ಮಿಶ್ರ ತರಕಾರಿಗಳ ಬಾತ್/ ವೆಜಿಟೇಬಲ್ ಬಾತ್

By: Divya
Subscribe to Boldsky

ಅಕ್ಕಿಯೊಂದಿಗೆ ವಿವಿಧ ತರಕಾರಿಗಳನ್ನು ಸೇರಿಸಿ ತಯಾರಿಸುವ ಬಾತ್‍ಗಳು ದೇಹಕ್ಕೆ ಹೆಚ್ಚು ಪೋಷಕಾಂಶವನ್ನು ಒದಗಿಸುತ್ತವೆ. ಬೇಯಿಸಿದ ಅನ್ನಕ್ಕೆ ಮಸಾಲೆ ಹಾಗೂ ತರಕಾರಿಗಳ ಮಿಶ್ರಣದಿಂದ ಸೇವಿಸಿದರೆ ರುಚಿಯು ಹೆಚ್ಚುವುದು. ಕರ್ನಾಟಕ ಶೈಲಿಯ ತರಕಾರಿ ಬಾತ್‍ಗಳಲ್ಲಿ ಈರುಳ್ಳಿ ಸೇರಿಸುವುದರಿಂದ ಹಬ್ಬ ಹರಿದಿನಗಳಲ್ಲಿ, ಪೂಜೆ, ವ್ರತ ಮತ್ತು ಉತ್ಸವಗಳ ಸಮಯದಲ್ಲಿ ಪ್ರಸಾದ ರೂಪದಲ್ಲಿ ತಯಾರಿಸುವುದಿಲ್ಲ. ಬದಲಿಗೆ ನಿತ್ಯದ ಅಡುಗೆ ಪದಾರ್ಥಗಳ ಪಟ್ಟಿಯಲ್ಲಿ ಸೆರಿಕೊಂಡಿರುತ್ತದೆ.

ನಿತ್ಯದ ಒಂದು ಹೊತ್ತಿನ ತಿಂಡಿ ಮತ್ತು ಎರಡು ಹೊತ್ತಿನ ಊಟಕ್ಕೆ ತರಕಾರಿ ಬಾತ್‍ಅನ್ನು ಸವಿಯಬಹುದು. ಇದು ಹೆಚ್ಚು ಆರಾಮದಾಯಕ ಅನುಭವವನ್ನು ನೀಡುತ್ತದೆ. ನಿತ್ಯದ ಪಾಕವಿಧಾನದಿಂದ ಬೇಸತ್ತು, ಹೊಸ ಪಾಕವಿಧಾನ ಕಲಿಯಬೇಕೆನ್ನುವ ಹವಣಿಕೆಯಲ್ಲಿದ್ದರೆ ಇಲ್ಲಿದೆ ನೋಡಿ ಮಿಶ್ರ ತರಕಾರಿಗಳ ಬಾತ್. ನಿಮ್ಮ ಅನುಕೂಲಕ್ಕೆ ತಕ್ಕಂತೆ ವೀಡಿಯೋ ಹಾಗೂ ಚಿತ್ರ ವಿವರಣೆಯ ಮೂಲಕ ಹಂತ ಹಂತವಾಗಿ ವಿವರಿಸಲಾಗಿದೆ.

vegetable bhath recipe
ತರಕಾರಿ ರೈಸ್ ಬಾತ್ ರೆಸಿಪಿ | ಕರ್ನಾಟಕ ಶೈಲಿಯ ರೆಸಿಪಿ| ವೆಜಿಟೇಬಲ್ ಬಾತ್
ತರಕಾರಿ ರೈಸ್ ಬಾತ್ ರೆಸಿಪಿ | ಕರ್ನಾಟಕ ಶೈಲಿಯ ರೆಸಿಪಿ| ವೆಜಿಟೇಬಲ್ ಬಾತ್
Prep Time
15 Mins
Cook Time
15M
Total Time
45 Mins

