Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
2 ತಿಂಗಳ ಕಾಲ ಇಟ್ಟು ತಿನ್ನಬಹುದು ಈ ಚಟ್ನಿ..! ಮಾಡೋದು ಹೇಗೆ?
ಊಟ, ತಿಂಡಿಗೆ ಚಟ್ನಿ ತುಂಬಾನೆ ರುಚಿ ನೀಡುವ ಪದಾರ್ಥವಾಗಿದೆ. ಹೀಗಾಗಿ ಊಟಕ್ಕೆ ಹಾಗೂ ತಿಂಡಿಗೆ ಒಂದಲ್ಲಾ ಒಂದು ರೀತಿಯ ಚಟ್ನಿಯನ್ನು ಮಾಡಿ ಸವಿಯುತ್ತಾರೆ. ಅದರಲ್ಲೂ ಕಾಯಿ ಚಟ್ನಿ, ಕಡಲೆ ಚಟ್ನಿ, ಮಾವಿನ ಕಾಯಿ ಚಟ್ನಿ, ತುಂಬಾನೆ ಫೇಮಸ್.
ಇನ್ನು ಒಮ್ಮೆ ಚಟ್ನಿ ಮಾಡಿ ಹಲವು ದಿನಗಳ ಕಾಲ ಇಟ್ಟು ಸವಿಯಲು ಇಷ್ಟಪಡುತ್ತಾರೆ, ಏಕೆಂದರೆ ನಿತ್ಯವೂ ತಿಂಡಿಗೆ ಊಟಕ್ಕೆ ಚಟ್ನಿ ಮಾಡುವುದೆಂದರೆ ಎಲ್ಲರಿಗೂ ಕಷ್ಟದ ಕೆಲಸ. ಹೀಗಾಗಿ ಬಹುಕಾಲ ಬಾಳಿಕೆ ಬರುವಂತಹ ಚಟ್ನಿಗಳನ್ನು ಮಾಡಲು ಗೃಹಿಣಿಯರು ಇಷ್ಟಪಡುತ್ತಾರೆ.

ಈ ಚಟ್ನಿಗಳ ಸಾಲಿನಲ್ಲಿ ಟೊಮೆಟೋ ಚಟ್ನಿ ಮೊದಲು ನೆನಪಿಗೆ ಬರುತ್ತದೆ. ಟೊಮಟೋ ಚಟ್ನಿಯನ್ನು ನಾವು ಹಲವು ದಿನಗಳ ಕಾಲ ಇಟ್ಟು ಸವಿಯಬಹುದು. ಊಟಕ್ಕೆ ತಿಂಡಿಗೆ ಈ ಟೊಮೆಟೋ ಚಟ್ನಿ ಹೇಳಿ ಮಾಡಿಸಿದ ಕಾಂಬಿನೇಶನ್ ಆಗಿದೆ. ಅಂದರೆ ಚಪಾತಿ, ದೋಸೆ, ಇಡ್ಲಿಗೆ ಈ ಚಟ್ನಿ ಇದ್ದರೆ ತುಂಬಾನೆ ರುಚಿ ನೀಡಲಿದೆ.
ಹಾಗಾದ್ರೆ ನಾವಿಂದು ವಾರಕ್ಕೂ ಹೆಚ್ಚು ದಿನ ಇಟ್ಟಿ ಸವಿಯಬಹುದಾದ ಟೊಮೆಟೋ ಚಟ್ನಿಯನ್ನು ಮಾಡುವುದು ಹೇಗೆ? ಈ ಚಟ್ನಿ ಮಾಡಲು ಯಾವ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಟೊಮೆಟೋ ಚಟ್ನಿ ಮಾಡಲು ಬೇಕಾಗುವ ಪದಾರ್ಥಗಳು
- ಟೊಮೆಟೋ- 5
- ಒಣಮೆಣಸು
- ಮೆಂತ್ಯ
- ಜೀರಿಗೆ
- ಸಾಸಿವೆ
- ಇಂಗು
- ಅರಶಿಣ
- ಉಪ್ಪು
- ಎಣ್ಣೆ
ಟೊಮೆಟೋ ಚಟ್ನಿ ಮಾಡುವ ವಿಧಾನ
ಮೊದಲು ಒಂದು ಪಾತ್ರೆಯನ್ನು ಒಲೆ ಮೇಲೆ ಸಣ್ಣ ಉರಿ ಇಡಿ ಅದಕ್ಕೆ ಒಣ ಮೆಣಸು ಹಾಕಿ ಹುರಿಯಿರಿ, ಬಳಿಕ ಇದಕ್ಕೆ ಮೆಂತ್ಯ, ಜೀರಿಗೆ, ಸಾಸಿವೆ ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ಒಂದೆರಡು ನಿಮಿಷ ಹುರಿದರೆ ಸಾಕು. ಬಳಿಕ ಇದನ್ನು ಸಣ್ಣ ಮಿಕ್ಸ್ ಜಾರ್ ತೆಗೆದುಕೊಂಡು ಅದಕ್ಕೆ ಹಾಕಿಕೊಳ್ಳಿ.
