Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಯುಗಾದಿ ರೆಸಿಪಿ: ಪೈನಾಪಲ್ ಹೋಳಿಗೆ ಸುಲಭವಾಗಿ ತಯಾರಿಸಬಹುದು, ರುಚಿ ಸೂಪರ್!
ಹೋಳಿಗೆಯನ್ನು ನಾನಾ ರುಚಿಯಲ್ಲಿ ಮಾಡಬಹುದು, ನೀವು ಅನಾನಾಸ್ ಹೋಳಿಬಗೆ ಟೇಸ್ಟ್ ಮಾಡಿದ್ದೀರಾ? ಇಲ್ಲಾಂದ್ರೆ ಈ ಯುಗಾದಿಗೆ ಅನಾನಾಸ್ ಹೋಳಿಗೆ ಟ್ರೈ ಮಾಡಿ. ಇದನ್ನು ಮಾಡುವುದೇನು ಕಷ್ಟದ ಕೆಲಸವಲ್ಲ, ಸುಲಭವಾಗಿಯೇ ಮಾಡಬಹುದು, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ ಬನ್ನಿ:

ಬೇಕಾಗುವ ಸಾಮಗ್ರಿ
ಕಡ್ಲೆ ಬೇಳೆ 3/4 ಕಪ್
ಪೈನಾಪಲ್ 2 ಕಪ್
ಎಲ್ಲ ಒಂದು ಕಾಲು ಕಪ್
ಚಿಟಿಕೆಯಷ್ಟು ಉಪ್ಪು
ನಕ್ಷತ್ರ ಮೊಗ್ಗು, ಜಾಯಿಕಾಯಿ ಪುಡಿ (1/2 ಚಮಚ)
ಇತರ ಸಾಮಗ್ರಿ
ಚಿರೋಟಿ ರವೆ ಒಂದೂಕಾಲು ಕಪ್
ಅರಿಶಿಣ ಪುಡಿ 1/2 ಚಮಚ
ನೀರು
ಎಣ್ಣೆ
ಮಾಡುವ ವಿಧಾನ
- ರವೆ ಹಾಗೂ ಅರಿಶಿಣ ಪುಡಿ ಹಾಕಿ ಸ್ವಲ್ಪ ನೀರು ಚೆನ್ನಾಗಿ ಕಲೆಸಿ ಎಣ್ಣೆಯಲ್ಲಿ ಹಾಕಿಡಿ
- ನೀವು ಕಡ್ಲೆಬೇಳೆಯನ್ನು ಚೆನ್ನಾಗಿ ಬೇಯಿಸಿಬೇಕು, ನಂತರ ಅದರ ನೀರು ಸೋಸಿ ಬೇರೆ ಪಾತ್ರೆಯಲ್ಲಿ ಹಾಕಿಡಿ, ಅದನ್ನು ಸಾರಿಗೆ ಬಳಸಬಹುದು. ಈ ಬೆಂದ ಕಡ್ಲೆಬೇಳೆಯನ್ನು ಒಂದು ಪಾತ್ರೆಯಲ್ಲಿ ಹಾಕಿ, ಅದಕ್ಕೆ ಚಿಕ್ಕದಾಗಿ ಕತ್ತರಿಸಿದ ಅನಾನಾಸ್ ಪೇಸ್ಟ್, ಬೆಲ್ಲ ಹಾಕಿ ಕಡಿಮೆ ಉರಿಯಲ್ಲಿ ಬೇಯಿಸಿ, ಅದಕ್ಕೆ ಜಾಯಿಕಾಯಿ, ನಕ್ಷತ್ರ ಮೊಗ್ಗು, ಏಲಕ್ಕಿ ಪುಡಿ ಸೇರಿಸಿ ಮಿಕ್ಸ್ ಮಾಡಿ.
- ನಂತರ ನುಣ್ಣನೆ ಪೇಸ್ಟ್ ಮಾಡಬೇಕು.
- ಅದನ್ನು ಉಂಡೆ ಕಟ್ಟಿ.
- ಕಲೆಸಿಟ್ಟ ಹಿಟ್ಟು ಅನ್ನು ಸ್ವಲ್ಪ ಉಂಡೆ ಕಟ್ಟಿ ಅದನ್ನು ಚಪಾತಿಗೆ ತಟ್ಟಿದಂತೆ ತಟ್ಟಿ, ಅದರೊಳಗೆ ಹೂರಣ ತುಂಬಿ.
- ನಂತರ ಪುನಃ ಲಟ್ಟಿಸಿ
- ನಂತರ ತವಾಗೆ ಎಣ್ಣೆ ಹಚ್ಚಿ ಅದರಲ್ಲಿ ತಟ್ಟಿದ ಹಿಟ್ಟು ಹಾಕಿ.
- ಅದರ ಎರಡೂ ಬದಿ ಬೆಂದ ಮೇಲೆ ಅದನ್ನು ತುಪ್ಪದ ಜೊತೆ ಹಾಕಿ ಸವಿಯಿರಿ.
