For Quick Alerts
ALLOW NOTIFICATIONS  
For Daily Alerts

ಟೊಮೆಟೊ ಚಿಕನ್ ಸೆಮಿ ಡ್ರೈ ರೆಸಿಪಿ

Posted By:
|

ಈ ವೀಕೆಂಡ್‌ಗೆ ಸ್ಪೆಷಲ್‌ ಚಿಕನ್ ರೆಸಿಪಿ ಟ್ರೈ ಮಾಡಬೇಕೆಂದು ಬಯಸುತ್ತಿದ್ದೀರಾ? ಹಾಗಾದರೆ ಇಲ್ಲಿ ಟೊಮೆಟೊ ಚಿಕನ್ ಸೆಮಿ ಡ್ರೈ ರೆಸಿಪಿ ನೀಡಿದ್ದೇವೆ. ಈ ರೆಸಿಪಿ ಮಾಡುವುದು ಸುಲಭ ಹಾಗೂ ರುಚಿಯಲ್ಲಿ ಕೂಡ ಯಾವುದೇ ರೆಸ್ಟೋರೆಂಟ್‌ ಅಡುಗೆಗಿಂತ ಕಡಿಮೆಯಿಲ್ಲ.

Chicken Semi Dry Recipe

ಟೊಮೆಟೊ ಚಿಕನ್ ಸೆಮಿ ಡ್ರೈ ಅನ್ನ, ನಾನ್‌, ಚಪಾತಿ, ರೊಟ್ಟಿ ಜೊತೆ ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ಇದನ್ನು ಸ್ಟಾಟರ್ಸ್ ರೀತಿ ಬಳಸಬೇಕೆಂದು ಬಯಸುವುದಾದರೆ ಇನ್ನು ಸ್ವಲ್ಪ ಡ್ರೈ ಮಾಡಿದರೆ ತುಂಬಾ ಡ್ರೈಯಾಗಿರುತ್ತದೆ. ಈ ರೆಸಿಪಿಗೆ ಟೊಮೆಟೊ ಸ್ವಲ್ಪ ಹೆಚ್ಚಾಗಿಯೇ ಬೇಕಾಗುತ್ತದೆ. ಅರ್ಧ ಕೆಜಿ ಚಿಕನ್‌ಗೆ 6-7 ಟೊಮೆಟೊ ಬೇಕಾಗುವುದು. ಟೊಮೆಟೊ ಹೆಚ್ಚು ಬಳಸಿರುವುದರಿಂದ ಚಿಕನ್ ಬೇಯುವಾಗ ಅದರ ಹುಳಿ ಹೀರಿಕೊಂಡು ರುಚಿ ಚೆನ್ನಾಗಿರುತ್ತದೆ. ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

Tomato Chicken Semi Dry Recipe,ಟೊಮೆಟೊ ಚಿಕನ್ ಸೆಮಿ ಡ್ರೈ ರೆಸಿಪಿ
Tomato Chicken Semi Dry Recipe,ಟೊಮೆಟೊ ಚಿಕನ್ ಸೆಮಿ ಡ್ರೈ ರೆಸಿಪಿ
Prep Time
20 Mins
Cook Time
30M
Total Time
50 Mins

Recipe By: Reena TK

Recipe Type: Meal

Serves: 4

Ingredients
  • ಬೇಕಾಗುವ ಸಾಮಗ್ರಿ

    ಚಿಕನ್ ಅರ್ಧ ಕೆಜಿ

    ಟೊಮೆಟೊ (6-7)

    ಈರುಳ್ಳಿ 1

    ಹಸಿ ಮೆಣಸು 2

    ಅರಿಶಿಣ ಅರ್ಧ ಚಮಚ

    ಕೆಂಪು ಮೆಣಸಿನ ಪುಡಿ 1 ಚಮಚ

    ಕೊತ್ತಂಬರಿ ಪುಡಿ 2 ಚಮಚ

    ಗರಂ ಮಸಾಲ 1/4 ಚಮಚ

    ಸಾಸಿವೆ ಅರ್ಧ ಚಮಚ

    ಜೀರಿಗೆ ಅರ್ಧ ಚಮಚ

    ಶುಂಠಿ-ಬೆಳ್ಳುಳ್ಳಿ ಪೇಸ್ಟ್ (1 ಚಮಚ)

