Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಈ ಸಿಂಪಲ್ ಟಿಪ್ಸ್ ತಿಳಿದುಕೊಂಡರೆ ಸಾಕು ಬಟರ್ ಚಿಕನ್ ನೀವು ಸೂಪರ್ ಆಗಿ ಮಾಡಬಹುದು
ಬಟರ್ ಚಿಕನ್ ಎಷ್ಟೊಂದು ರುಚಿಯಾಗಿರುತ್ತೆ ಅಲ್ವಾ? ಕೆಲವರು ಮನೆಯಲ್ಲಿ ಟ್ರೈ ಮಾಡುತ್ತಾರೆ, ಬಟರ್ ಚಿಕನ್ ಬಗ್ಗೆ ಹಲವು ರೆಸಿಪಿಗಳು ಸಿಗುತ್ತದೆ, ಆದರೆ ಆ ರೆಸಿಪಿ ಟ್ರೈ ಮಾಡಿದಾಗ ಆ ಫ್ಲೇವರ್ ಮಾತ್ರ ರೆಸ್ಟೋರೆಂಟ್ನಲ್ಲಿ ಸಿಕ್ಕಂತೆ ಸಿಗಲ್ಲ, ಏಕೆ ? ಎಂದನಿಸಬಹುದು, ಇನ್ನು ನೀವು ಬಟರ್ ಚಿಕನ್ ಟ್ರೈ ಮಾಡುವಾಗ ಈ ಟಪ್ಸ್ ಟ್ರೈ ಮಾಡಿ, ರುಚಿ ನೀವು ಊಹಿಸಿರುವುದಕ್ಕಿಂತಲೂ ಚೆನ್ನಾಗಿ ಬರುತ್ತದೆ:

ಟಿಪ್ಸ್ 1
ಬಟರ್ ಚಿಕನ್ ಮಾಡುವಾಗ ನೀವು ಅದಕ್ಕೆ ಬಳಸುವ ಸಾಮಗ್ರಿ ಅಳತೆ ಸರಿಯಾಗಿರಬೇಕು,
ಸ್ವಲ್ಪ ಹೆಚ್ಚು ಕಮ್ಮಿಯಾದರೂ ಟೇಸ್ಟ್ ಅಷ್ಟು ಚೆನ್ನಾಗಿ ಬರಲ್ಲ.
ಬಟರ್ ಚಿಕನ್, ಹೆಸರೇ ಹೇಳುವಂತೆ ಬೆಣ್ಣೆ ಹಾಕಿ ಮಾಡುವ ರೆಸಿಪಿ,. ಕೆಲವರು ಬೆಣ್ಣೆ ಆಕಲು ಕಂಜೂಸ್ ಮಾಡ್ತಾರೆ, ಸ್ವಲ್ಪ ಬೆಣ್ಣೆ ಹಾಗೂ ಸ್ವಲ್ಪ ಎಣ್ಣೆ ಮಿಶ್ರ ಮಾಡುತ್ತಾರೆ, ಬದಲಿಗೆ ಬೆಣ್ಣೆ ಮಾತ್ರ ಬಳಸಿ.
ಟೊಮೆಟೊ ಪೇಸ್ಟ್ ಬದಲಿಗೆ ಹಣ್ಣಾದ ಟೊಮೆಟೊ ಕತ್ತರಿಸಿ ಹಾಕಿ ಅದು ಬೆಂದಾಗ ಸೌಟ್ನಿಂದ ಪ್ರೆಸ್ ಮಾಡಿ ನುಣ್ಣನೆ ಪೇಸ್ಟ್ ರೀತಿ ಮಾಡಿ.
ಗೋಡಂಬಿ ಪೇಸ್ಟ್ ಸೇರಿಸಿ
ಸ್ವಲ್ಪ ಗೋಡಂಬಿ ನೆನೆ ಹಾಕಿ ನಂತರ ಪೇಸ್ಟ್ ಮಾಡಿ ಸಾರಿಗೆ ಸೇರಿಸಬೇಕು, ಇದು
ಗ್ರೇವಿ ರುಚಿಯನ್ನು ಹೆಚ್ಚಿಸುತ್ತದೆ. ಗ್ರೇವಿ ಕ್ರೀಮಿ ಕ್ರೀಮಿಯಾಗಿ ಸೂಪರ್
ಆಗಿರುತ್ತದೆ.
ತುಂಬಾ ನೀರು ಸೇರಿಸಬೇಡಿ
ಗ್ರೇವಿ ಗಟ್ಟಿಯಾಗಿದ್ದರೆ ರುಚಿ ಹೆಚ್ಚು, ತುಂಬಾ ನೀರು ಹಾಕಬೇಡಿ, ನೀರು ತುಂಬಾ
ಸೇರಿಸಿದರೆ ಅರು ರುಚಿ ಸಾಮಾನ್ಯ ಸಾರು ರೀತಿಯಾಗುತ್ತದೆ ಹೊರತು ಬಟರ್ ಚಿಕನ್
ಆಗುವುದಿಲ್ಲ.
