Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
10 ನಿಮಿಷದಲ್ಲಿ ಅವಲಕ್ಕಿ ಪಲಾವ್ ಟ್ರೈ ಮಾಡಿ..! ಸುಲಭದ ರೆಸಿಪಿ ಇಲ್ಲಿದೆ..!
ನಾವು ಅವಲಕ್ಕಿಯಲ್ಲಿ ವಿವಿಧ ರೀತಿಯ ಖಾದ್ಯಗಳನ್ನು ಮಾಡಿ ಸೇವಿಸಿರುತ್ತೇವೆ. ಆರೋಗ್ಯದ ದೃಷ್ಟಿಯಿಂದಲೂ ಅವಲಕ್ಕಿ ತುಂಬಾನೆ ಒಳ್ಳೆಯದಾಗಿದೆ. ಅವಲಕ್ಕಿಯಲ್ಲಿ ಹೆಚ್ಚಿನ ಫೈಬರ್ ಸಿಗುತ್ತದೆ. ಇದು ನಮ್ಮ ಜೀರ್ಣಕ್ರಿಯೆಯನ್ನು ಸರಾಗಗೊಳಿಸುತ್ತದೆ. ಜೊತೆಗೆ ಅವಲಕ್ಕಿ ಹಸಿವಾಗದಂತೆ ತಡೆಯುತ್ತದೆ. ಇದರಿಂದ ನಿಮ್ಮ ತೂಕ ಇಳಿಸಲು ಸಹ ಸಹಕಾರಿಯಾಗಲಿದೆ.
ಅವಲಕ್ಕಿಯಲ್ಲಿ ನಾನಾ ರೀತಿ ಖಾದ್ಯಗಳನ್ನು ಮಾಡಬಹುದು. ಬೆಳಗ್ಗೆಯ ತಿಂಡಿ ಹಾಗೂ ಸಂಜೆಯ ಸ್ನ್ಯಾಕ್ಸ್‌ಗೂ ಅವಲಕ್ಕಿ ಬಹಳ ಉತ್ತಮವಾದ ಆಹಾರವಾಗಿದೆ. ಹಾಗಾದರೆ ನಾವಿಂದು ಅವಲಕ್ಕಿಯಲ್ಲಿ ಮಾಡಬಹುದಾದ ಪಲಾವ್ ಬಗ್ಗೆ ತಿಳಿದುಕೊಳ್ಳೋಣ. ಹೌದು ಅವಲಕ್ಕಿಯಿಂದ ರುಚಿ ರುಚಿಯಾದ ಪಲಾವ್ ಮಾಡಬಹುದು. ರುಚಿಯು ತುಂಬಾನೆ ಚೆನ್ನಾಗಿರಲಿದೆ. ಹಾಗಾದರೆ ಅವಲಕ್ಕಿ ಪಲಾವ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಅವಲಕ್ಕಿ ಪಲಾವ್ ಮಾಡುವ ವಿಧಾನವೇನು ಎಂಬುದನ್ನು ನಾವಿಂದು ತಿಳಿಯೋಣ

ಅವಲಕ್ಕಿ ಪಲಾವ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು
- ಅವಲಕ್ಕಿ- 2 ಕಪ್
- ಶುಂಠಿ-1 ಚಿಕ್ಕ ತುಂಡು
- ಚಕ್ಕೆ -2
- ಲವಂಗ-3
- ಏಲಕ್ಕಿ-2
- ಇಂಗು-ಒಂದು ಚಿಟಿಕೆ
- ಕ್ಯಾಪ್ಸಿಕಮ್-ಅರ್ಧ
- ಅರಿಶಿನ-1 ಚಿಟಿಕೆ
- ಕ್ಯಾರೆಟ್, ಆಲೂಗಡ್ಡೆ, ಬೀನ್ಸ್ ತರಕಾರಿ
- ಕೊತ್ತಂಬರಿ ಸೊಪ್ಪು
- ಹಸಿ ಮೆಣಸು-5
- ತೆಂಗಿನ ಕಾಯಿ ತುರಿ-ಅರ್ಧ ಕಪ್
- ನೀರು
- ಉಪ್ಪು
- ನಿಂಬೆಹಣ್ಣು
- ತುಪ್ಪ
- ಎಣ್ಣೆ
- ಸೋಂಪು
ಅವಲಕ್ಕಿ ಪಲಾವ್ ಮಾಡುವ ವಿಧಾನ
ಮೊದಲು ಅವಲಕ್ಕಿಯನ್ನ ನೀರಿನಿಂದ ತೊಳೆದು ಬದಿಗಿಡಿ, ಅದಕ್ಕೆ ಉಪ್ಪು ಹಾಕಿ ಕಲಸಿ ಇಡಿ. ಬಳಿಕ ಕುಕ್ಕರ್ ತೆಗೆದುಕೊಂಡ ತರಕಾರಿಗಳನ್ನು ಹಾಕಿ ಸ್ವಲ್ಪ ನೀರು ಹಾಕಿ ಒಂದು ಸೀಟಿ ಬರುವವರೆಗೆ ಕಾಯಿರಿ. ಬಳಿಕ ಅದು ಬೆಂದ ಬಳಿಕ ಬದಿಗೆ ಇಡಿ. ಬಳಿಕ ಸಣ್ಣ ಮಿಕ್ಸರ್ ಜಾರ್ ತೆಗೆದುಕೊಳ್ಳಿ. ಅದಕ್ಕೆ ಕೊತ್ತಂಬರಿ ಸೊಪ್ಪು, ಏಲಕ್ಕಿ, ಲವಂಗ, ಚಕ್ಕೆ, ಶುಂಠಿ, ಹಸಿ ಮೆಣಸು, ತೆಂಗಿನ ಕಾಯಿ ತುರಿಯನ್ನು ಹಾಕಿ ರುಬ್ಬಿಕೊಳ್ಳಿ. ಈ ಮಸಾಲೆ ಹೆಚ್ಚು ನೀರಾಗದಂತೆ ನೋಡಿಕೊಳ್ಳಿ.
