Latest Updates
-
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI!
ಇಲ್ಲಿದೆ ಟಾಪ್ 10 ಕುಕ್ಕಿಂಗ್ ಹ್ಯಾಕ್ಸ್, ಟ್ರೈ ಮಾಡಿ ನೋಡಿ
ಕೆಲವೊಂದು ಕಿಚನ್ ಹ್ಯಾಕ್ಸ್ ಇರುತ್ತದೆ, ಈ ಹ್ಯಾಕ್ಸ್ ತಿಳಿದರೆ ಕಿಚನ್ ಕೆಲಸ ತುಂಬಾ ಸುಲಭವಾಗುವುದು. ನಾವಿಲ್ಲಿ ಕೆಲ ಟಿಪ್ಸ್ ನೀಡಿದ್ದೇವೆ, ಇದು ಆಹಾರವನ್ನು ಉಳಿಸಲು ತುಂಬಾ ಸಹಕಾರಿಯಾಗಿದೆ:

ಮೊಟ್ಟೆಯ ಸಿಪ್ಪೆ ಸುಲಿಯಲು
ಮೊಟ್ಟೆಯ ಸಿಪ್ಪೆ ಸುಲಿಯುವುದು ಸುಲಭ ಆದರೆ ಕಷ್ಟವೂ ಹೌದು, ಕೆಲವೊಮ್ಮೆ ಸಿಪ್ಪೆ
ಜೊತೆಗೆ ಮೊಟ್ಟೆಯೂ ಅಂಟಿಕೊಂಡು ಬರುತ್ತದೆ, ನಾವೇ ತಿನ್ನುವುದಾದರೆ ಹೇಗೆ ಸುಲಿದರೂ
ಒಕೆ, ಆದರೆ ಬೇರೆಯವರಿಗ ನೀಡುವಾಗ ಶೇಪ್ ಚೆನ್ನಾಗಿರಬೇಕು ಅಲ್ವಾ? ಹಾಗಾಗಿ
ಮೊಟ್ಟೆ ಬೇಯಿಸುವಾಗ ಸ್ವಲ್ಪ ವಿನೆಗರ್ ಆ ನೀರಿಗೆ ಹಾಕಿದರೆ ಸಾಕು ಸಿಪ್ಪೆ
ಚೆನ್ನಾಗಿ ಸುಲಿದು ಬರುತ್ತದೆ.
ನಿಂಬೆಣ್ಣಿನಿಂದ ರಸ ಚೆನ್ನಾಗಿ ಬರದಿದ್ದರೆ
ನಿಂಬೆಹಣ್ಣು ಹಿಂಡಿದಾಗ ನೀರು ಕಡಿಮೆ ಬರುತ್ತಿದೆ ಎಂದಾದರೆ ಮೈಕ್ರೋವೇವ್ನಲ್ಲಿ
30-40 ಸೆಕೆಂಡ್ ಬಿಸಿ ಮಾಡಿದರೆ ಸಾಕು ನೀರು ಚೆನ್ನಾಗಿ ಬರುತ್ತದೆ, ಮೈಕ್ರೋವೇವ್
ಇಲ್ಲದಿದ್ದರೆ ಗ್ಯಾಸ್ನಲ್ಲಿ ಸ್ವಲ್ಪ ಬಿಸಿ ಮಾಡಿ ಹಿಂಡಿ ರಸ ಚೆನ್ನಾಗಿ
ಬರುತ್ತದೆ.
ಕಿವಿ ಹಣ್ಣಿನ ಸಿಪ್ಪೆ ಸುಲಿಯುವುದು ಹೆಗೆ?
ಕಿವಿ ಹಣ್ಣಿನ ಸಿಪ್ಪೆ ಸುಲಿಯವುದು ಕೂಡ ಕಷ್ಟವಾಗುವುದು, ಇದಕ್ಕೆ ಐಡಿಯಾ ಎಂದರೆ
ಕಿವಿಹಣ್ಣಿನ ಮೇಲ್ಭಾಗ , ಕೆಳ ಭಾಗ ಕತ್ತರಿಸಿ ನಂತರ ಸಿಪ್ಪೆ ಹಾಗೂ ಹಣ್ಣಿನ ನಡುವೆ
ಸ್ಪೂನ್ ಹಾಕಿ ತಿರುಗಿಸಿದರೆ ಸಾಕು ಕಿವಿಹಣ್ಣಿನ ಸಿಪ್ಪೆ
ಪ್ರತ್ಯೇಕವಾಗುವುದು.
ಬಟರ್ ಫ್ರೂಟ್ ಹಣ್ಣು ಕತ್ತರಿಸುವುದು ಹೇಗೆ
ಇದರ ಸಿಪ್ಪೆ ಸುಲಿಯಲು ನೀವು ಕಷ್ಟ ಪಡಬೇಕಾಗಿಲಲ್ಲ, ಸಮ ಅರ್ಧ ಭಾಗ ಮಾಡಿ, ಅದರ
ಬಿಜ ತೆಗೆದರೆ ಸಾಕು ಸ್ಪೂನ್ನಲ್ಲಿ ತೆಗೆದು ತಿನ್ನಬಹುದು, ಜ್ಯೂಸ್ಗೆ ಆದರೂ ಈ
ರೀತಿಯ ತೆಗೆಯಬಹುದು.
