Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಮಾಮೂಲಿ ಆಮ್ಲೆಟ್ ಬಿಡಿ.. ಈ ಸೌತ್ ಇಂಡಿಯನ್ ಸ್ಟೈಲ್ ಟೊಮೆಟೊ ಆಮ್ಲೆಟ್ ಮಾಡಿ! ಈಸಿ ರೆಸಿಪಿ ಇಲ್ಲಿದೆ
ಯಾವತ್ತೂ ತಿಂದಿರದ ಹೊಸ ಶೈಲಿಯ ಟೊಮೆಟೊ ಆಮ್ಲೆಟ್! ಒಮ್ಮೆ ತಿಂದರೆ ದಿನಾ ಇದನ್ನೇ ಕೇಳ್ತೀರಾ. ಹೌದು, ಪ್ರೊಟೀನ್ ಸಮೃದ್ಧ ಮೊಟ್ಟೆಯ ಆಮ್ಲೆಟ್ ( Egg Omelette) ಬೆಳಗಿನ ಉಪಾಹಾರಕ್ಕೆ ಅತ್ಯುತ್ತಮ ಆಯ್ಕೆಯಾಗಿ ಹೆಚ್ಚು ಜನಪ್ರಿಯವಾಗಿದೆ. ಆದರೆ, ಸಾಮಾನ್ಯವಾಗಿ ಮಸಾಲೆ ಮತ್ತು ಈರುಳ್ಳಿ ಬಳಸಿ ತಯಾರಿಸುವ ಆಮ್ಲೆಟ್‌ಗಿಂತ ವಿಭಿನ್ನವಾದ ಟೊಮೆಟೊ ಆಮ್ಲೆಟ್ (Tomato Omelette) ಖಂಡಿತಾ ಹೊಸ ರುಚಿ ನೀಡುತ್ತದೆ.
ಹಣ್ಣಾದ ಟೊಮೆಟೊದೊಳಗೆ ಮೊಟ್ಟೆಯ ಮಿಶ್ರಣವನ್ನು ತುಂಬಿ ಮಾಡುವ ಈ ಸ್ಪೆಷಲ್ ರೆಸಿಪಿ, ನೋಡಲು ಆಕರ್ಷಕ ಮತ್ತು ರುಚಿಕರವಾಗಿರುತ್ತದೆ. ಇದು ಮಕ್ಕಳಿಗೆ ಇಷ್ಟವಾಗುವಂತಹ ಆರೋಗ್ಯಕರ ತಿನಿಸಾಗಿದ್ದು, ಸಾಂಪ್ರದಾಯಿಕ ಆಮ್ಲೆಟ್‌ಗಳಿಂದ ಬೇಸರಗೊಂಡವರಿಗೆ ಉತ್ತಮ ಬದಲಾವಣೆ ನೀಡುತ್ತದೆ. ಇದನ್ನು ತಯಾರಿಸುವುದು ಅತ್ಯಂತ ಸುಲಭ. ಈ ಸ್ಪೆಷಲ್ 'ಟೊಮೆಟೊ ಆಮ್ಲೆಟ್' ತಯಾರಿಸಲು ಬೇಕಾದ ಸಾಮಗ್ರಿಗಳು ಮತ್ತು ಮಾಡೋದು ಹೇಗೆ (Tomato Omelette Recipe) ಎಂದು ತಿಳಿಯೋಣ ಬನ್ನಿ.

ಟೊಮೆಟೊ ಆಮ್ಲೆಟ್ ಏಕೆ ಬೇಕು?
