು
2022 ವರ್ಷ ಇನ್ನೇನು ಕೆಲವೇ ದಿನಗಳಲ್ಲಿ ಇತಿಹಾಸದ ಪುಟ ಸೇರಲಿದೆ. ಈ ವರ್ಷ ವೈರಲ್ ಆಗಿರುವ ಆಹಾರಗಳ ಬಗ್ಗೆ ನೋಡುವುದಾದರೆ ಕೆಲವೊಂದು ವಿಚಿತ್ರ ಕಾಂಬಿನೇಷನ್ ಫುಡ್ಸ್ ತುಂಬಾನೇ ವೈರಲ್ ಆಗಿತ್ತು.ಅಂಥ ವೈರಲ್ ಫುಡ್ ಕಾಂಬಿನೇಷನ್ಗಳಲ್ಲಿ ಕೆಲವೊಂದು ನೀವು ಟೇಸ್ಟ್ ಮಾಡಿರಲೂಬಹುದು.
ಕೆಲವೊಂದು ಫುಡ್ ಕಾಂಬಿನೇಷನ್ ನೋಡಿದರೆ ಹೀಗೂ ತಿನ್ನಬಹುದೇ ಎಂದು ಮುಖ ಕಿವುಚಿಕೊಳ್ಳಬಹುದು, ಬನ್ನಿ ಈ ವರ್ಷ ಅಂತ ವಿಚಿತ್ರ ಕಾಂಬಿನೇಷನ್ನ ಯಾವೆಲ್ಲಾ ಆಹಾರಗಳು ವೈರಲ್ ಆಗಿವೆ ಎಂದು ನೋಡೋಣ:

ಫ್ರೂಟ್ ಟೀ
ಜಿಂಜರ್ ಟೀ, ಮಸಾಲೆ ಟೀ ಎಲ್ಲಾ ಒಕೆ ಆದರೆ ಫ್ರೂಟ್ ಟೀ? ಎಂದಾದರೂ ಟ್ರೈ ಮಾಡಿದ್ದೀರಾ? ಸೂರತ್ನ ಟೀ ಸ್ಟಾಲ್ವೊಂದು ಇಂಥ ವಿಚಿತ್ರ ಟೀ ಟ್ರೈ ಮಾಡುವ ಮೂಲಕ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ಗುಲಾವ್ ಜಾಮೂನು ಪರೋಟಾ
ಆಲೂ ಪರೋಟಾ, ಗೋಬಿ ಹೀಗೆ ಅನೇಕ ವೆರೈಟಿ ಪರೋಟಾ ಬಗ್ಗೆ ಕೇಳಿರುತ್ತೀರಿ, ಆದರೆ ಜಾಮೂನು ಪರೋಟಾ ಬಗ್ಗೆಕೇಳಿದ್ದೀರಾ? ಅಂಥದ್ದೊಂದು ಪ್ರಯತ್ನ ಈ ವರ್ಷ ನಡೆದಿತ್ತು. ಪರೋಟಾಕ್ಕೆ ಗುಲಾಬ್ ಜಾಮೂನು ಹಾಕಿ ಅದನ್ನು ಶುಗರ್ ಸಿರಪ್ನಲ್ಲಿ ಟಿಪ್ ಮಾಡಿ ಸರ್ವ್ ಮಾಡಲಾಗುವುದು.

ಸ್ಟ್ರಾಬೆರ್ರಿ ಸಮೋಸಾ
ದೆಹಲಿಯಲ್ಲಿ ಸ್ಟ್ರಾಬೆರ್ರಿ ಹಾಗೂ ಬ್ಲೂಬೆರ್ರಿ ಸಮೋಸಾ ಟ್ರೈ ಮಾಡಲಾಗಿತ್ತು, ಈ ಬಗೆಯ ಸಮೋಸಾ ತುಂಬಾನೇ ಜನಪ್ರಿಯತೆ ಕೂಡ ಗಳಸಿದೆ.

ಮೋಮೋಸ್ ಐಸ್ ಕ್ರೀಮ್ ರೋಲ್
ವೆಜ್ ಮೋಮೋಸ್, ನಾನ್ ವೆಜ್ ಮೋಮೋಸ್ ಟೇಸ್ಟ್ ಮಾಡಿರುತ್ತೀರಾ, ಆದರೆ ಐಸ್ಕ್ರೀಮ್ ತುಂಬಿರುವ ಮೋಮೋಸ್ ಬಗ್ಗೆ ಕೇಳಿದ್ದೀರಾ, ಈ ಮೋಮೋಸ್ ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ಟ್ರೋಲ್ ಆಗಿತ್ತು.

ಮಸಾಲೆ ದೋಸೆ ಐಸ್ ಕ್ರೀಮ್ ರೋಲ್
ಮಸಾಲೆ ದೋಸೆಯ ಕಾಂಬಿನೇಷನ್ ಅಂದ್ರೆ ಚಟ್ನಿ, ಆಲೂ ಸಬ್ಜಿ... ಆ ಕಾಂಬಿನೇಷನ್ ರುಚಿನೇ ಚೆಂದ... ಆದರೆ ಮಸಾಲೆ ದೋಸೆಗೆ ಐಸ್ಕ್ರೀಮ್ ಕೊಟ್ಟರೆ.... ಐಸ್ಕ್ರೀಮ್ಗೆ ಮಸಾಲೆದೋಸೆ ಅದ್ದಿ ತಿನ್ನುವುದನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ ಅಲ್ವಾ? ಆದರೆ ಇಂಥದ್ದೊಂದು ಪ್ರಯತ್ನ ಈ ವರ್ಷ ನಡೆದಿತ್ತು.
ಪುಣ್ಯಕ್ಕೆ ಇಂಥ ವಿಚಿತ್ರ ಫುಡ್ ಕಾಂಬಿನೇಷನ್ ನಾನಂತೂ ಟ್ರೈ ಮಾಡಿಲ್ಲ, ನೀವು ಟೇಸ್ಟ್ ಮಾಡಿದ್ದರೆ ಹೇಗಿತ್ತು ಎಂಬುವುದನ್ನು ಕಮೆಂಟ್ ಮಾಡಿ...



Click it and Unblock the Notifications