ಬೆಣ್ಣ ಹಣ್ಣು ಅಥವಾ ಬಟರ್ ಫ್ರೂಟ್ ಕತ್ತರಿಸಿಟ್ಟು ಮಾರನೇಯ ದಿನ
ಬಳಸುವುದಾದರೆ\
ಇವತ್ತಿಗೆ ಅರ್ಧ ಸಾಕು, ನಾಳೆ ಅರ್ಧ ತಿನ್ನುವ ಎಂದಾದರೆ ನೀವು ಬಟರ್ ಫ್ರೂಟ್
ಕತ್ತರಿಸಿ, ಬೀಜ ಇರುವ ಪೀಸ್ ಅಲ್ಲ, ಮತ್ತೊಂದು ಪೀಸ್ ತೆಗೆದು ಬಳಸಿ, ನಂತರ ಬೀಜ
ಸಹಿತ ಇರುವ ಹಣ್ಣನ್ನು ಮತ್ತೊಂದು ಸಿಪ್ಪೆಯಿಂದ ಮುಚ್ಚಿಟ್ಟು ಪ್ರಿಡ್ಜ್ನಲ್ಲಿ
ಇಟ್ಟು ಮಾರನಯ ದಿನಕ್ಕೆ ಬಳಸಬಹುದು.
ನಿಂಬೆರಸ ಒಂದೆರಡು ಹನಿ ಸಾಕು ಎಂದಾದರೆ
ನೀವು ನಿಂಬೆಹಣ್ಣು ಒಂದೆರಡು ಹನಿಗೋಸ್ಕರ ಕತ್ತರಿಸಿದರೆ ಅದು ವೇಸ್ಟ್ ಆಗಬಹುದು,
ಬದಲಿಗೆ ಚಿಕ್ಕ ರಂಧ್ರ ಮಾಡಿ ರಸ ಹಿಂಡಿದರೆ ಸಾಕು.
ಶುಂಠಿಯನ್ನು ಫ್ರೀಝರ್ನಲ್ಲಿ ಇಟ್ಟರೆ ತುರಿಯುವುದು
ಸುಲಭ
ಶುಂಠಿ ತುರಿಯುವುದು ಕಷ್ಟ, ಅದನ್ನು ಫ್ರೀಝರ್ನಲ್ಲಿ ಇಟ್ಟರೆ ತುರಿಯುವುದು ಸುಲಭ,
ನಿಮಗೆ ಬೆಕಾದಷ್ಟು ಶುಂಠಿಯನ್ನು ಸುಲಭವಾಗಿ ತುರಿಯಬಹುದು.
ಬೆಳ್ಳುಳ್ಳಿಯನ್ನು ಮೈಕ್ರೋವೇವ್ನಲ್ಲಿಡಿ
ನೀವು ಬೆಳ್ಳುಳ್ಳಿಯನ್ನು ಮೈಕ್ರೀವೇವ್ ಪಾತ್ರೆಯಲ್ಲಿ ಇಟ್ಟು 30-40 ಸೆಕೆಂಡ್
ಇಟ್ಟು ತೆಗೆದರೆ ಸಾಕು ಬೆಳ್ಳುಳ್ಳಿಯ ಸಿಪ್ಪೆ ಸುಲಿಯುವುದು ಸುಲಭವಾಗುವುದು,
ಫಂಕ್ಷನ್ಗಲಲ್ಲಿ ಸಹಕಾರಿ ಈ ಟಿಪ್ಸ್.
ಕೊತ್ತಂಬರಿ ಸೊಪ್ಪನ್ನು ಫ್ರೆಷ್ ಆಗಿಡಲು ಟಿಪ್ಸ್
ಕೊತ್ತಂಬರಿ ಸೊಪ್ಪನ್ನು ನೀವು ಗ್ಲಾಸ್ ನೀರಿನಲ್ಲಿ ಹಾಕಿಟ್ಟರೆ ಕೊತ್ತಂಬರಿ
ಸೊಪ್ಪು ವಾರದವರೆಗೆ ಫ್ರೆಷ್ ಆಗಿರುತ್ತದೆ.
ಆದರೆ ಕೊತ್ತಂಬರಿ ಸೊಪ್ಪನ್ನು ನೀರಿನಲ್ಲಿ ಇಟ್ಟಾಗ ಅದರ ಸೊಪ್ಪನ್ನು
ಪ್ಲಾಸ್ಟಿಕ್ನಿಂದ ಮುಚ್ಚಿಡಬೇಕು, ಹೀಗೆ ಮಾಡಿದರೆ ಕೊತ್ತಂಬರಿ, ಪುದೀನಾ ಇವೆಲ್ಲಾ
ಫ್ರೆಷ್ ಆಗಿರುತ್ತದೆ.
ಫ್ರಿಡ್ಜ್ನಲ್ಲಿಟ್ಟ ಮೊಟ್ಟೆ ತುಂಬಾ ತಣ್ಣಗಾದರೆ
ಫ್ರಿಡ್ಜ್ನಲ್ಲಿಟ್ಟ ಮೊಟ್ಟೆ ತುಂಬಾ ತಣ್ಣಗಾದರೆ ಅದನ್ನು ತೆಗೆದು ಸ್ವಲ್ಪ
ಹೊತ್ತು ಬಿಸಿ ನೀರಿನಲ್ಲಿ ಹಾಕಿಟ್ಟು ನಂತರ ಬಳಸಬಹುದು, ತುಂಬಾ ಹೊತ್ತು ಇಡಬೇಡಿ,
ಮೊಟ್ಟೆ ಬೆಂದು ಹೋಗುತ್ತದೆ, ನೀರು ಕೂಡ ಸಾಧಾರಣ ಬಿಸಿ ಸಾಕು.



Click it and Unblock the Notifications
