Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕ್ರಿಸ್ಮಸ್ ಸಮಯದಲ್ಲಿ ಮಾಡುವ ಸಾಂಪ್ರದಾಯಿಕ ಹಾಗೂ ಜನಪ್ರಿಯವಾದ ಸಿಹಿ ತಿನಿಸುಗಳಿವು
ಕ್ರಿಸ್ಮಸ್‌ನಲ್ಲಿ ಮಾಡಲಾಗುವ ಸಾಂಪ್ರದಾಯಿಕ ರೆಸಿಪಿಗಳ ಬಗ್ಗೆ ಕೇಳಿದರೆ ಕೇಕ್ ಅಂತ ಎಲ್ಲರೂ ಹೇಳುತ್ತಾರೆ, ಕೇಕ್ ಮಾತ್ರವಲ್ಲ ಈ ದಿನ ಇನ್ನಿತರ ಸ್ಪೆಷಲ್ ತಿನಿಸುಗಳನ್ನು ತಯಾರಿಸಲಾಗುವುದು, ಅವುಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ:

ಕ್ರಿಸ್ಮಸ್ ಪುಡ್ಡಿಂಗ್
ಹೊರ ಕ್ರಿಶ್ಚಿಯನ್ ರಾಷ್ಟ್ರಗಳಲ್ಲಿ ಕ್ರಿಸ್ಮಸ್ ಸಮಯದಲ್ಲಿ ಸ್ಪೆಷಲ್ ರೆಸಿಪಿಯಾಗಿ ಕ್ರಿಸ್ಮಸ್ ಪುಡ್ಡಿಂಗ್ ತಯಾರಿಸಲಾಗುವುದು, ಅದರಲ್ಲೂ ಯುಕೆಯಲ್ಲಿ ಈ ರೆಸಿಪಿ ಕ್ರಿಸ್ಮಸ್ ಸ್ಪೆಷಲ್ ಫುಡ್‌ಗಳ ಲಿಸ್ಟ್‌ನಲ್ಲಿ ಇದ್ದೇ ಇರುತ್ತದೆ.
ಟ್ರೆಡಿಷನಲ್ ಇಂಗ್ಲಿಷ್ ಟ್ರಿಫ್ಲೆ
ಒಂದು ಕೇಕ್ ತುಂಡು ಹಾಕಿ ಅದರ ಸುತ್ತ ಫ್ರೂಟ್ಸ್, ಜೆಲ್ಲಿ ಹಾಕಿ, ವಿಫ್ಡ್ ಕ್ರೀಮ್ ಹಾಕಿ ಮಾಡುವ ರೆಸಿಪಿ ಇದಾಗಿದೆ.

ಜಿಂಜರ್‌ಬ್ರೆಡ್ ಮೆನ್ ಕುಕ್ಕೀಸ್
ಕ್ರಿಸ್ಮಸ್ ಹಾಲಿಡೇಗೆ ಕುಕ್ಕೀಸ್ ಇರದಿದ್ದರೆ ಹೇಗೆ ಅಲ್ವಾ? ಈ ದಿನ ಟ್ರೆಡಿಷನಲ್ ಕುಕ್ಕೀಸ್ ಆಗಿ ಜಿಂಜರ್‌ಬ್ರೆಡ್ ಮೆನ್ ಕುಕ್ಕೀಸ್ ಮಾಡಲಾಗುವುದು.
ಹಾಲಿಡೇ ರಮ್ ಬಾಲ್
ಕ್ರಿಸ್ಮಸ್‌ಗೆ ಮಾಡುವ ಮತ್ತೊಂದು ಸಾಂಪ್ರದಾಯಿಕ ತಿನಿಸಯೆಂದರೆ ಈ ಕ್ಯಾಂಡಿ.