ಈ ಟೊಮೆಟೊ ಆಮ್ಲೆಟ್ ಹಲವು ಕಾರಣಗಳಿಗೆ ವಿಶೇಷವಾಗಿದೆ. ಇದು ಮೊಟ್ಟೆಯ ಪ್ರೊಟೀನ್‌ನೊಂದಿಗೆ ಟೊಮೆಟೊದ ಲೈಕೋಪಿನ್ ಹಾಗೂ ವಿಟಮಿನ್ ಸಿ ಅಂಶಗಳನ್ನು ಒದಗಿಸುತ್ತದೆ. ಇದರ ವಿಭಿನ್ನ, ಆಕರ್ಷಕ ನೋಟ ಮಕ್ಕಳಿಗೆ ಪ್ರಿಯ. ಅಲ್ಲದೆ, ಇದನ್ನು ಹಬೆಯಲ್ಲೇ ಬೇಯಿಸುವುದರಿಂದ ಅತಿ ಕಡಿಮೆ ಎಣ್ಣೆಯ ಬಳಕೆಯಾಗುತ್ತದೆ. ಇದು ಆರೋಗ್ಯಕರ ಆಯ್ಕೆಯೂ ಹೌದು.
ಟೊಮೆಟೊ ಆಮ್ಲೆಟ್‌ಗೆ ಬೇಕಾಗುವ ಸಾಮಗ್ರಿಗಳು
• ದೊಡ್ಡ ಗಾತ್ರದ ಟೊಮೆಟೊ - ಎರಡು
• ಮೊಟ್ಟೆ - ಒಂದು (ಅಗತ್ಯಕ್ಕೆ ತಕ್ಕಂತೆ)
• ಕ್ಯಾಪ್ಸಿಕಂ - ಅರ್ಧ
• ಈರುಳ್ಳಿ - ಅರ್ಧ
• ಹಸಿ ಮೆಣಸಿನಕಾಯಿ - ಎರಡು (ಖಾರಕ್ಕೆ ತಕ್ಕಂತೆ)
• ಕಾಳುಮೆಣಸಿನ ಪುಡಿ - ಅರ್ಧ ಚಮಚ
• ಕೊತ್ತಂಬರಿ ಸೊಪ್ಪು - ಒಂದು ಚಮಚ
• ಎಣ್ಣೆ ಅಥವ ಬೆಣ್ಣೆ - ಎರಡು ಚಮಚ
• ಉಪ್ಪು - ರುಚಿಗೆ ತಕ್ಕಷ್ಟು
ಟೊಮೆಟೊ ಆಮ್ಲೆಟ್ ತಯಾರಿಸುವ ವಿಧಾನ
- ಈ ವಿಶೇಷ ಖಾದ್ಯದ ತಯಾರಿಕೆಯಲ್ಲಿ ಸ್ಟಫಿಂಗ್ ಪ್ರಕ್ರಿಯೆಯೇ ಮುಖ್ಯವಾಗಿದೆ.
- ಮೊದಲು, ಗಟ್ಟಿಯಿರುವ ದೊಡ್ಡ ಟೊಮೆಟೊಗಳನ್ನು ತೊಳೆದು ಮೇಲ್ಭಾಗವನ್ನು ಕತ್ತರಿಸಿ ಮುಚ್ಚಳದಂತೆ ಪಕ್ಕಕ್ಕಿಡಿ.
- ನಂತರ ಚಮಚದ ಸಹಾಯದಿಂದ ಒಳಗಿನ ತಿರುಳನ್ನು ಎಚ್ಚರಿಕೆಯಿಂದ ತೆಗೆದು ಬಟ್ಟಲಿಗೆ ಹಾಕಿ. ಈಗ ಟೊಮೆಟೊ ಕಪ್‌ನಂತೆ ಸಿದ್ಧವಾಗಿರುತ್ತದೆ.
- ಟೊಮೆಟೊ ತಿರುಳಿರುವ ಬಟ್ಟಲಿಗೆ ಒಂದು ಮೊಟ್ಟೆ ಒಡೆದು ಹಾಕಿ. ಇದಕ್ಕೆ ಹೆಚ್ಚಿದ ಈರುಳ್ಳಿ, ಕ್ಯಾಪ್ಸಿಕಂ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಕಾಳುಮೆಣಸಿನ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ನಂತರ ಎಲ್ಲವನ್ನೂ ಚೆನ್ನಾಗಿ ಮಿಸ್ಕ್ ಮಾಡಿ.
