Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಕ್ರಿಸ್ಪಿ ಆಹಾರಕ್ಕಾಗಿ ಇಲ್ಲಿದೆ ಬೆಸ್ಟ್ ಕುಕ್ಕಿಂಗ್ ಟಿಪ್ಸ್
ಪ್ರತಿಯೊಂದು ಅಡುಗೆ ಮಾಡುವಾಗ ಒಂದು ಟ್ರಿಕ್ಸ್ ಇರುತ್ತದೆ, ಅದರ ಬಗ್ಗೆ ತಿಳಿದುಕೊಂಡರೆ ಅಡುಗೆ ತುಂಬಾನೇ ಸುಲಭವಾಗುವುದು.

ನೀವು ಎಣ್ಣೆಯಲ್ಲಿ ತಿಂಡಿಯನ್ನು ಕರೆಯುವಾಗ ಕೆಲವೊಮ್ಮೆ ನಾವು ಬಯಸಿದಂತೆ ಕ್ರಿಸ್ಪಿಯಾಗಿ ಬರುವುದಿಲ್ಲ. ಎಣ್ಣೆಯಲ್ಲಿ ಕರಿದ ತಿಂಡಿಗಳು ಕ್ರಿಸ್ಪಿಯಾಗಿ ಬಂದರೆ ಮಾತ್ರ ಟೇಸ್ಟಿಯಾಗಿ ಬರುವುದು.
ನಾವಿಲ್ಲಿ ನೀವು ಕ್ರಿಸ್ಪಿ ತಿಂಡಿ ಮಾಡುವಾಗ ಯಾವೆಲ್ಲಾ ಟ್ರಿಕ್ಸ್ ಬಳಸಬೇಕು ಎಂಬುವುದರ ಬಗ್ಗೆ ಹೇಳಿದ್ದೇವೆ, ಈ ಟ್ರಿಕ್ಸ್ ಬಳಸಿದರೆ ನೀವು ಬಯಸಿದಂತೆ ಕ್ರಿಸ್ಪಿಯಾದ ಸ್ನಾಕ್ಸ್ ಬಳಸಬಹುದು:

1. ಎಣ್ಣೆ ಸರಿಯಾಗಿ ಕಾಯಬೇಕು
ನೀವು ಡೀಪ್ ಫ್ರೈ ಮಾಡುವಾಗ ಎಣ್ಣೆ ಕಾಯಲು ಒಂದು ಹದವಿರುತ್ತದೆ ಅಷ್ಟು ಕಾದಾಗ ಹಾಕಬೇಕು, ಎಣ್ಣೆ ತುಂಬಾ ಕಾದಾಗ ನೀವು ತಿಂಡಿ, ಕಬಾಬ್ ಮುಂತಾದವುಗಳನ್ನು ಹಾಕಿದರೆ ಹೊರಗಡೆ ಕಪ್ಪು ಬಣ್ಣಕ್ಕೆ ತಿರುಗಿ ಒಳಗಡೆ ಬೇಯುವುದಿಲ್ಲ, ಇನ್ನು ಎಣ್ಣೆ ಸರಿಯಾಗಿ ಕಾಯದಿದ್ದರೆ ಕ್ರಿಸ್ಪಿಯಾಗಿರದೆ ಮೆತ್ತಗಾಗಿ ತಿನ್ನಲು ಅಷ್ಟು ಚೆನ್ನಾಗಿರಲ್ಲ.

2. ಡಬಲ್ ಫ್ರೈ ಮಾಡಿ
ಕೆಲವೊಂದು ತಿಂಡಿಗಳಿಗೆ, ಚಿಪ್ಸ್‌ಗಳಿಗೆ ಡಬಲ್ ಫ್ರೈ ಮಾಡಿದರೆ ಮಾತ್ರ ಕ್ರಿಸ್ಪಿಯಾಗಿ ಬರುವುದು. ನೀವು ಫಿಂಗರ್ ಚಿಪ್ಸ್ ಮತ್ತಿತರ ಸ್ನಾಕ್ಸ್ ಮಾಡುವಾಗ ಕ್ರಿಸ್ಪಿಯಾಗಿ ಬರಲು ಡಬಲ್ ಫ್ರೈ ಮಾಡಬೇಕು.

3. ಕೋಟಿಂಗ್
ನೀವು ಕಬಾಬ್, ಕಟ್ಲೇಟ್ ಮತ್ತಿತರ ಆಹಾರ ಫ್ರೈ ಮಾಡುವಾಗ ಕೋಟಿಂಗ್ ಮಾಡಿದರೆ ತುಂಬಾನೇ ಕ್ರಿಸ್ಪಿಯಾಗಿ ಬರುತ್ತದೆ. ನೀವು ಜೋಳದ ಹಿಟ್ಟು ಅಥವಾ ಬ್ರೆಡ್ ಚೂರುಗಳನ್ನು ಬಳಸಿದರೆ ಕ್ರಿಸ್ಪಿಯಾಗಿ ಬರುತ್ತದೆ.

4. ಮೀನು ಫ್ರೈ ಮಾಡುವಾಗ ತುಂಬಾ ಎಣ್ಣೆ ಹಾಕಬೇಡಿ
ಮೀನು ಫ್ರೈ ಗರಿ-ಗರಿಯಾಗಿ ಬಂದರೆ ತಿನ್ನಲು ಮತ್ತಷ್ಟು ರುಚಿಯಾಗಿರುತ್ತೆ, ಆದರೆ ಎಣ್ಣೆ ತುಂಬಾ ಹಾಕಿದರೆ ಫ್ರೈ ಚೆನ್ನಾಗಿ ಆಗಲ್ಲ, ಮೀನು ಕ್ರಿಸ್ಪಿಯಾಗುವುದಿಲ್ಲ, ಆದ್ದರಿಂದ ಫ್ರೈ ಮಾಡುವಾಗ ತುಂಬಾ ಎಣ್ಣೆ ಹಾಕಬೇಡಿ.

5. ಕೂಲಿಂಗ್ ರ‍್ಯಾಕ್ ಬಳಸಿ
ನೀವು ಮನೆಯಲ್ಲಿ ತುಂಬಾ ಸ್ನ್ಯಾಕ್ಸ್ ಮಾಡುತ್ತಿದ್ದರೆ ಒಂದು ಕೂಲಿಂಗ್ ರ‍್ಯಾಕ್ ಖರೀದಿಸುವುದು ಒಳ್ಳೆಯದು. ನೀವು ಟಿಶ್ಯೂ ಅಥವಾ ಪೇಪರ್ ಮೇಲೆ ಕರಿದ ತಿಂಡಿ ಹಾಕಿದರೆ ಎಣ್ಣೆ ಹೀರಿಕೊಳ್ಳುವುದು, ಆದರೆ ಸ್ನ್ಯಾಕ್ಸ್ ಕೂಲಿಂಗ್ ರ‍್ಯಾಕ್ ಬಳಸಿದರೆ ಸಿಗುವಷ್ಟು ಪರ್ಫೆಕ್ಟ್ ಆಗಿರಲ್ಲ, ಆದ್ದರಿಂದ ಕ್ರಿಸ್ಪಿ ಸ್ನ್ಯಾಕ್ಸ್‌ಗಾಗಿ ಕೂಲಿಂಗ್ ರ‍್ಯಾಕ್ ಬಳಸಿ.



Click it and Unblock the Notifications