Latest Updates
-
ಆಷಾಢ ಅಮಾವಾಸ್ಯೆ: ಉಪವಾಸದ ದಿನ ಸುಸ್ತಾಗದಂತೆ ಇರಲು ಈ 7 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮಳೆಗಾಲದ ಮದುವೆ: ನಿಮ್ಮ ಸಂಭ್ರಮಕ್ಕೆ ಅಡ್ಡಿಯಾಗದಂತೆ ಪ್ಲಾನ್ ಮಾಡುವುದು ಹೇಗೆ? -
ಮುಂಗಾರು ಮಳೆ: ನಿಮ್ಮ ಬಾಲ್ಕನಿ ಮತ್ತು ಎಸಿ ಸುರಕ್ಷಿತವೇ? ಈ 10 ನಿಮಿಷದ ಕೆಲಸ ಜೀವ ಉಳಿಸಬಹುದು! -
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ! -
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್!
ಹೊಸ ಟ್ವಿಸ್ಟ್.. ತೂಕ ಇಳಿಸಿಕೊಳ್ಳಲು ಬೆಸ್ಟ್ ತಿಂಡಿ! ಈ ರೀತಿ ಕಪ್ಪು ಕಡಲೆ ಉತ್ತಪ್ಪಂ ಮಾಡಿ ನೋಡಿ
ಹೊಸ ಟ್ವಿಸ್ಟ್ ರೆಸಿಪಿ.. ಹೆಲ್ದಿ & ಟೇಸ್ಟಿ ಬ್ರೇಕ್‌ಫಾಸ್ಟ್.. ಹೈ ಪ್ರೋಟೀನ್ ಕಪ್ಪು ಕಡಲೆ ಉತ್ತಪ್ಪಂ ಮನೆಯಲ್ಲೇ ಮಾಡಿ ನೋಡಿ. ಸುಲಭ ವಿಧಾನ ಇಲ್ಲಿದೆ ಹೌದು, ಪ್ರತಿದಿನ ಬೆಳಗಿನ ಉಪಹಾರಕ್ಕೆ (Breakfast Recipes) ಏನು ಮಾಡಬೇಕು ಎಂಬ ಗೊಂದಲ ಅನೇಕರನ್ನು ಕಾಡುತ್ತೆ. ನಿತ್ಯದ ಇಡ್ಲಿ, ದೋಸೆ, ಉಪ್ಪಿಟ್ಟಿನಿಂದ ಬೇಸರಗೊಂಡಿದ್ದರೆ, ನಿಮ್ಮ ಅಡುಗೆಮನೆಗೆ ಹೊಸ ರುಚಿಯನ್ನು ಪರಿಚಯಿಸಲು ಇದು ಸಕಾಲ.
ಕಪ್ಪು ಕಡಲೆ (Black Chana) ಆರೋಗ್ಯಕ್ಕೆ ಅತ್ಯಂತ ಹಿತಕರವಾಗಿದೆ. ಇದರಿಂದ ತಯಾರಿಸುವ ತಿನಿಸುಗಳು ಅಷ್ಟೇ ರುಚಿಕರವಾಗಿರುತ್ತವೆ. ಸಾಮಾನ್ಯವಾಗಿ ಕಡಲೆಯಿಂದ ಪಲ್ಯ ಅಥವಾ ಗುಗ್ಗುರಿ ತಯಾರಿಸುತ್ತೇವೆ. ಆದರೆ, ಇಂದು ನಾವು ಸುಲಭವಾಗಿ, ಆರೋಗ್ಯಕರವಾಗಿ ಮಾಡಬಹುದಾದ ಕಪ್ಪು ಕಡಲೆ ಉತ್ತಪ್ಪಂ ರೆಸಿಪಿಯನ್ನು ಈ ಲೇಖನದಲ್ಲಿ ತಿಳಿಸಿದ್ದೇವೆ.
