Latest Updates
-
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ -
ಕೋಲ್ಕತ್ತಾ ದುರ್ಗಾ ಪೂಜೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಿ, ಪಂಡಾಲ್ ಹಾಪಿಂಗ್ಗೆ ಇಲ್ಲಿದೆ ಸ್ಮಾರ್ಟ್ ಪ್ಲಾನ್! -
ದೆಹಲಿಯಲ್ಲಿ ಡೆಂಗ್ಯೂ ಭೀತಿ: ನಿಮ್ಮ ಮನೆಯನ್ನು ಸೊಳ್ಳೆ ಮುಕ್ತವಾಗಿಸಲು 20 ನಿಮಿಷಗಳ ಈ ಚೆಕ್ಲಿಸ್ಟ್ ಬಳಸಿ -
ಹಬ್ಬದ ಸೀಸನ್ನಲ್ಲಿ ಎಚ್ಚರ! ಕಲಬೆರಕೆ ಸಿಹಿತಿಂಡಿ ಪತ್ತೆ ಹಚ್ಚುವುದು ಹೇಗೆ? ಆರೋಗ್ಯಕರ ಟಿಪ್ಸ್ ಇಲ್ಲಿದೆ -
ನವರಾತ್ರಿ 4ನೇ ದಿನ: ರಾಯಲ್ ಬ್ಲೂ ಡ್ರೆಸ್ ಕೋಡ್ನಲ್ಲಿ ಮಿಂಚಲು ಇಲ್ಲಿದೆ ಸಿಂಪಲ್ ಸ್ಟೈಲಿಂಗ್ ಟಿಪ್ಸ್! -
ನವರಾತ್ರಿ 4ನೇ ದಿನ: ಉಪವಾಸದ ನಡುವೆಯೂ ಗರ್ಬಾ ಆಡಲು ಬೇಕಾದ ಶಕ್ತಿ ಮತ್ತು ಆರೋಗ್ಯದ ರಹಸ್ಯ ಇಲ್ಲಿದೆ! -
ನವರಾತ್ರಿ ಗರ್ಬಾ ಸಂಭ್ರಮ: ಬೆಂಗಳೂರಿನ ಕಪಲ್ಸ್ ಎಂಜಾಯ್ ಮಾಡಲು ಇಲ್ಲಿದೆ ಬೆಸ್ಟ್ ಸೇಫ್ಟಿ ಟಿಪ್ಸ್ -
ದೆಹಲಿ ವಾಯು ಮಾಲಿನ್ಯ: ಮನೆಯೊಳಗೆ ಶುದ್ಧ ಗಾಳಿ ಪಡೆಯಲು 20 ನಿಮಿಷದ ಈ ಸರಳ ಟ್ರಿಕ್ಸ್ ಫಾಲೋ ಮಾಡಿ
ಭಾರತದ ಅತ್ಯಂತ ಕೆಟ್ಟ ಸ್ಟ್ರೀಟ್ ಫುಡ್ಗಳಲ್ಲಿ ದಹಿಪುರಿಗೆ ನಂ.1 ಪಟ್ಟ!
ನಮ್ಮ ದೇಶದ ಬೀದಿ ಬದಿಯ ಆಹಾರಗಳೆಂದರೆ ಪಾನಿಪುರಿ, ಮಸಾಲೆ ಪುರಿ, ದಹಿ ಪುರಿ, ಪಕೋಡಾ ಹೀಗೆ ಕೆಲವೊಂದು ಆಹಾರಗಳನ್ನು ಪಟ್ಟಿ ನೀಡುತ್ತಾ ಹೋಗಬಹುದು. ಬೀದಿ ಬದಿಯ ಆಹಾರಗಳು ಅತೀ ಹೆಚ್ಚು ಗ್ರಾಹಕರನ್ನು ತನ್ನತ್ತ ಸೆಳೆಯಲು ಕಾರಣ ಅದರಲ್ಲಿರುವ ಸ್ಪೆಷಲ್ ಟೇಸ್ಟ್. ಈ ಟೇಸ್ಟ್ ನಿಮಗೆ ಫೈ ಸ್ಟಾರ್ ಹೋಟೆಲ್ನಲ್ಲಿ ಸವಿದರೆ ಸಿಗಲ್ಲ, ಈ ಕಾರಣಕ್ಕೆ ಜನರು ಪಾನಿಪುರಿ, ಮಸಾಲೆಪುರಿ ಈ ಬಗೆಯ ಆಹಾರಗಳನ್ನು ಸ್ಟ್ರೀಟ್ ಫುಡ್ ಸೆಂಟರ್ಗಳಲ್ಲಿ ಸವಿಯಲು ಇಷ್ಟಪಡುವುದು.

