Latest Updates
-
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು
ಪರ್ಫೆಕ್ಟ್ ನೀರು ದೋಸೆ ಮಾಡಬೇಕೆ? ಈ ಟಿಪ್ಸ್ ಟ್ರೈ ಮಾಡಿ
ನೀರು ದೋಸೆ ಇಷ್ಟಪಡವರು ಕಮ್ಮಿ, ಆದರೆ ಇದನ್ನು ಮಾಡುವುದು ಅಷ್ಟು ಸುಲಭವಲ್ಲ. ಪೇಪರ್ನಂತೆ ತೆಳುವಾಗಿ, ಮೃದುವಾಗಿ ಇರುವ ನೀರು ದೋಸೆ ಮಾಡುವುದು ಒಂದು ಟ್ರಿಕ್ಸ್. ಅದನ್ನು ತಿಳಿದರೆ ಮಂಗಳೂರು , ಕರಾವಳಿ ಶೈಲಿಯ ಹೋಟೆಲ್ಗಳಲ್ಲಿ ಸಿಗುವಂತೆಯೇ ತೆಳುವಾದ ದೋಸೆ ತಯಾರಿಸಬಹುದು. ಈ ದೋಸೆಯ ಮತ್ತೊಂದು ಪ್ಲಸ್ ಪಾಯಿಂಟ್ ಎಂದರೆ ವೆಜ್ಗೂ ಸೂಪರ್, ಮೀನು-ಕೋರಿ ಕರಿಗೂ ಸೂಪರ್, ಬ್ರೇಕ್ಫಾಸ್ಟ್ಗೂ ಸೈ, ಡಿನ್ನರ್ಗೂ ಸೈ, ಬನ್ನಿ ನೀರು ದೋಸೆ ರೆಸಿಪಿ ಟ್ರಿಕ್ಸ್ ನೋಡೋಣ:

ಬೇಕಾಗುವ ಸಾಮಗ್ರಿ
ಅಕ್ಕಿ
ನೀರು
ರುಚಿಗೆ ತಕ್ಕ ಉಪ್ಪು
* 2 ಲೋಟ ಅಕ್ಕಿಯನ್ನು 6-7 ತಾಸು ನೆನೆ ಹಾಕಿ, ಬೆಳಗ್ಗೆ ಮಾಡುವುದಾದರೆ ರಾತ್ರಿ
ನೆನೆ ಹಾಕಿ.
* ನಂತರ ನುಣ್ಣನೆ ರುಬ್ಬಿ, ತುಂಬಾ ನುಣ್ಣನೆ ರುಬ್ಬಿದಷ್ಟೂ ದೋಸೆ ಚೆನ್ನಾಗಿ
ಬರುತ್ತದೆ.
* ನಂತರ ಅದಕ್ಕೆ ನೀರು ಸೇರಿಸಿ, ಮಂದ ಹಾಲು ಇರುತ್ತದೆಯಲ್ಲಾ ಆ ರೀತಿ
ಇರಬೇಕು.
* ಈಗ ಪ್ಯಾನ್ ಅಥವಾ ದೋಸೆ ಕಲ್ಲನ್ನು ಬಿಸಿ ಮಾಡಿ ಎಣ್ಣೆ ಸವರಿ, ಅದರ ಮೇಲೆ ಈ
ತೆಳು ದೋಸೆ ಹಿಟ್ಟು ಹಾಕಿ. ದೋಸೆ ಹಿಟ್ಟು ಹರಡಿಕೊಳ್ಳುತ್ತದೆ. ತವಾವನ್ನು
ಮತ್ತೊಂದು ಪಾತ್ರೆಯಿಂದ ಮುಚ್ಚಿ, ದೋಸೆ ಬೆಂದಾಗ ಸ್ವಲ್ಪ ಎದ್ದು ಬರುತ್ತದೆ, ಆವಾಗ
ಮಗುಚಿ ಹಾಕಿದರೆ ದೋಸೆ ರೆಡಿ.
ಮುಖ್ಯವಾಗಿ ಗಮನಿಸಬೇಕಾದ ಅಂಶಗಳು
* ದೋಸೆ ಹಿಟ್ಟು ತುಂಬಾ ಮಂದವಾಗಿದ್ದರೆ ದೋಸೆ ಚೆನ್ನಾಗಿ ಬರಲ್ಲ
* ತುಂಬಾ ನೀರು ಹಾಕಿದರೂ ದೋಸೆ ಅಂಟು ಅಂಟಾಗುವುದು.
ದೋಸೆ ಯಾವಾಗ ತವಾಗೆ ಅಂಟುತ್ತದೆ?
* ತವಾ ಚೆನ್ನಾಗಿ ಬಿಸಿಯಾಗುವ ಮೊದಲು ದೋಸೆ ಹಿಟ್ಟು ಹಾಕಿದರೆ ದೋಸೆ ತವಾಗೆ
ಅಂಟುತ್ತದೆ
* ನೀರು ಹಾಕಿದ್ದು ಅಧಿಕವಾದರೆ ಅಕ್ಕಿ ಹಿಟ್ಟು ಸೇರಿಸಬಹುದು
* ಉರಿ ತುಂಬಾ ಅಧಿಕವಿಟ್ಟರೆ ದೋಸೆಯ ಅಡಿ ಕಪ್ಪು-ಕಪ್ಪಾಗುವುದು.
ತವಾಗೆ ಯಾವ ಎಣ್ಣೆ ಹಚ್ಚಬೇಕು?
ತೆಂಗನೆಣ್ಣೆ ಹಚ್ಚಿದರೆ ತುಂಬಾ ರುಚಿಯಾಗಿರುತ್ತದೆ. ಬೇಕಿದ್ದರೆ ಸನ್ಫ್ಲವರ್
ಎಣ್ಣೆ ಹಚ್ಚಬಹುದು.



Click it and Unblock the Notifications