Latest Updates
-
ಎಆರ್ ರಹಮಾನ್ ಬೆಂಗಳೂರು ಕಾನ್ಸರ್ಟ್: ಮೆಟ್ರೋ ಟೈಮಿಂಗ್ಸ್ ಮತ್ತು ಸುರಕ್ಷಿತವಾಗಿ ಮನೆ ಸೇರಲು ಇಲ್ಲಿದೆ ಪಕ್ಕಾ ಪ್ಲಾನ್! -
ಮುಂಬೈನಲ್ಲಿ 10% ನೀರು ಕಡಿತ: ನೀರಿನ ಅಭಾವ ಎದುರಿಸಲು ಮತ್ತು ಉಳಿತಾಯ ಮಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ? -
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ!
ಬೆಳಗ್ಗೆ 1 ಕಪ್ ಈ ಗಂಜಿ ಕುಡಿಯಿರಿ! ವಾರಕ್ಕೆ 3 ಬಾರಿ ಸಾಕು.. ಮೂಳೆಗಳು ಉಕ್ಕಿನಂತೆ ಗಟ್ಟಿಯಾಗುತ್ತವೆ!
ಬೆಳಗ್ಗೆ 1 ಕಪ್ ಈ ಗಂಜಿ ಕುಡಿಯಿರಿ! ವಾರಕ್ಕೆ 3 ಬಾರಿ ಸಾಕು.. ನಿಮ್ಮ ಮೂಳೆಗಳು ಉಕ್ಕಿನಂತೆ ಗಟ್ಟಿಯಾಗುತ್ತವೆ. ಪ್ರತಿದಿನ ಇಡ್ಲಿ, ದೋಸೆ ತಿಂದು ಎಲ್ಲರಿಗೂ ಬೇಸರ ಆಗುತ್ತೆ. ನಿಮಗೂ ಸಹ ಇದೆ ಅನುಭವ ಆಗಿದ್ಯಾ? ಹೊಸ ಬಗೆಯ ಉಪಾಹಾರವನ್ನು ಸವಿಯಲು ನೀವು ಇಷ್ಟಪಡ್ತೀರಾ? ಹಾಗಿದ್ರೆ, ಕಪ್ಪು ಉದ್ದಿನ ಗಂಜಿ (karuppu ulunthu kanji) ಒಂದು ಉತ್ತಮ ಆಯ್ಕೆ. ಇದು ರುಚಿಕರವಾಗಿರುವುದಲ್ಲದೆ, ಮೂಳೆಗಳನ್ನು ಬಲಪಡಿಸುತ್ತದೆ. ಮಹಿಳೆಯರ ಗರ್ಭಾಶಯದ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಕೂಡ ಹೌದು. ವಾರದಲ್ಲಿ ಮೂರು ಬಾರಿ ಈ ಗಂಜಿಯನ್ನು ಸೇವಿಸುವುದು ಉತ್ತಮ.
ಈ ಗಂಜಿಯನ್ನು ಮಕ್ಕಳು ಮತ್ತು ದೊಡ್ಡವರು ಎಲ್ಲರೂ ಸೇವಿಸಬಹುದು. ಇದರೊಂದಿಗೆ ತೆಂಗಿನಕಾಯಿ ಚಟ್ನಿ ಇದ್ದರೆ ರುಚಿ ಇನ್ನಷ್ಟು ಹೆಚ್ಚುತ್ತದೆ. ಈ ಲೇಖನದಲ್ಲಿ ಕಪ್ಪು ಉದ್ದಿನ ಗಂಜಿ (Black Urad Dal Porridge) ಮತ್ತು ತೆಂಗಿನಕಾಯಿ ಚಟ್ನಿ ತಯಾರಿಸುವ ವಿಧಾನದ ಬಗ್ಗೆ ತಿಳಿಸಲಾಗಿದೆ.

ಕಪ್ಪು ಉದ್ದಿನ ಗಂಜಿಗೆ ಬೇಕಾಗುವ ಸಾಮಗ್ರಿಗಳು
• ಒಡೆದ ಕಪ್ಪು ಉದ್ದಿನ ಬೇಳೆ
• ಕುಸುಬಲಕ್ಕಿ
• ನೀರು (ಅಗತ್ಯಕ್ಕೆ ತಕ್ಕಷ್ಟು)
• ಜೀರಿಗೆ
• ಬೆಳ್ಳುಳ್ಳಿ ಎಸಳು
• ಉಪ್ಪು (ರುಚಿಗೆ ತಕ್ಕಷ್ಟು)
ತೆಂಗಿನ ಹಾಲು ಮಾಡಲು
• ತೆಂಗಿನಕಾಯಿ (ತುರಿದದ್ದು)
• ನೀರು (ಅಗತ್ಯಕ್ಕೆ ತಕ್ಕಷ್ಟು)
ಚಟ್ನಿ ಮಾಡಲು
• ತೆಂಗಿನ ಎಣ್ಣೆ
• ಬೆಳ್ಳುಳ್ಳಿ ಎಸಳು
• ಹುಣಸೆಹಣ್ಣು
• ಒಣ ಮೆಣಸಿನಕಾಯಿ
• ಕಾಶ್ಮೀರಿ ಮೆಣಸಿನಕಾಯಿ
• ಕರಿಬೇವಿನ ಎಲೆ
• ಜೀರಿಗೆ
• ತುರಿದ ತೆಂಗಿನಕಾಯಿ
• ಉಪ್ಪು (ರುಚಿಗೆ ತಕ್ಕಷ್ಟು)

