Latest Updates
-
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI!
ಚಪಾತಿ ಹಿಟ್ಟು ಕಲೆಸಿ ಫ್ರಿಡ್ಜ್ನಲ್ಲಿ ಇಡಲೇಬಾರದು, ಹಿಟ್ಟು ಹಾಳಾಗದಂತೆ ಇಡುವುದು ಹೇಗೆ?
ಬೆಳಗ್ಗೆ ಚಪಾತಿ ಹಿಟ್ಟು ಕಲೆಸಿ ಚಪಾತಿ ಮಾಡುವಷ್ಟು ಸಮಯವಿಲ್ಲ, ಪಟ್ ಪಟ್ ಅಂತ ಚಪಾತಿ, ಸಾಗು ಅಂತ ರೆಡಿ ಮಾಡಬೇಕು ಅಷ್ಟು ಪುರುಸೊತ್ತು ಇಲ್ಲ ಅಂತ ರಾತ್ರಿಯೇ ಚಪಾತಿ ಹಿಟ್ಟು ಕಲೆಸಿ ತುಂಬಾ ಜನ ಇಡುತ್ತಾರೆ. ಆದರೆ ಈ ರೀತಿ ಚಪಾತಿ ಇಟ್ಟು ಕಲೆಸಿ ಪ್ರಿಡ್ಜ್ನಲ್ಲಿಡಬಾರದು ಎಂದು ಹೇಳುತ್ತಾರೆ.
ಅಲ್ಲದೆ ಚಪಾತಿ ಹಿಟ್ಟು ಪ್ರಿಡ್ಜ್ನಲ್ಲಿಟ್ಟು ನಂತರ ಬಳಸಿದಾಗ ಅದು ಗಟ್ಟಿ-ಗಟ್ಟಿಯಾಗುವುದು, ಚಪಾತಿ ಮೃದುವಾಗಿ ಕೂಡ ಇರುವುದಿಲ್ಲ, ಅಲ್ಲದೆ ಚಪಾತಿ ಹಿಟ್ಟು ಹುಳಿ ಬಂದರೆ ಬಳಸಲು ಸಾಧ್ಯವಾಗಲ್ಲ, ಚಪಾತಿ ಇಟ್ಟು ಫ್ರಿಡ್ಜ್ನಲ್ಲಿ ಎಷ್ಟು ಸಮಯದವರೆಗೆ ಇಡಬಹುದು? ಚಪಾತಿ ಹಿಟ್ಟು ಫ್ರೆಷ್ ಆಗಿ ಇಡುವುದು ಹೇಗೆ? ಯಾವ ಟಿಪ್ಸ್ ನಿಮಗೆ ಸಹಕಾರಿಯಾಗುವುದು, ಚಪಾತಿ ಹಿಟ್ಟು ಫ್ರಿಡ್ಜ್ನಲ್ಲಿ ಇಡುವುದರ ಬಗ್ಗೆ ನ್ಯೂಟ್ರಿಷಿಯನಿಸ್ಟ್ ನೀಡಿದ ಸಲಹೆಯೇನು ಎಂದು ನೋಡೋಣ ಬನ್ನಿ:

ಚಪಾತಿಯನ್ನು ಫ್ರಿಡ್ಜ್ನಲ್ಲಿ ಇಡಬಹುದೇ?
ನ್ಯೂಟ್ರಿಷಿಯನಿಸ್ಟ್ ಅಮಿತಾ ಗದ್ರೆ ಫ್ರಿಡ್ಜ್ನಲ್ಲಿ ಚಪಾತಿ ಹಿಟ್ಟು ಅಥವಾ
ರೊಟ್ಟಿ ಹಿಟ್ಟು ಕಲೆಸಿ ಇಟ್ಟರೆ ಅದನ್ನು 12 ಗಂಟೆಯೊಳಗಡೆ ಬಳಸಿ, ಒಂದೆರಡು
ದಿನವಾಗಿದ್ದರೆ ಅಂಥ ಹಿಟ್ಟಿನಿಂದ ಚಪಾತಿ ಮಾಡಬೇಡಿ ಎಂದು ಸಲಹೆ ನೀಡಿದ್ದಾರೆ.