ಬಳಿಕ ತೊಳೆದಿಟ್ಟ ಅವಲಕ್ಕಿಯನ್ನು ತೆಗೆದುಕೊಂಡು ಅದಕ್ಕೆ ನಿಂಬೆರಸ ಹಾಕಿ ಕಲಸಿ ಇಟ್ಟುಕೊಳ್ಳಿ. ಒಂದು ಪಾತ್ರೆಯನ್ನು ಒಲೆಯಲ್ಲಿಟ್ಟು ಅದು ಬಿಸಿಯಾದ ಬಳಿಕ ತುಪ್ಪ ಇಲ್ಲವೆ ಎಣ್ಣೆ ಅಥವಾ ಎರಡನ್ನೂ ಹಾಕಿ ಬಿಸಿ ಮಾಡಿಕೊಳ್ಳಿ ಬಿಸಿಯಾದ ಬಳಿಕ ಅದಕ್ಕೆ ಸೋಂಪು, ಇಂಗು, ಕ್ಯಾಪ್ಸಿಕಂ ಹಾಕಿ ಚೆನ್ನಾಗಿ ಕಾಯಿಸಿ, ಎರಡು ನಿಮಿಷ ಕಾಯಿಸಿದ ಬಳಿಕ ಅದಕ್ಕೆ ಅರಿಶಿನ ಹಾಕಿ.
ಬಳಿಕ ಚೆನ್ನಾಗಿ ಮಿಶ್ರಣ ಮಾಡಿ, ಇದಾದ ಬಳಿಕ ರುಬ್ಬಿಕೊಂಡಿದ್ದ ಮಸಾಲಾ ಪದಾರ್ಥವನ್ನು ಅದಕ್ಕೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಅದು ಹಸಿ ವಾಸನೆ ಹೋಗುವವರೆಗೂ ಪಾತ್ರೆಯಲ್ಲಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಬಳಿಕ ಈಗಾಗಲೇ ಒಂದು ಸೀಟಿ ಹಾಕಿರುವ ತರಕಾರಿಗಳನ್ನು ತೆಗೆದುಕೊಂಡು ಈ ಮಸಾಲೆಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈ ವೇಳೆ ಮಧ್ಯಮ ಉರಿಯನ್ನು ಇಟ್ಟುಕೊಳ್ಳಿ.
ಇದಕ್ಕೆ ಯಾವ ತರಕಾರಿ ಬೇಕಾದರು ಸೇರಿಸಬಹುದು. ಕಾಳುಗಳನ್ನು ಸಹ ಸೇರಿಸಿ ಮಾಡಬಹುದು. ಒಂದು ಗೊಜ್ಜು ಮಾಡುವ ರೀತಿ ತಯಾರಿ ಮಾಡಿ. ಬಳಿಕ ಇದಕ್ಕೆ ಅವಲಕ್ಕಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಅವಲಕ್ಕಿಗೆ ಎಲ್ಲಾ ಮಸಾಲೆ ಚೆನ್ನಾಹಿ ಮಿಕ್ಸ್ ಆಗುವಂತೆ ಮಾಡಿ. ಒಲೆಯನ್ನು ಆಫ್ ಮಾಡಿ 5ರಿಂದ 6 ನಿಮಿಷ ಮಚ್ಚಿಡಿ. ಬಳಿಕ ನೀವು ಮುಚ್ಚಳ ತೆಗೆದು ಅವಲಕ್ಕಿ ಪಲಾವ್ ಸವಿಯಬಹುದು. ಗಡಿಬಿಡಿಯಲ್ಲಿ ಅತ್ಯಂತ ವೇಗವಾಗಿ ಈ ಅಡುಗೆ ಮಾಡಬಹುದು.
ಇದನ್ನು ಬೆಳಗ್ಗೆಯ ತಿಂಡಿಯಾಗಿ ಇಲ್ಲವೆ ಸಂಜೆ ವೇಳೆ ಸವಿಸಲು ಸ್ನ್ಯಾಕ್ಸ್ ರೀತಿ ಬಳಸಬಹುದು. ಟೀ,ಕಾಫಿ ಹಾಗೂ ಕಾಯಿ ಚಟ್ನಿ ಇಲ್ಲವೆ ಕಡ್ಲಿ ಚಟ್ನಿ ಜೊತೆಗೂ ಇದನ್ಉ ಸವಿಯಬಹುದು.



Click it and Unblock the Notifications