Recipe By: ಕಾವ್ಯಶ್ರೀ ಎಸ್

Recipe Type: ಮುಖ್ಯ ಅಡುಗೆ ವಿಧಾನ/ ಅನ್ನದ ಬಾತ್

Serves: 2 ಮಂದಿ

Ingredients
 • ಅಕ್ಕಿ- 3/4 ಕಪ್

  ನೀರು - 3 ಮತ್ತು 1/4 ಕಪ್

  ಎಣ್ಣೆ - 3 ಚಮಚ

  ಇಂಗು - ಒಂದು ಚಿಟಕಿ

  ಸಾಸಿವೆ - 1/2 ಚಮಚ

  ಉದ್ದಿನ ಬೇಳೆ - 1 ಚಮಚ

  ಕಡ್ಲೆ ಬೇಳೆ - 1/2 ಚಮಚ

  ಅರಿಶಿನ - 1/2 ಚಮಚ

  ಮಿಶ್ರ ತರಕಾರಿ ( ಹೆಚ್ಚಿದ ಕ್ಯಾರೆಟ್, ಕ್ಯಾಪ್ಸಿಕಮ್, ಎಲೆಕೋಸು, ಆಲುಗಡ್ಡೆ ಇತ್ಯಾದಿ)- ಸಾಮಾನ್ಯ ಗಾತ್ರದ ಒಂದು ಬೌಲ್

  ಉಪ್ಪು - ರುಚಿಗೆ

  ಬಾತ್ ಪೌಡರ್ - 2 ಚಮಚ

  ಹುಣಸೆ ಹಣ್ಣಿನ ರಸ/ಪೇಸ್ಟ್ - 1 ಚಮಚ

  ಬೆಲ್ಲ - 1/2 ಚಮಚ

  ಹೆಚ್ಚಿದ ಕೊತ್ತಂಬರಿ ಸೊಪ್ಪು - 1/4 ಕಪ್

Red Rice Kanda Poha
How to Prepare
 • 1. ಕುಕ್ಕರ್‌ನಲ್ಲಿ ಅಕ್ಕಿಯನ್ನು ಹಾಕಿ, 3 ಕಪ್ ನೀರನ್ನು ಸೇರಿಸಿ ಬೇಯಿಸಲು ಇಡಿ.

  2. ಮೂರು ಸೀಟಿಯನ್ನು ಕೂಗಿಸಿ, ಉರಿಯಿಂದ ಕೆಳಗಿಳಿಸಿ.

  3. ಒಂದು ದಪ್ಪ ತಳದ ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ ಕಾಯಲು ಇಡಿ.

  4. ಅದಕ್ಕೆ ಸಾಸಿವೆ ಹಾಗೂ ಇಂಗನ್ನು ಸೇರಿಸಿ.

  5. ಸಾಸಿವೆ ಸಿಡಿಯಲು ಆರಂಭಿಸಿದ ಮೇಲೆ ಉದ್ದಿನ ಬೇಳೆ, ಕಡ್ಲೆ ಬೇಳೆ ಸೇರಿಸಿ.

  6. ಇವೆಲ್ಲವೂ ತಿಳಿ ಹೊಂಬಣ್ಣಕ್ಕೆ ತಿರುಗುವ ತನಕ ಕೈಯಾಡಿಸಿ.

  7. ನಂತರ ಹೆಚ್ಚಿಕೊಂಡ ತರಕಾರಿಗಳನ್ನು ಸೇರಿಸಿ.

  8. ಒಂದು ಕಾಲು ಕಪ್ ನೀರನ್ನು ಸೇರಿಸಿ.

  9. ಉಪ್ಪನ್ನು ಸೇರಿಸಿ, ಚೆನ್ನಾಗಿ ಕಲುಕಿ.

  10. ಇವು ಚೆನ್ನಾಗಿ ಬೇಯಲು 5 ನಿಮಿಷ ಬಿಡಿ.

  11. ಈಗ ಬಾತ್ ಪೌಡರ್, ಅರಿಶಿನ, ಹುಣಸೆ ರಸ ಮತ್ತು ಬೆಲ್ಲವನ್ನು ಸೇರಿಸಿ.

  12. ಚೆನ್ನಾಗಿ ಬೆರೆಸಿ.

  13. ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪನ್ನು ಉದುರಿಸಿ ಚೆನ್ನಾಗಿ ಕಲುಕಿ.

  14. ಬೇಯಿಸಿಕೊಂಡ ಅನ್ನವನ್ನು ತರಕಾರಿಯ ಮಿಶ್ರಣಕ್ಕೆ ಸೇರಿಸಿ, ಸವಿಯಲು ನೀಡಿ.

