Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಚಳಿಗಾಲದಲ್ಲಿ ಇಡ್ಲಿ ಗಟ್ಟಿಯಾಗದೆ ಮೃದುವಾಗಿರಲು 2 ಸಿಂಪಲ್ ಟ್ರಿಕ್ಸ್ ಟ್ರೈ ಮಾಡಿ
ಚಳಿಗಾಲದಲ್ಲಿ ಇಡ್ಲಿ ಮಾಡುವುದು ಅಷ್ಟು ಸುಲಭವಲ್ಲ, ಏಕೆಂದರೆ ಇಡ್ಲಿಗೆ ರುಬ್ಬಿದ ಹಿಟ್ಟು ಚೆನ್ನಾಗಿ ಹುದುಗು ಬಾರದೇ ಇದ್ದಾಗ ಇಡ್ಲಿ ಗಟ್ಟಿಯಾಗುವುದು, ಆ ಇಡ್ಲಿ ತಿನ್ನಲು ರುಚಿ ಅನಿಸುವುದಿಲ್ಲ. ಅಲ್ಲದೆ ಮನೆಗೆ ನೆಂಟರಿಷ್ಟರು ಬಂದಿದ್ದಾಗ ಬೆಳಗ್ಗೆ ಇಡ್ಲಿ ಮಾಡಿದರೆ ಸಾಕು, ಬ್ರೇಕ್ಫಾಸ್ಟ್ ಸುಲಭದಲ್ಲಿ ಮಾಡಬಹುದು ಎಂದು ಆಲೋಚಿಸಿ ಇಡ್ಲಿಗೆ ರುಬ್ಬಿ ಬೆಳಗ್ಗೆ ಇಡ್ಲಿ ಹಿಟ್ಟು ನೋಡಿದರೆ ಹಿಟ್ಟು ಹುದುಗು ಬಂದಿರಲ್ಲ, ಅದರಿಂದ ಇಡ್ಲಿ ಮಾಡಿದರೆ ತುಂಬಾ ಗಟ್ಟಿಯಾಗುವುದು ಇಂಥ ಸಮಸ್ಯೆ ಚಳಿಗಾಲದಲ್ಲಿ ಸರ್ವೇ ಸಾಮಾನ್ಯ ಅಲ್ವಾ?
ಹಾಗಂತ ಕೆಲವರು ಅಡುಗೆ ಸೋಡಾ ಬಳಸುತ್ತಾರೆ, ಆದರೆ ಇದು ಒಳ್ಳೆಯದಲ್ಲ, ಅಡುಗೆ ಸೋಡಾ ಇಡ್ಲಿಯನ್ನು ಮೃದುವಾಗಿಸುತ್ತೆ, ಆದರೆ ಹೊಟ್ಟೆಯ ಆರೋಗ್ಯಕ್ಕೆ ಒಳ್ಳೆಯದಲ್ಲ. ಅಲ್ಲದೆ ಕೆಲವರಿಗೆ ಅಡುಗೆ ಸೋಡಾ ಹಾಕಿದ ಅಡುಗೆ ತಿಂದರೆ ಆಗುವುದಿಲ್ಲ, ಹಾಗಾಗಿ ಈ ಆಯ್ಕೆ ಅಷ್ಟು ಒಳ್ಳೆಯದಲ್ಲ.
ನೀವು ಚಳಿಗಾಲದಲ್ಲಿ ಇಡ್ಲಿ ಹತ್ತಿಯಂತೆ ಮೃದುವಾಗಿರಲು ಈ 2 ಟಿಪ್ಸ್ ಬಳಸಿದರೆ ಸಾಕು, ಅಡುಗೆ ಸೋಡಾ ಹಾಕದೆಯೂ ಇಡ್ಲಿ ತುಂಬಾ ಮೃದುವಾಗಿರುವುದು.

