Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ರೆಸಿಪಿ: ರುಚಿ-ರುಚಿಯಾದ ಟೊಮ್ಯಾಟೊ ಬಾತ್
ಬೆಳಗ್ಗೆ ಅವಸರದಲ್ಲಿ, ಆಫೀಸ್ ಗೆ ಲಂಚ್ ಬಾಕ್ಸ್ ಗೆ ಏನನ್ನಾದರೂ ರೆಡಿ ಮಾಡಬೇಕು ಅಂದ್ರೆ ಮನೆ ಹೆಂಗಸರಿಗೆ ತಲೆನೋವಿನ ವಿಷಯವೇ ಸರಿ. ಅದರಲ್ಲೂ ದಿನವೂ ಹೊಸತನ್ನೇನಾದರೂ ಮಾಡಬೇಕು ಎಂದು ಬಯಸುವವರಿಗೆ ಯೋಚನೆ ಇನ್ನಷ್ಟು ಜಾಸ್ತಿ.

ಹಾಗಾಗಿ ಇದಕ್ಕೆಲ್ಲ ಪರಿಹಾರಾರ್ಥವಾಗಿ ರುಚಿಕರವಾಗಿ ಮಾಡಬಹುದಾದ ಟೊಮ್ಯಾಟೊ ರೈಸ್ ಬಾಲ್ ಜೊತೆ ಬಂದಿದ್ದೇವೆ.
Recipe By: Poornima Hegde
Recipe Type: Breakfast
Serves: 4
-
ಮಸಾಲೆ ರುಬ್ಬುವುದಕ್ಕೆ:
ಚಕ್ಕೆ - 2 ತುಂಡುಗಳು
ಲವಂಗ - 4-5
ಶುಂಠಿ - 4 ತುಂಡುಗಳು
ಬೆಳ್ಳುಳ್ಳಿ -10 ಎಸಳುಗಳು
ಕಾಳು ಮೆಣಸು - 10
ತೆಂಗಿನ ತುರಿ - ಸ್ವಲ್ಪ
ಕೊತ್ತಂಬರಿ ಸೊಪ್ಪು - ಒಂದು ಮುಷ್ಠಿಯಷ್ಟು
ಹೆಚ್ಚಿಕೊಂಡ ಈರುಳ್ಳಿ -ಒಂದು ಸಣ್ಣ ಗಾತ್ರದ್ದು
ಈ ಎಲ್ಲಾ ಸಾಮಗ್ರಿಗಳನ್ನು ಒಂದು ಮಿಕ್ಸರ್ ಜಾರ್ ಗೆ ಹಾಕಿ ಸ್ವಲ್ಪ ನೀರು ಬೆರೆಸಿ ರುಬ್ಬಿಟ್ಟುಕೊಳ್ಳಿ.
ಒಗ್ಗರಣೆಗೆ ಬೇಕಾಗುವ ಸಾಮಗ್ರಿಗಳು:
ಪಲಾವ್ ಎಲೆ - 2
ಚಕ್ಕೆ - 2 ತುಂಡುಗಳು
ನಕ್ಷತ್ರ ಮೊಗ್ಗು - ಒಂದು
ಏಲಕ್ಕಿ - 2-3
ಅಡುಗೆ ಎಣ್ಣೆ - 5 ಟೇಬಲ್ ಸ್ಪೂನ್ (ಜೊತೆಗೆ ಒಂದು ಚಮಚ ತುಪ್ಪವನ್ನು ಸೇರಿಸಬಹುದು)
ಈರುಳ್ಳಿ - ಮಧ್ಯಮ ಗಾತ್ರದ 2-3 ಹೆಚ್ಚಿಟ್ಟುಕೊಂಡಿದ್ದು
ಟೊಮ್ಯಾಟೋ - ಮಧ್ಯಮ ಗಾತ್ರದ 3-4 ಹೆಚ್ಚಿಟ್ಟುಕೊಂಡಿದ್ದು
ಹಸಿಮೆಣಸು - 4-5 (ನಿಮ್ಮ ಖಾರಕ್ಕೆ ತಕ್ಕ ಹಾಗೆ ಬಳಸಿ)
ಹಸಿ ಬಟಾಟಿ / ಬೇಯಿಸಿಕೊಂಡ ಬಟಾಣಿ - ಒಂದು ಕಪ್
ಸಬ್ಬಸಿಗೆ ಸೊಪ್ಪು - ಸ್ವಲ್ಪ (Optional)
ಉಪ್ಪು - ರುಚಿಗೆ ತಕ್ಕಷ್ಟು
ಅರಿಶಿನ - ಚಿಟಿಕೆಯಷ್ಟು
ಅನ್ನ - ಒಂದೂವರೆ ಕಪ್
-
ಮಾಡುವ ವಿಧಾನ:
ಮೊದಲು ಬಾಣಲೆಗೆ ಎಣ್ಣೆ (ಒದು ಚಮಚ ತುಪ್ಪವನ್ನೂ ಸೇರಿಸಬಹುದು) ಯನ್ನು ಹಾಕಿ ಬಿಸಿ ಮಾಡಿ, ಇದಕ್ಕೆ ಪಲಾವ್ ಎಲೆ ಚಕ್ಕೆ, ಮೊಗ್ಗು, ಏಲಕ್ಕಿ ಎಲ್ಲವನ್ನೂ ಹಾಕಿ ಹುರಿದುಕೊಳ್ಳಿ.
ನಂತರ ಹೆಚ್ಚಿಟ್ಟುಕೊಂಡ ಹಸಿ ಮೆಣಸನ್ನು ಸೇರಿಸಿ. ಈಗ ಈರುಳ್ಳಿಯನ್ನು ಸೇರಿಸಿ ಒಂದೈದು ನಿಮಿಷ ಎಣ್ಣೆಯಲ್ಲೇ ಬೇಯಲು ಬಿಡಿ. ನಂತರ ಹೆಚ್ಚಿಟ್ಟುಕೊಂಡ ಟೊಮ್ಯಾಟೊವನ್ನು ಸೇರಿಸಿ ಇವೆಲ್ಲವೂ ಚೆನ್ನಾಗಿ ಬೆಂದ ಮೇಲೆ ಪರಿಮಳಕ್ಕೆ ಸಬ್ಬಸ್ಸಿಗೆ ಸೊಪ್ಪನು ಸೇರಿಸಿ (ಬೇಕಿದ್ದರೆ ಮಾತ್ರ) ಇನ್ನು ಬಟಾಟಿಯನ್ನು ಸೇರಿಸಿ ಮಿಕ್ಸ್ ಮಾಡಿ. ಆನಂತರ ರುಬ್ಬಿಕೊಂಡ ಮಿಶ್ರಣವನ್ನು ಸೇರಿಸಿ.
ಇನ್ನು ಉಪ್ಪು ಹಾಗೂ ಚಿಟಿಕೆ ಅರಿಶಿನವನ್ನು ಸೇರಿಸಿ ಮಿಕ್ಸ್ ಮಾಡಿ, ಕೊನೆಯಲ್ಲಿ ಉದುರುದುರಾಗಿ ಮಾಡಿಟ್ಟುಕೊಂಡ ಅನ್ನವನ್ನು ಬೆರೆಸಿದರೆ ರುಚಿಕರವಾದ ಟೊಮ್ಯಾಟೊ ಬಾತ್ ರೆಡಿ!
- ನೀವು ಕುಕ್ಕರ್ನಲ್ಲಿ ಮಾಡುವುದಾದರೆ ಅನ್ನುವನ್ನು ಪ್ರತ್ಯೇಕಾಗಿ ಬೇಯಿಸಬೇಕಾಗಿಲ್ಲ, ಮೊದಲಿಗೆ ಒಗ್ಗರಣೆ ಕೊಟ್ಟು ನಂತರ ಅಕ್ಕಿ ಹಾಕಿ, ಬೇಯಲು ತಕ್ಕ ನೀರು ಹಾಕಿ ಬೇಯಸಬಹುದು. ಆದರೆ ಅನ್ನ ಪ್ರತ್ಯೇಕ ಮಾಡಿಟ್ಟರೆ ಉದುರು-ಉದುರಾಗಿ ಚೆನ್ನಾಗಿರುತ್ತದೆ.
- ಸರ್ವ್ - 1 ಬೌಲ್
- ಕೊಬ್ಬು - 12ಗ್ರಾಂ
- ಪ್ರೊಟೀನ್ - 4 ಗ್ರಾಂ
- ಕಾರ್ಬ್ಸ್ - 31ಗ್ರಾಂ
- ನಾರಿನಂಶ - 3ಗ್ರಾಂ
ಮಾಡುವ ವಿಧಾನ:
ಮೊದಲು ಬಾಣಲೆಗೆ ಎಣ್ಣೆ (ಒದು ಚಮಚ ತುಪ್ಪವನ್ನೂ ಸೇರಿಸಬಹುದು) ಯನ್ನು ಹಾಕಿ ಬಿಸಿ
ಮಾಡಿ, ಇದಕ್ಕೆ ಪಲಾವ್ ಎಲೆ ಚಕ್ಕೆ, ಮೊಗ್ಗು, ಏಲಕ್ಕಿ ಎಲ್ಲವನ್ನೂ ಹಾಕಿ
ಹುರಿದುಕೊಳ್ಳಿ. ನಂತರ ಹೆಚ್ಚಿಟ್ಟುಕೊಂಡ ಹಸಿ ಮೆಣಸನ್ನು ಸೇರಿಸಿ.