    ಎಣ್ಣೆ 2 ಚಮಚ

    ರುಚಿಗೆ ತಕ್ಕ ಉಪ್ಪು

    ಸ್ವಲ್ಪ ಕರಿಬೇವು

    ಸ್ವಲ್ಪ ಕೊತ್ತಂಬರಿ ಸೊಪ್ಪು

Red Rice Kanda Poha
How to Prepare
  • ಮಾಡುವುದು ಹೇಗೆ?

    * ಈರುಳ್ಳಿ, ಹಸಿಮೆಣಸು ಕತ್ತರಿಸಿ.

    * ಟೊಮೆಟೊ ಕತ್ತರಿಸಿ, ಅದರಲ್ಲಿ ಅರ್ಧ ಟೊಮೆಟೊ ತೆಗೆದು ಪೇಸ್ಟ್ ಮಾಡಿ ಇಡಿ.

    * ದಪ್ಪ ತಳವಿರುವ ಬಾಣಲೆಗೆ ಎಣ್ಣೆ ಹಾಕಿ.

    * ಎಣ್ಣೆ ಬಿಸಿಯಾದಾಗ ಸಾಸಿವೆ, ಜೀರಿಗೆ ಹಾಕಿ.

    * ಸಾಸಿವೆ ಜೀರಿಗೆ ಚಟ್‌ಪಟ್ ಶಬ್ದ ಮಾಡುವಾಗ ಕರಿಬೇವು ಹಾಕಿ, ಈರುಳ್ಳಿ, ಹಸಿ ಮೆಣಸು ಹಾಕಿ.

    * ಈಗ ಕತ್ತರಿಸಿಟ್ಟ ಟೊಮೆಟೊ ಹಾಕಿ, ಟೊಮೆಟೊ ಮೆತ್ತಗಾಗುವವರೆಗೆ ಬೇಯಿಸಿ. ಖಾರದ ಪುಡಿ, ಕೊತ್ತಂಬರಿ ಪುಡಿ, ಗರಂ ಮಸಾಲ, ಅರಿಶಿಣ ಪುಡಿ ಹಾಕಿ.

    * ನಂತರ ಪೇಸ್ಟ್ ಮಾಡಿದ ಟೊಮೆಟೊ ಹಾಕಿ ಮತ್ತೆ 2 ನಿಮಿಷ ಸೌಟ್‌ನಿಂದ ಆಡಿಸಿ.

    * ಚಿಕನ್ ಹಾಕಿ ಮಿಕ್ಸ್ ಮಾಡಿ, ರುಚಿಗೆ ತಕ್ಕ ಉಪ್ಪು ಸೇರಿಸಿ ಪಾತ್ರೆಯ ಬಾಯಿ ಮುಚ್ಚಿ ಕಡಿಮೆ ಉರಿಯಾಗಿ ಬೇಯಿಸಿ. ಹೀಗೆ ಬೇಯಿಸುವಾಗ ಆಗಾಗ ಸೌಟ್‌ನಿಂದ ಆಡಿಸುತ್ತಾ ಇರಿ.

    * ಚಿಕನ್ ಬೆಂದ ಮೇಲೆ ಮುಚ್ಚಳ ತೆಗೆದು ಸ್ವಲ್ಪ ಸೆಮಿ ಡ್ರೈಯಾಗುವವರೆಗೆ ಬೇಯಿಸಿ.

    * ಈಗ ಕೊಒತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಟೊಮೆಟೊ ಚಿಕನ್ ಸೆಮಿ ಡ್ರೈ ರೆಡಿ.

