Latest Updates
-
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
Headline for Deeplink -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ!
ಮಿಡಿ ಮಾವಿನಕಾಯಿ ಉಪ್ಪಿನಕಾಯಿ ಹೀಗೆ ಮಾಡಿದರೆ ವರ್ಷದವರೆಗೆ ಇಡಬಹುದು
Recipes
oi-Reena TK
Posted By: Reena TK
ಮಿಡಿ ಮಾವಿನಕಾಯಿ ಉಪ್ಪಿನಕಾಯಿ ಎಷ್ಟೊಂದು ರುಚಿ ಅಲ್ವಾ? ಈ ಉಪ್ಪಿನಕಾಯಿ ವರ್ಷದವರೆಗೆ ಕೆಡದಂತೆ ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
ಮಿಡಿ ಉಪ್ಪಿನಕಾಯಿ 2 ಕೆಜಿ
ಕಲ್ಲುಪ್ಪು 250 ಗ್ರಾಂ
ಮೆಣಸಿನ ಪುಡಿ 50 ಗ್ರಾಂ
ಸಾಸಿವೆ ಪುಡಿ 50 ಗ್ರಾಂ
ಉಪ್ಪಿನ ಪುಡಿ 3 ಚಮಚ
1 ಚಮಚ ಅರಿಶಿಣ ಪುಡಿ
1 ಚಮಚ ಇಂಗು ಪುಡಿ
ಗಾಜಿನ ಡಬ್ಬ
ಮಿಡಿ ಉಪ್ಪಿನಕಾಯಿ ತೊಳೆದು ಅದರ ನೀರಿನಂಶ ತೆಗೆಯಲು ಟವಲ್ ಅಥವಾ ಬಟ್ಟೆಯಿಂದ ಒರೆಸಿ, ನೀರಿನಂಶವಿದ್ದರೆ ಬೇಗನೆ ಹಾಳಾಗುವುದು.
- ಮಿಡಿ ಉಪ್ಪಿನಕಾಯಿ ಮಾಡುವಾಗ ತುಂಬಾ ಚಿಕ್ಕ ಗಾತ್ರದ ಮಾವಿನಕಾಯಿ ಬಳಸಿ, ಅದರೊಳಗೆ ಬೀಜ ಬಲಿತಿರಬಾರದು, ಆವಾಗ ಚೆನ್ನಾಗಿರುತ್ತದೆ.
- ಅಲ್ಲದೆ ಮಾವಿನಕಾಯಿ ಕುಯ್ದು ತಂದು ತುಂಬಾ ದಿನಗಳಾಗಿರಬಾರದು, ಮಾವಿನಕಾಯಿ ಕುಯ್ದು ಒಂದು ವಾರದೊಳಗೆ ಬಳಸಬಹುದು.
- ನೀವು ಮಿಡಿ ಮಾವಿನಕಾಯಿ ಖರೀದಿಸುವಾಗ ಅಥವಾ ಮನೆಯ ತೋಟದಲ್ಲಿಯೇ ಮರವಿದ್ದರೆ ಮಾವಿನ ಕುಯ್ಯುವಾಗ ಅದರ ದಂಟು ಸಹಿತ ಕಿತ್ತು ತನ್ನಿ, ದಂಟು ಸ್ವಲ್ಪ ಉದ್ದವಿರುಂತೆ ತಂದರೆ ಅದನ್ನು ಹಾಗೆಯೇ ಉಪ್ಪಿನಕಾಯಿಗೆ ಬಳಸಬಹುದು.
- ನಂತರ ಮಾವಿನಕಾಯಿಯನ್ನು ಗಾಜಿನ ಡಬ್ಬದಲ್ಲಿ ಹಾಕಿಟ್ಟು ಅದಕ್ಕೆ ಕಲ್ಲುಪ್ಪು ಸೇರಿಸಿ.
