Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ತುನಾ ಮೀನಿನ ಫ್ರೈ ರೆಸಿಪಿ
ತುನಾ ಮೀನು ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಇದನ್ನು ಪುಳಿಮುಂಜಿ, ಸಾರು, ಫ್ರೈ, ಉಪ್ಪಿನಕಾಯಿ ಹೀಗೆ ಹಲವು ರುಚಿಯಲ್ಲಿ ಸವಿಯಬಹುದು. ಈ ಮೀನು ಇತರ ಮೀನುನಂತೆ ತುಂಬಾ ಬೇಯಿಸಿದರೂ ಕರಗುವುದಿಲ್ಲ, ಬದಲಿಗೆ ಮಾಂಸ ತುಂಡಿನಂತೆ ಗಟ್ಟಿಯಾಗಿಯೇ ಇರುತ್ತದೆ, ಅಲ್ಲದೆ ಮುಳ್ಳು ಕೂಡ ಹೆಚ್ಚಿಲ್ಲದ ಕಾರಣ ಮಕ್ಕಳಿಗೆ ಕೊಡುವುದು ಕೂಡ ಸುಲಭ.

ಇದನ್ನು ಫ್ರೈ ಮಾಡಿ ತಿನ್ನಲು ಬಯಸುವುದಾದರೆ ಇಲ್ಲಿದೆ ನೋಡಿ ತುಂಬಾ ಸರಳವಾದ ರೆಸಿಪಿ.
Recipe By: Reena TK
Recipe Type: Fry
Serves: 4
-
ಬೇಕಾಗುವ ಸಾಮಗ್ರಿ
ತುನಾ ಮಿನು 1 ಕೆಜಿ
ಖಾರದ ಪುಡಿ 4-5 ಚಮಚ
ಅರಿಶಿಣ ಪುಡಿ 1/2 ಚಮಚ
ಹುಣಸೆ ಹಣ್ಣು ದೊಡ್ಡ ನಿಂಬೆಹಣ್ಣು ಗಾತ್ರದಷ್ಟು
ಉಪ್ಪು ಒಂದೂವರೆ ಚಮಚ
ಎಣ್ಣೆ 3 ಚಮಚ
-
ಮಾಡುವುದು ಹೇಗೆ?
* ತುನಾ ಮೀನನ್ನು ಸ್ವಚ್ಛ ಮಾಡಿ.
* ಒಂದು ದೊಡ್ಡ ಬೌಲ್‌ಗೆ ಹುಣಸೆ ಹಣ್ಣು ಹಾಕಿ 1/4 ಲೋಟ ಬಿಸಿ ನೀರು ಹಾಕಿ ಚೆನ್ನಾಗಿ ಕಿವುಚಿ.(ಹುಣಸೆ ರಸ ನೀರು-ನೀರಾಗಬಾರದು,ಆದ್ದರಿಂದ ನೀರು ಸ್ವಲ್ಪ ಕಡಿಮೆ ಹಾಕಿ).
*ಈಗ ಹುಣಸೆ ರಸಕ್ಕೆ ಖಾರದ ಪುಡಿ, ಅರಿಶಿಣ ಪುಡಿ, ಉಪ್ಪು ಹಾಕಿ ಮಿಶ್ರ ಮಾಡಿ (ಮಿಶ್ರಣ ಸ್ವಲ್ಪ ಗಟ್ಟಿಯಾಗಿರಲಿ).
* ಈಗ ಮೀನಿನ ತುಂಡುಗಳಿಗೆ ಮಸಾಲೆ ಸವರಿ, ಮಸಾಲೆ ಚೆನ್ನಾಗಿ ಸವರಿ 2 ಗಂಟೆ ಇಡಿ (ಫ್ರಿಡ್ಜ್‌ನಲ್ಲಿಟ್ಟರೆ ಇನ್ನೂ ಒಳ್ಳೆಯದು).
* ಈಗ ತವಾಗೆ ಎಣ್ಣೆ ಹಾಕಿ ಬಿಸಿ ಮಾಡಿ, ಈಗ ಗ್ಯಾಸ್ ಉರಿಯನ್ನು ಕಡಿಮೆ ಮಾಡಿ ಮೀನಿನ ತುಂಡು ಹಾಕಿ 10 ನಿಮಿಷ ಫ್ರೈ ಮಾಡಿ , ನಂತರ ಮಗುಚಿ ಹಾಕಿ ಮತ್ತೆ 10 ನಿಮಿಷ ಫ್ರೈ ಮಾಡಿದರೆ ತುನಾ ಮೀನಿನ ಫ್ರೈ ರೆಡಿ.
ಈಗ ರೆಡಿಯಾದ ಮೀನು ಫ್ರೈಯನ್ನು ಬಿಸಿ ಬಿಸಿ ಅನ್ನದ ಜೊತೆ ಸವಿಯಿರಿ.
- ನೀವು ಹುಣಸೆ ಹಣ್ಣು ಹಾಕದಿದ್ದರೆ ಉಪ್ಪು, ಖಾರ, ಅರಿಶಿಣ ಹಾಕಿ ಮಿಕ್ಸ್ ಮಾಡಿ ಫ್ರೈ ಮಾಡಿದ ಬಳಿಕ ನಿಂಬೆರಸ ಹಾಕಿ. ಫ್ರೈ ಮಾಡುವಾಗಲೇ ನಿಂಬೆರಸ ಹಾಕಿದರೆ ಕಹಿ ಬರುವುದು.
- ಕ್ಯಾಲೋರಿ - 146ಕ್ಯಾ
- ಕೊಬ್ಬು - 3ಗ್ರಾಂ
- ಪ್ರೊಟೀನ್ - 26ಗ್ರಾಂ



Click it and Unblock the Notifications
