Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಕ್ರಿಸ್ಮಸ್ ಸ್ಪೆಷಲ್: ವೆನಿಲ್ಲಾ ಕೇಕ್ ರೆಸಿಪಿ
ಮಕ್ಕಳಿಗೆ ಅಮ್ಮಾ ಸ್ಪೆಷಲ್ ತಿಂಡಿಗಳನ್ನು ಮಾಡಿ ಕೊಟ್ಟರೆ ಅವರ ಆನಂದಕ್ಕೆ ಪಾರವೇ ಇರಲ್ಲ, ಅದರಲ್ಲೂ ಬೇಕರಿಯಲ್ಲಿ ಸಿಗುವಂಥ ಆಹಾರ ವಸ್ತುಗಳೆಂದರೆ ತುಂಬಾನೇ ಇಷ್ಟಪಡುತ್ತಾರೆ.

ಇಲ್ಲಿ ನಾವು ವೆನಿಲ್ಲಾ ಕೇಕ್ ಮಾಡುವ ರೆಸಿಪಿ ನೀಡಲಾಗಿದೆ, ಇದು ತುಂಬಾ ಸರಳವಾದ ರೆಸಿಪಿಯಾಗಿದ್ದು ಇದನ್ನು ಮಕ್ಕಳು ಮಾತ್ರವಲ್ಲ ದೊಡ್ಡವರು ಕೂಡ ಇಷ್ಟಪಟ್ಟು ಸವಿಯುತ್ತಾರೆ.
ನಾವಿಲ್ಲಿ ವೆನಿಲ್ಲಾ ಕೇಕ್ ಮಾಡುವುದು ಹೇಗೆ ಎಂದು ನೋಡೋಣ:
Recipe By: Reena TK
Recipe Type: Cake
Serves: 10
-
ಬೇಕಾಗುವ ಸಾಮಗ್ರಿ
ಮೈದಾ ಒಂದೂವರೆ ಕಪ್
ಹಾಲು 1/4 ಕಪ್
ಸಕ್ಕರೆ 1 ಕಪ್
ಹಾಲು ಪುಡಿ 3/4 ಕಪ್
ಚಿಟಿಕೆಯಷ್ಟು ಉಪ್ಪು
ಬೆಣ್ಣೆ 3/4 ಕಪ್
ವೆನಿಲ್ಲಾ ಚಿಪ್ಸ್ 2 ಚಮಚ
ವೆನಿಲ್ಲಾ ಎಸೆನ್ಸ್ 2 ಚಮಚ
ಬೇಕಿಂಗ್ ಸೋಡಾ 1 ಚಮಚ
ಆ್ಯಪಲ್ ಸೈಡರ್ ವಿನೆಗರ್
ಬೇಕಿಂಗ್ ಪುಡಿ 1 ಚಮಚ
-
ಮಾಡುವುದು ಹೇಗೆ?
* ಒಂದು ಬೌಲ್‌ನಲ್ಲಿ ಸಕ್ಕರೆ, ಹಾಲಿನ ಪುಡಿ, ಹಾಲು, ಬೆಣ್ಣೆ ಹಾಕಿ.
* ಚೆನ್ನಾಗಿ ಮಿಶ್ರ ಮಾಡಿ (ಗಂಟು-ಗಂಟಾಗಿ ಇರಬಾರದು)
*ಈಗ ಮೈದಾವನ್ನು ಜಾಲರಿಯಲ್ಲಿ ಹಾಕಿ, ಬೇಕಿಂಗ್ ಪೌಡರ್, ಚಿಟಿಕೆಯಷ್ಟು ಉಪ್ಪಿನ ಪುಡಿ ಹಾಕಿ, ಬೌಲ್‌ಗೆ ಜಾಲಿಸಿ.
* ಈಗ ಚೆನ್ನಾಗಿ ಮಿಶ್ರ ಮಾಡಿ. ಮಿಶ್ರಣ ತುಂಬಾ ಗಟ್ಟಿಯಾಗಬಾರದು, ನೀರು-ನೀರಾಗಿಯೂ ಇರಬಹುದು (ಇಡ್ಲಿ ಹಿಟ್ಟಿನಷ್ಟು ಗಟ್ಟಿ ಇರಬೇಕು).
* ಈಗ ವೆನಿಲ್ಲಾ ಎಸೆನ್ಸ್ ಸೇರಿಸಿ.
* ಈಗ ಆ್ಯಪಲ್ ಸೈಡರ್ ವಿನೆಗರ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
* ಈಗ ಬೇಕಿಂಗ್ ಟ್ರೇ ತೆಗೆದುಕೊಂಡು ಅದಕ್ಕೆ ಬೆಣ್ಣೆ ಸವರಿ.
* ಅದರಲ್ಲಿ ಹಿಟ್ಟನ್ನು ಹಾಕಿ.
* ಈಗ ಓವನ್ ಅನ್ನು 160 ಡಿಗ್ರಿ Cಗೆ 5-10 ನಿಮಿಷ ಪ್ರೀಹೀಟ್ ಮಾಡಿ.
* ಈಗ ಬೇಕಿಂಗ್ ಟ್ರೇಯನ್ನು ಓವನ್‌ನಲ್ಲಿ ಇಡಿ. ಈಗ ಕೇಕ್ ಅನ್ನು 160 ಡಿಗ್ರಿ c ಉಷ್ಣತೆಯಲ್ಲಿ 40-45 ನಿಮಿಷ ಬೇಯಿಸಿ.
* ನಂತರ ಟ್ರೇ ಹೊರ ತೆಗೆದು ತಣ್ಣಗಾಗಲು ಇಡಿ.
* ಅದರ ಮೇಲೆ ಸ್ವಲ್ಪ ವೆನಿಲ್ಲಾ ಚಿಪ್ಸ್ ಉದುರಿಸಿ ಸರ್ವ್ ಮಾಡಿ.
- ಇದನ್ನು ಮೊಟ್ಟೆ ಹಾಕದೆ ಮಾಡಲಾಗಿದೆ, ನೀವು ಮೊಟ್ಟೆ ಹಾಕಿಯೂ ಮಾಡಬಹುದು, ಮೊಟ್ಟೆ ಹಾಕುವುದಾದರೆ ಬೆಣ್ಣೆ ಸ್ವಲ್ಪ ಕಡಿಮೆ ಹಾಕಿ.
- ಸರ್ವ್ - 1 ಕೇಕ್
- ಕ್ಯಾಲೋರಿ - 176ಕ್ಯಾ
- ಕೊಬ್ಬು - 7ಗ್ರಾಂ
- ಪ್ರೊಟೀನ್ - 2.2ಗ್ರಾಂ
- ಕಾರ್ಬ್ಸ್ - 26ಗ್ರಾಂ
ಮಾಡುವುದು ಹೇಗೆ?
* ಒಂದು ಬೌಲ್‌ನಲ್ಲಿ ಸಕ್ಕರೆ, ಹಾಲಿನ ಪುಡಿ, ಹಾಲು, ಬೆಣ್ಣೆ
ಹಾಕಿ.














Click it and Unblock the Notifications