- ಸಿದ್ಧಪಡಿಸಿದ ಮೊಟ್ಟೆ ಮಿಶ್ರಣವನ್ನು ಖಾಲಿ ಮಾಡಲಾದ ಟೊಮೆಟೊ ಕಪ್‌ಗಳೊಳಗೆ ಚಮಚದ ಸಹಾಯದಿಂದ ತುಂಬಿಸಿ. ನಂತರ ಕತ್ತರಿಸಿಟ್ಟ ಟೊಮೆಟೊದ ಮೇಲ್ಭಾಗದಿಂದ ಅದನ್ನು ಮುಚ್ಚಿ.
- ಒಂದು ಬಾಣಲೆ ಅಥವಾ ಪ್ಯಾನ್‌ಗೆ ಎಣ್ಣೆ ಅಥವಾ ಬೆಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಕಾದ ಮೇಲೆ ಸ್ಟಫಿಂಗ್ ಮಾಡಿದ ಟೊಮೆಟೊಗಳನ್ನು ನೇರವಾಗಿ ಇರಿಸಿ. ಉರಿಯನ್ನು ಕಡಿಮೆ ಮಾಡಿ ಮುಚ್ಚಳದಿಂದ ಮುಚ್ಚಿ ಬೇಯಿಸಿ.
- ಟೊಮೆಟೊದ ಒಳಗಿನ ಮೊಟ್ಟೆ ಮಿಶ್ರಣವು ಸ್ವಲ್ಪ ಬೆಂದ ನಂತರ, ಟೊಮೆಟೊಗಳನ್ನು ಬಹಳ ಜಾಗರೂಕತೆಯಿಂದ ತಿರುಗಿಸಿ ಹಾಕಿ. ಎಲ್ಲಾ ಕಡೆ ಸಮನಾಗಿ ಬೇಯುವಂತೆ ನೋಡಿಕೊಳ್ಳಿ. ಟೊಮೆಟೊ ಮೆತ್ತಗಾಗಿ ಒಳಗಿನ ಆಮ್ಲೆಟ್ ಗಟ್ಟಿಯಾಗುವವರೆಗೆ ಬೇಯಿಸುವುದನ್ನು ಮುಂದುವರಿಸಿ.
- ಚೆನ್ನಾಗಿ ಬೆಂದ ನಂತರ ಟೊಮೆಟೊಗಳನ್ನು ಬಾಣಲೆಯಿಂದ ತೆಗೆದು ಒಂದು ಪ್ಲೇಟ್‌ಗೆ ವರ್ಗಾಯಿಸಿ. ಅದನ್ನು ಮಧ್ಯದಲ್ಲಿ ಕತ್ತರಿಸಿದರೆ ಒಳಗಿನ ಆಮ್ಲೆಟ್ ಲೇಯರ್ ಸುಂದರವಾಗಿ ಕಾಣುತ್ತದೆ. ಇದರ ಮೇಲೆ ಸ್ವಲ್ಪ ಕೊತ್ತಂಬರಿ ಸೊಪ್ಪು ಚಿಮುಕಿಸಿ.
- ಈ ಪರಿಪೂರ್ಣ ಮತ್ತು ಪೌಷ್ಟಿಕ ಖಾದ್ಯವನ್ನು ಬಿಸಿಬಿಸಿಯಾಗಿ ಪುದೀನಾ ಚಟ್ನಿ ಅಥವಾ ಟೊಮೆಟೊ ಕೆಚಪ್ ಜೊತೆ ಸವಿಯಿರಿ. ನಿಮ್ಮ ಬೆಳಗ್ಗಿನ ಉಪಾಹಾರಕ್ಕೆ ಇದೊಂದು ಹೊಸ ಹಾಗೂ ಆರೋಗ್ಯಕರ ಆಯ್ಕೆಯಾಗಲಿದೆ.



Click it and Unblock the Notifications