ಈಗ ಈರುಳ್ಳಿಯನ್ನು ಸೇರಿಸಿ ಒಂದೈದು ನಿಮಿಷ ಎಣ್ಣೆಯಲ್ಲೇ ಬೇಯಲು ಬಿಡಿ.


ನಂತರ ಹೆಚ್ಚಿಟ್ಟುಕೊಂಡ ಟೊಮ್ಯಾಟೊವನ್ನು ಸೇರಿಸಿ ಇವೆಲ್ಲವೂ ಚೆನ್ನಾಗಿ ಬೆಂದ ಮೇಲೆ ಪರಿಮಳಕ್ಕೆ ಸಬ್ಬಸ್ಸಿಗೆ ಸೊಪ್ಪನು ಸೇರಿಸಿ (ಬೇಕಿದ್ದರೆ ಮಾತ್ರ) ಇನ್ನು ಬಟಾಟಿಯನ್ನು ಸೇರಿಸಿ ಮಿಕ್ಸ್ ಮಾಡಿ. ಆನಂತರ ರುಬ್ಬಿಕೊಂಡ ಮಿಶ್ರಣವನ್ನು ಸೇರಿಸಿ.


ಇನ್ನು ಉಪ್ಪು ಹಾಗೂ ಚಿಟಿಕೆ ಅರಿಶಿನವನ್ನು ಸೇರಿಸಿ ಮಿಕ್ಸ್ ಮಾಡಿ, ಕೊನೆಯಲ್ಲಿ ಉದುರುದುರಾಗಿ ಮಾಡಿಟ್ಟುಕೊಂಡ ಅನ್ನವನ್ನು ಬೆರೆಸಿದರೆ ರುಚಿಕರವಾದ ಟೊಮ್ಯಾಟೊ ಬಾತ್ ರೆಡಿ!




Click it and Unblock the Notifications
