Latest Updates
-
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು!
ಈ ಹಾಟ್ ಡ್ರಿಂಕ್ಸ್ ಚಳಿಗಾಲದಲ್ಲಿ ನೆಗಡಿ, ಕೆಮ್ಮು ತಡೆಗಟ್ಟುತ್ತೆ
ಚಳಿಗಾಲದಲ್ಲಿ ನಾವು ಮೈ ಬೆಚ್ಚಗಿಡುವ ಆಹಾರಗಳನ್ನು ಸೇವಿಸಬೇಕು. ನಮ್ಮ ಆಹಾರದಲ್ಲಿ ಶುಂಠಿ, ಬೆಳ್ಳುಳ್ಳಿ, ಚಕ್ಕೆ, ಲವಂಗ, ಏಲಕ್ಕಿ ಇವುಗಳನ್ನು ಬಳಸಬೇಕು, ಆಗ ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಡು ನೆಗಡಿ, ಕೆಮ್ಮು, ಅಲರ್ಜಿ ಈ ರೀತಿಯ ಸಮಸ್ಯೆ ತಡೆಗಟ್ಟಬಹುದು.
ನಿಮಗೆ ಎರಡು ಹೊತ್ತು ಟೀ ಕುಡಿಯುವ ಅಭ್ಯಾಸವಿದ್ದರೆ ಅದಕ್ಕೆ ಬದಲಾಗಿ ಈ ಪಾನೀಯ ಮಾಡಿ ಕುಡಿದರೆ ಚಳಿಗಾಲದಲ್ಲಿ ಆರೋಗ್ಯ ಕಾಪಾಡಲು ಸಹಕಾರಿ. ಇವುಗಳ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.

1. ಮಸಾಲೆ ಟೀ
ಮಸಾಲೆ ಟೀಯನ್ನು ನೀವು ನಾನಾ ರೀತಿ ತಯಾರಿಸಬಹುದು. ಶುಂಠಿ ಹಾಕಿ ಮಾಡಬಹುದು. ಏಲಕ್ಕಿ ಹಾಕಿ ಅಥವಾ ಚಕ್ಕೆ-ಲವಂಗ ಹಾಕಿ ತಯಾರಿಸಿ ಕುಡಿಯಬಹುದು, ಮಸಾಲೆ ಟೀ ಸಾಮಾನ್ಯ ಟೀಗಿಂತ ಸ್ಟ್ರಾಂಗ್ ಆಗಿರುವುದರಿಂದ ಚಳಿಗಾಲದಲ್ಲಿ ಕುಡಿಯಲು ಹಿತ ಅನಿಸುವುದು, ಆರೋಗ್ಯಕ್ಕೂ ಒಳ್ಳೆಯದು.

2. ಬ್ಲ್ಯಾಕ್ ಟೀ
ಇನ್ನು ಬ್ಲ್ಯಾಕ್ ಟೀ ತುಂಬಾನೇ ಒಳ್ಳೆಯದು. ಇದು ಜೀರ್ಣಕ್ರಿಯೆ ಸಹಕಾರಿ. ಇದಕ್ಕೆ ಸಕ್ಕರೆ ಹಾಕದೆ ಕುಡಿದರೆ ತುಂಬಾನೇ ಪ್ರಯೋಜನಕಾರಿಯಾಗಿರುವುದರಿಂದ ಹಾಗೇ ಕುಡಿಯುವುದು ಒಳ್ಳೆಯದು.

3. ಕಾಶ್ಮೀರಿ ಕವಾ
ಗ್ರೀನ್ ಟೀ ಜೊತೆಗ ಸ್ವಲ್ಪ ಕೇಸರಿ, ಚಿಕ್ಕದಾಗಿ ಕತ್ತರಿಸಿದ ಬಾದಾಮಿ, ಏಲಕ್ಕಿ, ಚಕ್ಕೆ, ಲವಂಗ, ಸಕ್ಕರೆ ಸೇರಿಸಿ ಮಾಡುವ ಟೀ ಇದಾಗಿದೆ.

4. ರಾಜಾಸ್ಥಾನದ ಬಜ್ರಾ ರಾಬ್
1 ಚಮಚ ತುಪ್ಪ, ಒಂದೂವರೆ ಚಮಚ ಬೆಲ್ಲದ ಪುಡಿ, ಚಿಟಿಕೆಯಷ್ಟು ಅಜ್ವೈನ್, ಒಣ ಶುಂಠಿ ಪುಡಿ
ಒಂದೂವರೆ ಚಮಚ ಬಜ್ರಾ ಹಿಟ್ಟು (ಕಪ್ಪು ನವಣೆ ಹಿಟ್ಟು)
ತುಪ್ಪವನ್ನು ಬಿಸಿ ಮಾಡಿ ಅದರಲ್ಲಿ ಬಜ್ರಾ ಹಿಟ್ಟು ಸೇರಿಸಿ ಹುರಿದು 1 ಕಪ್ ನೀರು ಹಾಕಿತಿರುಗಿಸುತ್ತಾ ಇರಿ, ನಂತರ ಉರಿ ಕಡಿಮೆ ಮಾಡಿ ಶುಂಠಿ ಪುಡಿ, ಅಜ್ವೈನ್ ಹಾಕಿ 2 ನಿಮಿಷ ತಿರುಗಿಸಿ ನಂತರ . ಇದನ್ನು ಬಿಸಿ-ಬಿಸಿ ಇರುವಾಗಲೇ ಕುಡಿಯಿರಿ.

5. ಶೀತವಾಗಿದ್ದರೆ ಜೇನು ಶುಂಠಿ ಟೀ ಕುಡಿಯಿರಿ
ತುಂಬಾ ಶೀತವಾಗಿದ್ದರೆ ಶುಂಠಿ ಹಾಕಕಿ ತಯಾರಿಸಿದ ಬ್ಲ್ಯಾಕ್ ಟೀಗೆ ಜೇನು ತುಪ್ಪ ಸೇರಿಸಿ ಕುಡಿಯಿರಿ. ಕಡಿಮೆಯಾಗುವುಉದ. ಬೇಕಾದರೆ ಸ್ವಲ್ಪ ನಿಂಬೆರಸ ಸೇರಿಸಿ, ರುಚಿ ಚೆನ್ನಾಗಿರುತ್ತೆ.



Click it and Unblock the Notifications
