Latest Updates
-
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ!
ಮಕ್ಕಳಿಗೆ ಇಷ್ಟವಾಗುವ ಆರೋಗ್ಯಕರ ರೆಸಿಪಿ: ವೆಜ್ ಚೀಸ್ ಸ್ಯಾಂಡ್‌ವಿಚ್
ಮನೆಯಲ್ಲಿ ಮಕ್ಕಳಿಗೆ ದಿನಾ ದೋಸೆ, ಇಡ್ಲಿ ಅಂತ ಮಾಡಿಕೊಟ್ಟರೆ ಅವರು ಇದೇ ಮಾಡ್ತೀಯಾ, ಬೇರೆ ಏನಾದರೂ ಮಾಡಮ್ಮಾ ಎಂದು ಹೇಳಬಹುದು. ಅಲ್ಲದೆ ಅವರನ್ನು ಅದು ತಿನ್ನಿಸುವಷ್ಟರಲ್ಲಿ ಸಾಕಾಗುವುದು. ಒಮ್ಮೊಮ್ಮೆ ಅವರ ಸ್ಕೂಲ್ ವ್ಯಾನ್ ಬರುವ ಹೊತ್ತಾಯ್ತು ಎಂದು ತಿಂಡಿಯನ್ನು ಅವರ ಬಾಯಿಗೆ ನಾವೇ ತುರುಕುತ್ತೇವೆ. ಅದರ ಬದಲಿಗೆ ಕೆಲವೊಮ್ಮೆ ಸ್ಯಾಂಚ್‌ವಿಚ್ ಮಾಡಿಕೊಡಬಹುದು. ಇದು ಆರೋಗ್ಯಕ್ಕೂ ಒಳ್ಳೆಯದು, ಅವರು ಕೂಡ ಯಾವುದೇ ತಕರಾರು ಇಲ್ಲದೆ ತಿನ್ನುತ್ತಾರೆ.

ನಾವಿಲ್ಲಿ ವೆಜ್ ಚೀಸ್ ಸ್ಯಾಂಡ್ ವಿಚ್ ರೆಸಿಪಿ ನೀಡಿದ್ದೇವೆ, ನೂರಾರು ಬಗೆಯ ಸ್ಯಾಂಡ್‌ವಿಚ್ ಮಾಡಬಹುದಾಗಿದ್ದು ಈ ಸ್ಯಾಂಡ್‌ವಿಚ್ ಒಮ್ಮೆ ಟ್ರೈ ಮಾಡಿ ನೋಡಿ:
Recipe By: Reena TK
Recipe Type: Veg
Serves: Breakfast
-
ಬೇಕಾಗುವ ಸಾಮಗ್ರಿ
1/4 ಕಪ್ ತುರಿದ ಕ್ಯಾರೆಟ್
1/4 ಕಪ್ ಕ್ಯಾಪ್ಸಿಕಂ
1/4 ಕಪ್ ಸ್ವೀಟ್ ಕಾರ್ನ್(ಬೇಯಿಸಿದ್ದು)
1/4 ಕಪ್ ಈರುಳ್ಳಿ
ಟೊಮೆಟೊ
ಇತರ ಸಾಮಗ್ರಿ
1 ಬೆಳ್ಳುಳ್ಳಿ ಚಿಕ್ಕದಾಗಿ (ಕತ್ತರಿಸಿದ್ದು)
1 ಹಸಿ ಮೆಣಸಿನಕಾಯಿ
1/4 ಚಮಚ ಕಾಳು ಮೆಣಸಿನ ಪುಡಿ
1/2 ಚಮಚ ಹರ್ಬ್ಸ್ (ಒರೆಗ್ನೋ, ಪಾರ್ಸ್ಲೆ)
ಒಂದು ಹಿಡಿಯಷ್ಟು ಕೊತ್ತಂಬರಿ ಸೊಪ್ಪು
6 ಬ್ರೆಡ್ ಪೀಸ್
2 ಚಮಚ ಬೆಣ್ಣ
1 ಕಪ್ ಚೀಸ್ (ತುರಿಯಿರಿ)
-
ಮಾಡುವ ವಿಧಾನ:
*ಒಂದು ಬೌಲ್ಲಗೆ ತುರಿದ ಕ್ಯಾರೆಟ್, ಕ್ಯಾಪ್ಸಿಕಂ, ಸ್ವೀಟ್ ಕಾರ್ನ್ ಮತ್ತು ಈರುಳ್ಳಿ, ಹರ್ಬ್ಸ್, ಹಸಿ ಮೆಣಸಿನಕಾಯಿ, ಬೆಳ್ಳುಳ್ಳಿ, ಕಾಳು ಮೆಣಸಿನ ಪುಡಿ, ಕೊತ್ತಂಬರಿ ಸೊಪ್ಪು, ತುರಿದ ಚೀಸ್ ಹಾಕಿ ಮಿಕ್ಸ್ ಮಾಡಿ.
* ಬೆಣ್ಣೆಯನ್ನು ಬ್ರೆಡ್ ಮೇಲೆ ಹರಡಿ.
* ಈಗ ಬೆಣ್ಣೆ ಹರಡಿದ ಬ್ರೆಡ್ ಮೇಲೆ ಮಿಕ್ಸ್ ಮಾಡಿಟ್ಟ ವೆಜ್-ಚೀಸ್ ಮಿಶ್ರಣ ಸ್ವಲ್ಪ ತೆಗೆದು ಹರಡಿ.
ಮತ್ತೊಂದು ಬ್ರೆಡ್‌ನಿಂದ ಮುಚ್ಚಿ.
* ಈಗ ಸ್ಯಾಂಡ್‌ವಿಚ್ ಮೇಕರ್ ಅಥವಾ ಟೋಸ್ಟರ್ ಬಿಸಿ ಮಾಡಿ ಸ್ಯಾಂಡ್ ವಿಚ್ ಮಾಡಿ.
* ನೀವು ಇದನ್ನು ತವಾದಲ್ಲಿಯೂ ಮಾಡಬಹುದು. ತವಾ ಬಿಸಿ ಮಾಡಿ ಅದಕ್ಕೆ ತುಪ್ಪ ಸವರಿ ಎರಡೂ ಬದಿ ಬಿಸಿ, ನಂತರ ಬ್ರೆಡ್‌ನ ಎರಡೂ ಬದಿ ಬಿಸಿ ಮಾಡಿದರೆ ವೆಜ್ ಚೀಸ್ ಟೋಸ್ಟ್ ರೆಡಿ.
ಇದನ್ನು ಬಿಸಿ-ಬಿಸಿ ಇರುವಾಗಲೇ ಟೊಮೆಟೊ ಸಾಸ್ ಜೊತೆ ಸರ್ವ್ ಮಾಡಿ.
- ನೀವು ಇದಕ್ಕೆ ಮೊಟ್ಟೆಯನ್ನು ಬೇಯಸಿ ಪುಡಿ-ಪುಡಿ ಮಾಡಿ ಸೇರಿಸಬಹುದು.
- ಸರ್ವ್ - 1
- ಕ್ಯಾಲೋರಿ - 315ಕ್ಯಾ
- ಕೊಬ್ಬು - 7ಗ್ರಾಂ
- ಪ್ರೊಟೀನ್ - 15ಗ್ರಾಂ
- ಕಾರ್ಬ್ಸ್ - 34ಗ್ರಾಂ



Click it and Unblock the Notifications