ಕಾಯಿ ಹೋಳಿಗೆ ರೆಸಿಪಿ
ಬೇಕಾಗುವ ಸಾಮಗ್ರಿ
ಚಿರೋಟಿ ಅಥವಾ ಸೂಜಿ ರವೆ 1 ಕಪ್
ಮೈದಾ 1/2 ಕಪ್
ಅರಿಶಿಣ ಪುಡಿ 1/4 ಚಮಚ
ನೀರು 1 1/4 ಕಪ್
ತುರಿದ ತೆಂಗಿನಕಾಯಿ
1 ಬೌಲ್ ಬೆಲ್ಲ 1 ಕಪ್
ಏಲಕ್ಕಿ ಪುಡಿ
1/2 ಚಮಚ ಎಣ್ಣೆ 1 ಕಪ್
ಪ್ಲಾಸ್ಟಿಕ್ ಶೀಟ್
ಪಾಕ ವಿಧಾನ:
ನೀವು ಸೂಜಿ ರವೆ, ಮೈದಾ, ಅರಿಶಿಣ ಪುಡಿ ಹಾಕಿ ಸ್ವಲ್ಪ ನೀರು ಸೇರಿಸಿ ಮಿಕ್ಸ್
ಮಾಡಿ
2 ಚಮಚ ಎಣ್ಣೆ ಹಾಕಿ
ನಂತರ ಮುಕ್ಕಾಲು ಕಪ್ ನೀರು ತೆಗೆದುಕೊಂಡು ಸ್ವಲ್ಪ-ಸ್ವಲ್ಪ ಸೇರಿಸುತ್ತಾ ಮಿಕ್ಸ್
ಮಾಡಿ
ಒಮ್ಮಲೇ ಸುರಿದರೆ ಹಿಟ್ಟು ನೀರಾಗಬಹುದು.
2 ಚಮಚ ಎಣ್ಣೆ ಹಾಕಿ ಮಿಕ್ಸ್ ಮಾಡಿ
ಮತ್ತೆ 4 ಚಮಚ ಎಣ್ಣೆ ಹಾಕಿ ಮಿಕ್ಸ್ ಮಾಡಿ.
ನಂತರ ಬೌಲ್‌ನ ಬಾಯಿ ಮುಚ್ಚಿಡಿ.
ಈಗ ತೆಂಗಿನ ತುರಿಯನ್ನು ಬೆಲ್ಲದ ಜೊತೆ ಹಾಕಿ ನುಣ್ಣನೆ ರುಬ್ಬಿಕೊಳ್ಳಿ.
ಈಗ ಆ ಮಿಶ್ರಣವನ್ನು ಬಿಸಿ ಮಾಡಿ, ನಂತರ ತಣ್ಣಗಾಗಲು ಬಿಡಿ.
ಈಗ ಮೈದಾ ರವೆ ಮಿಶ್ರಣದಿಂದ ಚಪಾತಿಗೆ ಉಂಡೆ ಕಟ್ಟಿದಂತೆ ಕಟ್ಟಿ.
ಒಂದು ಪ್ಲೇಟ್ ಅಥವಾ ಚಪಾತಿ ಮಣೆ ಮೇಲೆ ಪ್ಲಾಸ್ಟಿಕ್ ಹಾಕಿ ಎಣ್ಣೆ ಸವರಿ ಮೈದಾ
ಮಿಶ್ರಣ ಲಟ್ಟಿಸಿ, ಮಧ್ಯದಲ್ಲಿ ಕೊಬ್ಬರಿ-ಬೆಲ್ಲ ಮಿಶ್ರಣ ಹಾಕಿ ಮತ್ತೆ ಉಂಡೆ
ಕಟ್ಟಿ ಲಟ್ಟಿಸಿ.
ಈಗ ದೋಸೆ ತವಾ ಉರಿ ಮೇಲೆ ಇಡಿ, ಅದಕ್ಕೆ ಎಣ್ಣೆ ಅಥವಾ ತುಪ್ಪ ಸವರಿ ಎರಡು ಬದಿ
ಬೇಯಿಸಿದರೆ ಕಾಯಿ ಹೋಳಿಗೆ ರೆಡಿ.
ಯುಗಾದಿ ಹಬ್ಬವೆಂದರೆ ಹೋಳಿಗೆ ಇರಲೇಬೇಕು, ಈ ಯುಗಾದಿ ಹಬ್ಬದಂದು ನೀವು ಕಾಯಿ ಹೋಳಿಗೆ ಜೊತೆಗೆ ಪೈನಾಪಲ್ ಹೋಳಿಗೆ ಕೂಡ ಮಾಡಬಹುದು. ಇನ್ನು ಹೂರಣದಿಂದ ಪೈನಾಪಲ್ ಸಾರು ಕೂಡ ಸವಿಯಬಹುದು. ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು.



Click it and Unblock the Notifications