ಬೇಕಾಗುವ ಸಾಮಗ್ರಿ
ಅರ್ಧ ಚಮಚ ಕಾಶ್ಮೀರಿ ಮೆಣಸಿನ ಪುಡಿ
1 ಚಮಚ ಗರಂ ಮಸಾಲೆ ಪುಡಿ
1 ಚಮಚ ಕಸೂರಿ ಮೇತಿ
ಸ್ವಲ್ಪ ಅರಿಶಿಣ ಪುಡಿ
1 ಚಮಚ ಕೊತ್ತಂಬರಿ ಪುಡಿ
2 ಚಮಚ ಬೆಣ್ಣೆ
ಅರ್ಧ ಚಮಚ ಬೆಳ್ಳುಳ್ಳಿ ಪೇಸ್ಟ್
ಸ್ವಲ್ಪ ಮೊಸರು
ಉಪ್ಪು ನಿಂಬೆ
ಈ ಮಸಾಲೆ ಚಿಕನ್ ಮಿಕ್ಸ್ ಮಾಡಿಡಲು ಬಳಸಿ
ಚಿಕನ್ ಗ್ರೇವಿಗೆ
2 ಚಮಚ ಬೆಣ್ಣೆ
1 ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್
ಈರುಳ್ಳಿ 1
ಟೊಮೆಟೊ 4-5
2 ಹಸಿ ಮೆಣಸು
1 ಚಮಚ ಖಾರದ ಪುಡಿ, ಅರ್ಧ ಚಮಚ ಕಾಶ್ಮೀರಿ ಖಾರದ ಪುಡಿ
1 ಚಮಚ ಗರಂ ಮಸಾಲೆ ಪುಡಿ
1/2 ಚಮಚ ಜೀರಿಗೆ ಪುಡಿ
1 ಚಮಚ ಕೊತ್ತಂಬರಿಪುಡಿ
ಸ್ವಲ್ಪ ಕಸೂರಿ ಮೇತಿ
1 ಇಂನಿಷ್ಟು ದೊಡ್ಡದಿರುವ ಚಕ್ಕೆ
3-4 ಲವಂಗ
2 ಏಲಕ್ಕಿ
8-10 ಗೋಡಂಬಿ
ಮಾಡುವ ವಿಧಾನ
ನೀವು ಚಿಕನ್ಗೆ ಮಸಾಲೆ ಹಾಕಿ ಮಿಕ್ಸ್ ಮಾಡಿ ಒಂದು ಗಂಟೆ ಇಡಿ, ನಂತರ ತವಾಗೆ 2
ಚಮಚ ಬೆಣ್ಣೆ ಹಾಕಿ ಅದರಲ್ಲಿ ಚಿಕನ್ನ ಮುಕ್ಕಾಲು ಭಾಗ ಬೇಯುವವರೆಗೆ ಫ್ರೈ ಮಾಡಿ,
ನಂತರ ತೆಗೆದು ಇಡಿ.
ಗೋಡಂಬಿ ಪೇಸ್ಟ್ ಮಾಡಿಡಿ
ಈಗ ಪಾತ್ರೆಗೆ ಬೆಣ್ಣೆ ಹಾಕಿ ಬಿಸಿ ಮಾಡಿ, ಅದಕ್ಕೆ ಚಕ್ಕೆ, ಲವಂಗ ಹಾಕಿ, ಏಲಕ್ಕಿ
ಹಾಕಿ, ಈರುಳ್ಳಿ ಹಾಕಿ, ಶುಂಠಿ-ಬೆಳ್ಳುಳ್ಳ ಪೇಸ್ಟ್ ಹಾಕಿ, ಹಸಿ ಮೆಣಸು,
ಈರುಳ್ಳಿ, ಬಳಿಕ ಗೋಡಂಬಿ ಪೇಸ್ಟ್ ಸೇರಿಸಿ. ಮೆತ್ತಗಾಗುವವರೆಗೆ ಫ್ರೈ ಮಾಡಿ
ನಂತರ ಟೊಮೆಟೊ ಹಾಕಿ ಟೊಮೆಟೊ ಮೆತ್ತಗಾಗುವವರೆಗೆ ಫ್ರೈ ಮಾಡಿ, ಪೇಸ್ಟ್ ರೀತಿ
ಆಗಬೇಕು, ನಂತರ ಕಸೂರಿ ಮೇತಿ ಹಾಗೂ ಇತರ ಮಸಾಲೆ ಪುಡಿ ಸೇರಿಸಿ,
ಬಳಿಕ ಸ್ವಲ್ಪ ನೀರು ಸೇರಿಸಿ ಕುದಿಸ, ನಂತರ ಫ್ರೈ ಮಾಡಿಟ್ಟ ಚಿಕ್ ಹಾಕಿ ಬೇಯಿಸಿ,
ಅದರ ಮೇಲೆ ಕ್ರೀಮ್ ಇದ್ದರೆ ಕ್ರೀಮ್ ಸೇರಿಸಿದರೆ ಬಟರ್ ಚಿಕನ್ ರೆಡಿ.



Click it and Unblock the Notifications