Latest Updates
-
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ -
ಕೋಲ್ಕತ್ತಾ ದುರ್ಗಾ ಪೂಜೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಿ, ಪಂಡಾಲ್ ಹಾಪಿಂಗ್ಗೆ ಇಲ್ಲಿದೆ ಸ್ಮಾರ್ಟ್ ಪ್ಲಾನ್! -
ದೆಹಲಿಯಲ್ಲಿ ಡೆಂಗ್ಯೂ ಭೀತಿ: ನಿಮ್ಮ ಮನೆಯನ್ನು ಸೊಳ್ಳೆ ಮುಕ್ತವಾಗಿಸಲು 20 ನಿಮಿಷಗಳ ಈ ಚೆಕ್ಲಿಸ್ಟ್ ಬಳಸಿ -
ಹಬ್ಬದ ಸೀಸನ್ನಲ್ಲಿ ಎಚ್ಚರ! ಕಲಬೆರಕೆ ಸಿಹಿತಿಂಡಿ ಪತ್ತೆ ಹಚ್ಚುವುದು ಹೇಗೆ? ಆರೋಗ್ಯಕರ ಟಿಪ್ಸ್ ಇಲ್ಲಿದೆ -
ನವರಾತ್ರಿ 4ನೇ ದಿನ: ರಾಯಲ್ ಬ್ಲೂ ಡ್ರೆಸ್ ಕೋಡ್ನಲ್ಲಿ ಮಿಂಚಲು ಇಲ್ಲಿದೆ ಸಿಂಪಲ್ ಸ್ಟೈಲಿಂಗ್ ಟಿಪ್ಸ್! -
ನವರಾತ್ರಿ 4ನೇ ದಿನ: ಉಪವಾಸದ ನಡುವೆಯೂ ಗರ್ಬಾ ಆಡಲು ಬೇಕಾದ ಶಕ್ತಿ ಮತ್ತು ಆರೋಗ್ಯದ ರಹಸ್ಯ ಇಲ್ಲಿದೆ!
ಹೋಳಿ ರೆಸಿಪಿ: ರಂಗಿನ ಹಬ್ಬದಲ್ಲಿ, ಬಿಸಿಲಿನ ಧಗೆಯಲ್ಲಿ ಫಿರ್ನಿ ಸವಿಯುವುದೇ ಸ್ವರ್ಗ!
ಎಲ್ಲರಿಗೂ ಹೋಳಿ ಹಬ್ಬದ ಶುಭಾಶಯಗಳು...
ಹೋಳಿ ಆಚರಣೆಯಲ್ಲಿ ವಿಶೇಷ ಪಾನೀಯಗಳನ್ನು ಮಾಡಲಾಗುವುದು. ಅದರಲ್ಲೊಂದು ಫಿರ್ನಿ. ಇದು ತುಂಬಾ ರುಚಿಕರವಾದ ಪಾನೀಯವಾಗಿದೆ. ಇದನ್ನು ನೀವು ತಯಾರಿಸಿ ತಣ್ಣಗಾದ ಮೇಲೆ ಕುಡಿಯಬಹುದು ಅಥವಾ ಫ್ರಿಡ್ಜ್ನಲ್ಲಿ ಇಟ್ಟು ಕುಡಿಯಬಹುದು. ಇನ್ನು ಬಿಸಿಲು ತುಂಬಾ ಇರುವಾಗ ಇಂಥ ಪಾನೀಯ ತುಂಬಾ ಹಿತ ಅನಿಸುವುದು.