ಇದು ಮಕ್ಕಳಿಗೆ, ಕಚೇರಿಗೆ ತೆರಳುವವರಿಗೆ ಹಾಗೂ ತೂಕ ಇಳಿಸಿಕೊಳ್ಳಲು (Weight Loss) ಬಯಸುವವರಿಗೆ ಅತ್ಯುತ್ತಮವಾದ, ವಿಭಿನ್ನವಾದ ಉಪಹಾರವಾಗಿದೆ. ಕಪ್ಪು ಕಡಲೆ ಉತ್ತಪ್ಪಂ ತಯಾರಿಸಲು ಬೇಕಾಗುವ ಸಾಮಗ್ರಿಗಳು ಮತ್ತು ತಯಾರಿಸುವ ಸಿಂಪಲ್ ವಿಧಾನ ಇಲ್ಲಿದೆ.
ಈ ಉತ್ತಪ್ಪಂನ ಪ್ರಯೋಜನಗಳು
- ಕಪ್ಪು ಕಡಲೆ ಪ್ರೋಟೀನ್‌ನ ಉತ್ತಮ ಮೂಲವಾಗಿದ್ದು, ದಿನಪೂರ್ತಿ ನಿಮ್ಮನ್ನು ಚಟುವಟಿಕೆಯಿಂದ ಇರಿಸುತ್ತದೆ.
- ಇದರಲ್ಲಿ ನಾರಿನಂಶ ಹೆಚ್ಚಿರುವುದರಿಂದ ಮಧುಮೇಹಿಗಳಿಗೆ ಸೂಕ್ತವಾಗಿದೆ, ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಲು ಸಹಾಯ ಮಾಡುತ್ತದೆ.
- ಹೊಟ್ಟೆಯನ್ನು ಹೆಚ್ಚು ಕಾಲ ತುಂಬಿಸಿ, ಅನಗತ್ಯ ಹಸಿವನ್ನು ತಡೆಯುವ ಮೂಲಕ ತೂಕ ಇಳಿಕೆಗೂ ಸಹಕಾರಿ.
- ತಣ್ಣಗಾದ ಮೇಲೂ ಮೃದುವಾಗಿ ಉಳಿಯುವುದರಿಂದ ಮಕ್ಕಳ ಲಂಚ್ ಬಾಕ್ಸ್‌ಗೆ ಇದು ಹೇಳಿ ಮಾಡಿಸಿದ ತಿಂಡಿಯಾಗಿದೆ.
ಈ ಉತ್ತಪ್ಪಂ ತಯಾರಿಸಲು ಬೇಕಾಗುವ ಸಾಮಗ್ರಿಗಳು
• ಕಪ್ಪು ಕಡಲೆ - ಒಂದು ಕಪ್
• ಅಕ್ಕಿ - ಅರ್ಧ ಕಪ್
• ಮೊಸರು - ಎರಡು ಚಮಚ
• ಶುಂಠಿ - ಒಂದು ಇಂಚು
• ಹಸಿ ಮೆಣಸಿನಕಾಯಿ - ಎರಡು
• ಜೀರಿಗೆ - ಅರ್ಧ ಚಮಚ
• ಈರುಳ್ಳಿ - ಅರ್ಧ ಕಪ್
• ಟೊಮೆಟೊ - ಅರ್ಧ ಕಪ್
• ಕೊತ್ತಂಬರಿ ಸೊಪ್ಪು - ಸ್ವಲ್ಪ
• ಇನೋ ಅಥವಾ ಫ್ರೂಟ್ ಸಾಲ್ಟ್ - ಒಂದು ಚಮಚ
• ಎಣ್ಣೆ - ಬೇಯಿಸಲು ಅಗತ್ಯವಿರುವಷ್ಟು
• ಉಪ್ಪು - ರುಚಿಗೆ ತಕ್ಕಷ್ಟು
ಕಪ್ಪು ಕಡಲೆ ಉತ್ತಪ್ಪಂ ತಯಾರಿಸುವ ವಿಧಾನ
- ಮೊದಲಿಗೆ, ರಾತ್ರಿ ಪೂರ್ತಿ ನೆನೆಸಿಟ್ಟ ಕಪ್ಪು ಕಡಲೆ ಮತ್ತು ಅಕ್ಕಿಯನ್ನು ಚೆನ್ನಾಗಿ ತೊಳೆದುಕೊಳ್ಳಿ.
