Latest Updates
-
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ!
ಬೆಳಗ್ಗೆ 1 ಕಪ್ ಕುಡಿಯಿರಿ.. ತೂಕ 2 ಪಟ್ಟು ಬೇಗ ಇಳಿಯುತ್ತೆ! ಜಿಮ್, ಡಯಟ್ ಬೇಡವೇ ಬೇಡ
ಪ್ರತಿದಿನ ಬೆಳಗ್ಗೆ ಈ ಸೂಪ್ 1 ಕಪ್ ಕುಡಿಯಿರಿ! ನಿಮ್ಮ ದೇಹದ ತೂಕ 2 ಪಟ್ಟು ವೇಗವಾಗಿ ಕಡಿಮೆಯಾಗುತ್ತದೆ. ಹೌದು, ತೂಕ ಇಳಿಸಿಕೊಳ್ಳಲು (Weight Loss) ಪ್ರಯತ್ನಿಸುತ್ತಿರುವವರಿಗೆ, ರುಚಿಕರವಾದ ಮತ್ತು ಪೌಷ್ಟಿಕಾಂಶಭರಿತ ಆಹಾರವನ್ನು ಆಯ್ಕೆ ಮಾಡುವುದು ಸವಾಲಿನ ಸಂಗತಿ. ಆದರೆ, ನಿಮ್ಮ ಆಹಾರ ಪದ್ಧತಿಗೆ ಹೊಂದಿಕೊಳ್ಳುವ, ಪ್ರೋಟೀನ್ ಸಮೃದ್ಧವಾದ ಮತ್ತು ಪೋಷಕಾಂಶಗಳಿನಿಂದ ತುಂಬಿರುವ ಮಖಾನ ಸೂಪ್ (Makhana Soup) ಒಂದು ಉತ್ತಮ ಆಯ್ಕೆಯಾಗಿದೆ.
ಈ ಸೂಪ್ ಅನ್ನು ಪ್ರತಿದಿನ ಒಂದು ಕಪ್ ಸೇವಿಸುವುದರಿಂದ ಉತ್ತಮ ಫಲಿತಾಂಶಗಳನ್ನು ನಿರೀಕ್ಷಿಸಬಹುದು. ಜೊತೆಗೆ ದಿನವಿಡೀ ಚುರುಕಾಗಿರಬಹುದು. ಈ ಲೇಖನದಲ್ಲಿ ಮಖಾನಾ ಸೂಪ್ (Makhana Soup Recipe) ತಯಾರಿಸುವ ಸರಳ ವಿಧಾನವನ್ನು ತಿಳಿಸಲಾಗಿದೆ. ಇದನ್ನು ಒಮ್ಮೆ ಮಾಡಿ ನಿಮ್ಮ ಅನುಭವಗಳನ್ನು ಹಂಚಿಕೊಳ್ಳಿ. ರುಚಿಯ ಜೊತೆಗೆ ಆರೋಗ್ಯವನ್ನು ನೀಡುವ ಈ ಸೂಪ್ ಮಾಡುವ ವಿಧಾನ ತಿಳಿಯಲು ಮುಂದೆ ಓದಿ.
ಮಖಾನ ಸೂಪ್ ಮಾಡಲು ಬೇಕಾಗುವ ಪದಾರ್ಥಗಳು
ಮಖಾನ - 1 ಕಪ್
ಸಬ್ಬಕ್ಕಿ (ಸಣ್ಣ) - 1/2 ಕಪ್
ಕಾಳು ಮೆಣಸು - 1/2 ಸ್ಪೂನ್
ಜೀರಿಗೆ - 1/2 ಸ್ಪೂನ್
ಉಪ್ಪು - 1 ಚಿಟಿಕೆ
ತುಪ್ಪ - 1 ಸ್ಪೂನ್
ಕಡಲೆಕಾಯಿ - 1/4 ಕಪ್
ಬಾದಾಮಿ - 10
ಗೋಡಂಬಿ - 10
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು
ತುಪ್ಪ - 2 ಸ್ಪೂನ್
ಜೀರಿಗೆ - 1/2 ಸ್ಪೂನ್
ಶುಂಠಿ - ಸ್ವಲ್ಪ
ಹಸಿ ಮೆಣಸಿನಕಾಯಿ - 3
ಆಲೂಗಡ್ಡೆ - 1
ಉಪ್ಪು - ರುಚಿಗೆ ತಕ್ಕಷ್ಟು
ಕರಿಬೇವು - 1 ಕಟ್ಟು
ನೀರು - 3 ಕಪ್
ಅರಿಶಿನ ಪುಡಿ - 1/4 ಸ್ಪೂನ್
ಟೊಮೆಟೊ - 1
ನಿಂಬೆಹಣ್ಣು - ಅರ್ಧ
ಕೊತ್ತಂಬರಿ ಸೊಪ್ಪು - ಸ್ವಲ್ಪ
ಮಖಾನ ಸೂಪ್ ತಯಾರಿಸುವ ವಿಧಾನ
- ಮೊದಲಿಗೆ, ಒಂದು ಪಾತ್ರೆ ತೆಗೆದುಕೊಳ್ಲಿ. ಅದಕ್ಕೆ 1/2 ಕಪ್ ಸಬ್ಬಕ್ಕಿ ಹಾಕಿ. ಈಗ ಸ್ವಲ್ಪ ನೀರು ಹಾಕಿ 5 ನಿಮಿಷ ನೆನೆಸಿಡಿ.
