Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
ರೆಸಿಪಿ: ಆಹಾ! ಟೇಸ್ಟಿ...ಟೇಸ್ಟಿ ಟೊಮೆಟೊ ತೊಕ್ಕು
ತೊಕ್ಕು ಇದೊಂದು ಅನ್ನದ ಜೊತೆ ನೆಚ್ಚಿಕೊಂಡು ಸವಿಯಬಹುದಾದ ಸೈಡ್ ಐಟಂ ಆಗಿದೆ. ಹುಣಸೆ ಹಣ್ಣಿನ ತೊಕ್ಕು, ಟೊಮೆಟೊ ತೊಕ್ಕು ಹೀಗೆ ಬಗೆ ಬಗೆಯ ತೊಕ್ಕು ತಯಾರಿಸಲಾಗುವುದು, ಇದನ್ನು ಉಪ್ಪಿನಕಾಯಿ ಬೇಕಾದರೂ ಹೇಳಬಹುದು.

ನಾವಿಲ್ಲಿ ಟೊಮೆಟೊ ತೊಕ್ಕು ಮಾಡುವುದರ ಬಗ್ಗೆ ಹೇಳಿದ್ದೇವೆ, ಟೊಮೆಟೊ ತೊಕ್ಕು ಕೂಡ ಹಲವಾರು ರುಚಿಯಲ್ಲಿ ತಯಾರಿಸುತ್ತಾರೆ. ಈ ಟೊಮೆಟೊ ತೊಕ್ಕು ಮಾಡಿಟ್ಟರೆ ಒಂದು ತುತ್ತು ಅನ್ನ ಜಾಸ್ತಿಯೇ ತಿನ್ನುತ್ತೇವೆ, ಅಷ್ಟೊಂದು ರುಚಿ ಅನಿಸುವುದು. ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:
Recipe By: Reena TK
Recipe Type: Pickle
Serves: depend
-
ಬೇಕಾಗುವ ಸಾಮಗ್ರಿ
3-4 ಹಣ್ಣಾದ ಟೊಮೆಟೊ
2 ಹಸಿ ಮೆಣಸಿನಕಾಯಿ
1 ಚಮಚ ಸಾಸಿವೆ
1 ಚಮಚ ಜೀರಿಗೆ
ಅರ್ಧ ಚಮಚ ಮೆಂತೆ
ಸ್ವಲ್ಪ ಕರಿಬೇವು
1 ಚಮಚ ಖಾರದ ಪುಡಿ
ಸ್ವಲ್ಪ ಇಂಗು2 ಚಮಚ ಎಳ್ಳೆಣ್ಣೆ
ರುಚಿಗೆ ತಕ್ಕ ಉಪ್ಪು
-
ಮಾಡುವ ವಿಧಾನ
* ಟೊಮೆಟೊ ಮತ್ತು ಹಸಿ ಮೆಣಸಿನಕಾಯಿಯನ್ನು ಚಿಕ್ಕದಾಗಿ ಕತ್ತರಿಸಿ ಬೌಲ್ನಲ್ಲಿ ಇಡಿ.
* ದಪ್ಪ ತಳವಿರುವ ಪಾತ್ರೆಯನ್ನು ಬಿಸಿ ಮಾಡಿ ಅದರಲ್ಲಿ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಸಾಸಿವೆ ಹಾಕಿ. ಅದು ಚಟ್ಪಟ್ ಶಬ್ದ ಮಾಡುವಾಗ ಜೀರಿಗೆ ಹಾಕಿ, ನಂತರ ಮಂತೆ, ಸ್ವಲ್ಪ ಇಂಗು, ಕರಿಬೇವು ಹಾಕಿ ಒಂದೆರಡು ಸೆಕೆಂಡ್ ಆಡಿಸಿ.
* ಈಗ ಕತ್ತರಿಸಿದ ಟೊಮೆಟೊವನ್ನು ಹಾಕಿ ಉರಿ ಕಡಿಮೆ ಮಾಡಿ ಪಾತ್ರೆಯ ಬಾಯಿ ಮುಚ್ಚಿ 10-15 ನಿಮಿಷ ಬೇಯಿಸಿ, ಈ ಮಧ್ಯೆ ಒಂದೆರಡು ಬಾರಿ ಸೌಟ್ನಿಂದ ಆಡಿಸಿ.
* ನಂತರ ಖಾರದ ಪುಡಿ ಸೇರಿಸಿ, ರುಚಿಗೆ ತಕ್ಕ ಉಪ್ಪು ಹಾಕಿ, ಪ್ಯಾನ್ನ ಬಾಯಿ ಮುಚ್ಚದೆ ಬೇಯಿಸಿ.
* ಅದರ ನೀರಿನಂಶ ಆವಿಯಾಗಲಿ.ನಂತರ ಗ್ಯಾಸ್ ಆಫ್ ಮಾಡಿ ತಣ್ಣಗಾದ ಮೇಲೆ ಅದನ್ನು ಗ್ಲಾಸ್ ಜಾರ್ನಲ್ಲಿ ಹಾಕಿಡಿ. ಇದನ್ನು ಇಡ್ಲಿ, ದೋಸೆ, ಅನ್ನ ಇವುಗಳ ಜೊತೆ ಸರ್ವ್ ಮಾಡಿ.
- ನೀವು ಇದನ್ನು ತುಂಬಾ ಗಟ್ಟಿಯಾಗಿ ಬೇಕೆಂದರೆ ನೀರಿನಂಶ ಸಂಫೂರ್ಣ ಆವಿಯಾಗುವವರೆಗೆ ಬೇಯಿಸಬೇಕು. ಇದನ್ನು ಹುಳಿ ಟೊಮೆಟೊ ಹಾಕಿದರೆ ಮತ್ತಷ್ಟು ರುಚಿ.
- ಕೊಬ್ಬು - 2 ಗ್ರಾಂ
- ಕಾರ್ಬ್ಸ್ - 2 ಗ್ರಾಂ
- ನಾರಿನಂಶ - 0.6ಗ್ರಾಂ



Click it and Unblock the Notifications