- ನಂತರ ಇವುಗಳನ್ನು ಮಿಕ್ಸಿ ಜಾರಿಗೆ ಹಾಕಿ, ಅದಕ್ಕೆ ಹಸಿ ಮೆಣಸಿನಕಾಯಿ, ಶುಂಠಿ ಮತ್ತು ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಉತ್ತಪ್ಪಂಗೆ ಸೂಕ್ತವಾದ, ಹೆಚ್ಚು ತೆಳುವಾಗದ ಹಿಟ್ಟನ್ನು ಸಿದ್ಧಪಡಿಸಿಕೊಳ್ಳಿ.
- ರುಬ್ಬಿದ ಹಿಟ್ಟನ್ನು ಒಂದು ಪಾತ್ರೆಗೆ ವರ್ಗಾಯಿಸಿ. ಅದಕ್ಕೆ ಮೊಸರು, ಜೀರಿಗೆ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿ.
- ಉತ್ತಪ್ಪಂ ಮಾಡುವ ಮೊದಲು ಇನೋ ಸೇರಿಸಿ ಲಘುವಾಗಿ ಮಿಶ್ರಣ ಮಾಡಿ. ಹೀಗೆ ಮಾಡುವುದರಿಂದ ಉತ್ತಪ್ಪಂ ಮೃದುವಾಗಿ ಮತ್ತು ಹಗುರವಾಗಿ ಮೂಡಿಬರುತ್ತದೆ.
- ಈಗ ಒಲೆಯ ಮೇಲೆ ದೋಸೆ ಹಂಚನ್ನು ಬಿಸಿ ಮಾಡಿ, ಸ್ವಲ್ಪ ಎಣ್ಣೆ ಸವರಿ. ಹಂಚು ಕಾದ ನಂತರ ಒಂದು ಸೌಟು ಹಿಟ್ಟನ್ನು ಹಾಕಿ ದಪ್ಪವಾಗಿ ಹರಡಿ.
- ಇದರ ಮೇಲೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಟೊಮೆಟೊ ಮತ್ತು ಕೊತ್ತಂಬರಿ ಸೊಪ್ಪನ್ನು ಉದುರಿಸಿ.
- ಉತ್ತಪ್ಪಂನ ಸುತ್ತಲೂ ಸ್ವಲ್ಪ ಎಣ್ಣೆ ಹಾಕಿ, ಮುಚ್ಚಳ ಮುಚ್ಚಿ ಮಧ್ಯಮ ಉರಿಯಲ್ಲಿ ಬೇಯಿಸಿ. ಒಂದು ಬದಿ ಬೆಂದ ನಂತರ ಅದನ್ನು ಮಗುಚಿ ಹಾಕಿ, ಇನ್ನೊಂದು ಬದಿಯನ್ನು ಹಗುರವಾಗಿ ಪ್ರೆಸ್ ಮಾಡಿ.
- ಈರುಳ್ಳಿ ಮತ್ತು ಟೊಮೆಟೊ ಕೆಂಪಗಾದಾಗ ಹಂಚಿನಿಂದ ತೆಗೆಯಿರಿ. ಇಷ್ಟು ಮಾಡಿದರೆ ಸಾಕು, ಬಿಸಿಬಿಸಿಯಾದ ರುಚಿಕರ ಉತ್ತಪ್ಪಂ ಸವಿಯಲು ಸಿದ್ಧ.



Click it and Unblock the Notifications