ಚಾಕೋಲೆಟ್ ರಮ್ ನೀವು ಕೂಡ ಈ ಕ್ರಿಸ್ಮಸ್‌ಗೆ ಮಾಡಬಯಸುವುದಾದರೆ
ಬೇಕಾಗುವ ಸಾಮಗ್ರಿ
1 ಕಪ್ ಚಾಕೋಲೆಟ್ ಚಿಪ್ಸ್, ಚಿಕ್ಕ-ಚಿಕ್ಕ ತುಂಡುಗಳಾಗಿ ಕತ್ತರಿಸಿದ್ದು
3 ಚಮಚ ಕಾರ್ನ್ ಸಿರಪ್
1/2 ಕಪ್ ರಮ್
21/2 ಕಪ್ ಕುಕ್ಕೀಸ್ (ಪುಡಿ ಮಾಡಿದ್ದು)
1 ಕಪ್ ಸಕ್ಕರೆ
1 ಕಪ್ ನಟ್ಸ್ ಪುಡಿ

ಮಾಡುವ ವಿಧಾನ'
* ಚಾಕೋಲೆಟ್ ಚಿಪ್ಸ್ ಹಾಗೂ ಕುಕ್ಕೀಸ್ ಅನ್ನು ಕರಗಿಸಿ, ಅದು ತಳ ಹಿಡಿಯದಂತೆ
ತಿರುಗಿಸುತ್ತಾ ಕರಗಿಸಿ.
* ಚಾಕೋಲೆಟ್ ಕರಗಿದ ಮೇಲೆ ಅದಕ್ಕೆ ಕಾರ್ನ್ ಸಿರಪ್ ಹಾಕಿ, ರಮ್ ಹಾಕಿ
* ಅದರಲ್ಲಿ ವೇಫರ್ಸ್ ಚೂರುಗಳು ಹಾಗೂ ಅರ್ಧ ಕಪ್ ಸಕ್ಕರೆ, ನಟ್ಸ್ ಸೇರಿಸಿ
* ಈಗ ಮಿಶ್ರಣವನ್ನು ಮಿಕ್ಸ್ ಮಾಡಿ ಅದನ್ನು ಉರಿಯಿಂದ ಇಳಿಸಿ ತಣಿಯಲು ಬಿಡಿ.
* ನಂತರ 10 ನಿಮಿಷ ಫ್ರಿಡ್ಜ್‌ನಲ್ಲಿಡಿ.
* ನಂತರ ಅದರಿಂದ ಚಿಕ್ಕ-ಚಿಕ್ಕ ಉಂಡೆ ಕಟ್ಟಿದರೆ ರಮ್ ಬಾಲ್ ರೆಡಿ.
ಅಲೆಸ್ಕಾ
ಇದು ಕೂಡ ಕ್ರಿಸ್ಮಸ್ ಸಮಯದಲ್ಲಿ ತಯಾರಿಸಬಹುದಾದ ಅದ್ಭುತವಾದ ರೆಸಿಪಿಯಾಗಿದೆ.
ಪಂಪ್‌ಕಿನ್ ಕೇಕ್ ರೋಲ್
ಸಿಹಿ ಕುಂಬಳಕಾಯಿಂದ ಮಾಡುವ ಈ ಕೇಕ್ ಕೂಡ ಕ್ರಿಸ್ಮಸ್ ಸಮಯದಲ್ಲಿ ಮಾಡುವ ಸಾಂಪ್ರದಾಯಿಕ ಸಿಹಿ ತಿನಿಸುಗಳಲ್ಲಿ ಒಂದಾಗಿದೆ.

ಬ್ರಾಂಡಿ ಫ್ರೂಟ್ ಕೇಕ್
ಬ್ರಾಂಡಿ ಕೇಕ್ ತುಂಬಾನೇ ಟೇಸ್ಟಿಯಾಗಿರುತ್ತದೆ, ಅದರಲ್ಲೂ ಬ್ರಾಂಡಿ ಫ್ರೂಟ್ ಕೇಕ್ ಅಂತೂ ಇನ್ನೂ ಯಮ್ಮೀ....