ಕಪ್ಪು ಉದ್ದಿನ ಗಂಜಿ ತಯಾರಿಸುವ ವಿಧಾನ
- ಕಪ್ಪು ಉದ್ದಿನ ಗಂಜಿ ತಯಾರಿಸುವುದು ತುಂಬಾ ಸುಲಭ. ಮೊದಲು ಕುಕ್ಕರ್ ತೆಗೆದುಕೊಳ್ಳಿ. ಅದರಲ್ಲಿ 1 ಕಪ್ ಒಡೆದ ಕಪ್ಪು ಉದ್ದಿನಬೇಳೆ ಮತ್ತು 3/4 ಕಪ್ ಕುಸುಬಲಕ್ಕಿ ಹಾಕಿ. ಬಳಿಕ ನೀರು ಹಾಕಿ ಎರಡು ಬಾರಿ ಚೆನ್ನಾಗಿ ತೊಳೆಯಿರಿ.
- ಇದಾದ ನಂತರ 4 ಕಪ್ ನೀರು, ಜೀರಿಗೆ, ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ ಸೇರಿಸಿ, ಮುಚ್ಚಳ ಮುಚ್ಚಿ 10 ನಿಮಿಷ ನೆನೆಸಿಡಿ.
- 10 ನಿಮಿಷದ ನಂತರ ಮುಚ್ಚಳ ತೆಗೆದು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಮತ್ತೆ ಮುಚ್ಚಳ ಮುಚ್ಚಿ ಕುಕ್ಕರ್ ಅನ್ನು ಒಲೆಯ ಮೇಲಿಟ್ಟು 5 ಸೀಟಿ ಕೂಗಿಸಿ, ಆಫ್ ಮಾಡಿ. ಸೀಟಿ ಹೋದ ನಂತರ ಕುಕ್ಕರ್ ತೆರೆದು ಕಂಜಿಯನ್ನು ಚೆನ್ನಾಗಿ ಮಸೆದುಕೊಳ್ಳಿ.
ಈಗ ತೆಂಗಿನ ಹಾಲು ತಯಾರಿಸಿಕೊಳ್ಳಿ
- ಮೊದಲು, ಮಿಕ್ಸರ್ ಜಾರ್‌ಗೆ 1 ದೊಡ್ಡ ಬಟ್ಟಲು ತುರಿದ ತೆಂಗಿನಕಾಯಿ ಮತ್ತು ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಅದನ್ನು ಸೋಸಿ ಸುಮಾರು 2 ಕಪ್ ತೆಂಗಿನ ಹಾಲು ತೆಗೆದುಕೊಳ್ಳಿ. ಇದು ಗಂಜಿಯ ರುಚಿಯನ್ನು ಹೆಚ್ಚಿಸುತ್ತದೆ.
- ಈ ತೆಂಗಿನ ಹಾಲನ್ನು ಕುಕ್ಕರ್‌ನಲ್ಲಿರುವ ಗಂಜಿಗೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಅಗತ್ಯವಿದ್ದರೆ ಸ್ವಲ್ಪ ಬಿಸಿ ನೀರನ್ನು ಸಹ ಸೇರಿಸಬಹುದು. ಕುಕ್ಕರ್ ಅನ್ನು ಮತ್ತೆ ಒಲೆಯ ಮೇಲಿಟ್ಟು ಕಂಜಿ ಒಂದು ಕುದಿ ಬರುವವರೆಗೆ ಕಾಯಿಸಿ ನಂತರ ಇಳಿಸಿ. ಇಷ್ಟು ಮಾಡಿದರೆ ಸಾಕು, ಈಗ ರುಚಿಕರ ಕಪ್ಪು ಉದ್ದಿನ ಗಂಜಿ (Ulundhu Ganji) ಸಿದ್ಧ.
ಈಗ ಚಟ್ನಿ ತಯಾರಿಸಿಕೊಳ್ಳಿ
- ಕಪ್ಪು ಉದ್ದಿನ ಗಂಜಿಗೆ ತೆಂಗಿನಕಾಯಿ ಚಟ್ನಿ ಅತ್ಯುತ್ತಮ ಸೈಡ್ ಡಿಶ್ ಆಗಿದೆ. ಮೊದಲು, ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಬಿಸಿಯಾದ ನಂತರ ಬೆಳ್ಳುಳ್ಳಿ, ಹುಣಸೆಹಣ್ಣು, ಒಣ ಮೆಣಸಿನಕಾಯಿ, ಕಾಶ್ಮೀರಿ ಮೆಣಸಿನಕಾಯಿ, ಕರಿಬೇವಿನ ಎಲೆ, ಜೀರಿಗೆ ಸೇರಿಸಿ ಚೆನ್ನಾಗಿ ಹುರಿಯಿರಿ.
- ನಂತರ ಇದಕ್ಕೆ ತುರಿದ ತೆಂಗಿನಕಾಯಿ ಸೇರಿಸಿ ಲಘುವಾಗಿ ಹುರಿದು ತಣ್ಣಗಾಗಲು ಬಿಡಿ. ತಣ್ಣಗಾದ ಮಿಶ್ರಣವನ್ನು ಮಿಕ್ಸರ್ ಜಾರ್‌ಗೆ ಹಾಕಿ ಸ್ವಲ್ಪ ನೀರು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ನುಣ್ಣಗೆ ರುಬ್ಬಿದರೆ ರುಚಿಯಾದ ತೆಂಗಿನಕಾಯಿ ಚಟ್ನಿ ಸಿದ್ಧ.



Click it and Unblock the Notifications
