Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಹೋಳಿ ಹಬ್ಬದಲ್ಲಿ ಇರಲೇಬೇಕು ಥಂಡೈ ಪಾನೀಯ: ಲೈಟಾಗಿ ಕಿಕ್ಕೇರಿಸುವ ಪಾನೀಯ
ಹೋಳಿ ಹಬ್ಬದಲ್ಲಿ ಮಾಡುವ ಪ್ರಮುಖ ಪಾನೀಯವೆಂದರೆ ಥಂಡೈ. ಈ ಪಾನೀಯ ಕುಡಿಯುವುದರಿಂದ ಹೋಳಿ ಹಬ್ಬದಲ್ಲಿ ಕುಣಿದು ಕುಪ್ಪಳಿಸಲು ಶಕ್ತಿ ದೊರೆಯುತ್ತದೆ. ಈ ಪಾನೀಯ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು, ತುಂಬಾನೇ ರುಚಿಯಾಗಿರುತ್ತೆ ಕೂಡ.
ಈ ಪಾನೀಯ ಹೋಳಿಯ ಒಂದೆರಡು ದಿನದ ಮೊದಲು ಮಾಡಿ, ನಂತರ ಹೋಳಿ ದಿನ ಸವಿಯಿರಿ, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ ಬನ್ನಿ:

ಬೇಕಾಗುವ ಸಾಮಗ್ರಿ
ಒಂದೂವರೆ ಲೀಟರ್ ಹಾಲು
20-25 ಬಾದಾಮಿ
10-15 ಗೋಡಂಬಿ
10-15 ಪಿಸ್ತಾ
ಒಂದೂವರೆ ಚಮಚ ಗಸೆಗಸೆ
ಒಂದೂವರೆ ಚಮಚ ಸೋಂಪು
ಏಲಕ್ಕಿ 10
ಒಂದು ಇಂಚಿನಷ್ಟು ದೊಡ್ಡದಿರುವ ಚಕ್ಕೆ
8-10 ಕಾಳು ಮೆಣಸು
ಸಕ್ಕರೆ 6 ಚಮಚ (ಸಿಹಿ ಬೇಕಿಂದಿದ್ದರೆ 2 ಚಮಚ ಹೆಚ್ಚು ಹಾಕಬಹುದು)
ಚಿಟಿಕೆಯಷ್ಟು ಕೇಸರಿ
ಐಸ್ ಕ್ಯೂಬ್ಸ್
ಮಾಡುವ ವಿಧಾನ
- ಬಾದಾಮಿ, ಗೋಡಂಬಿ, ಪಿಸ್ತಾವನ್ನು ಒಂದು ಬೌಲ್ಗೆ ಹಾಕಿ ನೀರು ಹಾಕಿ ಕನಿಷ್ಠ 4 ಗಂಡೆ ನೆನೆ ಹಾಕಿ. ಗಸೆಗಸೆಯನ್ನು ಪ್ರತ್ಯೇಕವಾಗಿ ನೆನೆಹಾಕಿ.
- ಈಗ ಬಾದಾಮಿಯ ಸಿಪ್ಪೆ ಸುಲಿದು, ಬಾದಾಮಿ, ಗೋಡಂಬಿ, ಪಿಸ್ತಾವನ್ನು ಬ್ಲೆಂಡರ್ನಲ್ಲಿ ಹಾಕಿ, ಗಸೆಗಸೆ ನೀರು ಸೋಸಿ, ಗಸೆಗಸೆಯನ್ನು ಬ್ಲೆಂಡರ್ನಲ್ಲಿ ಹಾಕಿ, ನಂತರ ಸೋಂಪು, ಏಲಕ್ಕಿ, ಚಕ್ಕೆ, ಕಾಳು ಎಣಸು, ರೋಸ್ ದಳ, ಕೇಸರಿ ಹಾಕಿ ಬ್ಲೆಂಡ್ ಮಾಡಿ. ಸ್ವಲ್ಪ ಹಾಲು ಸೇರಿಸಿ ನುಣ್ಣನೆ ಬ್ಲೆಂಡ್ ಮಾಡಿ.
- ನಂತರ ಒಂದೂವರೆ ಲೀಟರ್ ಹಾಲು ಕುದಿಸಿ. ಅದಕ್ಕೆ ಸಕ್ಕರೆ ಸೇರಿಸಿ, ನಂತರ ರುಬ್ಬಿದ ಪೇಸ್ಟ್ ಹಾಕಿ, ನಿಮ್ಮ ಸಿಹಿಗೆ ತಕ್ಕ ಸಕ್ಕರೆ ಸೇರಿಸಿ.
- ನಂತರ ಗ್ಯಾಸಿ ಉರಿ ಆಫ್ ಮಾಡಿ ಹಾಲು ತಣ್ಣಗಾಗಲು ಬಿಡಿ, ನಂತರ ಅದನ್ನು ಫ್ರಿಡ್ಜ್ನಲ್ಲಿ 4 ಗಂಟೆ ಇಡಿ.