ಬ್ರಾಂಡಿ ಫ್ರೂಟ್‌ಕೇಕ್‌ಗೆ ಬೇಕಾಗುವ ಸಾಮಗ್ರಿ
ಒಣ ಅಂಜೂರ 1/4 ಕಪ್
1/4 ಕಪ್ ಒಣದ್ರಾಕ್ಷಿ
1/4 ಕಪ್ ಕ್ರ್ಯಾನ್‌ಬೆರ್ರಿ
ನಿಮಗೆ ಬೇಕಾದ ಇತರ ಡ್ರೈ ಫ್ರೂಟ್ಸ್ ಸೇರಿಸಬಹುದು
ಒಣ ಖರ್ಜೂರ (ಸ್ವಲ್ಪ)
1 ಕಪ್ ಬ್ರಾಂಡಿ
ಇತರ ಸಾಮಗ್ರಿ
ಒಂದೂ ಕಾಲು ಕಪ್ ಬಿಸಿ ನೀರು
1 ಕಪ್ ಬ್ರೌನ್ ಶುಗರ್ (ಪುಡಿ) (ನೀವು ಬೇಕಿದ್ದರೆ ಬಿಳಿ ಸಕ್ಕರೆ ಪುಡಿ ಮಾಡಿ
ಬಳಸಬಹುದು)
ಕಾಲು ಕಪ್‌ನಷ್ಟು ವೆಜೆಟೇಬಲ್ ಎಣ್ಣೆ
2 ಕಪ್ ಮೈದಾ
1/2 ಚಮಚ ಬೇಕಿಂಗ್ ಪೌಡರ್
1/2 ಚಮಚ ಚಕ್ಕೆ ಪುಡಿ
ಚಿಟಿಕೆಯಷ್ಟು ಉಪ್ಪು
1/4 ಚಮಚ ಜಾಯಿಕಾಯಿ (nutmug powder)
1/2 ಚಮಚ ಏಲಕ್ಕಿ
1 ಚಮಚ ವೆನಿಲ್ಲಾ ರಸ
1/2 ಚಮಚ ನಿಂಬೆ ರಸ
ಸ್ವಲ್ಪ ವಾಲ್ನಟ್
ಮಾಡುವ ವಿಧಾನ:
*ಒಂದು ಬೌಲ್‌ಗೆ ಡ್ರೈ ಫ್ರೂಟ್ಸ್ ಚಿಕ್ಕದಾಗಿ ಕತ್ತರಿಸಿ ಹಾಕಿ. ಬಾದಾಮಿ,
ವಾಲ್ನಟ್ ಇವುಗಳನ್ನು ಅಷ್ಟೆ ಚಿಕ್ಕ-ಚಿಕ್ಕ ಪೀಸ್‌ಗಳಾಗಿ ಕತ್ತರಿಸಿ ಹಾಕಿ.
* ನಂತರ 1ಕಪ್ ಬ್ರಾಂಡಿ ಸೇರಿಸಿ. ಬ್ರಾಂಡಿಯಲ್ಲಿ ಒಂದು ರಾತ್ರಿ ಡ್ರೈ ಫ್ರೂಟ್ಸ್
ನೆನೆ ಹಾಕಬೇಕು.
* ಈಗ ನೀವು ಬೌಲ್‌ನಲ್ಲಿ11/4 ಕಪ್ ಬಿಸಿ ನೀರು ಹಾಕಿ, ಅದಕ್ಕೆ ಅ ಕಪ್ ಸಕ್ಕರೆ
ಪುಡಿ ಹಾಕಿ. ಈಗ ಎಣ್ಣೆ ಹಾಕಿ ಸಕ್ಕರೆ ಕರಗುವವರೆಗೆ ಕಲೆಸಿ.