ಚಪಾತ ಹಿಟ್ಟನ್ನು ಒಂದೆರಡು ದಿನ ಫ್ರಿಡ್ಜ್ನಲ್ಲಿಟ್ಟರೆ ಆ ಹಿಟ್ಟಿನಲ್ಲಿ ಕೆಲ
ವ್ಯತ್ಯಾಸ ಗೊತ್ತಾಗುತ್ತವುದು, ಚಪಾತಿ ಹಿಟ್ಟು ಅಂಟು ಅಂಟಾಗುವುದು, ಅದರೊಳಗಡೆ
ಬಿಳಿ-ಬಿಳಿ ಕಂಡು ಬರುವುದು ಈ ಹಿಟ್ಟನ್ನು ಬಳಸುವುದರಿಂದ ಸಮಸ್ಯೆ ಉಂಟಾಗುವುದು
ಎಂದು ಹೇಳಿದ್ದಾರೆ.
ಚಪಾತಿ ಹಿಟ್ಟನ್ನು ಫ್ರಿಡ್ಜ್ನಲ್ಲಿ ಇಡಬಾರದು ಏಕೆ?
ಚಪಾತಿ ಹಿಟ್ಟು ಕಲೆಸಿ ಪ್ರಿಡ್ಜ್ನಲ್ಲಿಟ್ಟರೆ ಅದರಲ್ಲಿ ಕೆಟ್ಟ ಬ್ಯಾಕ್ಟಿರಿಯಾ
ಉಂಟಾಗುವುದು. ಇಂಥ ಚಪಾತಿ ತಿನ್ನುವುದರಿಂದ ಫುಡ್ ಪಾಯಿಸನ್, ಆರೋಗ್ಯ ಸಮಸ್ಯೆ
ಉಂಟಾಗುವುದು.
ನೀವು ಚಪಾತಿ ಹಿಟ್ಟು ಫ್ರಿಡ್ಜ್ನಲ್ಲಿ ಇಡುವುದೇ
ಆದರೆ...
ನೀವು ಚಪಾತಿ ಹಿಟ್ಟನ್ನು ಪ್ರಿಡ್ಜ್ನಲ್ಲಿ ಇಡುವುದೇ ಆದರೆ ಇನ್ನು ಸ್ವಲ್ಪ ನೀರು
ಹಾಕಿ ತಟ್ಟಿ ಇಡಿ. ಇದು ಕೆಟ್ಟ ಬ್ಯಾಕ್ಟಿರಿಯಾದ ಉತ್ಪತ್ತಿ ತಡೆಗಟ್ಟುತ್ತದೆ.
ಆದರೆ ಈ ಹಿಟ್ಟನ್ನು ಒಂದು ದಿನ ಇಡಬಹುದು ಅಷ್ಟೇ ಅದಕ್ಕಿಂತ ಹೆಚ್ಚು ದಿನ
ಇಡಬೇಡಿ.
ಹಿಟ್ಟು ಪ್ರಿಡ್ಜ್ನಲ್ಲಿ ಇಡುವುದಕ್ಕಿಂತ ಹಾಗೆ ಹೊರಗಿಡುವುದೇ
ಒಳ್ಳೆಯದು
ಬೆಳಗ್ಗೆ ಚಪಾತಿ ಹಿಟ್ಟು ಕಲೆಸಲು ಸಮಯವಿಲ್ಲ ಎಂದಾದರೆ ನೀವು ಕೆಲೆಸಿ, ಚಪಾತಿ
ಹಿಟ್ಟನ್ನು ಮಸ್ಲಿನ್ ಬಟ್ಟೆಯಲ್ಲಿ ಸುತ್ತಿ ಇಡಿ, ಆ ಹಿಟ್ಟನ್ನು ಬೆಳಗ್ಗೆ ಚಪಾತಿ
ಮಾಡಲು ಬಳಸಬಹುದು. ಕಲೆಸಿಟ್ಟ ಚಪಾತಿ ಹಿಟ್ಟು ಗಟ್ಟಿಯಾಗುವುದಿಲ್ಲ. ಚಪಾತಿಗೆ
ತಟ್ಟುವ ಮುನ್ನ ಮುನ್ನ ಸ್ವಲ್ಪ ಹಿಟ್ಟು ತೆಗೆದು ಅದು ಹುಳಿ ಬಂದಿದೆಯೇ ಟೇಸ್ಟ್
ಮಾಡಿ ನೋಡಿ, ಹುಳಿ ಬಂದಿದ್ದರೆ ಬಳಸಬೇಡಿ.
