Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಸಂಜೆಯ ಸ್ನ್ಯಾಕ್ಸ್‌ಗೆ ತರಕಾರಿ ಮಸಾಲ ಕಟ್ಲೆಟ್ ರೆಸಿಪಿ
ನಿತ್ಯ ತರಕಾರಿಗಳನ್ನು ಸಾಂಬಾರ್, ಪಲ್ಯದ ಜೊತೆ ಸೇವಿಸಿ ಬೋರ್ ಆಗಿದ್ಯಾ, ವಿಭಿನ್ನವಾಗಿ ಬಾಯಿಗೆ ರುಚಿ ಎನಿಸುವ ಕಟ್ಲೆಟ್ ಮಾಡಿ ಸೇವಿಸಿದರೆ ನಿತ್ಯ ಸೇವಿಸುವ ತರಕಾರಿಯ ಪ್ರಮಾಣಕ್ಕಿಂತ ಸ್ವಲ್ಪ ಹೆಚ್ಚೇ ಸೇವಿಸುವುದು ಖಂಡಿತಾ.

ಹಲವು ತರಕಾರಿಗಳಿಂದ ತಯಾರಿಸಬಹುದಾದ "ತರಕಾರಿ ಮಸಾಲ ಕಟ್ಲೆಟ್ ರೆಸಿಪಿ" ವೆಜ್ ಮಸಾಲ ಕಟ್ಲೆಟ್ ರೆಸಿಪಿ ಮಾಡುವ ಹಂತ ಹಂತದ ವಿಧಾನವನ್ನು ನಾವಿಂದು ನಿಮಗೆ ತಿಳಿಸಿಕೊಡಲಿದ್ದೇವೆ. ತರಕಾರಿಯನ್ನೇ ತಿನ್ನದ ಮಕ್ಕಳಿಗೆ, ನಿತ್ಯ ಅದೇ ತರಕಾರಿ ತಿಂದು ಬೇಜಾರ್ ಆಗಿರುವ ಹಿರಿಯರಿಗೆ, ಸಂಜೆಗೆ ವಿಭಿನ್ನವಾಗಿ ಆರೋಗ್ಯಕರ ಸ್ನ್ಯಾಕ್ಸ್ ಸವಿಯಲು ಈ ತರಕಾರಿ ಮಸಾಲ ಕಟ್ಲೆಟ್ ರೆಸಿಪಿ ಅತ್ಯುತ್ತಮ ಆಯ್ಕೆ.
ತರಕಾರಿ ಮಸಾಲ ಕಟ್ಲೆಟ್ ರೆಸಿಪಿ ಮಾಡುವ ವಿಧಾನ ಮುಂದೆ ತಿಳಿಯಿರಿ, ಇಂದೇ ಮಾಡಿ ನೋಡಿ:
Recipe By: Meghashree Devaraju
Recipe Type: Snacks
Serves: 4
-
ಬೇಕಾಗುವ ಪದಾರ್ಥಗಳು
ಕತ್ತರಿಸಿದ ಕ್ಯಾರೆಟ್ - ½ ಕಪ್
ಕತ್ತರಿಸಿದ ಫ್ರೆಂಚ್ ಬೀನ್ಸ್ - ¼ ಕಪ್
ಕತ್ತರಿಸಿದ ಆಲೂಗಡ್ಡೆ - 1 ಕಪ್
ತಾಜಾ ಹಸಿರು ಬಟಾಣಿ - 1 ಕಪ್
ಶುಂಠಿ - ಅರ್ಧ ಚಮಚ
ಹಸಿರು ಮೆಣಸಿನಕಾಯಿ - 1 ಚಮಚ
ಬೆಳ್ಳುಳ್ಳಿ - 3 ತುಂಡು/ ¼ ಚಮಚ
ಕೆಂಪು ಮೆಣಸಿನ ಪುಡಿ - ¼ ಚಮಚ
ಜೀರಿಗೆ ಪುಡಿ - ½ ಟೀ
ಕೊತ್ತಂಬರಿ ಪುಡಿ - ¼ ಚಮಚ
ಗರಂ ಮಸಾಲ ಪುಡಿ - ¼ ಚಮಚ
ಬ್ರೆಡ್ ತುಂಡುಗಳ ಪುಡಿ/ ಬ್ರೆಡ್ ಕ್ರಂಬ್ಸ್ - 1 ಕಪ್
ಕತ್ತರಿಸಿದ ಕೊತ್ತಂಬರಿ ಸೊಪ್ಪು - 1 ಚಮಚ
ಮೈದಾ ಹಿಟ್ಟು - 1 ಕಪ್
ಉಪ್ಪು ರುಚಿಗೆ
ಎಣ್ಣೆ - ¼ ಕಪ್
ನೀರು - ಅರ್ಧ ಕಪ್
-
ತಯಾರಿಸುವ ವಿಧಾನ
* ಕ್ಯಾರೆಟ್, ಆಲೂಗಡ್ಡೆ, ಫ್ರೆಂಚ್ ಬೀನ್ಸ್, ಬಟಾಣಿ ತರಕಾರಿಗಳನ್ನು ತೊಳೆದು ಸಣ್ಣದಾಗಿ ಕತ್ತರಿಸಿ ಪ್ರೆಶರ್ ಕುಕ್ಕರ್‌ನಲ್ಲಿ ಕೋಮಲವಾಗುವವರೆಗೆ ಕುದಿಸಿ.
* ಬೇಯಿಸಿದ ತರಕಾರಿಗಳು ತಣ್ಣಗಾದ ನಂತರ ಅಗಲವಾದ ಬಟ್ಟಲಿನಲ್ಲಿ ವರ್ಗಾಯಿಸಿ ಬ್ಲೆಂಡರ್ನಲ್ಲಿ ಚೆನ್ನಾಗಿ ಮ್ಯಾಶ್ ಮಾಡಿ/ ಮಸೆಯಿರಿ.