- ನಂತರ ಒಂದು ಚಮಚ ಗುಲ್ಕಂದವನ್ನು ಗ್ಲಾಸ್ಗೆ ಸೇರಿಸಿ, ಥಂಡೈ ಸೇರಿಸಿ ಮಿಕ್ಸ್ ಮಾಡಿ, ಡ್ರೈ ಫ್ರೂಟ್ಸ್, ಒಣ ಗುಲಾಬಿ ದಳಗಳನ್ನು ಹಾಕಿ ಸರ್ವ್ ಮಾಡಿ.
ಟಿಪ್ಸ್
ನೀವು ಇದನ್ನು ಮಾಡುವಾಗ ಸೂರ್ಯಕಾಂತಿ ಬೀಜ ಹಾಕಬಹುದು.
ಇದನ್ನು ನೀವು ಹೋಳಿಗಿಂತ ಒಂದೆರಡು ದಿನ ಮುನ್ನ ಮಾಡಿ, ಗಾಳಿಯಾಡದ ಬಾಟಲಿಯಲ್ಲಿ
ಹಾಕಿ ಫ್ರಿಡ್ಜ್ನಲ್ಲಿ ಇಡಿ.
ಲೈಟ್ ಆಗಿ ಕಿಕ್ಕೇರಿಸುತ್ತೆ ಈ ಪಾನೀಯ
ಈ ಪಾನೀಯ ಹೋಳಿ ಹಬ್ಬದ ಜೋಶ್ ಹೆಚ್ಚಿಸುವ ಪಾನೀಯ, ತುಂಬಾನೇ ರುಚಿಕರವಾದ ಈ ಪಾನೀಯ ಕಿಕ್ಕೇರಿಸುತ್ತೆ ಕೂಡ, ಒಂಥರಾ ತಲೆ ಸುತ್ತಿದಂತಾಗುವುದು. ಇನ್ನು ಕೆಲವರು ಕಿಕ್ಕೇರಿಸಲು ಇದರಲ್ಲಿ ಗಾಂಜಾ ಮುಂತಾದ ಅಂಶ ಬೆರೆಸುತ್ತಾರೆ, ಆದರೆ ಈ ಪಾನೀಯ ಕ ಹೊರಗಡೆ ಕುಡಿಯುವಾಗ ಎಚ್ಚರವಹಿಸಬೇಕು, ಮನೆಯಲ್ಲಿಯೇ ಮಾಡಿ ಈ ಪಾನೀಯ ಕುಡಿದರೆ ಯಾವುದೇ ಸಮಸ್ಯೆಯಾಗಲ್ಲ, ಆದ್ದರಿಂದ ಹೋಳಿ ಹಬ್ಬದಲ್ಲಿ ಈ ಬಗ್ಗೆ ಜಾಗ್ರತೆವಹಿಸಿ.
ಹೋಳಿ ಹಬ್ಬದಲ್ಲಿ ಈ ಪಾನೀಯ ಇರುವುದು ಸಂಪ್ರದಾಯ
ಹಿಂದಿನಿಂದಲೂ ಹೋಳಿ ದಿನ ಈ ಪಾನೀಯ ಇಟ್ಟೇ ಇಡುತ್ತಾರೆ. ಇದನ್ನು ಇಡುವುದು ಒಂದು ಸಂಪ್ರದಾಯದಂತೆ. ಗರ್ಭಿಣಿಯರು, ಮಕ್ಕಳು ಎನ್ನದೆ ಎಲ್ಲರೂ ಇದನ್ನು ಕುಡಿಯುತ್ತಾರೆ, ಇದು ಆರೋಗ್ಯ ತುಂಬಾ ಒಳ್ಳೆಯದು, ಆದರೆ ಕಿಕ್ಕೇರಿಸಲು ಕೆಲವರು ಕೆಲ ಸೊಪ್ಪು ಬಳಸುತ್ತಾರೆ ಅಮಥ ಪಾಣಿಯ ಮಕ್ಕಳು, ಗರ್ಭಿಣಿಯರು ಕುಡಿಯಲೇಬಾರದು.
ಈ ಪಾನೀಯ ಕುಡಿಯುವುದರಿಂದ ದೊರೆಯುವ ಪ್ರಯೋಜನಗಳು
- ಹೋಳಿ ಹಬ್ಬದಲ್ಲಿ ಕುಣಿದು ಕುಪ್ಪಳಿಸಲು ದೇಹಕ್ಕೆ ಶಕ್ತಿಯನ್ನು ತುಂಬುತ್ತದೆ.
- ಅಜೀರ್ಣ ಸಮಸ್ಯೆ ಕಾಡುವುದಿಲ್ಲ. ಹೋಳಿ ಹಬ್ಬದಂದು ಬಗೆಬಗೆಯ ತಿಂಡಿಗಳನ್ನು ತಿನ್ನುತ್ತಾರೆ, ಆದರೆ ಇದನ್ನು ಕುಡಿಯುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ನಡೆಯುತ್ತದೆ.
- ಬೇಸಿಗೆಯನ್ನು ಮೈ ತಂಪಾಗಿಸುತ್ತದೆ. ಸೆಕೆಯನ್ನು ದೇಹ ತಡೆಯಲು ಈ ಪಾನೀಯ ತುಂಬಾನೇ ಸಹಕಾರಿ.
- ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.



Click it and Unblock the Notifications
