Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಮೀನಿನ ಫ್ರೈ ಈ 3 ರೀತಿಯಲ್ಲಿ ಟ್ರೈ ಮಾಡಿದ್ದೀರಾ?
ಎಲ್ಲಾ ಅಡುಗೆಗೆ ಒಂದೊಂದು ಟ್ರಿಕ್ಸ್ ಇರುತ್ತದೆ, ಅದರಂತೆ ಮೀನು ಫ್ರೈ ಮಾಡುವುದು ಕೂಡ ಒಂದು ಟ್ರಿಕ್ಸ್. ಅದು ಗೊತ್ತಾದರೆ ಮೀನು ಫ್ರೈ ಸುಲಭವಾಗಿ ಮಾಡಬಹುದು ಅಲ್ಲದೆ ತುಂಬಾ ಟೇಸ್ಟಿಯಾಗಿಯೂ ಇರುತ್ತದೆ.

ಮೀನು ಫ್ರೈಯನ್ನು ಅನ್ನ, ತುಪ್ಪದನ್ನ, ಜೀರಾ ಜೈಸ್, ಕೋಕನಟ್ ರೈಟ್ ಇವುಗಳ ಜೊತೆ ಸವಿಯಲು ತುಂಬಾನೇ ರುಚಿಯಾಗಿರುತ್ತದೆ. ಅದರಲ್ಲೂ ಗಂಜಿಗಂತೂ ಮೀನು ಫ್ರೈ ಸೂಪರ್ ಕಾಂಬಿನೇಷನ್.
ನೀವು ಕ್ರಿಸ್ಮಿ ಮೀನು ಫ್ರೈ ಇಷ್ಟಪಡುವುದಾದರೆ
* ನಿಮಗೆ ಇಷ್ಟವಾದ 1/2 ಕೆಜಿ ಮೀನನ್ನು ಸ್ವಚ್ಛಗೊಳಿಸಿ ಅವುಗಳನ್ನು
ತುಂಡುಗಳನ್ನಾಗಿ ಮಾಡಿಡಿ.
* ಈಗ 8-10 ಬ್ಯಾಡಗಿ ಮೆಣಸು, ಸ್ವಲ್ಪ ಶುಂಠಿ, 2 ಎಸಳು ಬೆಳ್ಳುಳ್ಳಿ, ಸ್ವಲ್ಪ
ಹುಣಸೆ ಹುಳಿ, 1/2 ಚಮಚ ಅರಿಶಿಣ ಪುಡಿ, ರುಚಿಗೆ ತಕ್ಕ ಉಪ್ಪು ಹಾಕಿ ಗಟ್ಟಿ
ಪೇಸ್ಟ್ ರೀತಿ ರುಬ್ಬಿ. ರುಬ್ಬಲು ಸ್ವಲ್ಪ ಬಿಸಿ ನೀರು ಸೇರಿಸಿ ಚೆನ್ನಾಗಿ ಪೇಸ್ಟ್
ರೀತಿ ಮಾಡಿ.
* ಈಗ ಪೇಸ್ಟ್ ಅನ್ನು ಒಂದು ತಟ್ಟೆಗೆ ಹಾಕಿ ಆ ಮಸಾಲೆಯನ್ನು ಮೀನಿನ ತುಂಡುಗಳಿಗೆ
ಹಚ್ಚಿ 2 ಗಂಟೆ ಇಡಿ. ಫ್ರಿಡ್ಜ್‌ನಲ್ಲಿ ಇಟ್ಟರೆ ಇನ್ನೂ ಒಳ್ಳೆಯದು. ಮಸಾಲೆ
ಚೆನ್ನಾಗಿ ಹೀರಿಕೊಳ್ಳುತ್ತದೆ.
ಈಗ ಪ್ಯಾನ್ ಬಿಸಿ ಮಾಡಿ ಅದಕ್ಕೆ 4 ಚಮಚ ತೆಂಗಿನೆಣ್ಣೆಅಥವಾ ನೀವು ಅಡುಗೆಗೆ ಬಳಸುವ ಎಣ್ಣೆ ಹಾಕಿ ಎಣ್ಣೆ ಬಿಸಿಯಾದಾಗ ಮೀನಿನ ತುಂಡುಗಳನ್ನು ಹಾಕಿ ಕಡಿಮೆ ಉರಿಯಲ್ಲಿ 8-10 ನಿಮಿಷ ಫ್ರೈ ಮಾಡಿ ನಂತ ಮಗುಚಿ ಹಾಕಿ ಮತ್ತೊಂದು ಭಾಗವನ್ನು 8-10 ನಿಮಿಷ ಫ್ರೈ ಮಾಡಿ.
ನಿಮಗೆ ಕ್ರಿಸ್ಮಿ ಮೀನಿನ ತವಾ ಫ್ರೈ ರೆಡಿ..
ಫಿಶ್ ಡೀಪ್ ಫ್ರೈ
ಡೀಪ್ ಫ್ರೈ ಮಾಡುವುದಾದರೆ ನೀವು ಮೇಲೆ ತಿಳಿಸಿದಂತೆ ಮೊದಲು ಮಸಾಲೆ ರೆಡಿ ಮಾಡಿ
ಮೀನನ್ನು ಮಸಾಲೆ ಜೊತೆ ಮಿಕ್ಸ್ ಮಾಡಿ 2 ಗಂಟೆ ಇಡಬೇಕು.
* ಕಾವಲಿಗೆ 1 ಕಪ್ ಎಣ್ಣೆ ಹಾಕಿ ಬಿಸಿ ಮಾಡಿ, ಎಣ್ಣೆ ಕಾದಾಗ ಮಸಾಲೆ ಮಿಕ್ಸ್ ಮಾಡಿಟ್ಟ ಮೀನನ್ನು ರವೆಯಲ್ಲಿ ಅದ್ದಿ ಎಣ್ಣೆಗೆ ಹಾಕಿ.
ಹೀಗೆ ಮಾಡಿದರೆ ನೀವು ಮಂಗಳೂರು ಶೈಲಿಯಲ್ಲಿ ಮೀನಿನ ಫ್ರೈ ಮಾಡಬಹುದು.