ಟಿಪ್ಸ್ 1 ಅವಲಕ್ಕಿ ಸೇರಿಸುವುದು
ಇಡ್ಲಿಗೆ ಬೇಕಾಗುವ ಸಾಮಗ್ರಿ
1 ಕಪ್ ಇಡ್ಲಿ ಅಕ್ಕಿ
1/2 ಕಪ್ ಉದ್ದು
ಒಂದು ಮುಷ್ಠಿಯಷ್ಟು ಅವಲಕ್ಕಿ
ಅಕ್ಕಿ ಮತ್ತು ಉದ್ದು 8 ಗಂಟೆ ಕಾಲ ನೆನೆ ಹಾಕಬೇಕು, ಅವಲಕ್ಕಿಯನ್ನು ಇಡ್ಲಿಗೆ ರುಬ್ಬುವ 10 ನಿಮಿಷ ಮುನ್ನ ನೆನೆ ಹಾಕಿದರೆ ಸಾಕು,ಈಗ ಈ ಮೂರು ಸಾಮಗ್ರಿ ರುಬ್ಬಿ ಮಿಕ್ಸ್ ಮಾಡಿಟ್ಟರೆ ಸಾಕು ಇಡ್ಲಿ ಹಿಟ್ಟು ಚೆನ್ನಗಿ ಉಬ್ಬು ಬರುವುದು.
ಟಿಪ್ಸ್ 2: ಸ್ವಲ್ಪ ಬಿಸಿ ಮಾಡುವುದು
ನೀವು ರುಬ್ಬಿದ ಹಿಟ್ಟನ್ನು ಸ್ವಲ್ಪ ಬಿಸಿ ಮಾಡಿ, ಒಂದು ನಿಮಿಷ ಬಿಸಿ ಮಾಡಿ,ಹೀಗೆ ಬಿಸಿ ಮಾಡುವಾಗ ನಿರಂತರ ತಿರುಗಿಸುತ್ತಾ ಇರಬೇಕು, ಗಂಟು ಕಟ್ಟಬಾರದು, ನಂತರ ಹಿಟ್ಟನನ್ನು 8 ಗಂಟೆಗಳ ಕಾಲ ಹುದುಗು ಬರಲು ಬಿಡಬೇಕು, ಇಲ್ಲದಿದ್ದರೆ ತುಂಬಾ ಗಟ್ಟಿಯಾಗಿ ರುಬ್ಬಿ, ಬಿಸಿ ನೀರು ಹಾಕಿ ಇಡ್ಲಿ ಹಿಟ್ಟು ಹದಕ್ಕೆ ಹಿಟ್ಟನ್ನು ತಂದು ಮಿಕ್ಸ್ ಮಾಡಿಟ್ಟರೆ ಈ ಇಡ್ಲಿ ಕೂಡ ಮೃದುವಾಗಿರುವುದು.
ಇತರ ಸಲಹೆ
ನೀರಾ ಸೇರಿಸುವುದು
ನೀರಾ ಸಿಕ್ಕರೆ ಸ್ವಲ್ಪ ನೀರಾ ಅಕ್ಕಿ ಹಿಟ್ಟು ಜೊತೆಗೆ ಸೇರಿಸಿ ಮಿಕ್ಸ್ ಮಾಡಿಟ್ಟರೆ ಇದೆಯಲ್ಲಾ ಇಡ್ಲಿ ತುಂಬಾನೇ ಮೃದುವಾಗುವುದು.
ಟೈಮ್ ಇದ್ದರೆ ಮಧ್ಯಾಹ್ನವೇ ರುಬ್ಬಿ ಇಡಿ
ಸಂಜೆ ರುಬ್ಬಿ ರಾತ್ರಿ ಹುದುಗು ಬರಲು ಇಟ್ಟಾಗ ವಾತಾವರಣ ಇನ್ನೂ ತಂಪಾಗಿ ಇಡ್ಲಿಯ ಹಿಟ್ಟು ಹುದುಗು ಬರಲ್ಲ, ಅದರ ಬದಲಿಗೆ ರಾತ್ರಿ ಅಕ್ಕಿ ಮತ್ತು ಉದ್ದಿನ ಬೇಳೆ ನೆನೆ ಹಾಕಿ ಅದನ್ನು ಬೆಳಗ್ಗೆ ರುಬ್ಬಿ 8 ಗಂಟೆಗಳ ಇಟ್ಟು ನಂತರ ಹುದುಗು ಬಂದಿರುವ ಇಡ್ಲಿ ಮಿಶ್ರಣವನ್ನು ಫ್ರಿಡ್ಜ್ನಲ್ಲಿಟ್ಟು ಬಳಸಬಹುದು. ಬೆಳಗ್ಗೆ ಹೊತ್ತಿನಲ್ಲಿ ಬಿಸಿಲು ಬರುತ್ತದೆ, ಇಡ್ಲಿ ಹಿಟ್ಟು ಚೆನ್ನಾಗಿ ಹುದುಗು ಬರುವುದು.



Click it and Unblock the Notifications