ಆದರೆ ಸ್ಟ್ರೀಟ್ಫುಡ್ ಪ್ರಿಯರಿಗೆ ಶಾಕ್ ನೀಡಿದೆ ಟೇಸ್ಟ್ಅಟ್ಲಾಸ್(TasteAtlas).ನೀವು ತುಂಬಾ ಇಷ್ಟಪಟ್ಟು ಸವಿಯುವ ಬಹುತೇಕ ಸ್ಟ್ರೀಟ್ ಫುಡ್ಗಳನ್ನು ಇದು ಟಾಪ್ 10 ಅತ್ಯಂತ ಕೆಟ್ಟ ಆಹಾರದ ಲಿಸ್ಟ್ಗೆ ಸೇರಿಸಿದೆ! ಟೇಸ್ಟ್ಅಟ್ಲಾಸ್ ಎಂಬುವುದು ಒಂದು ಟ್ರಾವೆಲ್ ಗೈಡ್ ಆಗಿದ್ದು ರೆಸಿಪಿಗಳು, ಫುಡ್ ರಿವ್ಯೂವ್ ಹೀಗೆ ಆಹಾರಕ್ಕೆ ಸಂಬಂಧಿಸಿದಂತೆ ಹಲವು ಮಾಹಿತಿಯನ್ನು ನೀಡುತ್ತದೆ. ಈ ಟ್ರಾವೆಲ್ ಗೈಡ್ ಭಾರತದ ಅತ್ಯಂತ ಕೆಟ್ಟ ಸ್ಟ್ರೀಟ್ ಫುಡ್ಗಳ ಪಟ್ಟಿ ನೀಡಿದೆ...ಆ ಪಟ್ಟಿಯನ್ನು ನೋಡಿದರೆ ನೀವು ಸ್ಟ್ರೀಟ್ ಫುಡ್ಪ್ರಿಯರಾಗಿದ್ದಾರೆ ಖಂಡಿತ ವಿರೋಧಿಸುತ್ತೀರಿ ಹಾಗಿದೆ ಲಿಸ್ಟ್ ನೋಡಿ...
ಅತ್ಯಂತ ಕೆಟ್ಟ ಸ್ಟ್ರೀಟ್ ಫುಡ್ಗಳ ಪಟ್ಟಿ
ಟಾಪ್ 1: ದಹಿಪುರಿ
ಪುರಿಗೆ ಸ್ವಲ್ಪ ಗಟ್ಟಿ ಮೊಸರು, ಸ್ವೀಟ್, ಸ್ಪೈಸ್ ಎಲ್ಲಾ ಹಾಕಿ ನೀಡುವ
ದಹಿಪುರಿಯನ್ನು ಬಾಯಿಗೆ ಇಟ್ಟರೆ ಹಾಗೇ ಕಳೆದು ಹೋಗುತ್ತೇವೆ. ಆದರೆ ಇದೇ ದಹಿ ಪುರಿ
ಅತ್ಯಂತ ಕೆಟ್ಟ ಸ್ಟ್ರೀಟ್ಫುಡ್ನ ಲಿಸ್ಟ್ನಲ್ಲಿ ಟಾಪ್ 1ರಲ್ಲಿದೆ ಎಂದರೆ ಶಾಕ್
ಆಗದೆ ಇರುತ್ತಾ ಅಲ್ವಾ?