ಮೀನು ಮಸಾಲ ಫ್ರೈ ಮಾಡುವುದು ಹೇಗೆ?
ಮೀನು ಮಸಾಲ ಫ್ರೈ ಖಾರ-ಖಾರವಾಗಿ ತುಂಬಾನೇ ರುಚಿಯಾಗಿರುತ್ತದೆ.
ಮಸಾಲ ಫ್ರೈಗೆ ಬೇಕಾಗುವ ಸಾಮಗ್ರಿ
ಕೊತ್ತಂಬರಿ ಬೀಜ
ಕಾಳು ಮೆಣಸು
ಸಾಸಿವೆ
ಮೆಂತೆ
ಜೀರಿಗೆ
ಒಣ ಮೆಣಸು
ಹುಣಸೆಹಣ್ಣು
ಈರುಳ್ಳಿ
ಕರಿಬೇವು
ಶುಂಠಿ, ಬೆಳ್ಳುಳ್ಳಿ
ಎಣ್ಣೆ
ರುಚಿಗೆ ತಕ್ಕ ಉಪ್ಪು
ಮಾಡುವ ವಿಧಾನ:
ಮಸಾಲೆಗೆ ಬೇಕಾಗುವ ಸಾಮಗ್ರಿಗಳನ್ನು ಹಾಕಿ ಗಟ್ಟಿ ಪೇಸ್ಟ್ ರೀತಿ ಮಾಡಿ.
ಅರ್ಧ ಪೇಸ್ಟ್ ತೆಗೆದು ಮೀನಿನ ಜೊತೆ ಮಿಕ್ಸ್ ಮಾಡಿ, ಅರ್ಧ ಪೇಸ್ಟ್ ಹಾಗೇ
ಇಡಿ.
* ಈಗ ಮೀನನ್ನು ತವಾ ಫ್ರೈ ಮಾಡಿ.
* ಈಗ ಒಂದು ಬಾಣಲೆಗೆ 1 ಚಮಚ ಎಣ್ಣೆ ಹಾಕಿ, ನಂತರ ಮಸಾಲೆ ಹಾಕಿ ಫ್ರೈ ಮಾಡಿ.
* ಈಗ ಫ್ರೈ ಮಾಡಿದ ಮಸಾಲೆಯನ್ನು ಮೀನಿನ ಮೇಲೆ ಹಾಕಿ. ಸರ್ವ್ ಮಾಡಿ.
ಮೀನು ಮಸಾಲೆ ಫ್ರೈ ಗಂಜಿ ಜೊತೆ ಸವಿಯಲು ತುಂಬಾ ರುಚಿಯಾಗಿರುತ್ತದೆ.



Click it and Unblock the Notifications