Instructions
 • 1. ಅನ್ನ ಮಾಡುವಾಗ ಅಕ್ಕಿ ಮತ್ತು ನೀರಿನ ಪ್ರಮಾಣ 1:4ರ ಅನುಪಾತದಲ್ಲಿರಬೇಕು.
 • 2. ನಿಮಗೆ ಇಷ್ಟವಾದ ತರಕಾರಿಯನ್ನು ಬಾತ್‍ಗೆ ಸೇರಿಸಿಕೊಳ್ಳಬಹುದು.
 • 3. ಬೇಕಿದ್ದರೆ ಸ್ವಲ್ಪ ತೆಂಗಿನ ತುರಿಯನ್ನು ಸೇರಿಸಬಹುದು. ಅದು ವಿಶಿಷ್ಟ ರುಚಿಯನ್ನು ನೀಡುವುದು.
Nutritional Information
 • ಸರ್ವಿಂಗ್ ಸೈಜ್ - 1 ಕಪ್
 • ಕ್ಯಾಲೋರಿಸ್ - 400 ಕ್ಯಾಲ್
 • ಫ್ಯಾಟ್ - 5 ಗ್ರಾಂ
 • ಪ್ರೋಟೀನ್ - 8 ಗ್ರಾಂ
 • ಕಾರ್ಬೋಹೈಡ್ರೇಟ್ - 33 ಗ್ರಾಂ
 • ಸಕ್ಕರೆ - 7 ಗ್ರಾಂ
 • ಫೈಬರ್ - 100 ಗ್ರಾಂ

ತಯಾರಿಸುವ ವಿಧಾನ:

1. ಕುಕ್ಕರ್‌ನಲ್ಲಿ ಅಕ್ಕಿಯನ್ನು ಹಾಕಿ, 3 ಕಪ್ ನೀರನ್ನು ಸೇರಿಸಿ ಬೇಯಿಸಲು ಇಡಿ.

vegetable bhath recipe
vegetable bhath recipe

2. ಮೂರು ಸೀಟಿಯನ್ನು ಕೂಗಿಸಿ, ಉರಿಯಿಂದ ಕೆಳಗಿಳಿಸಿ.

vegetable bhath recipe
vegetable bhath recipe

3. ಒಂದು ದಪ್ಪ ತಳದ ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ ಕಾಯಲು ಇಡಿ.

vegetable bhath recipe

4. ಅದಕ್ಕೆ ಸಾಸಿವೆ ಹಾಗೂ ಇಂಗನ್ನು ಸೇರಿಸಿ.

vegetable bhath recipe
vegetable bhath recipe

5. ಸಾಸಿವೆ ಸಿಡಿಯಲು ಆರಂಭಿಸಿದ ಮೇಲೆ ಉದ್ದಿನ ಬೇಳೆ, ಕಡ್ಲೆ ಬೇಳೆ ಸೇರಿಸಿ.

vegetable bhath recipe
vegetable bhath recipe
vegetable bhath recipe
vegetable bhath recipe

6. ಇವೆಲ್ಲವೂ ತಿಳಿ ಹೊಂಬಣ್ಣಕ್ಕೆ ತಿರುಗುವ ತನಕ ಕೈಯಾಡಿಸಿ.

vegetable bhath recipe

7. ನಂತರ ಹೆಚ್ಚಿಕೊಂಡ ತರಕಾರಿಗಳನ್ನು ಸೇರಿಸಿ.

vegetable bhath recipe

8. ಒಂದು ಕಾಲು ಕಪ್ ನೀರನ್ನು ಸೇರಿಸಿ.

vegetable bhath recipe

9. ಉಪ್ಪನ್ನು ಸೇರಿಸಿ, ಚೆನ್ನಾಗಿ ಕಲುಕಿ.

vegetable bhath recipe
vegetable bhath recipe

10. ಇವು ಚೆನ್ನಾಗಿ ಬೇಯಲು 5 ನಿಮಿಷ ಬಿಡಿ.

vegetable bhath recipe

11. ಈಗ ಬಾತ್ ಪೌಡರ್, ಅರಿಶಿನ, ಹುಣಸೆ ರಸ ಮತ್ತು ಬೆಲ್ಲವನ್ನು ಸೇರಿಸಿ.

vegetable bhath recipe
vegetable bhath recipe
vegetable bhath recipe

12. ಚೆನ್ನಾಗಿ ಬೆರೆಸಿ.

vegetable bhath recipe

13. ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪನ್ನು ಉದುರಿಸಿ ಚೆನ್ನಾಗಿ ಕಲುಕಿ.

vegetable bhath recipe

14. ಬೇಯಿಸಿಕೊಂಡ ಅನ್ನವನ್ನು ತರಕಾರಿಯ ಮಿಶ್ರಣಕ್ಕೆ ಸೇರಿಸಿ, ಸವಿಯಲು ನೀಡಿ.

vegetable bhath recipe
[ 4.5 of 5 - 72 Users]
Please Wait while comments are loading...
Subscribe Newsletter