ಟಾಪ್ 2: ಸೇವ್
ಸೇವ್ಪುರಿ ಎಂದು ಚಪ್ಪರಿಸಿಕೊಂಡು ತಿನ್ನುತ್ತೇವೆ, ಆದರೆ ಇದು 2ನೇ
ಲಿಸ್ಟ್ನಲ್ಲಿದೆ.
ಟಾಪ್ 3: ಗುಜರಾತ್ನ ದಾಬೆಲಿ
ಇದುಕೂಡ ರುಚಿಕರವಾದ ತಿನಿಸಾಗಿದೆ, ಉತ್ತರ ಭಾರತದ ಕಡೆ ಪೇಮಸ್, ಅದು ಕೂಡ ಅತ್ಯಂತ
ಕೆಟ್ಟ ಆಹಾರದ ಪಟ್ಟಿಗೆ ಸೇರಿದೆ.
ಟಾಪ್ 4: ಬಾಂಬೆಸ್ಯಾಂಡ್ವಿಚ್
ಮಹಾರಾಷ್ಟ್ರದವರಿಗೆ ಬಾಂಬೆಸ್ಯಾಂಡ್ವಿಚ್ ಎಂದರೆ ತುಂಬಾನೇ ಪ್ರಿಯ, ರುಚಿಯಲ್ಲೂ
ಸೂಪರ್ ಅದು ಕೂಡ ಕೆಟ್ಟ ಆಹಾರದ ಪಟ್ಟಿಗೆ ಸೇರಿದೆ.
ಟಾಪ್ 5: ಎಗ್ ಬುರ್ಜಿ
ನಾರ್ತ್ನಿಂದ ಸೌಥ್ವರೆಗೆ ಎಗ್ ಬುರ್ಜಿ ಫೇಮಸ್, ಎಗ್ಬುರ್ಜಿ ಕೂಡ ವರ್ಸ್ಟ್
ಫುಡ್ ಲಿಸ್ಟ್ನಲ್ಲಿದೆ.
ಟಾಪ್ 6: ದಹಿ ವಡೆ
ನಮ್ಮ ದಕ್ಷಿಣ ಭಾರತದ ಕಡೆ ದಹಿ ವಡೆ ಪ್ರಸಿದ್ಧ, ಈ ದಹಿ ವಡೆ
ಬಾಯಲ್ಲಿಟ್ಟರೆ ಸಾಕು ಹಾಗೇ ಕರಗುವುದು, ಎಲ್ಲರು ಇಷ್ಟಪಟ್ಟು ತಿನ್ನುವ ಈ ದಹಿವಡೆ
ಕೂಡ ಕೆಟ್ಟ ಫುಡ್ ಲಿಸ್ಟ್ನಲ್ಲಿದೆ.
ಟಾಪ್ 7: ಸಾಬುದಾನ ವಡೆ
ಟಾಪ್ 8: ಪಾಪ್ರಿ ಚಾಟ್
ಟಾಪ್ :ಗೋಬಿ ಪರೋಟಾ
ಟಾಪ್ 10: ಪಕೋಡಾ
ಇವೆಷ್ಟೂ ಅತ್ಯಂತ ಕೆಟ್ಟ ಸ್ಟ್ರೀಟ್ ಫುಡ್ ಲಿಸ್ಟ್ಗೆ ಸೇರಿದೆ.
ಇವುಗಳಲ್ಲಿ ಬಹುತೇಕ ಫುಡ್ಸ್ ಟೇಸ್ಟ್ ಮಾಡಿರುತ್ತೀರಿ ಅವುಗಳ ಟೇಸ್ಟ್ ಕುರಿತು
ನಿಮ್ಮ ಅಭಿಪ್ರಾಯವೇನು?



Click it and Unblock the Notifications
