Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಗರಿ ಗರಿ ಮಸಾಲೆ ದೋಸೆ ಹೋಟೆಲ್ ರುಚಿಯಲ್ಲಿಯೇ ಮಾಡುವ ವಿಧಾನ
Recipes
oi-Reena TK
Posted By: Reena TK
ಮಸಾಲೆ ದೋಸೆ ಬಹುತೇಕರ ಫೇವರೆಟ್, ಆದರೆ ಮನೆಯಲ್ಲಿ ಮಸಾಲೆ ದೋಸೆ ಟ್ರೈ ಮಾಡುವಾಗ ಅಷ್ಟೊಂದು ಗರಿಗರಿ ಇಲ್ಲದಿದ್ದರೆ ತಿನ್ನಲು ಇಷ್ಟವಾಗಲ್ಲ, ಸಾದಾ ದೋಸೆ ರೀತಿ ಅನಿಸುವುದು.
ಆದರೆ ಮಸಾಲೆ ದೋಸೆಯನ್ನು ನೀವು ಈ ರೀತಿ ಮಾಡಿದರೆ ಹೋಟೆಲ್ನಲ್ಲಿ ಸಿಗುವಂತೆಯೇ ರುಚಿ ರುಚಿಯಾದ ಮಸಾಲೆ ದೋಸೆ ಮನೆಯಲ್ಲಿಯೇ ಮಾಡಬೇಕೆ? ಈ ಸಿಂಪಲ್ ಟಿಪ್ಸ್ ಬಳಸಿದರೆ ಸೂಪರ್ ರುಚಿಯ ದೋಸೆ ಮಾಡಬಹುದು.

ಬೇಕಾಗುವ ಸಾಮಗ್ರಿ
ಅಕ್ಕಿ 1 ಕಪ್
ಉದ್ದಿನ ಬೇಳೆ 1/4 ಕಪ್
ಮೆಂತೆ 2 ಚಮಚ
ಕಡ್ಲೆಬೇಳೆ 2 ಚಮಚ
ಅವಲಕ್ಕಿ(ಒಂದು ಮುಷ್ಠಿಯಷ್ಟು)
ಚಿಟಿಕೆಯಷ್ಟು ಅಡುಗೆ ಸೋಡಾ
1/2 ಚಮಚ ಉಪ್ಪು
ಎಣ್ಣೆ
ತುಪ್ಪ
ಮಾಡುವ ವಿಧಾನ
- ನೀವು ನಾಳೆ ಬೆಳಗ್ಗೆ ಮಸಾಲೆ ದೋಸೆ ಮಾಡುವುದಾದರೆ ರುಬ್ಬುವ 8 ಗಂಟೆ ಮುನ್ನ ಅಕ್ಕಿ, ಉದ್ದಿನ ಬೇಳೆ, ಮೆಂತೆ, ಕಡ್ಲೆ ಬೇಳೆ ಇವುಗಳನ್ನು ಹಾಕಿ.
- ನಂತರ ಈ ಸಾಮಗ್ರಿ ರುಬ್ಬಿ, ಅವಲಕ್ಕಿ ಸೇರಿಸಿ ರುಬ್ಬಿ, ಅಡುಗೆ ಸೋಡಾ, ಉಪ್ಪು ಹಾಕಿ ಮಿಕ್ಸ್ ಮಾಡಿಡಿ.
- ನೀವು ಮಿಶ್ರಣವನ್ನು ತುಂಬಾ ನುಣ್ಣನೆ ರುಬ್ಬಬೇಕು.
- ನಂತರ ಕೈಯಿದ ಚೆನ್ನಾಗಿ ಮಿಕ್ಸ್ ಮಾಡಿ ಹುದುಗು ಬರಲು 8 ಗಂಟೆ ಇಡಿ
- ನಂತರ ದೋಸೆ ರೆಡಿ ಮಾಡಲು, ದೋಸೆ ಕಾವಲಿ ಚೆನ್ನಾಗಿ ಬಿಸಿಯಾಗಲಿ, ಅದಕ್ಕೆ ದೋಸೆ ಹಾಕಿ, ಅದರ ಮೇಲೆ ತುಪ್ಪ ಹಾಕಿ ಸರ್ವ್ ಮಾಡಿ.
