Latest Updates
-
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ! -
ಸಣ್ಣ ಬಾಲ್ಕನಿಯಲ್ಲಿ ಓಣಂ ಸಂಭ್ರಮ: ಬಜೆಟ್ನಲ್ಲಿ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್ -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ಕೊನೆಯ ದಿನದ ಸಂಭ್ರಮ ಮತ್ತು ಮನೆಯನ್ನು ಸಿಂಗರಿಸುವ ಸುಲಭ ಟಿಪ್ಸ್
ವಾರಕ್ಕೆ 3 ಬಾರಿ ಕುಡಿಯಿರಿ.. ಈ ಗಂಜಿ ನಿಮ್ಮ ತೂಕ ಇಳಿಸುತ್ತೆ! ಸ್ಲಿಂ ಮತ್ತು ಫಿಟ್ ಮಾಡುತ್ತೆ
ವಾರಕ್ಕೆ 3 ಬಾರಿ ಈ ಗಂಜಿ ಕುಡಿಯಿರಿ! ಕೆಟ್ಟ ಕೊಬ್ಬು ಕರಗಿ, ದೇಹದ ತೂಕ ಅಸುರ ವೇಗದಲ್ಲಿ ಕಡಿಮೆಯಾಗುತ್ತದೆ. ಹೌದು, ನೀವು ಸಹ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೀರಾ? ಪ್ರತಿದಿನ ಬೆಳಗ್ಗೆ ಇಡ್ಲಿ, ದೋಸೆ ತಿಂದು ಬೇಜಾರ್ ಆಗಿದೆಯೇ? ಹಾಗಿದ್ರೆ, ನಿಮಗಾಗಿ ಇಲ್ಲಿದೆ ಒಂದು ವಿಶೇಷ ಗಂಜಿ ರೆಸಿಪಿ. ಇದು ದೇಹದ ತೂಕವನ್ನು ಕಡಿಮೆ (Weight Loss) ಮಾಡಲು ಸಹಾಯ ಮಾಡುತ್ತದೆ.
ಕಪ್ಪು ಕವುನಿ ಅಥವಾ ಕವುಣಿ ಅಕ್ಕಿ ಮತ್ತು ಕಪ್ಪು ಉದ್ದಿನ ಬೇಳೆ ಬಳಸಿ ತಯಾರಿಸುವ ಈ ಗಂಜಿ (Karuppu Kavuni Ulunthu Kanji) ತೂಕ ಇಳಿಕೆಗೆ ಸಹಕಾರಿ. ಇದು ಕೀಲು ನೋವು ಮತ್ತು ಪಾದಗಳ ನೋವಿನಿಂದ ಮುಕ್ತಿ ನೀಡಲು ಸಹ ಸಹಾಯ ಮಾಡುತ್ತದೆ. ಈ ಗಂಜಿಯನ್ನು ಯಾರು ಬೇಕಾದರೂ ಸೇವಿಸಬಹುದು. ವಾರದಲ್ಲಿ ಮೂರು ಬಾರಿ ಇದನ್ನು ಸೇವಿಸುವುದರಿಂದ ದೇಹದಲ್ಲಿ ಧನಾತ್ಮಕ ಬದಲಾವಣೆಗಳನ್ನು ಕಾಣಬಹುದು.
ಕಪ್ಪು ಕವುನಿ ಅಕ್ಕಿ ಮತ್ತು ಉದ್ದು ಗಂಜಿ ಮಾಡುವುದು ಹೇಗೆ ಎಂದು ತಿಳಿಯಬೇಕೆ? ಈ ಲೇಖನದಲ್ಲಿ ಅದರ ಸರಳ ವಿಧಾನ ತಿಳಿಸಲಾಗಿದೆ. ಇದನ್ನು ನೀವೂ ಒಮ್ಮೆ ಮನೆಯಲ್ಲಿ ಟ್ರೈ ಮಾಡಿ. ನಿಮಗೆ ಇಷ್ಟವಾದರೆ, ನಿಮ್ಮ ಸ್ನೇಹಿತರೊಂದಿಗೂ ಹಂಚಿಕೊಳ್ಳಿ. ಈ ಗಂಜಿ ತಯಾರಿಸಲು (Karuppu Kavuni Ulunthu Ganji) ಬೇಕಾಗುವ ಸಾಮಗ್ರಿಗಳು ಇಲ್ಲಿವೆ.