- ಎರಡು ಕೆಜಿಯಷ್ಟು ಮಾವಿನಕಾಯಿ ಬಳಸುವುದಾದರೆ ನೀವು 250ಗ್ರಾಂ ಉಪ್ಪು ಬಳಸಿ
- ಗಾಜಿನ ಡಬ್ಬದಲ್ಲಿ ಸ್ವಲ್ಪವೂ ನೀರಿನಂಶ ಇರಬಾರದು
- ಸ್ವಲ್ಪ ಮಾವಿನಕಾಯಿ ಸ್ವಲ್ಪ ಉಪ್ಪು ಈ ರೀತಿ ಉಪ್ಪಿನಕಾಯಿ ಹಾಕಬೇಕು.
- ನಂತರ ಅದರ ಮೇಲೆ ಕೂಡ ಸ್ವಲ್ಪ ಉಪ್ಪು ಹಾಕಬೇಕು.
- ನಂತರ ಬಾಟಲಿ ಮುಚ್ಚಳವನ್ನು ಬಿಗಿಯಾಗಿ ಹಾಕಿಡಿ
- ಒಂದು ವಾರ ಇಡಿ
- ಪ್ರತಿದಿನ ಈ ಬಾಟಲಿಯನ್ನು ಅಲುಗಾಡಿಸಿ.
- ದಿನದಲ್ಲಿ ಒಂದು ಸಮಯ ಸಾಕು
ಈಗ ಉಪ್ಪು ನೀರಿನಿಂದ ಈ ಮಾವಿನಕಾಯಿ ಪ್ರತ್ಯೇಕ ಮಾಡಿ
- ನಂತರ ಇದನ್ನು ಪಾತ್ರೆಗೆ ಹಾಕಿಡಿ, ಆ ಪಾತ್ರೆಯಲ್ಲಿ ಸ್ವಲ್ಪವೂ ನೀರಿನಂಶವಿರಬಾರದು.
- ಮಾವಿನಕಾಯಿಯಿಂದ ಸಂಗ್ರಹಿಸಿದ ಉಪ್ಪು ನೀರಿಗೆ 50 ಗ್ರಾಂ ಮೆಣಸಿನ ಪುಡಿ, 150 ಗ್ರಾಂ ಸಾಸಿವೆ ಪುಡಿ ಹಾಕಿ
- ಸಾಸಿವೆ ಪುಡಿ ಎಂದರೆ ತರಿತರಿಯಾಗಿ ಪುಡಿ ಮಾಡಿದರೆ ಸಾಕು
- 1 ಚಮಚ ಇಂಗು ಪುಡಿ (ಸ್ವಲ್ಪ ಬಿಸಿ ಮಾಡಿದ್ದು)
- 3 ಚಮಚ ಉಪ್ಪು
- ಅರ್ಧ ಚಮಚ ಅರಿಶಿಣ ಪುಡಿ
- ನಂತರ ಅದಕ್ಕೆ ಮಾವಿನಕಾಯಿ ಮಿಡಿ ಸೇರಿಸಿ ನಂತರ ಮಿಕ್ಸ್ ಮಾಡಬೇಕು. ಇಷ್ಟು ಮಾಡಿದರೆ ಮಿಡಿ ಮಾವಿನಕಾಯಿ ಉಪ್ಪಿನಕಾಯಿ ರೆಡಿ.
ಇತರ ಸಲಹೆ
ತುಂಬಾ ಹುಳಿ ಇರುವ ಮಾವಿನಕಾಯಿ ಮಿಡಿ ಆದರೆ ಉಪ್ಪಿನಕಾಯಿ ಇನ್ನೂ ಟೇಸ್ಟ್
ಅನಿಸುವುದು
ಇದಕ್ಕೆ ಬೇಕಿದ್ದರೆ ಉಪ್ಪಿನಕಾಯಿ ಪುಡಿ ಸೇರಿಸಿ ಮಾಡಬಹುದು
ಇನ್ನು ನೀವು ಇದನ್ನು ಬಳಸುವಾಗ ಒಗ್ಗರಣೆ ಸೇರಿಸಿ ಬಳಸಿದರೆ ಇನ್ನೂ
ಟೇಸ್ಟಿಯಾಗಿರುತ್ತದೆ.
Comments
[ of 5 - Users]



Click it and Unblock the Notifications