Instructions
  • * ಇಲ್ಲಿ ಅಡುಗೆಯನ್ನು ನಾನ್‌ಸ್ಟಿಕ್ ಬಾಣಲಿ ಬದಲಿಗೆ ಕಬ್ಬಿಣದ ಬಾಣಲಿ ಬಳಸಿ ಮಾಡಲಾಗಿದೆ. ಕಬ್ಬಿಣದ ಬಾಣಲಿಯ ತಳ ದಪ್ಪವಿರುವುದರಿಂದ ಚಿಕನ್ ಬೇಗನೆ ತಳ ಹಿಡಿಯುವುದಿಲ್ಲ,, ರುಚಿಯೂ ಚೆನ್ನಾಗಿರುತ್ತದೆ.
Nutritional Information
  • servingSize: - 4
  • calories: - 220 cal
  • fat : - 136.7g
  • Protein: - 15.1g
  • Carbs - 7.7g

ಮಾಡುವುದು ಹೇಗೆ

* ಈರುಳ್ಳಿ, ಹಸಿಮೆಣಸು ಕತ್ತರಿಸಿ.

Chicken Semi Dry Recipe

* ಟೊಮೆಟೊ ಕತ್ತರಿಸಿ, ಅದರಲ್ಲಿ ಅರ್ಧ ಟೊಮೆಟೊ ತೆಗೆದು ಪೇಸ್ಟ್ ಮಾಡಿ ಇಡಿ.

Chicken Semi Dry Recipe

* ದಪ್ಪ ತಳವಿರುವ ಬಾಣಲೆಗೆ ಎಣ್ಣೆ ಹಾಕಿ.ಎಣ್ಣೆ ಬಿಸಿಯಾದಾಗ ಸಾಸಿವೆ, ಜೀರಿಗೆ ಹಾಕಿ.

Chicken Semi Dry Recipe

* ಸಾಸಿವೆ ಜೀರಿಗೆ ಚಟ್‌ಪಟ್ ಶಬ್ದ ಮಾಡುವಾಗ ಕರಿಬೇವು ಹಾಕಿ, ಈರುಳ್ಳಿ, ಹಸಿ ಮೆಣಸು ಹಾಕಿ.

Chicken Semi Dry Recipe

* ಈಗ ಕತ್ತರಿಸಿಟ್ಟ ಟೊಮೆಟೊ ಹಾಕಿ, ಟೊಮೆಟೊ ಮೆತ್ತಗಾಗುವವರೆಗೆ ಬೇಯಿಸಿ. ಖಾರದ ಪುಡಿ, ಕೊತ್ತಂಬರಿ ಪುಡಿ, ಗರಂ ಮಸಾಲ, ಅರಿಶಿಣ ಪುಡಿ ಹಾಕಿ.ನಂತರ ಪೇಸ್ಟ್ ಮಾಡಿದ ಟೊಮೆಟೊ ಹಾಕಿ ಮತ್ತೆ 2 ನಿಮಿಷ ಸೌಟ್‌ನಿಂದ ಆಡಿಸಿ.

Chicken Semi Dry Recipe

* ಚಿಕನ್ ಹಾಕಿ ಮಿಕ್ಸ್ ಮಾಡಿ, ರುಚಿಗೆ ತಕ್ಕ ಉಪ್ಪು ಸೇರಿಸಿ ಪಾತ್ರೆಯ ಬಾಯಿ ಮುಚ್ಚಿ ಕಡಿಮೆ ಉರಿಯಾಗಿ ಬೇಯಿಸಿ. ಹೀಗೆರ ಬೇಯಿಸುವಾಗ ಆಗಾಗ ಸೌಟ್‌ನಿಮದ ಆಡಿಸುತ್ತಾ ಇರಿ.

Chicken Semi Dry Recipe

* ಚಿಕನ್ ಬೆಂದ ಮೇಲೆ ಮುಚ್ಚಳ ತೆಗೆದು ಸ್ವಲ್ಪ ಸೆಮಿ ಡ್ರೈಯಾಗುವವರೆಗೆ ಬೇಯಿಸಿ.

Chicken Semi Dry Recipe

* ಈಗ ಕೊಒತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಟೊಮೆಟೊ ಚಿಕನ್ ಸೆಮಿ ಡ್ರೈ ರೆಡಿ.

Chicken Semi Dry Recipe
[ 4.5 of 5 - 11 Users]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X