ಹುರಿಯಲು ಮತ್ತು ಪುಡಿ ಮಾಡಲು
• ಕಪ್ಪು ಕವುನಿ ಅಕ್ಕಿ - 1 ಕಪ್ (1/4 ಕಿಲೋ)
• ಕಪ್ಪು ಉದ್ದಿನ ಬೇಳೆ - 100 ಗ್ರಾಂ
• ಶುಂಠಿ ಪುಡಿ - 1 ಸ್ಪೂನ್
• ಏಲಕ್ಕಿ - 2
ಗಂಜಿ ತಯಾರಿಸಲು
• ಕವುನಿ ಅಕ್ಕಿ - ಉದ್ದು ಪುಡಿ - 1 ಕಪ್
• ನೀರು - 5 ಕಪ್
• ಮೆಂತ್ಯ - 1/4 ಸ್ಪೂನ್
• ಬೆಳ್ಳುಳ್ಳಿ - 3 ಎಸಳು (ಜಜ್ಜಿದ್ದು)
• ಎಣ್ಣೆ - 1 ಸ್ಪೂನ್
• ಉಪ್ಪು - ರುಚಿಗೆ ತಕ್ಕಷ್ಟು
• ಬಿಸಿ ನೀರು - ಅಗತ್ಯವಿರುವಷ್ಟು
• ಗಟ್ಟಿಯಾದ ತೆಂಗಿನ ಹಾಲು - 1 ಕಪ್
ಈ ಗಂಜಿ ತಯಾರಿಸುವ ವಿಧಾನ
- ಮೊದಲಿಗೆ, ಕಪ್ಪು ಕವುನಿ ಅಕ್ಕಿಯನ್ನು ನೀರಿನಲ್ಲಿ ಚೆನ್ನಾಗಿ ತೊಳೆಯಿರಿ. ಬಳಿಕ ಬಟ್ಟೆಯ ಮೇಲೆ ಹರಡಿ, ನೆರಳಿನಲ್ಲಿ ಒಣಗಿಸಿ. ಅದೇ ರೀತಿ ಕಪ್ಪು ಉದ್ದಿನ ಬೇಳೆಯನ್ನು ಎರಡು ಬಾರಿ ತೊಳೆದು ಒಣಗಿಸಿ.
- ನಂತರ, ಬಾಣಲೆಯನ್ನು ಬಿಸಿ ಮಾಡಿ. ಒಣಗಿಸಿದ ಕಪ್ಪು ಕವುನಿ ಅಕ್ಕಿಯನ್ನು ಹಾಕಿ. ಈಗ ಅದನ್ನು ಚೆನ್ನಾಗಿ ಹುರಿಯಿರಿ. ನಂತರ ಒಂದು ತಟ್ಟೆಗೆ ತೆಗೆದಿಡಿ.
- ಅದೇ ಬಾಣಲೆಯಲ್ಲಿ ತೊಳೆದ ಕಪ್ಪು ಉದ್ದು ಬೇಳೆಯನ್ನು ಹಾಕಿ ಚೆನ್ನಾಗಿ ಹುರಿಯಿತಿ. ಬಳಿಕ ಪ್ರತ್ಯೇಕವಾಗಿ ಇಡಿ.
- ಈಗ ಮಿಕ್ಸರ್ ಜಾರ್ಗೆ ಹುರಿದ ಕಪ್ಪು ಕವುನಿ ಅಕ್ಕಿ, ಉದ್ದು ಬೇಳೆ, ಶುಂಠಿ ಪುಡಿ ಮತ್ತು ಹುರಿದ ಏಲಕ್ಕಿ ಹಾಕಿ. ಇದನ್ನು ತರಿತರಿಯಾಗಿ ಪುಡಿ ಮಾಡಿ. ಈ ಪುಡಿಯನ್ನು ಗಾಳಿಯಾಡದ ಡಬ್ಬದಲ್ಲಿ ಸಂಗ್ರಹಿಸಿ, ಅಗತ್ಯವಿದ್ದಾಗ ಬಳಸಬಹುದು.
- ಬಳಿಕ ಒಂದು ಪಾತ್ರೆಯಲ್ಲಿ 1 ಕಪ್ ಕಪ್ಪು ಕವುನಿ ಅಕ್ಕಿ ಗಂಜಿ ಪುಡಿ ಹಾಕಿ,. ಅದಕ್ಕೆ 5 ಕಪ್ ನೀರು, ಮೆಂತ್ಯ ಮತ್ತು ಜಜ್ಜಿದ ಬೆಳ್ಳುಳ್ಳಿ ಸೇರಿಸಿ. 1 ಸ್ಪೂನ್ ಎಣ್ಣೆ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಗಂಟುಗಳಿಲ್ಲದೆ ಚೆನ್ನಾಗಿ ಮಿಕ್ಸ್ ಮಾಡಿ.
- ನಂತರ, ಕುಕ್ಕರ್ ಮುಚ್ಚಿ 4 ಸೀಟಿ ಬರುವವರೆಗೆ ಬೇಯಿಸಿ. ಕುಕ್ಕರ್ನಿಂದ ಹಬೆ ಹೋದ ನಂತರ, ಮುಚ್ಚಳ ತೆಗೆದು ಚೆನ್ನಾಗಿ ಕಲಸಿ. ಗಂಜಿ ತುಂಬಾ ಗಟ್ಟಿಯಾಗಿದ್ದರೆ, ಬಿಸಿ ನೀರು ಸೇರಿಸಿ ಮಿಕ್ಸ್ ಮಾಡಿ.
- ಗಂಜಿಯನ್ನು ಮತ್ತೆ ಒಲೆಯ ಮೇಲಿಟ್ಟು 2 ನಿಮಿಷ ಕುದಿಸಿ. ಕೊನೆಯದಾಗಿ, 1 ಕಪ್ ಗಟ್ಟಿಯಾದ ತೆಂಗಿನ ಹಾಲು ಸೇರಿಸಿ ಮಿಕ್ಸ್ ಮಾಡಿದರೆ ರುಚಿಕರವಾದ ಕಪ್ಪು ಕವುನಿ ಅಕ್ಕಿ ಉದ್ದು ಗಂಜಿ ಸಿದ್ಧ.



Click it and Unblock the Notifications