ಇದನ್ನು ಮಾಡುವ ರೆಸಿಪಿ ಸುಲಭವಾಗಿದ್ದು, ಬನ್ನಿ ನಾಳೆ ಹೋಳಿ ದಿನ ಈ ಸ್ಪೆಷಲ್ ಪಾನೀಯ ಮಾಡೋಣ:
Recipe By: Reena
Recipe Type: Sweet
Serves: 2
-
ಬೇಕಾಗುವ ಸಾಮಗ್ರಿ
ಬಾಸ್ಮತಿ ಅಕ್ಕಿ 1/4ಕಪ್
ಹಾಲು ಮುಕ್ಕಾಲು ಲೀಟರ್
ಸಕ್ಕರೆ 8 ಚಮಚ
ಕತ್ತರಿಸಿದ ಬಾದಾಮಿ, ಗೋಡಂಬಿ 2 ಚಮಚ
ಏಲಕ್ಕಿ ಪುಡಿ 1/2 ಚಮಚ
ರೋಸ್ ವಾಟರ್ 1 ಚಮಚ
-
ತಯಾರಿಸುವುದು ಹೇಗೆ?
1. ಬಾಸ್ಮತಿ ಅಕ್ಕಿಯನ್ನು ತೊಳೆದು ನೀರನ್ನು ಸೋಸಿ ತರಿ-ತರಿಯಾಗಿ ರುಬ್ಬಿ.
2. ಈಗ ಪ್ಯಾನ್ ಬಿಸಿ ಮಾಡಿ ಹಾಲನ್ನು ಹಾಕಿ ತಣ್ಣಗಾಗಲು ಬಿಡಿ.
3. ಈ ತರಿ ತರಿಯಾದ ಅಕ್ಕಿ ಹಿಟ್ಟನ್ನು ಹಾಲಿಗೆ ಹಾಕಿ ಸೌಟ್ನಿಂದ ತಿರುಗಿಸಿ, ಇಲ್ಲದಿದ್ದರೆ ಗಂಟು ಗಂಟಾಗುವುದು.
4. ಈಗ ನಿಧಾನಕ್ಕೆ ಹಾಲು-ಅಕ್ಕಿಯ ಮಿಶ್ರಣವನ್ನು ಕುದಿಸಿ.
5. ಈಗ ಸಕ್ಕರೆ ಸೇರಿಸಿ ಮಿಕ್ಸ್ ಮಾಡಿ.
6. ಈಗ ಕತ್ತರಿಸಿದ ಬಾದಾಮಿ ಹಾಗೂ ಗೋಡಂಬಿ ಸೇರಿಸಿ.
7. ನಂತರ ರೋಸ್ ವಾಟರ್ ಹಾಕಿ ಮಿಕ್ಸ್ ಮಾಡಿ ತಣ್ಣಗಾಗಲು ಬಿಡಿ.
8. ನಂತರ ಫ್ರಿಡ್ಜ್ನಲ್ಲಿಟ್ಟು ತಣ್ಣನೆಯ ಫಿರ್ನಿ ಸರ್ವ್ ಮಾಡಿ.
- ಸಲಹೆ: ಇದನ್ನು ಮಾಡುವಾಗ ನೀರು ಸೇರಿಸಬೇಡಿ. ನೀರು ಸೇರಿಸಿದರೆ ಬೇಯಲು ತುಂಬಾ ಒತ್ತಾಗುವುದು
- People - 2
- calories - 258cal
- fat - 12g
- protien - 9g
- carbs - 30g
- sugar - 13g
- fiber - 2g

1. ಬಾಸ್ಮತಿ ಅಕ್ಕಿಯನ್ನು ತೊಳೆದು ನೀರನ್ನು ಸೋಸಿ ತರಿ-ತರಿಯಾಗಿ ರುಬ್ಬಿ.

2. ಈಗ ಪ್ಯಾನ್ ಬಿಸಿ ಮಾಡಿ ಹಾಲನ್ನು ಹಾಕಿ ತಣ್ಣಗಾಗಲು ಬಿಡಿ.

3. ಈ ತರಿ ತರಿಯಾದ ಅಕ್ಕಿ ಹಿಟ್ಟನ್ನು ಹಾಲಿಗೆ ಹಾಕಿ ಸೌಟ್ನಿಂದ ತಿರುಗಿಸಿ, ಇಲ್ಲದಿದ್ದರೆ ಗಂಟು ಗಂಟಾಗುವುದು.

4. ಈಗ ನಿಧಾನಕ್ಕೆ ಹಾಲು-ಅಕ್ಕಿಯ ಮಿಶ್ರಣವನ್ನು ಕುದಿಸಿ.

5. ಈಗ ಸಕ್ಕರೆ ಸೇರಿಸಿ ಮಿಕ್ಸ್ ಮಾಡಿ.

6. ಈಗ ಕತ್ತರಿಸಿದ ಬಾದಾಮಿ ಹಾಗೂ ಗೋಡಂಬಿ ಸೇರಿಸಿ.

7. ನಂತರ ರೋಸ್ ವಾಟರ್ ಹಾಕಿ ಮಿಕ್ಸ್ ಮಾಡಿ ತಣ್ಣಗಾಗಲು ಬಿಡಿ.

8. ನಂತರ ಫ್ರಿಡ್ಜ್ನಲ್ಲಿಟ್ಟು ತಣ್ಣನೆಯ ಫಿರ್ನಿ ಸರ್ವ್ ಮಾಡಿ.

Click it and Unblock the Notifications