ಮಿಕ್ಸಿಯಲ್ಲಿ ನೀರು ಹಾಕದೆ ಖಾರದ ಪುಡಿಯಂತೆ ಇದನ್ನು ರುಬ್ಬಿಕೊಳ್ಳಿ ಬಳಿಕ ಇದನ್ನು ತೆಗೆದು ಬದಿಗಿಟ್ಟುಕೊಳ್ಳಿ. ಬಳಿಕ ಟೊಮೆಟೋಗಳನ್ನು ತೆಗೆದುಕೊಂಡು ಸಾಂಬಾರ್‌ಗೆ ಕತ್ತರಿಸಿಕೊಳ್ಳುವಂತೆ ದೊಡ್ಡದಾಗಿ ಕತ್ತರಿಸಿಕೊಳ್ಳಿ. ಬಳಿಕ ಈ ಕತ್ತರಿಸಿಕೊಂಡ ಟೊಮೆಟೋವನ್ನು ಜಾರ್‌ಗೆ ಹಾಕಿ ರುಬ್ಬಿಕೊಳ್ಳಿ.
ಇನ್ನೊಂದು ಕಡೆ ಪಾತ್ರೆಯನ್ನು ಇಟ್ಟು ಎಣ್ಣೆ ಹಾಕಿಕೊಳ್ಳಿ. ಎಣ್ಣೆ ಕಾದ ಬಳಿಕ ಅದಕ್ಕೆ ಸಾಸಿವೆ, ಕರಿಬೇವು, ಇಂಗು ಹಾಕಿಕೊಂಡು ಫ್ರೈ ಮಾಡಿ. ಬಳಿಕ ಇದಕ್ಕೆ ಒಣ ಮೆಣಸು ಹಾಕಿದ ಬಳಿಕ ಮಿಕ್ಸಿಯಲ್ಲಿ ರುಬ್ಬಿಕೊಂಡ ಟೊಮೆಟೋ ಪೇಸ್ಟ್ ಅನ್ನು ಹಾಕಿಕೊಳ್ಳಿ.
ಬಳಿಕ ಇದಕ್ಕೆ ಉಪ್ಪು, ಅರಶಿಣ ಹಾಕಿಕೊಂಡು ಮಿಕ್ಸ್ ಮಾಡಿ ಕುದಿಯಲು ಬಿಡಿ. 10 ನಿಮಿಷ ಕುದಿಯಲು ಬಿಟ್ಟ ಬಳಿಕ ಉರಿ ಸಣ್ಣದಾಗಿ ಮಾಡಿ . ಬಳಿಕ ಮೊದಲು ಮಿಕ್ಸಿಯಲ್ಲಿ ರುಬ್ಬಿಕೊಂಡಿದ್ದ ಮಸಾಲೆಯನ್ನು ಅದಕ್ಕೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈ ಚಟ್ನಿಯಲ್ಲಿ ನೀರಿನ ಅಂಶ ಹೋಗುವವರೆಗೆ ಫ್ರೈ ಮಾಡಿ, ಇಷ್ಟಾದರೆ ಒಲೆ ಆಫ್ ಮಾಡಿಕೊಳ್ಳಿ.
ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಟೊಮೆಟೋ ಚಟ್ನಿ ರೆಡಿಯಾಗುತ್ತದೆ. ಇದನ್ನು 2 ತಿಂಗಳಿಗೂ ಹೆಚ್ಚು ದಿನಗಳ ಕಾಲ ಇಟ್ಟು ಸವಿಯಬಹುದು. ಫ್ರಿಡ್ಜ್‌ನಲ್ಲಿ ಇದು 3 ತಿಂಗಳು ಸಹ ಇಡಬಹುದು.



Click it and Unblock the Notifications