- ಈ ಮಧ್ಯೆ ಒಂದು ಬಾಣಲೆಯನ್ನು ಬಿಸಿ ಮಾಡಿ, ಅದಕ್ಕೆ ಕಾಳು ಮೆಣಸು, ಜೀರಿಗೆ ಮತ್ತು ಚಿಟಿಕೆ ಉಪ್ಪು ಸೇರಿಸಿ ಚೆನ್ನಾಗಿ ಹುರಿದು ಪುಡಿ ಮಾಡಿಕೊಳ್ಳಿ.
- ನಂತರ ಮತ್ತೊಂದು ಬಾಣಲೆಗೆ 1 ಸ್ಪೂನ್ ತುಪ್ಪ ಹಾಕಿ ಬಿಸಿ ಮಾಡಿ, ಕಡಲೆಕಾಯಿ ಸೇರಿಸಿ ಚೆನ್ನಾಗಿ ಹುರಿದು ಒಂದು ತಟ್ಟೆಗೆ ತೆಗೆದಿಡಿ.
- ಅದೇ ಬಾಣಲೆಯಲ್ಲಿ ಉಳಿದ ತುಪ್ಪದಲ್ಲಿ ಬಾದಾಮಿ, ಗೋಡಂಬಿ ಸೇರಿಸಿ ಹುರಿದು, ಕಡಲೆಕಾಯಿಯೊಂದಿಗೆ ಸೇರಿಸಿ ತಣ್ಣಗಾಗಲು ಬಿಡಿ.
- ನಂತರ ಮಖಾನ ಸೇರಿಸಿ, 2 ನಿಮಿಷ ಹುರಿದು ಒಂದು ತಟ್ಟೆಯಲ್ಲಿ ಪ್ರತ್ಯೇಕವಾಗಿ ಇಡಿ.
- ಈಗ ಮತ್ತೊಂದು ಬಾಣಲೆಗೆ 2 ಟೀಸ್ಪೂನ್ ತುಪ್ಪ ಹಾಕಿ ಬಿಸಿ ಮಾಡಿ. ಜೀರಿಗೆ, ಚಿಕ್ಕದಾಗಿ ಕತ್ತರಿಸಿದ ಶುಂಠಿ ಮತ್ತು ಹಸಿ ಮೆಣಸಿನಕಾಯಿ ಸೇರಿಸಿ ಚೆನ್ನಾಗಿ ಹುರಿಯಿರಿ.
- ನಂತರ ತುಂಡು ಮಾಡಿದ ಆಲೂಗಡ್ಡೆ ಸೇರಿಸಿ, ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಹುರಿಯಿರಿ. ಇದರಿಂದ ಆಲೂಗಡ್ಡೆ ಬೇಗ ಬೇಯುತ್ತದೆ.
- ನಂತರ ನೆನೆಸಿದ ಸಬ್ಬಕ್ಕಿ ಸೇರಿಸಿ ಚೆನ್ನಾಗಿ ಕಲಸಿ. ಇದಕ್ಕೆ 3 ಕಪ್ ನೀರು ಹಾಕಿ, ಅರಿಶಿನ ಪುಡಿ ಮತ್ತು ಟೊಮೆಟೊ ಸೇರಿಸಿ ಕಲಸಿ, ಮುಚ್ಚಳ ಮುಚ್ಚಿ 2-3 ನಿಮಿಷ ಚೆನ್ನಾಗಿ ಕುದಿಸಿ.
- ಸೂಪ್ ಚೆನ್ನಾಗಿ ಕುದಿದು, ಸಬ್ಬಕ್ಕಿ ಮತ್ತು ಆಲೂಗಡ್ಡೆ ಬೆಂದ ನಂತರ ಉರಿಯನ್ನು ಆರಿಸಿ.
- ನಂತರ ಹುರಿದ ಗೋಡಂಬಿ, ಬಾದಾಮಿ, ಕಡಲೆಕಾಯಿ ಮತ್ತು ಮಖಾನಾವನ್ನು ಸೇರಿಸಿ ಚೆನ್ನಾಗಿ ಕಲಸಿ.
- ಅಂತಿಮವಾಗಿ ಹುರಿದು ಪುಡಿ ಮಾಡಿದ ಕಾಳು ಮೆಣಸು-ಜೀರಿಗೆ ಪುಡಿಯನ್ನು ಸೇರಿಸಿ ಕಲಸಿ. ಮುಚ್ಚಳ ಮುಚ್ಚಿ 5 ನಿಮಿಷ ನೆನೆಯಲು ಬಿಡಿ.
- 5 ನಿಮಿಷದ ನಂತರ, ಮುಚ್ಚಳ ತೆಗೆದು ನಿಂಬೆ ರಸ ಸೇರಿಸಿ ಕಲಸಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ಇಷ್ಟು ಮಾಡಿದರೆ ಸಾಕು, ರುಚಿಕರವಾದ ಮಖಾನ ಸೂಪ್ ಸಿದ್ಧ.



Click it and Unblock the Notifications