ಗರಿ ಗರಿ ಬೇಕೆಂದರೆ
ದೋಸೆ ಕಾವಲಿ ಸ್ವಲ್ಪ ದೊಡ್ಡದಿರಬೇಕು, ಆವಾಗ ದೋಸೆ ಹಹಿಟ್ಟು ಹಾಕಿ ಉಜ್ಜಿದರೆ
ಗರಿಗರಿಯಾಗಿ ಬರುತ್ತದೆ.
ಇತರ ಸಲಹೆ
- ದೋಸೆ ಹಿಟ್ಟು ರುಬ್ಬಿ ಚಿಕ್ಕ ಪಾತ್ರೆಯಲ್ಲಿ ಹಾಕಿಡಬೇಡಿ, ಹಿಟ್ಟು ಉಬ್ಬಿ ಬಂದು ಪಾತ್ರೆಯಿಂದ ಹೊರ ಚೆಲ್ಲುತ್ತದೆ, ಹಾಗಾಗಿ ದೊಡ್ಡ ಪಾತ್ರೆಯನ್ನು ಬಳಸಿ.
- ನೀವು ಮಸಾಲೆ ದೋಸೆಗೆ ರೇಷನ್ ಅಕ್ಕಿ ಅಥವಾ ದೋಸೆಯ ಅಕ್ಕಿಯನ್ನು ನೆನೆಹಾಕಿ ಮಾಡಬಹುದು.
- ಅವಲಕ್ಕಿ ತುಂಬಾ ಹಾಕಬೇಡಿ, ತುಂಬಾ ಹಾಕಿದರೆ ದೋಸೆ ತುಂಬಾ ಮೃದುವಾಗುವುದು. ಆದ್ದರಿಂದ ಒಂದು ಮುಷ್ಠಿಯಷ್ಟು ಸೇರಿಸಿದರೆ ಸಾಕು.
- ನೀವು ಸರ್ವ್ ಮಾಡುವಾಗ ಬಿಸಿ ಬಿಸಿ ದೋಸೆ ಹಾಕಿ, ಬೇರೆ ದೋಸೆಯಂತೆ ಸುಟ್ಟು ಇಟ್ಟು ಸರ್ವ್ ಮಾಡಬಾರದು, ಒಂದೊಂದೇ ದೋಸೆ ಬಿಸಿ ಬಿಸಿಯಾಗಿ ಸರ್ವ್ ಮಾಡಿ.
- ದೋಸೆಗೆ ತುಪ್ಪದ ಬದಲಿಗೆ ಬೆಣ್ಣೆ ಕೂಡ ಹಾಕಬಹುದು.
- ಇನ್ನು ನೀವು ದೋಸೆ ಮಾಡುವಾಗ ಕೆಂಪು ಖಾರ ಸವರಿ. ನಂತರ ಆಲೂಬಾಜಿ ಹಾಕಿ ಮಡಚಿ ಸರ್ವ್ ಮಾಡಿದರೆ ಹೋಟೆಲ್ ರುಚಿಯ ಗರಿಗರಿ ಮಸಾಲೆ ದೋಸೆ ಸರ್ವ್ ಮಾಡಲು ರೆಡಿ.
ಮಸಾಲೆ ದೋಸೆ ಮಾಡಿದಾಗ ಆಲೂಬಾಜಿ ಜೊತೆಗೆ ಕಾಯಿ ಚಟ್ನಿ ಕೂಡ ಇಟ್ಟು ಸರ್ವ್ ಮಾಡಿ.
ದೋಸೆ ಕಲ್ಲಿನಿಂದ ದೋಸೆ ಬರದಿದ್ದರೆ ಸ್ವಲ್ಪ ಈರುಳ್ಳಿ ದೋಸೆ ಕಲ್ಲಿಗೆ ಉಜ್ಜಿ ನಂತರ ದೋಸೆ ಹಾಕಿ ನೋಡಿ, ದೋಸೆ ಸೂಪರ್ ಆಗಿ ಬರುತ್ತದೆ.
Comments
[ of 5 - Users]



Click it and Unblock the Notifications
