Latest Updates
-
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ?
ರೆಸಿಪಿ: ಈ ರಸಂ ರೋಗ ನಿರೋಧಕ ಶಕ್ತಿ ವೃದ್ಧಿಸುವುದು
ರಸಂ ಅನ್ನು ಹಲವಾರು ರುಚಿಯಲ್ಲಿ ನೀವು ಮಾಡಬಹುದು. ಇದನ್ನು ಅನ್ನದ ಜೊತೆ ಸವಿಯಲು ಮಾಡಬಹುದು. ಇನ್ನು ರಸಂ ಬಾಯಿಗೆ ರುಚಿ, ಜೀರ್ಣಕ್ರಿಯೆಗೆ ಒಳ್ಳೆಯದು ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚುವುದು.

ನಾವಿಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ರಸಂ ರೆಸಿಪಿ ನೀಡಿದ್ದೇವೆ ನೋಡಿ:
ಬೇಕಾಗುವ ಸಾಮಗ್ರಿ
ಒಂದು ಚಿಕ್ಕ ನಿಂಬೆ ಹಣ್ಣಿನ ಗಾತ್ರದಷ್ಟು ಹುಣಸೆಹಣ್ಣು
ಟೊಮೆಟೊ 2-3 (ಚಿಕ್ಕದಾಗಿ ಕತ್ತರಿಸಿದ್ದು)
ಹಸಿ ಮೆಣಸು 1
ಇಂಗು (ಚಿಟಿಕೆಯಷ್ಟು)
ಬೆಲ್ಲ 1 ಚಮಚ (ಪುಡಿ ಮಾಡಿದ್ದು)
ಶುಂಠಿ 1 ತುಂಡು (ಜಜ್ಜಿದ್ದು)
ತೊಗರಿ ಬೇಳೆ 1/2 ಕಪ್
ಕಾಳು ಮೆಣಸು 1 ಚಮಚ
ಜೀರಿಗೆ 1 ಚಮಚ
ಸಾಸಿವೆ 1 ಚಮಚ
ಕರಿಬೇವು
ರಸಂ ಪುಡಿ ( 1 ಚಮಚ)
ತುಪ್ಪ 1 ಚಮಚ
ಅರಿಶಿಣ ಪುಡಿ 1/2 ಚಮಚ
ರುಚಿಗೆ ತಕ್ಕ ಉಪ್ಪು
ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ
* ಹುಣಸೆ ಹಣ್ಣನ್ನು ಬಿಸಿ ನೀರಿನಲ್ಲಿ 10 ನಿಮಿಷ ನೆನೆ ಹಾಕಿ.
* ಬೇಳೆಗೆ ಬೇಯಲು ತಕ್ಕ ನೀರು ಹಾಕಿ, ಸ್ವಲ್ಪ ಉಪ್ಪು, ಅರಿಶಿಣ ಪುಡಿ ಚೆನ್ನಾಗಿ
ಬೇಯಿಸಿ.
* ಈಗ ಹುಣಸೆ ನೀರನ್ನು ಕಡಿಮೆ ಉರಿಯಲ್ಲಿ ಕುದಿಸಿ, ಕುದಿಯುವಾಗ ಶುಂಠಿ ಸೇರಿಸಿ.
ಈಗ ಟೊಮೆಟೊ, ಹಸಿ ಮೆಣಸಿನಕಾಯಿ, ಬೆಲ್ಲ, ಇಂಗು ಹಾಗೂ ರಸಂ ಪೌಡರ್ ಸೇರಿಸಿ.
* ಈಗ ಬೇಳೆಯನ್ನು ಚೆನ್ನಾಗಿ ಮ್ಯಾಶ್ ಮಾಡಿ, ಅದನ್ನು ಹುಣಸೆ ರಸದ ಜೊತೆ ಸೇರಿಸಿ
2-3 ಕಪ್ ನೀರು ಸೇರಿಸಿ.
* ಈಗ ಜೀರಿಗೆ, ಕಾಳು ಮೆಣಸು ರುಬ್ಬಿ ಅಥವಾ ಪುಡಿ ಮಾಡಿ ಹಾಕಿ, ಉರಿ ಸ್ವಲ್ಪ
ಕಡಿಮೆ ಮಾಡಿ.
* ಈಗ ಒಗ್ಗರಣೆಗೆ ತುಪ್ಪ ಹಾಕಿ ಬಿಸಿ ಮಾಡಿ, ನಂತರ ಸಾಸಿವೆ, ಕರಿಬೇವು ಸೇರಿಸಿ,
ಬೆಳ್ಳುಳ್ಳಿ ಎಸಳು ಹಾಕಿ, ರಸಂಗೆ ಹಾಕಿ.
* ಈಗ ನಿಂಬೆ ರಸ ಸೇರಿಸಿ ಆಫ್ ಮಾಡಿ.
* ನಂತರ ಕೊತ್ತಂಬರಿ ಸೊಪ್ಪು ಚಿಕ್ಕದಾಗಿ ಕತ್ತರಿಸಿ ಹಾಕಿದರೆ ರುಚಿಯಾದ ರಸಂ
ರೆಡಿ.
Recipe 2
ಬೇಕಾಗುವ ಸಾಮಗ್ರಿ
* ತುಪ್ಪ 1 ಚಮಚ
* ಒಣ ಮೆಣಸು 4
* ಸ್ವಲ್ಪ ಇಂಗು
* ಸ್ವಲ್ಪ ಕರಿಬೇವು
* ರುಚಿಗೆ ತಕ್ಕ ಉಪ್ಪು
* ತೊಗರಿ ಬೇಳೆ 1 ಕಪ್
* ಬೆಲ್ಲ 1 ಚಮಚ
ತುಪ್ಪ 1 ಚಮಚ
ಒಗ್ಗರಣೆಗೆ
* ತುಪ್ಪ 1 ಚಮಚ
* 1 ಚಮಚ ಸಾಸಿವೆ
* ಕರಿಬೇವು
* ಸ್ವಲ್ಪ ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ
* ಒಂದು ಚಮಚ ತುಪ್ಪ ಬಿಸಿ ಮಾಡಿ, ಒಂದು ಒಣ ಮೆಣಸು ಹಾಕಿ, ಅದರಲ್ಲಿ ಹುಣಸೆ ರಸ, ಇಂಗು, ಅರಿಶಿಣ ಪುಡಿ, ಕರಿಬೇವು ಮತ್ತು ರುಚಿಗೆ ತಕ್ಕ ಉಪ್ಪು ಹಾಕಿ ಬಿಸಿ ಮಾಡಿ. ಹುಣಸೆ ಹಣ್ಣಿನ ಹಸಿ ವಾಸನೆ ಹೋಗಬೇಕು.
* ಈಗ ಬೇಯಿಸಿದ ತೊಗರಿಬೇಳೆ ಹಾಕಿ ಬೆಲ್ಲ ಸೇರಿಸಿ, ಉರಿ ಕಡಿಮೆ ಮಾಡಿ ರಸಂ ಕುದಿಸಿ ಉರಿಯಿಂದ ಇಳಿಸಿ ಇಡಿ.
* ಈಗ ತುಪ್ಪವನ್ನು ಬಿಸಿ ಮಾಡಿ ಒಗ್ಗರಣೆ ಸಾಮಗ್ರಿ ಹಾಕಿ ರಂಸ ಜೊತೆ ಸೇರಿಸಿದರೆ ರುಚಿಕರವಾದ ರಸಂ ರೆಡಿ.



Click it and Unblock the Notifications