* ಸಂಪೂರ್ಣ ಪೇಸ್ಟ್ ತಯಾರಿಸಬೇಡಿ ಆದರೆ ಸಣ್ಣ ಪ್ರಮಾಣದ ತರಕಾರಿಗಳು ಸ್ವಲ್ಪ ಚಂಕಿಯರ್ ಆಗಿ ಇರಿಸಿ.
* ಕತ್ತರಿಸಿದ ಶುಂಠಿ, ಹಸಿರು ಮೆಣಸಿನಕಾಯಿ ಮತ್ತು ಬೆಳ್ಳುಳ್ಳಿಯನ್ನು ಅರ್ಧ ಪೇಸ್ಟ್ಗೆ ಮಾಡಿ ತರಕಾರಿ ಮಿಶ್ರಣಕ್ಕೆ ಹಾಕಿ.
* ಕೆಂಪು ಮೆಣಸಿನ ಪುಡಿ, ಜೀರಿಗೆ ಪುಡಿ, ಗರಂ ಮಸಾಲ ಪುಡಿ, ಕೊತ್ತಂಬರಿ ಪುಡಿ, ಕತ್ತರಿಸಿದ ಕೊತ್ತಂಬರಿ ಸೊಪ್ಪು, ಬ್ರೆಡ್ ಕ್ರಂಬ್ಸ್ ಮತ್ತು ಉಪ್ಪನ್ನು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ.
* ಮತ್ತೊಂದು ಸಣ್ಣ ಬಟ್ಟಲಿನಲ್ಲಿ ಮೈದಾ ಹಿಟ್ಟು ಮತ್ತು ನೀರನ್ನು ಯಾವುದೇ ಉಂಡೆಗಳಿಲ್ಲದೆ ನಯವಾದ ಪೇಸ್ಟ್ ಮಾಡಿಕೊಳ್ಳಿ.
* ಈಗ ಕಟ್ಲೆಟ್ ಮಿಶ್ರಣವನ್ನು ತೆಗೆದುಕೊಂಡು ಚಪ್ಪಟೆ ಮಾಡುವ ಮೂಲಕ ಸಣ್ಣ ಗಾತ್ರದ ಮಧ್ಯಮ ಗಾತ್ರದ ದುಂಡಗಿನ ಕಟ್ಲೆಟ್ ಅಚ್ಚನ್ನು ಮಾಡಿಕೊಳ್ಳಿ.
* ಕಟ್ಲೆಟ್ ತೆಗೆದುಕೊಂಡು ಮೈದಾ ಪೇಸ್ಟ್ ಅನ್ನು ನಿಧಾನವಾಗಿ ಅದ್ದಿ ನಂತರ ಕಟ್ಲೆಟ್ ಅನ್ನು ಬ್ರೆಡ್ ತುಂಡುಗಳ ಪುಡಿಯಲ್ಲಿ ಹುರುಳಿಸಿ, ಹೆಚ್ಚುವರಿ ಬ್ರೆಡ್ ಕ್ರಂಬ್ಸ್ ಅನ್ನು ತೆಗೆಯಿರಿ.
* ಈಗ ಬಿಸಿಯಾದ ತವಾ ಮೇಲೆ ಚೆನ್ನಾಗಿ ಎಣ್ಣೆ ಹಾಕಿ.
* ತಿಳಿ ಗೋಲ್ಡನ್ ಬಣ್ಣಕ್ಕೆ ಬರುವ ವರೆಗೂ ಎರಡೂ ಬದಿ ಫ್ಲಿಪ್ ಮಾಡಿ ಫ್ರೈ ಮಾಡಿ. ಅಗತ್ಯವಿದ್ದರೆ ಹೆಚ್ಚಿನ ಎಣ್ಣೆಯನ್ನು ಸೇರಿಸಿ ಗರಿಗರಿಯಾಗುವವರೆಗೆ ಹುರಿಯಿರಿ.
* ಈಗ ರುಚಿಕರ ತರಕಾರಿ ಮಸಾಲ ಕಟ್ಲೆಟ್ ಪುದೀನ ಚಟ್ನಿ / ಕೊತ್ತಂಬರಿ ಚಟ್ನಿ/ ಹುಣಸೆ ಚಟ್ನಿ/ ಟೊಮೆಟೊ ಕೆಚಪ್ ನೊಂದಿಗೆ ಸವಿಯಲು ಸಿದ್ಧ.
- ತರಕಾರಿ ಮಸಾಲ ಕಟ್ಲೆಟ್ಗೆ ನಿಮಗ ಇಷ್ಟವಾದ ಮಸಾಲೆಗಳ ಸಂಯೋಜನೆಯನ್ನು ನೀವು ಬದಲಾಯಿಸಬಹುದು. ಉದಾ. ನೀವು ಕರಿಮೆಣಸು ಪುಡಿಯನ್ನು ಸೇರಿಸಬಹುದು. ಹಸಿರು ಮೆಣಸಿನಕಾಯಿಗಳ ಸಂಖ್ಯೆಯನ್ನು ಹೆಚ್ಚಿಸುವ ಮೂಲಕ ನೀವು ಅವುಗಳನ್ನು ಮಸಾಲೆಯುಕ್ತಗೊಳಿಸಬಹುದು. ಈ ಕಟ್ಲೆಟ್ ಅನ್ನು ಬನ್‌ನ ನಡುವೆ ಇಟ್ಟುಕೊಂಡು ಬರ್ಗರ್ ರೀತಿ ಸಹ ಸವಿಯಲು ರುಚಿಕವಾಗಿರುತ್ತದೆ.



Click it and Unblock the Notifications