ಚಪಾತಿ ಹಿಟ್ಟು ಕಲೆಸಿ ಇಡುವಾಗ ಈ ಬಗ್ಗೆ
ಜಾಗ್ರತೆವಹಿಸಿ:
ಚಪಾತಿ ಹಿಟ್ಟಿನ ಮೇಲ್ಬಾಗಕ್ಕೆ ತುಪ್ಪ ಅಥವಾ ಎಣ್ಣೆ ಸವರಿ ಇಡಿ
ನೀವು ಚಪಾತಿ ಹಿಟ್ಟಿಗೆ ಕಲೆಸಿ ಉಂಡೆ ಕಟ್ಟಿ ಅದರ ಮೇಲೆ ಸ್ವಲ್ಪ ಎಣ್ಣೆ ಅಥವಾ
ತುಪ್ಪ ಸವರಿ ಇಡಿ. ಎಣ್ಣೆಯಂಶ ಚಪಾತಿ ಹಿಟ್ಟು ಕಪ್ಪಾಗುವುದು ಅಥವಾ ಒಣಗುವುದನ್ನು
ತಡೆಗಟ್ಟುತ್ತದೆ.
ನಂತರ ಮಸ್ಲಿನ್ ಬಟ್ಟೆಯಿಂದ ಸುತ್ತಿ: ಸ್ವಚ್ಛವಾದ ಮಸ್ಲಿನ್ ಬಟ್ಟೆಯಲ್ಲಿ ಸುತ್ತಿಡಿ, ನಂತರ ಗಾಳಿಯಾಡದ ಡಬ್ಬದಲ್ಲಿ ಹಾಕಿ ಮುಚ್ಚಿಡಿ. ಹೀಗೆ ಇಟ್ಟರೆ ಹಿಟ್ಟು ಹಾಳಾಗುವುದು ತಡೆಗಟ್ಟಬಹುದು.
ಮಾರನೇಯ ದಿನ ಹಾಗೆಯೇ ಬಳಸಬೇಡಿ
ಮತ್ತೆ ಹಿಟ್ಟನ್ನು ಕೈಯಿಂದ ಕಲೆಸಿ ನಂತರ ಉಂಡೆ ಕಟ್ಟಿ ಬಳಸಬೇಕು. ನೀವು ಬೆಳಗ್ಗೆ
ಮಾಡುವ ಚಪಾತಿಗೆ ರಾತ್ರಿ ಮಲಗುವ ಮುನ್ನ ಕಲೆಸಿಟ್ಟರೆ 8-10 ಗಂಟೆ ಸಮಯ, ಇಷ್ಟು
ಅವಧಿಯಲ್ಲಿ ಚಪಾತಿ ಹಿಟ್ಟು ಹಾಳಾಗಲ್ಲ, ಫ್ರಿಡ್ಜ್ನಲ್ಲಿ ಇಡದೆ ಕಿಚನ್ನಲ್ಲಿ
ಇಡಿ.
ವಾರದವರೆಗೆ ಚಪಾತಿ ಹಿಟ್ಟು ಕಲೆಸಿಟ್ಟು ಬಳಸಬೇಡಿ:
ಕೆಲವರು ಟೈಮ್ ಸಿಕ್ಕಾಗ ಚಪಾತಿ ಹಿಟ್ಟು ಕಲೆಸಿಟ್ಟು ಅದನ್ನು
ಫ್ರಿಡ್ಜ್ನಲ್ಲಿಟ್ಟು ವಾರದವರೆಗೆ ಬಳಸುತ್ತಾರೆ, ಆ ತಪ್ಪು ಮಾಡಲೇಬೇಡಿ...



Click it and Unblock the Notifications