* ಈಗ ಎರಡು ಕಪ್ ಮೈದಾ ಹಿಟ್ಟು ಹಾಕಿ. ನಂತರ 1 ಚಮಚ ಬೇಕಿಂಗ್ ಪುಡಿ, ಅರ್ಧ ಚಮಚ
ಅಡುಗೆ ಸೋಡಾ , ಚಕ್ಕೆ ಪುಡಿ, ಜಾಯಿಕಾಯಿ ಪುಡಿ, ಏಲಕ್ಕಿ, ಉಪ್ಪು ಸೇರಿಸಿ
ಚೆನ್ನಾಗಿ ಮಿಕ್ಸ್ ಮಾಡಬೇಕು.
* ನಂತರ ಅರ್ಧ ನಿಂಬೆ ರಸ ಹಾಕಿ, ಆಮೇಲೆ ಒಂದು ಚಮಚ ವೆನಿಲ್ಲಾ ರಸ ಸೇರಿಸಿ. ಈಗ
ನೀವು ತುಂಬಾ ಮಿಕ್ಸ್ ಮಾಡಬಾರದು, ಸುಮ್ಮನೆ ಒಮ್ಮೆ ಮಿಕ್ಸ್ ಮಾಡಿದರಷ್ಟೇ
ಸಾಕು.
* ನೆನೆ ಹಾಕಿದ ಡ್ರೈ ಪ್ರೂಟ್ಸ್ ಹಿಂಡಿ ಕೇಕ್ ಮಿಶ್ರಣಕ್ಕೆ ಹಾಕಿ. * ಗೋಡಂಬಿ,
ಬಾದಾಮಿ ಸೇರಿಸಿ.
* ಓವನ್ ಅನ್ನು 180 ಡಿಗ್ರಿ C ಅಥವಾ 356 ಡಿಗ್ರಿ F ಉಷ್ಣತೆಗೆ ಪ್ರೀ ಹೀಟ್
ಮಾಡಿ, ನಂತರ ಕೇಕ್ ಮೌಲ್ಡ್ಗೆ ಕೇಕ್ ಮಿಶ್ರಣ ಸುರಿದು 40 ನಿಮಿಷ ಬೇಯಿಸಿ.
* ನಂತರ ಓವನ್‌ನಿಂದ ತೆಗೆದು ತಣ್ಣಗಾದ ಮೇಲೆ ಕಟ್ ಮಾಡಿ ಸರ್ವ್ ಮಾಡಿ.
ನೀವು ಕುಕ್ಕರ್‌ನಲ್ಲೂ ಬೇಯಿಸಬಹುದು.
* ಕುಕ್ಕರ್‌ನಲ್ಲಾದರೆ ಕುಕ್ಕರ್‌ನ ತಳಭಾಗಕ್ಕೆ ಎಣ್ಣೆ ಹಚ್ಚಬೇಕು, ನಂತರ 1 ವೈಟ್
ಶೀಟ್‌ಗೆ (A4 sheet)ಎಣ್ಣೆ ಸವರಿ ಅದರ ಮೇಲೆ ಕೇಕ್ ಮಿಶ್ರಣ ಸುರಿದು, ಕುಕ್ಕರ್
ವಿಷಲ್ ತೆಗೆದು 15 ನಿಮಿಷ ಬೇಯಿಸಿದರೆ ಸಾಕು)
ನೀವು ಕೂಡ ಈ ಕ್ರಿಸ್ಮಸ್‌ನಲ್ಲಿ ಈ ರೀತಿಯ ಯಾವುದಾದರೂ ವಿಶೇಷ ರೆಸಿಪಿ ಟ್ರೈ ಮಾಡಿದರೆ ನಮ್ಮೊಂದಿಗೆ ರೆಸಿಪಿ ಹಾಗೂ ಫೋಟೋ ಶೇರ್ ಮಾಡಿ.



Click it and Unblock the Notifications